ಮೂರು ಅತ್ಯಂತ ಶುಭಗ್ರಹರ ಸಂಯೋಗ.. ಈ ಎಲ್ಲ ರಾಶಿಯವರಿಗೆ ಕಲ್ಪನಾತೀಯ ಫಲ..!!
ಕರ್ಕಾಟಕ ರಾಶಿಯಲ್ಲಿ ಜ್ಞಾನಕಾರಕ ಗುರು, ಬುದ್ಧಿಕಾರಕ ಬುಧ, ಮತ್ತು ಸುಖಕಾರಕ ಶುಕ್ರರ ತ್ರಿಗ್ರಹ ಸಂಯೋಗವು ಜೂನ್ 17 ರಿಂದ ಜುಲೈ 04ರವರೆಗೆ ನಡೆಯಲಿದೆ. ಈ ಅಪರೂಪದ ಸಂಯೋಗದಿಂದ ಲಕ್ಷ್ಮಿ ನಾರಾಯಣ ಮತ್ತು ಸರಸ್ವತಿ ಯೋಗಗಳು ರೂಪುಗೊಂಡು, ಎಲ್ಲಾ 12 ರಾಶಿಗಳಿಗೂ ಕಲ್ಪನಾತೀತ ಶುಭ ಫಲಗಳು ದೊರೆಯಲಿವೆ. ವೃತ್ತಿ, ಹಣಕಾಸು, ಸಂಬಂಧಗಳಲ್ಲಿ ಅಭೂತಪೂರ್ವ ಪ್ರಗತಿ ನಿರೀಕ್ಷಿಸಿ.

ಕರ್ಕಾಟಕ ರಾಶಿಯಲ್ಲಿ ಜ್ಞಾನಕಾರಕ ಗುರು, ಬುದ್ಧಿಕಾರಕ ಬುಧ ಮತ್ತು ಸುಖಕಾರಕ ಶುಕ್ರರ ತ್ರಿಗ್ರಹ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭದಾಯಕವಾದ ಲಕ್ಷ್ಮಿ ನಾರಾಯಣ ಹಾಗೂ ಸರಸ್ವತಿ ಯೋಗಗಳ ಪ್ರಭಾವ ಇರಲಿದೆ. ಕರ್ಕಾಟಕವು ಗುರುವಿಗೆ ಉಚ್ಚ ಸ್ಥಾನವಾಗಿರುವುದರಿಂದ ಈ ಯೋಗ ದುಪ್ಪಟ್ಟಾಗುತ್ತದೆ. ಈ ಯೋಗವು ಜೂನ್17 ರಿಂದ ಜುಲೈ 04ರವೆರೆಗೆ ಇರಲಿದೆ.
ಮೇಷ ರಾಶಿ:
ಸ್ಥಿರ ಆಸ್ತಿ, ವಾಹನ ಯೋಗ ಹಾಗೂ ಕೌಟುಂಬಿಕ ಸುಖ ವೃದ್ಧಿ. ಹೊಸ ಉದ್ಯಮ ಆರಂಭಕ್ಕೆ ಸಕಾಲ. ಉದ್ಯೋಗದಲ್ಲಿ ಪ್ರಗತಿ, ಬಡ್ತಿ ಸಾಧ್ಯ. ವಿವಾಹ ಯತ್ನಗಳು ಕೈಗೂಡುವವು. ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಯಶಸ್ಸು. ಭೂಮಿಯ ಮೇಲೆ ದೀರ್ಘ ಕಾಲದ ಹೂಡಿಕೆಗೆ ಲಾಭದಾಯಕ. ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ವೃತ್ತಿಪರ ಕಾರಣಗಳಿಗಾಗಿ ವಿದೇಶ ಪ್ರಯಾಣದ ಯೋಗವಿದೆ.
