Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!

ಮಕರದಲ್ಲಿ ಬುಧಾದಿತ್ಯ ಯೋಗವು ಜನವರಿ 17 ರಿಂದ ಫೆಬ್ರವರಿ 4 ರವರೆಗೆ ಸೃಷ್ಟಿಯಾಗುತ್ತದೆ. ಇದು ಬುದ್ಧಿ, ವಾಕ್‌ಶಕ್ತಿ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಶನಿಯ ಆಧಿಪತ್ಯದಲ್ಲಿರುವುದರಿಂದ ಫಲಗಳು ಶ್ರಮ ಮತ್ತು ಸಹನೆಯ ಮೂಲಕ ಕಾಲಾನಂತರದಲ್ಲಿ ವ್ಯಕ್ತವಾಗುತ್ತವೆ. ಈ ಯೋಗವು ವಿವಿಧ ರಾಶಿಗಳ ಮೇಲೆ ಶುಭ, ಅಶುಭ ಮತ್ತು ಮಿಶ್ರ ಫಲಗಳನ್ನು ನೀಡಲಿದ್ದು, ಪ್ರತಿಯೊಬ್ಬರ ಜೀವನದ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ.

Budhaditya Yoga: ಮಕರದಲ್ಲಿ ಬುಧಾದಿತ್ಯಯೋಗ; ಈ 5 ರಾಶಿಯವರು ಮುಟ್ಟಿದೆಲ್ಲ ಚಿನ್ನ!
ಬುಧಾದಿತ್ಯಯೋಗ
Edited By:

Updated on: Jan 15, 2026 | 12:41 AM

ಬುಧ ಮತ್ತು ಆದಿತ್ಯರು ಖಗೋಳದಲ್ಲಿ ಆಗಾಗ ಸಂಧಿಸುತ್ತಿರುತ್ತಾರೆ. ಇವರ ಸಂಯೋಗದಿಂದ ಬೌದ್ಧಿಕ, ಮಾನಸಿಕ ಹಾಗೂ ಕೌಶಲಗಳ ಆಧಿಕ್ಯವಿರಲಿದೆ. ಆದರೆ ಅವುಗಳ ಸ್ಥಿತಿಯ ಮೇಲೆ ಪರಿಣಾಮದ ವ್ಯತ್ಯಾಸ ಆಗುವುದು. ಬುಧಾದಿತ್ಯಯೋಗವು ಜನವರಿ ಹದಿನೇಳರಿಂದ ಫೆಬ್ರವರಿ ನಾಲ್ಕರ ವರೆಗೆ ಮಕದರಲ್ಲಿ ಇರಲಿದ್ದು ಬುದ್ಧಿ, ವಾಕ್‌ಶಕ್ತಿ, ಆಡಳಿತ ಸಾಮರ್ಥ್ಯ, ಲೆಕ್ಕಾಚಾರ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಈ ಯೋಗ ಮಕರ ರಾಶಿಯಲ್ಲಿ ನಿರ್ಮಾಣವಾಗಿದ್ದು, ಶನಿ ಅಧಿಪತ್ಯದ ಕಾರಣ ಫಲಗಳು ತಕ್ಷಣ ವ್ಯಕ್ತವಾಗದೆ ಕಾಲಾನಂತರದಲ್ಲಿ ಶ್ರಮ, ಶಿಸ್ತು ಮತ್ತು ಸಹನೆಯ ಮೂಲಕ ಫಲ ನೀಡುತ್ತವೆ.

ಶುಭ ಫಲರಾಶಿಗಳು:

  • ಮೀನ: ಧೈರ್ಯ, ಪ್ರಯತ್ನ, ಸಂವಹನ ಕ್ಷೇತ್ರದಲ್ಲಿ ಪ್ರಗತಿ. ಬರವಣಿಗೆ, ಮಾಧ್ಯಮ, ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಸಹಕಾರ ದೊರೆಯುತ್ತದೆ.
  • ವೃಷಭ: ಬುದ್ಧಿವಂತಿಕೆ, ವಿದ್ಯಾಭ್ಯಾಸ, ಮಕ್ಕಳ ವಿಷಯದಲ್ಲಿ ಶುಭ. ಸೃಜನಶೀಲತೆ, ಹೂಡಿಕೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು.
  • ಕನ್ಯಾ: ಭಾಗ್ಯೋದಯ, ಧರ್ಮ–ವಿದ್ಯೆ, ಗುರುಕೃಪೆ. ದೂರ ಪ್ರಯಾಣ ಲಾಭಕರ. ಜೀವನದ ದಿಕ್ಕು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ.
  • ತುಲಾ: ಉದ್ಯೋಗ, ಅಧಿಕಾರ, ಆಡಳಿತ ಕ್ಷೇತ್ರದಲ್ಲಿ ಉನ್ನತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಹೆಸರು–ಪ್ರತಿಷ್ಠೆ ಹೆಚ್ಚಳ.
  • ವೃಶ್ಚಿಕ: ಆದಾಯ ವೃದ್ಧಿ, ಆಶಾಪೂರ್ತಿ. ಸ್ನೇಹ ವಲಯ ವಿಸ್ತರಣೆ. ಹಿರಿಯರ ಸಹಕಾರದಿಂದ ಲಾಭಕರ ಯೋಜನೆಗಳು.

ಅಶುಭ ಫಲರಾಶಿಗಳು:

  • ಮಿಥುನ: ಷಷ್ಠದಲ್ಲಿ ಶತ್ರುಕಾಟ, ಸಾಲ, ಆರೋಗ್ಯ ಸಮಸ್ಯೆ. ಉದ್ಯೋಗ ಒತ್ತಡ. ಕಾನೂನು ವಿಷಯಗಳಲ್ಲಿ ಎಚ್ಚರ ಅಗತ್ಯ.
  • ಕರ್ಕಾಟಕ: ಸಪ್ತಮದಲ್ಲಿ ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅಹಂಕಾರ, ಮಾತಿನ ಗೊಂದಲದಿಂದ ದೂರ ಸಂಭವ.
  • ಸಿಂಹ : ರವಿಯ ರಾಶಿಯಗಿದ್ದರೂ ಅಷ್ಟಮಸ್ಥಾನವಾಗಿದ್ದು ಅನಿರೀಕ್ಷಿತ ವಿಘ್ನ, ಭಯ, ಮಾನಸಿಕ ಒತ್ತಡ. ಆರೋಗ್ಯ ಕಡೆ ಹೆಚ್ಚು ಜಾಗ್ರತೆ ಅಗತ್ಯ.
  • ಧನು: ದ್ವಾದಶದ ಈ ರಾಶಿಯವರಿಗೆ ಆರ್ಥಿಕ ವೆಚ್ಚ ಹೆಚ್ಚಳ, ನಿದ್ರಾಭಂಗ, ಏಕಾಂತ ಭಾವನೆ. ವಿದೇಶ ಸಂಬಂಧಿತ ಚಿಂತನೆ. ಫಲ ವಿಳಂಬ.

ಮಿಶ್ರ ಫಲ ರಾಶಿಗಳು:

  • ಮಕರ: ಈ ರಾಶಿಯಲ್ಲಿಯೇ ಇರುವ ಬುಧಾದಿತ್ಯರಿಂದ ಆತ್ಮವಿಶ್ವಾಸ, ವ್ಯಕ್ತಿತ್ವ ಬಲ. ಆದರೆ ಅಹಂಕಾರ, ಆರೋಗ್ಯದ ನಿರ್ಲಕ್ಷ್ಯ ಸಾಧ್ಯ. ಶ್ರಮದ ನಂತರ ಫಲ.
  • ಕುಂಭ: ಹಣ ಮತ್ತು ವಾಕ್‌ ಶಕ್ತಿಯ ವೃದ್ಧಿ. ಆದಾಯ ಇದ್ದರೂ ಕುಟುಂಬ ಕಲಹ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ.
  • ಮೇಷ: ಈ ರಾಶಿಯವರಿಗೆ ಮನೆ, ಆಸ್ತಿ ಲಾಭ. ಒಳಮನಸ್ಸಿನ ಅಶಾಂತಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ.

– ಲೋಹಿತ ಹೆಬ್ಬಾರ್