
ಇದೇ ಜನವರಿ 17ರಂದು ಬುದ್ಧಿವಂತಿಕೆಯ ಕಾರಕತ್ವ ಇರುವಂಥ ಬುಧ ಮತ್ತು ಆತ್ಮಕಾರಕನಾದ ಸೂರ್ಯ ಮಕರ ರಾಶಿಯಲ್ಲಿ ಯುತಿ ಆಗುತ್ತಿದ್ದಾರೆ. ಅಂದರೆ ಅದೇ ರಾಶಿಯಲ್ಲಿ ಇರುತ್ತಾರೆ. ಈ ಸಂಯೋಗದಿಂದ ಅತ್ಯಂತ ಪ್ರಭಾವಶಾಲಿ ‘ಬುಧಾದಿತ್ಯ ಯೋಗ’ ಸೃಷ್ಟಿ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯುತ್ತಮ ಯೋಗ ಎಂದು ಪರಿಗಣಿಸಲಾಗುತ್ತದೆ.
ಈ ಯೋಗವು ನಿಮ್ಮ ಕರ್ಮ ಸ್ಥಾನ- ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ, ಜತೆಗೆ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಭಾಗ್ಯ ಸ್ಥಾನದಲ್ಲಿ ಈ ಯೋಗವು ಸೃಷ್ಟಿ ಆಗುವುದರಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ದೂರದ ಪ್ರಯಾಣ ಅಥವಾ ವಿದೇಶಿ ಶಿಕ್ಷಣದ ಹಾದಿ ಸುಗಮವಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.
ಹಠಾತ್ ಧನಲಾಭ ಉಂಟಾಗುವ ಸಾಧ್ಯತೆ ಇದ್ದರೂ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ವಾಹನ ಚಾಲನೆ ವೇಳೆ ಎಚ್ಚರಿಕೆ ಮುಖ್ಯ. ಗುಪ್ತ ವಿದ್ಯೆಗಳ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಮತ್ತು ವಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲವಾಗಲಿದೆ.
ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಇದ್ದ ಅಸಮಾಧಾನಗಳು ದೂರವಾಗಿ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಆದರೆ ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಿ.
ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆತು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಇದು ಸಕಾಲವಾಗಿದ್ದು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಈ ಸಮಯವು ವಿದ್ಯಾರ್ಥಿಗಳಿಗೆ ಬಹಳ ಶುಭದಾಯಕವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದ್ದು, ಮಕ್ಕಳ ಪ್ರಗತಿಯಿಂದ ಸಂತಸ ಉಂಟಾಗಲಿದೆ.
ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಗೆ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.
ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಣ್ಣ ಪ್ರಯಾಣಗಳಿಂದ ಲಾಭವಾಗುವುದೇ ಅಲ್ಲದೆ, ಸಹೋದರ-ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದೆ.
ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು
ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದ್ದು, ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಮಾತು ಮಧುರವಾಗುವುದರಿಂದ ಸಾಮಾಜಿಕವಾಗಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. ಆದರೆ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಬೇಕು. ಪದ ಬಳಕೆಯಲ್ಲಿ ಜಾಗ್ರತೆ.
ನಿಮ್ಮದೇ ರಾಶಿಯಲ್ಲಿ ಬುಧಾದಿತ್ಯ ಯೋಗವು ಸಂಭವಿಸುತ್ತಿರುವುದರಿಂದ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುವುದಲ್ಲದೆ, ವೈಯಕ್ತಿಕ ಬೆಳವಣಿಗೆಗೆ ಹೊಸ ದಾರಿಗಳು ಗೋಚರಿಸಲಿವೆ.
ವಿದೇಶ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಹೂಡಿಕೆ ಮಾಡುವ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗೆ ಕಾರಣ ಆಗಬಹುದು, ಎಚ್ಚರ.
ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬಹುಕಾಲದ ಆಸೆಗಳು ಈ ಸಮಯದಲ್ಲಿ ಈಡೇರಲಿವೆ. ದೊಡ್ಡ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದ ಯೋಜನೆಗಳಿಗೆ ಸಹಕಾರ ಸಿಗಲಿದೆ ಮತ್ತು ಸಮಾಜದಲ್ಲಿ ನಿಮ್ಮ ಪ್ರಭಾವ ವೃದ್ಧಿಸಲಿದೆ.
Published On - 12:34 pm, Tue, 6 January 26