Chaturgrahi Yoga: ಈ 4 ರಾಶಿಯ ಜಾತಕದವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಅದೃಷ್ಟ ಲಭಿಸುತ್ತದೆ, ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿಕೊಳ್ಳಿ
ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು, ಬುಧು, ಗುರು ಗ್ರಹಗಳು ಸಂಚರಿಸುತ್ತವೆ. ಈ ಸಮಯದಲ್ಲಿ ಈ ನಾಲ್ಕು ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನವಾಗುವ ನಿರೀಕ್ಷೆ
Zodiac Sign: ಜೋತಿಷ್ಯದ (Astrology) ಮೇಲೆ ಕೆಲವರಿಗೆ ನಂಬಿಕೆ ಇದ್ದರೆ.. ಮತ್ತೆ ಕೆಲವರಿಗೆ ಯಾವ ನಂಬಿಕೆಯೂ ಇರುವುದಿಲ್ಲ. ಆದಾಗ್ಯೂ, ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಿರ್ದಿಷ್ಟ ಪರಿಧಿಯಲ್ಲಿ ಸಂಚರಿಸುವುದರಿಂದ ಶುಭ ಯೋಗಗಳು, ಅಶುಭ ಯೋಗಗಳು ಪ್ರಾಪ್ತಿಯಾಗುತ್ತವೆ. ಸದ್ಯದಲ್ಲೇ ಕೆಲವು ದಿನಗಳಲ್ಲಿ ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಸೇರುತ್ತವೆ. ಆ ಸಮಯದಲ್ಲಿ ಆ ನಾಲ್ಕು ರಾಶಿಯವರಿಗೆ (Chaturgrahi Yoga) ಮುಟ್ಟಿದ್ದೆಲ್ಲಾ ಚಿನ್ನ, ಅದೃಷ್ಟವೋ ಅದೃಷ್ಟ ಖುಲಾಯಿಸುತ್ತೆ. ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು, ಬುಧು, ಗುರು ಗ್ರಹಗಳು ಸಂಚರಿಸುತ್ತವೆ. ಈ ಸಮಯದಲ್ಲಿ ಈ ನಾಲ್ಕು ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನವಾಗುವ ನಿರೀಕ್ಷೆ ಮಾಡಬಹುದು. ಅದರಲ್ಲಿ ನೀವು ಇದ್ದೀರಾ ನೋಡಿಕೊಳೀ (Spiritual).
ಮೇಷ ರಾಶಿ: ಈ ನಾಲ್ಕು ರಾಶಿಗಳ ಸಂಯೋಜನೆಯ ಫಲವಾಗಿ ಮೇಷ ರಾಶಿ ಅವರಿಗೆ ಶುಭಪ್ರದವಾಗಲಿದೆ. ಈ ಯೋಗ ಉಂಟಾಗುವ ಸಮಯದಲ್ಲಿ ಮೇಷ ರಾಶಿಯವರಿಗೆ ಯಾವ ಕೆಲಸದಲ್ಲಿ ಕೈಹಾಕಿದರೂ ವಿಜಯವೇ ಲಭಿಸುತ್ತದೆ. ಎಲ್ಲಾ ವ್ಯಾಪಾರಗಳಲ್ಲಿಯೂ ಮುಟ್ಟಿದ್ದೆಲ್ಲಾ ಬಂಗಾರವೇ! ವೈವಾಹಿಕ ಜೀವನ ಕೂಡ ಚೆನ್ನಾಗಿರುತ್ತದೆ. ಹಾಗೆಯೇ ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ಏನೇ ಆದರೂ ಈ ಸಮಯದಲ್ಲಿ ಅವರು ಕೋಪದಿಂದ ದೂರವಿದ್ದರೆ ಒಳ್ಳೆಯದು.
ಮಿಥುನ ರಾಶಿ: ಚತುರ್ಗಾಹಿ ಯೋಗದ ಸಮಯದಲ್ಲಿ ಈ ರಾಶಿಯವರಿಗೆ ಎಲ್ಲಾ ಕೆಲಸಗಳಲ್ಲೂ ಲಾಭಗಳು ಬರುತ್ತವೆ. ಉದ್ಯೋಗ, ವ್ಯಾಪಾರದಲ್ಲಿ ವಿಜಯಗಳು, ಹೊಸ ವಾಹನ ಅಥವಾ ಮನೆ ಸಿಗಬಹುದು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ: ಈ ರಾಶಿವರಿಗೆ ಚತುರ್ಗಾಹಿ ಯೋಗ ಶುಭಪ್ರದವಾಗಿರುತ್ತದೆ. ಲಾಭದಾಯಕವಾಗಿರುತ್ತದೆ. ಈ ರಾಶಿಯ ನೌಕರರಿಗೆ ಪ್ರಮೋಷನ್ ಅಥವಾ ಇಂಕ್ರಿಮೆಂಟ್‌ಗಳು, ವಿದೇಶಕ್ಕೆ ಹೋಗುವ ಅವಕಾಶಗಳು, ವಾಹನ ಅಥವಾ ಆಸ್ತಿ ಖರೀದಿಸುವ ಅವಕಾಶವಿದೆ.
ಸಿಂಹ ರಾಶಿ: ಚತುರ್ಗಾಹಿ ಯೋಗದಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಯಾವ ಪರೀಕ್ಷೆಯಲ್ಲಿಯಾದರೂ ಯಶಸ್ಸು ಸಾಧಿಸುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು, ಜೊತೆಗೆ ರಾಜಕೀಯ, ಸಾಮಾಜಿಕ ಸೇವೆ ಮಾಡುವವರಿಗೆ ಹುದ್ದೆ ಬರುವ ಅವಕಾಶ ಇರುತ್ತದೆ.