Daily Astrology: ಈ ರಾಶಿಯವರ ಬಹುದಿನದ ಸಮಸ್ಯೆ ಬಗೆಹರಿಯಲಿದೆ

ಶಾಲಿವಾಹನ ಶಕವರ್ಷ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು, ವೃಷಭ ಸೌರ ಮಾಸ, ರೋಹಿಣಿ ಮಹಾನಕ್ಷತ್ರ, ಗುರುವಾರ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಉತ್ತಮ‌ ವಿಚಾರಗಳ ಕಡೆ ಗಮನವಿರಲಿ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Daily Astrology: ಈ ರಾಶಿಯವರ ಬಹುದಿನದ ಸಮಸ್ಯೆ ಬಗೆಹರಿಯಲಿದೆ
ದಿನ ಭವಿಷ್ಯ

Updated on: May 29, 2025 | 12:12 AM

ಬೆಂಗಳೂರು, ಮೇ 29, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಬಾಲವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:30 – 14:07, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:54 – 12:30.

ತುಲಾ ರಾಶಿ: ಅಪಪ್ರಚಾರವನ್ನು ಸಹಿಸಿಕೊಳ್ಳುವುದು ಕಷ್ಟ. ವಿದ್ಯಾರ್ಥಿಗಳಿಗೆ ಮನೆಯ ಕೆಲಸದ ನಡುವೆ ವಿದ್ಯಾಭ್ಯಾಸ ಆಗದು. ವ್ಯವಸ್ಥೆಯ ಮುಖ್ಯಸ್ಥರಾಗಿ ಮುನ್ನಡೆಸುವುದು ಕಷ್ಟವಾಗುವುದು. ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ವಾಹನವು ನಾಷ್ಟವಾಗುವ ಸಾಧ್ಯತೆಯಿದೆ. ಹೊಸ ಹವ್ಯಾಸದ ಕಡೆಗೆ ಗಮನವಿರಲಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯನ್ನು ನೀವು ಹೊಂದುವಿರಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ನಿಮ್ಮ ಮನಸ್ಸಿನ ವಿಕಾರವನ್ನು ತೋರಿಸುವುದು ಬೇಡ.‌ ಪ್ರತಿಯೊಂದು ವಿಷಯದಲ್ಲೂ ನಿಮ್ಮ ಪೋಷಕರಿಂದ ನೀವು ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ದುಂದುವೆಚ್ಚ ಮಾಡುವ ಸಾಧ್ಯತೆಯೂ ಇದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ನಿಮ್ಮ ಅಸಂಬದ್ಧ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ.

ವೃಶ್ಚಿಕ ರಾಶಿ: ಸಂಗಾತಿಗೆ ಸರಿಯಾದ ಸ್ಪಂದನೆ ಅಗತ್ಯ. ಯಾರದೋ ಹಣವು ಅನಿರೀಕ್ಷಿತವಾಗಿ ಕೈ ಸೇರುವುದು. ನಿಮ್ಮ ಬಹುದಿನದ ಸಮಸ್ಯೆಯು ಬಗೆಹರಿಯಲಿದೆ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಉತ್ತಮ‌ ವಿಚಾರಗಳ ಕಡೆ ಗಮನವಿರಲಿ. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ವ್ಯವಹಾರದಿಂದ ಬಾಂಧವ್ಯ ನಿರ್ಣಯ ಮಾಡುವುದು ಬೇಡ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಇನ್ನೊಬ್ಬರ ಸಂಪತ್ತನ್ನು ಅಪಹರಿಸಿದ ಅಪವಾದ ಬರುವುದು. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಮಧುರವಾದ ಮಾತುಗಳಿಂದ ತುಂಡಾಗುವ ಸಂಬಂಧವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಚೆನ್ನಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು.

ಧನು ರಾಶಿ: ಇರುವ ಭೂಮಿಯನ್ನು ಕಾಯಗದುಕೊಳ್ಳುವುದೇ ನಿಮಗೆ ಸಮಸ್ಯೆ. ಕಾಲಹರಣದಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ದಿನದ ಕೊನೆಯಲ್ಲಿ ಅನಾರೋಗ್ಯದಂತೆ ಅನ್ನಿಸುವುದು. ನಿಂತಲ್ಲೇ ಇರುವ ಬುದ್ಧಿ ಹಾಗೂ ಮನಸ್ಸಿನಿಂದ ಕೆಟ್ಟ ಆಲೋಚನೆಗಳು ಬರಲಿವೆ. ಹಿತಶತ್ರುಗಳ ಜಾಲದಲ್ಲಿಯೇ ಇದ್ದರೂ ಅರಿವಿಗೆ ಬಾರದು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ಮನೆಯವರ ಜೊತೆ ಈ ದಿನವನ್ನು ಕಳೆಯುವಿರಿ. ಆಪ್ತವಲಯದಿಂದ ಆಘಾತಕಾರಿ ಸುದ್ದಿಯು ಬರಬಹುದು. ನಿಮ್ಮ ನಂಬಿಕೆಯು ಸುಳ್ಳಾಗಿ ಬೇಸರವಾಗಬಹುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ನೀವು ನಿಮ್ಮ ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸುವಿರಿ. ನಿಮ್ಮ ಅಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ.