ವೃಷಭ ರಾಶಿ:
ಆತ್ಮವಿಶ್ವಾಸ ಹೆಚ್ಚಳ, ಸಹೋದರರಿಂದ ಸಹಾಯ ಮತ್ತು ಭಾಗ್ಯೋದಯ. ಉತ್ತಮ ಸಂವಹನ ಮತ್ತು ವ್ಯಾಪಾರದಲ್ಲಿ ಲಾಭ. ಸಹೋದ್ಯೋಗಿಗಳಿಂದ ಬೆಂಬಲ. ದಾಂಪತ್ಯ ಸುಖ, ವಿವಾಹ ನಿಶ್ಚಯ. ಕಲೆ, ಸಾಹಿತ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಷೇರು ಮಾರುಕಟ್ಟೆ ಹೂಡಿಕೆಯಿಂದ ಧನಲಾಭ. ಆರ್ಥಿಕ ಸ್ಥಿತಿ ಉತ್ತಮ, ಸಾಲ ಬಾಧೆ ತಗ್ಗುವುದು. ಸಣ್ಣ ಪ್ರವಾಸಗಳು ಹಾಗೂ ಧಾರ್ಮಿಕ ವಿದೇಶ ಪ್ರಯಾಣದ ಸಾಧ್ಯತೆ.
ಮಿಥುನ ರಾಶಿ:
ಧನಬಲ ವೃದ್ಧಿ, ಮಾತಿನಲ್ಲಿ ಚಾತುರ್ಯ, ಕೌಟುಂಬಿಕ ಸಂತಸ. ಹಿರಿಯ ಅಧಿಕಾರಿಗಳ ಪ್ರಶಂಸೆ. ಹೂಡಿಕೆ ಆಧಾರಿತ ಉದ್ಯಮಗಳಿಗೆ ಉತ್ತಮ ಲಾಭ. ಕೌಟುಂಬಿಕ ಒಪ್ಪಿಗೆಯೊಂದಿಗೆ ವಿವಾಹ ಯೋಗ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ. ದೀರ್ಘಾವಧಿ ಹೂಡಿಕೆಗೆ ಸಕಾಲ. ಸಾಲದ ಹೊರೆ ಕಡಿಮೆಯಾಗಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ. ವಿದೇಶದಿಂದ ಧನಲಾಭ ಮತ್ತು ಹೊಸ ಅವಕಾಶಗಳು ಒದಗಿಬರಲಿವೆ.
ಕರ್ಕಾಟಕ ರಾಶಿ:
ವ್ಯಕ್ತಿತ್ವ ವಿಕಸನ, ಸಮಾಜದಲ್ಲಿ ಗೌರವ, ಆರೋಗ್ಯ ವೃದ್ಧಿ. ಹೊಸ ಪಾಲುದಾರಿಕೆ ಉದ್ಯಮ ಆರಂಭಿಸಬಹುದು. ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನಮಾನ. ಶೀಘ್ರ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಉನ್ನತ ಶಿಕ್ಷಣದಲ್ಲಿ ಭರ್ಜರಿ ಯಶಸ್ಸು. ಚಿನ್ನ ಮತ್ತು ಭೂಮಿಯ ಮೇಲೆ ಹೂಡಿಕೆ ಶುಭ. ಆರ್ಥಿಕ ನೆರವು ಸುಲಭವಾಗಿ ದೊರೆಯಲಿದೆ. ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಯಶಸ್ವಿ.
ಸಿಂಹ ರಾಶಿ:
ಆಧ್ಯಾತ್ಮಿಕ ಪ್ರಗತಿ, ಭೌತಿಕ ಸುಖಗಳಿಗಾಗಿ ಖರ್ಚು ಹೆಚ್ಚಳ. ರಫ್ತು-ಆಮದು ಉದ್ಯಮದಲ್ಲಿ ಲಾಭ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ವಿವಾಹ ಕಾರ್ಯಗಳಿಗೆ ಹೆಚ್ವು ವೆಚ್ಚ. ವಿದೇಶಿ ವಿವಿಗಳಲ್ಲಿ ಶಿಕ್ಷಣ ಪಡೆಯಲು ಅಡೆತಡೆ ನಿವಾರಣೆ. ಹೂಡಿಕೆ ಮಾಡುವಾಗ ಎಚ್ಚರವಿರಲಿ. ಸಾಲದ ವ್ಯವಹಾರಗಳಿಂದ ದೂರವಿರಿ, ತಾಯಿಯ ಆರೋಗ್ಯಕ್ಕೆ ಖರ್ಚು. ವಿದೇಶ ಪ್ರಯಾಣದ ಆಸೆ ಈಡೇರಲಿದೆ, ಅಲ್ಲಿಯೇ ನೆಲೆಸುವ ಯೋಗವಿದೆ.
ಕನ್ಯಾ ರಾಶಿ:
ಸರ್ವತೋಮುಖ ಲಾಭ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸಂತಾನ ಸುಖ. ಉದ್ಯೋಗದಲ್ಲಿ ಸಂಬಳ ಹೆಚ್ಚಳ. ಹೊಸ ಉದ್ಯಮ ಆರಂಭಕ್ಕೆ ಹಣಕಾಸಿನ ನೆರವು ಸಿಗಲಿದೆ. ಪ್ರೇಮ ವಿವಾಹಕ್ಕೆ ಹಸಿರು ನಿಶಾನೆ. ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಪ್ರಗತಿ, ಅಂಕಗಳು ವೃದ್ಧಿ. ಹೂಡಿಕೆಗಳಿಂದ ಅಧಿಕ ಲಾಭ. ಹಳೆಯ ಬಾಕಿ ವಸೂಲಿಯಾಗಲಿದ್ದು, ಸಾಲ ತೀರಿಸುವಿರಿ. ಪ್ರವಾಸೋದ್ಯಮ ಅಥವಾ ವ್ಯಾಪಾರದ ನಿಮಿತ್ತ ವಿದೇಶ ಯೋಗವಿದೆ.
ತುಲಾ ರಾಶಿ:
ಕೀರ್ತಿ, ಸೌಕರ್ಯಗಳ ಹೆಚ್ಚಳ, ತಾಯಿಯಿಂದ ಬೆಂಬಲ. ವೃತ್ತಿರಂಗದಲ್ಲಿ ದೊಡ್ಡ ಯಶಸ್ಸು, ಹೊಸ ಉದ್ಯಮ ಆರಂಭಕ್ಕೆ ಅತ್ಯಂತ ಸುಸಮಯ. ಉದ್ಯೋಗಸ್ಥ ಸಂಗಾತಿಯ ಭೇಟಿ. ತಾಂತ್ರಿಕ ಹಾಗೂ ನಿರ್ವಹಣಾ ಶಿಕ್ಷಣದಲ್ಲಿ ಯಶಸ್ಸು. ಸ್ಥಿರಾಸ್ತಿ ಖರೀದಿ ಮತ್ತು ಒಪ್ಪಂದದ ಹೂಡಿಕೆ ಸೂಕ್ತ. ಸುಲಭವಾಗಿ ಸಾಲ ಮಂಜೂರಾತಿ. ಅಧಿಕೃತ ವೃತ್ತಿಪರ ವಿದೇಶ ಪ್ರವಾಸಗಳು ಯಶಸ್ವಿಯಾಗಲಿವೆ.
ವೃಶ್ಚಿಕ ರಾಶಿ:
ನಿಮಗೆ ಪಿತೃಾರ್ಜಿತ ಆಸ್ತಿಯಿಂದ ಲಾಭ, ಅದೃಷ್ಟದ ಬೆಂಬಲ, ಧಾರ್ಮಿಕ ಒಲವು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶ. ಜ್ಞಾನ ಆಧಾರಿತ ಉದ್ಯಮಗಳು ಲಾಭ ತರಲಿವೆ. ಯೋಗ್ಯ ಸಂಗಾತಿ ಸಿಗಲಿದ್ದಾರೆ. ಉನ್ನತ ಶಿಕ್ಷಣ, ಸಂಶೋಧನಾ ವಿದ್ಯಾರ್ಥಿಗಳಿಗೆ ಸುವರ್ಣ ಕಾಲ. ದೀರ್ಘಕಾಲೀನ ಶೇರು ಹೂಡಿಕೆಯಿಂದ ಭಾರಿ ಲಾಭ. ಸಾಲದ ಸಮಸ್ಯೆಗಳು ಬಗೆಹರಿಯಲಿವೆ. ಉನ್ನತ ವ್ಯಾಸಂಗಕ್ಕಾಗಿ ಕೈಗೊಳ್ಳುವ ವಿದೇಶ ಪ್ರಯಾಣ ಅತ್ಯಂತ ಯಶಸ್ವಿ.
