ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಸಿದ್ಧ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:47 ರಿಂದ 09:21 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:30 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:39 ರ ವರೆಗೆ
ಮೇಷ ರಾಶಿ: ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗುವುದು, ನಿಮಗೆ ಬೇಸರವುಂಟಾಗಬಹುದು. ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ. ಅನೇಕ ಲಾಭಗಳು ನಿಮಗಾಗಲಿವೆ. ನಿಮ್ಮ ಕಾರ್ಯಗಳಿಗೆ ಅಪರಿಚಿತರೂ ಸಹಾಯ ಮಾಡಲಿದ್ದಾರೆ. ಕೃತಜ್ಞತೆಯನ್ನು ಅರ್ಪಿಸಲು ಮರೆಯಬೇಡಿ. ನಿಮ್ಮ ಒಳ್ಳೆತನ ನಿಮಗೆ ವರವಾಗಿಯೇ ಇರಲಿದೆ. ದುಡುಕಿದ ಕಾರ್ಯದಿಂದ ಪಶ್ಚಾತ್ತಾಪವಾಗುವುದು. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಹಿರಿಯರ ಭೇಟಿಯಿಂದ ಜೀವನಕ್ಕೆ ಹಲವು ಪ್ರಯೋಜನಗಳು ಆಗಲಿವೆ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ.
ವೃಷಭ ರಾಶಿ: ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ದೂರದ ಪ್ರಯಾಣ ವ್ಯರ್ಥವಾಗಬಹುದು. ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಬಂಧುಗಳ ಬಗ್ಗೆ ಸಮಾಧಾನವಿರದು.
ಮಿಥುನ ರಾಶಿ: ನಾಲ್ಕು ಜನರನ್ನು ಕೇಳಿಯಾದರೂ ತೊಂದರೆಯಿಲ್ಲ, ನೀವಿಡುವ ಹೆಜ್ಜೆಗಳು ಸರಿಯಾಗಿರಿಲಿ. ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಎಲ್ಲರ ಜೊತೆಗೆ ಸ್ನೇಹದಿಂದ ಮಾತನಾಡುವಿರಿ. ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ನಂಬಿಕೆಯನ್ನು ಗಳಿಸಲು ಸತತ ಪ್ರಯತ್ನವನ್ನು ಮಾಡುವಿರಿ. ಶ್ರೇಷ್ಠ ವ್ಯಕ್ತಿಗಳ ಭೇಟಿಯಿಂದ ಹೊಸ ಕಾರ್ಯಗಳನ್ನು ಮಾಡಲು ಉತ್ಸುಕರಾಗಿರುವಿರಿ. ನಿಮ್ಮಮಾತಿಗೆ ಸಮಜಾಯಿಷಿ ಕೊಡಬೇಕಾದೀತು. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ ಬೇಸರವೂ ಇರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು.
ಕಟಕ ರಾಶಿ: ಇಂದು ಮನೆಯ ಹಿರಿಯರ ಸಹವಾಸವನ್ನು ಮಾಡುವಿರಿ. ಅವರ ಸೇವೆಯಿಂದ ತೃಪ್ತಿ ಇರಲಿದೆ. ತಂತ್ರಜ್ಞರು ಉನ್ನತ ಸ್ಥಾನದ ಬಯಕೆಯಿಂದ ಕಛೇರಿಯನ್ನು ಬಿಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಸಮಯವನ್ನು ಕಳೆದು ಬನ್ನಿ. ಉನ್ನತ ಹುದ್ದೆಗಾಗಿ ಬರೆಯುವ ಪರೀಕ್ಷೆಯಲ್ಲಿ ನಿಮಗೆ ಜಯ ಸಿಗಲಿದೆ. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ನಿಮ್ಮ ಸಕಾರಾತ್ಮಕ ಆಲೋಚನೆಗಳೂ ನಿಮಗೆ ಸಹಕಾರವನ್ನು ಕೊಡದು. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ನಿಮ್ಮ ಮಾತು ಸುಳ್ಳಾಗಬಹುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು.