Horoscope: ದಿನಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನವು ಇಂದು ಸುಖದಿಂದ ಇರಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 13, 2024 | 12:45 AM

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 13 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನವು ಇಂದು ಸುಖದಿಂದ ಇರಲಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:42 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:40ರ ವರೆಗೆ.

ಧನು ರಾಶಿ: ಇಂದು ಗೌರವಕ್ಕೆ ಧಕ್ಕೆ ಬರುವುದು. ಅದನ್ನು ಮರೆಯುವುದು ಮುಂದುವರಿಸುವುದು ನಿಮಗೆ ಬಿಟ್ಟಿದ್ದು. ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಮಕ್ಕಳ ಕಾರ್ಯಕ್ಕೆ ನೀವು ಓಡಾಡಬೇಕಾಗಿ ಬರಬಹುದು. ನಿಮ್ಮ ಕಾರ್ಯವೇ ನಿಮಗೆ ಮುಳುವಾಗುವುದು. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ನಡೆಯಲಿವೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸವಿರುವುದು.

ಮಕರ ರಾಶಿ: ಇಂದು‌ ನಿಮ್ಮ ದಾಂಪತ್ಯಜೀವನವು ಇಂದು ಸುಖದಿಂದ ಇರಲಿದೆ. ದಾಂಪತ್ಯದಲ್ಲಿ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದೈವವನ್ನು ನಂಬುವ ನೀವು ಹೆಚ್ಚು ಕಾಲದ ದೈವಸ್ಮರಣೆಯಲ್ಲಿ ಇರುವುದು ಒಳ್ಳೆಯದು. ಅಧಿಕ ಧನಹಾನಿಯಾಗುವ ಸ್ಥಿತಿ ಎದುರಾಗಬಹುದು. ಸ್ವಲ್ಪ ಎಚ್ಚದಿಂದ ಇರಿ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಎಲ್ಲವನ್ನೂ ತುಲನೆ ಮಾಡಿ ನೋಡುವ ಅವಶ್ಯಕತೆ ಇಲ್ಲ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಅಗತ್ಯವೂ ಹೌದು.

ಕುಂಭ ರಾಶಿ: ಇಂದು ಬಹಳ ದಿನದಿಂದ ಕಾಡುತ್ತಿದ್ದ ಚಿಂತೆಯು ದೂರಾಗುವುದು. ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳಿ. ಕಛೇರಿಯ ಒತ್ತಡಗಳಿಗೆ ಸಿಲುಕದೆ ಜಾಗರೂಕತೆಯಿಂದ ಕೆಲಸ ಮಾಡಿ. ಪಾಲುದಾರರ ಬಗ್ಗೆ ಗಮನವಿರಲಿ. ಕೂಲಂಕಷವಾದ ವಿಚಾರದ ಜೊತೆ‌ ಮುಂದುವರಿಯಿರಿ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸಮಯವು ಎಷ್ಟೇ ಇದ್ದರೂ ಕೆಲಸವನ್ನು ಮಾಡುವ ಮನಸ್ಸು ಇರದು.

ಮೀನ ರಾಶಿ: ಇಂದು ಅನ್ಯ ಮಾರ್ಗದಿಂದ ಹಣ ಸಂಪಾದನೆಯನ್ನು ಮಾಡಲು ತೊಡಗುವಿರಿ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಿಗಲಿದೆ. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು‌. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಇಂದಿನ ಬಹುಪಾಲು ಸಮಯವನ್ನು ಬೇರೆ ಯಾವುದೋ ಚಿಂತನೆಯಲ್ಲಿ ಕಳೆಯುವಿರಿ. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)