ಧನು ರಾಶಿ:
ರಹಸ್ಯ ವಿಜ್ಞಾನದಲ್ಲಿ ಆಸಕ್ತಿ, ಹಠಾತ್ ಧನಲಾಭ, ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಸವಾಲುಗಳಿದ್ದರೂ ಜಯ. ಜಂಟಿ ಉದ್ಯಮ ಆರಂಭಿಸಲು ಯೋಚಿಸಿ ಮುನ್ನಡೆಯಿರಿ. ವಿವಾಹ ಯತ್ನಗಳಲ್ಲಿ ವಿಳಂಬ ಸಾಧ್ಯತೆ. ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳಿಗೆ ಜಯ. ಲಾಟರಿ, ವಿಮೆ ಮೂಲಕ ಲಾಭ. ಸಾಲ ಮಾಡುವುದನ್ನು ಸದ್ಯಕ್ಕೆ ತಡೆಯಿರಿ. ಅನಿರೀಕ್ಷಿತ ವಿದೇಶಿ ಪ್ರಯಾಣದ ಯೋಗ ಎದುರಾಗಬಹುದು.
ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?
ಮಕರ ರಾಶಿ:
ನಿಮ್ಮ ದಾಂಪತ್ಯದಲ್ಲಿ ಮಧುರತೆ, ಸಾಮಾಜಿಕವಾಗಿ ಜನಪ್ರಿಯತೆ ಹೆಚ್ಚಳ. ಹೊಸ ಪಾಲುದಾರಿಕೆ ಉದ್ಯಮಕ್ಕೆ ಅತ್ಯುತ್ತಮ ಸಮಯ. ವೃತ್ತಿಯಲ್ಲಿ ಪ್ರಗತಿ ಮತ್ತು ಕೀರ್ತಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವಿದ್ವತ್ ಪೂರ್ಣ ಶಿಕ್ಷಣ, ಭಾಷಾ ಅಧ್ಯಯನದಲ್ಲಿ ಪ್ರಗತಿ. ಉದ್ಯಮ ವಿಸ್ತರಣೆಗೆ ಮಾಡುವ ಹೂಡಿಕೆ ಲಾಭದಾಯಕ. ಆರ್ಥಿಕ ಸಹಾಯ ಸುಲಭವಾಗಿ ಸಿಗಲಿದೆ. ಸಂಗಾತಿಯೊಂದಿಗೆ ವಿದೇಶ ಪ್ರಯಾಣ ಸಾಧ್ಯ.
ಕುಂಭ ರಾಶಿ:
ಶತ್ರುನಾಶ, ನ್ಯಾಯಾಲಯ ಹಾಗೂ ಕಚೇರಿ ಕೆಲಸಗಳಲ್ಲಿ ವಿಜಯ, ಆರೋಗ್ಯ ಸುಧಾರಣೆ. ಬ್ಯಾಂಕಿಂಗ್, ಕಾನೂನು ರಂಗದ ಉದ್ಯೋಗಿಗಳಿಗೆ ಬಡ್ತಿ. ಸೇವಾ ವಲಯದ ಉದ್ಯಮ ಲಾಭದಾಯಕ. ವಿವಾಹ ಸಂಬಂಧಗಳು ಅಂತಿಮ ಹಂತ ತಲುಪಲು ಶ್ರಮಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ. ಹೊಸ ಸಾಲ ಸಿಗಲಿದೆ, ಆದರೆ ಹೂಡಿಕೆಗಳನ್ನು ತಜ್ಞರ ಸಲಹೆಯ ಮೇರೆಗೆ ಮಾಡಿ.
ಮೀನ ರಾಶಿ:
ಪೂರ್ವಪುಣ್ಯದ ಬಲ, ಸಂತಾನ ಭಾಗ್ಯ, ಸೃಜನಶೀಲತೆ ವೃದ್ಧಿ. ಕಲೆ, ಸಮಾಲೋಚನೆ ಉದ್ಯಮದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಗೆ ಸಕಾಲ. ಪ್ರೇಮ ಸಾಫಲ್ಯ, ವಿವಾಹ ನಿಶ್ಚಯ. ವಿದ್ಯಾರ್ಥಿಗಳಿಗೆ ಅಪಾರ ಜ್ಞಾನಾರ್ಜನೆ, ಸಹಾಯಧನದ ಯೋಗ. ಷೇರು ಮಾರುಕಟ್ಟೆ ಹಾಗೂ ಸಟ್ಟಾ ವ್ಯಾಪಾರದಿಂದ ಲಾಭ. ಸಾಲ ಮುಕ್ತ ಜೀವನದತ್ತ ಹೆಜ್ಜೆ. ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಕಾರಣಗಳಿಗಾಗಿ ವಿದೇಶ ಪ್ರಯಾಣ ಯಶಸ್ವಿಯಾಗಲಿದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:




