ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಸ್ವಾತಿ, ಯೋಗ: ವಿಷ್ಕಂಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:52, ಯಮಘಂಡ ಕಾಲ ಮಧ್ಯಾಹ್ನ 01:50ರಿಂದ 03: 19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 ರಿಂದ 07:53 ರವರೆಗೆ.
ಧನು ರಾಶಿ: ನಿಮಗೆ ಹೊಂದಾಣಿಕೆ ಸ್ವಭಾವವು ಹಿಡಿಸುವುದಿಲ್ಲ. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ಸುಖವಾಗಿರಲು ಬೇಕಾದ ಎಲ್ಲ ಮಾರ್ಗಗಳನ್ನು ಹುಡುಕುವಿರಿ. ಗೊತ್ತಿಲ್ಲದೇ ಮಾತನಾಡುವುದು ನಿಮಗೆ ಶೋಭೆ ತರದು. ವಂಚನೆಯ ಬಲೆಯಲ್ಲಿ ನೀವು ಸಿಕ್ಕಿಕೊಳ್ಳಬಹುದು. ಕಲಹವದಿಂದ ನಿಮಗೆ ತೃಪ್ತಿ ಸಿಕ್ಕರೂ ಇತರರ ಪಾಡನ್ನೂ ಗಮನಿಸಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ಬಹಳ ಪ್ರಯತ್ನ ಪಡುವಿರಿ. ನೀವು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರಲಾರಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸುವಿರಿ. ಸಂಗಾತಿಯ ಪ್ರೀತಿಯನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸುವಿರೊ. ಬಂಧುಗಳು ನಿಮ್ಮನ್ನು ಮನೆಗೆ ಆಹ್ವಾನಿಸಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿಯು ಕಡಿಮೆ ಆಗಬಹುದು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಅನಪೇಕ್ಷಿತ ಖರ್ಚನ್ನು ನಿಯಂತ್ರಣಕ್ಕೆ ತರಬೇಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.
ಮಕರ ರಾಶಿ; ಸಾಲವನ್ನು ತೀರಿಸುವ ಬಗ್ಗೆ ಸಣ್ಣ ಪ್ರಯತ್ನವನ್ನಾದರೂ ಮಾಡಿ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಆರ್ಥಿಕ ಮೂಲವು ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ನಿಮ್ಮ ಪ್ರಯತ್ನ ಅತಿಮುಖ್ಯವಾಗುವುದು. ಎಲ್ಲವೂ ಸರಿಯಿದ್ದರೂ ಮತ್ತೆಲ್ಲೋ ತಪ್ಪನ್ನು ಕಂಡುಕೊಳ್ಳುವಿರಿ. ನಿಮ್ಮ ನಿಯಮವನ್ನು ಪಾಲಿಸಿದ್ದು ನಿಮಗೆ ಖುಷಿ ಕೊಡಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಅಲ್ಪ ಪ್ರಮಾಣದಲ್ಲಿ ಖುಷಿ ಕಾಣಿಸುವುದು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿದೆ. ತಾಯಿಯಿಂದ ಅತಿಯಾದ ಸಹಕಾರವನ್ನು ಬಯಸುವಿರಿ. ಜನರ ಜೊತೆ ಬೆರೆಯಲು ನಿಮಗೆ ಇಂದು ಸಮಯ ಸಾಕಾಗದು. ಸಂಗಾತಿಯನ್ನು ನೀವು ಖುಷಿಪಡಿಸಲು ಎಲ್ಲಿಗಾದರೂ ಕರೆದುಕೊಂಡು ಹೋಗುವಿರಿ. ಯಾರಿಂದಲೂ ದಿಡೀರ್ ಬದಲಾವಣೆಯನ್ನು ನಿರೀಕ್ಷಿಸುವುದು ಬೇಡ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು. ಉದ್ಯಮವು ಬೆಳವಣಿಗೆಯಿಂದ ಸಂತೋಷವಾಗಲಿದೆ.
ಕುಂಭ ರಾಶಿ: ನಿಮ್ಮ ನಕಾರಾತ್ಮಕ ಆಲೋಚನೆಗಳು ಇತರರಿಗೂ ತಿಳಿದೀತು. ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಂಧುಗಳ ವಿಚಾರದಲ್ಲಿ ನಿಮಗೆ ಸಂಪೂರ್ಣ ಮನಸ್ಥಿತಿಯು ಏಕರೂಪವಾಗಿ ಇರಲಾರದು. ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮವು ಬದಲಾದೀತು. ಅಧ್ಯಾತ್ಮವು ನಿಮಗೆ ನೆಮ್ಮದಿಯನ್ನು ಕೊಡುವುದು. ಮುಖದಲ್ಲಿ ನಗುವುದು ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಸಿಕೊಡುವುದು. ಇನ್ನೊಬ್ಬರ ಸುಖಕ್ಕಾಗಿ ನೀವು ಸುಖವನ್ನು ತ್ಯಾಗಮಾಡಬೇಕಾಗುವುದು. ಜ್ಞಾನದ ಬಗ್ಗೆ ನಿಮಗೆ ಅರಿವು ಕಡಿಮೆ ಇರುವುದು ಗೊತ್ತಾಗುವುದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಸ್ವಾಭಿಮಾನವೇ ನಿಮ್ಮನ್ನು ಮುನ್ನುಗ್ಗಲು ಬಿಡದು.
ಮೀನ ರಾಶಿ: ನಿಮಗೆ ಯಾವುದೇ ಕಟ್ಟುಪಡುಗಳಲ್ಲಿ ಇರಲು ಮನಸ್ಸಾಗದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಭವಿಷ್ಯದ ಬಗ್ಗೆ ನಿಮಗಿರುವ ಕಲ್ಪನೆಯು ಬದಲಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಕಾಳಜಿಯನ್ನು ವಹಿಸಬೇಕಾಗುವುದು. ಅತಿಯಾದ ಬುದ್ಸದಿವಂತಿಕೆಯನ್ನು ತೋರಿಸಲು ಹೋಗಿ ಮುಗ್ಗರಿಸಬಹುದು. ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿಯು ಬರಬಹುದು. ಸಹಾಯವನ್ನು ಯಾರಾದರೂ ಕೇಳುವರು. ಒಂಟಿಯಾಗಿ ಇರಲು ನೀವು ಇಂದು ಹೆಚ್ಚು ಇಷ್ಟಪಡಬಹುದು. ಭೂಮಿಗೆ ಸಂಬಂಧೊಟ್ಟ ಕಲಹವು ತಾತ್ಕಾಲಿಕವಾಗಿ ನಿಲ್ಲುವುದು. ಏನನ್ನಾದರೂ ಯೋಚಿಸುವ ಬದಲು ಆಗಬೇಕಾದ ಕೆಲಸದ ಕಡೆ ಗಮನಕೊಡುವುದು ಮುಖ್ಯವಾಗುವುದು. ಹಳೆಯ ಕಡತಗಳನ್ನು ನೀವು ವಿಲೇವರಿ ಮಾಡುವಿರಿ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.