Horoscope: ರಾಶಿ ಭವಿಷ್ಯ; ಈ ರಾಶಿಯವರು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 02, 2024 | 12:30 AM

ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 02 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಈ ರಾಶಿಯವರು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ
ರಾಶಿ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶುಕ್ಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ02:04 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:11 ರಿಂದ 07:45 ರ ವರೆಗೆ, ಗುಳಿಕ ಕಾಲ 09:20 ರಿಂದ 10:55ರ ವರೆಗೆ

ಸಿಂಹ ರಾಶಿ : ನೀಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಸಮಾಜಸೇವೆಯಿಂದ ನಿಮಗೆ ಕೀರ್ತಿಯು ಲಭಿಸುವುದು. ಇಷ್ಟು ದಿನ ಕಷ್ಟಪಟ್ಟು ಕಟ್ಟುತ್ತಿದ್ದ ಸಾಲವು ಇಂದಿಗೆ ಮುಕ್ತಾಯವಾಗಿ ನೆಮ್ಮದಿಯನ್ನು ಕಾಣುವಿರಿ. ಅಶಕ್ತರಿಗೆ ಕೈಲಾದುದನ್ನು ಕೊಡುವಿರಿ. ಬಟ್ಟೆ ಉದ್ಯಮ ಕ್ಷೇತ್ರದವರಿಗೆ ಲಾಭವು ಅಧಿಕವಾಗಲಿದೆ. ಆರ್ಥಿಕವಾಗಿ ಇಂದು ಸಬಲರಾಗುವಿರಿ. ವಾತಾವರಣದ ಕಾರಣದಿಂದ ಅನಾರೋಗ್ಯವು ಉಂಟಾಗಬಹುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂದು ಅನ್ನಿಸಿದರೂ ಅದನ್ನು ಪರಿವರ್ತಿಸಲು ಅಸಾಧ್ಯವಾಗುವುದು.

ಕನ್ಯಾ ರಾಶಿ : ನಿಮ್ಮದಲ್ಲದ‌ ವಸ್ತುವನ್ನು ಪಡೆದಾಗ ಜೋಪಾನ‌ ಮಾಡುವುದು ಅವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ನೀವು ನಿಶ್ಚಿಂತರು. ಅಲಂಕಾರದ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ಏಕಾಗ್ರತೆಗಾಗಿ ಮಾಡಿದ ಪ್ರಯತ್ನಗಳು ಇಂದು ನಿಮಗೆ ಫಲವನ್ನು ಕೊಡುವುದು. ನಿಮಗೆ ಕುಟುಂಬವು ಬೆಂಬಲವನ್ನು ನೀಡುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ದುಬಾರಿ ವಸ್ತುವನ್ನು ಖರೀದಿಸಲಿದ್ದೀರಿ. ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸುವುದು ಅಥವಾ ಕೆಲವು ದಿನಗಳ ಅನಂತರ ನಡೆಸುವುದು ಯೋಗ್ಯವಿದೆ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ. ಧಾರ್ಮಿಕ‌ ನಂಬಿಕೆಗಳು ಬಲವಾಗುವುದು.

ತುಲಾ ರಾಶಿ : ಇಂದು ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲಾಗದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ಸ್ನೇಹವು ಬಲಗೊಳ್ಳಬಹುದು. ಪ್ರಸಿದ್ಧ ತೀರ್ಥಕ್ಷೇತ್ರಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಕುಟುಂಬದಲ್ಲಿ ವಿವಾಹವಾರ್ತೆ ಕೇಳಿಬರಲಿದೆ. ವ್ಯಾಪಾರವು ನಿಮಗೆ ಲಾಭವನ್ನು ತರಿಸುವುದು. ಓಡಾಟವೂ ವ್ಯರ್ಥವಾದೀತು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ವೈದ್ಯರನ್ನು ಬೇಟಿಯಾಗಿ ನಿಮಗೆ ಆಗುತ್ತಿರುವ ಶಾರೀರಿಕ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಹೊಂದಿ ಅವರ ತೇಜೋವಧೆಯನ್ನು ಮಾಡಿದ್ದಿರಿ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ದೂರದ ಪ್ರಯಾಣವನ್ನು ಮಾಡುವ ನಿರ್ಧಾರವನ್ನು ಕೈ ಬಿಡುವಿರಿ.

ವೃಶ್ಚಿಕ ರಾಶಿ : ನಿಮ್ಮ ಬಳಿ ಇರುವ ಸಂಸತ್ತನ್ನು ಸಹಾಯಕ್ಕಾಗಿ ನೀಡಬಹುದು. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವವು ಎಲ್ಲರಿಗೂ ತಿಳಿಯುವುದು. ಅಧಿಕಾರಿಗಳಿಂದ ಮೆಚ್ಚುಗೆಯು ಸಿಗಲಿದೆ. ನೂತನ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಮುಂದಿನ ದಿನಕ್ಕೆ ಲಾಭವೂ ಆಗಲಿದೆ. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಬಿದ್ದು ಗಾಯ ಮಾಡಿಕೊಳ್ಳುವ ಸಂಭವವಿದೆ. ಅನಿರೀಕ್ಷಿತ ಧನವ್ಯಯವು ಆಗಬಹುದು. ವಿದ್ಯಾರ್ಥಿಗಳು ನಿಮ್ಮ ಮುಂದಿನ ವಿಷಯಗಳ ಕುರಿತು ಚರ್ವೆಗಳನ್ನು ಮಾಡಿ ಮುಂದುವರಿಯಿರಿ. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರಲಿದೆ. ಉದ್ಯೋಗಸ್ಥಾನದಲ್ಲಿ ಕೆಲವು ಮಾತುಗಳು ನಿಮಗೆ ಹಿಡಿಸದು.