ಮಕರ ರಾಶಿ: ಸ್ತ್ರೀಯರ ಸಂಘಟಿತ ಉದ್ಯಮದಲ್ಲಿ ಉತ್ತಮ ಪ್ರಗತಿ. ನಿಮಗೆ ಗೊತ್ತಿಲ್ಲದೇ ಸಿಟ್ಟನ್ನು ನಿಯಂತ್ರಣದಲ್ಲಿ ಇರಿಸಿರುವಿರಿ. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದಿನ ಶಕ್ತಿಗೆ ಅನುಗುಣವಾಗಿ ಉದ್ಯೋಗವನ್ನು ಮಾಡುವುದು ಉತ್ತಮ. ಸತ್ಸಂಗದಲ್ಲಿ ದಿನ ಕಳೆಯುವಿರಿ. ಉದ್ಯೋಗದ ಹುಡುಕಾಟದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಕೆಲವು ಅನಿರೀಕ್ಷಿತ ಲಾಭಗಳಿಂದಾಗಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಕೌಟುಂಬಿಕ ವಿಚಾರದಲ್ಲಿ ಭಿನ್ನಮತ ಬರಬಹುದು.

ಕುಂಭ ರಾಶಿ: ಕ್ಷಿಪ್ರವಾಗಿ ನಿಮ್ಮ ಕಾರ್ಯವಾದರೂ ಮತ್ತೆಲ್ಲೋ ನಿಧಾನವಾಗಲಿದೆ. ನಿಮ್ಮ ವಸ್ತುವಿನಿಂದಲೇ ತೊಂದರೆಯಾಗಲಿದೆ. ಆಲಸ್ಯವು ನಿಮ್ಮ ಒಳ್ಳೆತನಕ್ಕೆ ಮುಳುವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ಉಡುಗೆ ತೊಡುಗೆಯ ವ್ಯವಹಾರಕ್ಕಾಗಿ ಮ‌ನೆಯಲ್ಲಿ ಕಲಹ. ನಿಮ್ಮನ್ನು ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ನಿಮ್ಮಲ್ಲಿ ಕಲಾವೃಕ್ಷವಿದ್ದು ಅದಕ್ಕೆ ಸರಿಯಾಗಿ ನೀರೆರಿಯಿರಿ. ಇದೇ ನಿಮ್ಮನ್ನು ಎತ್ತರಕ್ಕೆ ಒಯ್ಯಲಿದೆ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಬೇಕಾದ ಔಷಧವನ್ನು ಮಾಡಿ. ನಿಮ್ಮ ಮೇಲೆ ಒತ್ತಡ ಅಧಿಕವಾಗಿ ಬರಬಹುದು. ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು.

ಮೀನ ರಾಶಿ: ನಿಮಗೆ ಕೊಟ್ಟ ಗಡುವು ಮುಕ್ತವಾಗಿ ಮನೆಬಾಗಿಲಿಗೆ ಜನರು ಬರಬಹುದು. ನೀವು ಮನೆಯವರಿಗೆ ತೊಂದರೆಯಾಗದಂತೆ ನೀವೇ ಉದ್ಯೋಗದ ಜೊತೆ ಉನ್ನತ ವಿದ್ಯಾಭ್ಯಾಸವನ್ನೂ ಮಾಡಬೇಕಾಗುವ ಸ್ಥಿತಿ ಬರಬಹುದು. ತಪ್ಪುಗಳು ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಶ್ಚಿಂತೆಯಿಂದ ಮುನ್ನಡೆಯಿರಿ. ಪರಿಚಿತರ ಜೊತೆ ಅಕಾರಣ ತಿರುಗಾಟವನ್ನು ಮನೆಯವರು ನಿಲ್ಲಿಸುವರು.‌ ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಕಲಹವಾಗಬಹುದು. ಆಪ್ತರ ಜೊತೆ ಹಣಕಾಸಿನ ವಿಚಾರವಾಗಿ ಸಮಾಲೋಚನೆ. ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಗೌರವವನ್ನೂ ಪಡೆಯುವಿರಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ.