Horoscope Today May 18, 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?
2024 ಮೇ 18ರ ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಮೇ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ ಬೆಳಗ್ಗೆ10:53ರ ವರೆಗೆ, ಯಮಘಂಡ ಕಾಲ 14:05 ರಿಂದ 15:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05ರಿಂದ ಬೆಳಗ್ಗೆ 07:41ರ ವರೆಗೆ.
ಮೇಷ ರಾಶಿ :ನಿಮ್ಮ ಬಹಳ ದಿನಗಳಿಂದ ಹಾಗೆಯೇ ಇದ್ದ ಸರ್ಕಾರದ ಕೆಲಸಗಳು ಮುಕ್ತಾಯ ಮಾಡಬೇಕಾದ ಸ್ಥಿತಿ ಇರುವುದು. ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದತ್ತ ಗಮನಹರಿಸುವರು. ನಿಮ್ಮ ಕೋಪವನ್ನು ನಿಯಂತ್ರಿಸಿ. ಪರಿಸ್ಥಿತಿಯ ಪ್ರತಿಕೂಲತೆಯು ನಿಮ್ಮ ಕೋಪಕ್ಕೆ ಕಾರಣವಾಗಬಹುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳಬೇಡಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಬಾಂಧವರ ಸಂಪರ್ಕದಿಂದ ದೂರವಿರುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಯಾರದೋ ಮಾತಿಗೆ ಕುಣಿಯುವುದು ಬೇಡ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು.
ವೃಷಭ ರಾಶಿ :ಇಂದು ನೀವು ಅಪರೂಪದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. ಅದರಿಂದ ನಿಮ್ಮ ಸ್ಥಾನಮಾನ, ಅಲೋಚನಾ ಕ್ರಮಗಳು ಬದಲಾಗುವುದು. ಇಂದು ನಿಮ್ಮ ಕೆಲಸದ ಬಗ್ಗೆ ಹೆಚ್ಚು ತಿಳಿದಿರುವುದು ಮತ್ತು ಏಕಾಗ್ರತೆಯನ್ನು ಹೊಂದಿರುವುದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ. ಯಾರನ್ನೂ ಹೆಚ್ಚು ಅವಲಂಬಿಸಬೇಡಿ ಮತ್ತು ನಿಮ್ಮ ಯೋಜನೆಗಳನ್ನು ಘೋಷಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ. ಪ್ರಯೋಜನವಿಲ್ಲದೇ ಯಾವ ಕಾರ್ಯವನ್ನೂ ಮಾಡು ಪ್ರಯತ್ನಿಸುವುದಿಲ್ಲ. ಸಾಹಸ ಕಾರ್ಯಕ್ಕೆ ಒಮ್ಮೆಲೇ ಮುಂದಾಗುವುದು ಬೇಡ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.
ಮಿಥುನ ರಾಶಿ :ಇಂದು ನಿಮ್ಮ ಅರ್ಹತೆಗೆ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಅಕ್ರಮ ಕೆಲಸಗಳು ಮಾಡುವಂತಹ ಸಂದರ್ಭ ಬಂದಲ್ಲಿ ಅದರಿಂದ ದೂರವಿರಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. ಇದು ನಿಮ್ಮ ದಕ್ಷತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಸಮಾರಂಭಗಳಲ್ಲಿ ಹೆಚ್ಚಿನ ದಿನವನ್ನು ಕಳೆಯುವಿರಿ. ಹೆಚ್ಚು ಚಿಂತಿಸುವುದರಿಂದ ಯಾವ ಪ್ರಯೋಜನವಾಗದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿನ ಖರ್ಚಿಗೆ ಪ್ರಯೋಜನಕ್ಕೆ ಬಾರದು.
ಕಟಕ ರಾಶಿ :ಇಂದು ನಿಮಗೆ ಏನನ್ನೂ ಸಾಧಿಸುತ್ತೇನೆ ಎಂಬ ಉತ್ಸಾಹವಿರುವುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಿರಾಳವಾಗುವಿರಿ. ಮಕ್ಕಳ ಹಣಕಾಸಿನ ಸಮಸ್ಯೆಯಿಂದ ನಿಮ್ಮ ಸಮಸ್ಯೆಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ಸ್ವ ಉದ್ಯೋಗವನ್ನು ಮಾಡುತ್ತಿದ್ದರೆ ನಿರ್ಲಕ್ಷ್ಯ ಬೇಡ. ಸಂಗಾತಿಯ ಬೆಂಬಲವು ನಿಮಗೆ ಬಲವನ್ನು ಕೊಡುವುದು. ದಿನದ ಕೊನೆಯಲ್ಲಿ ಆಯಾಸದಿಂದ ಕೋಪ ಉಂಟಾಗುತ್ತದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದನ್ನೂ ಅನುಭವಿಸಲೂ ಯೋಗ್ಯವಾದ ಕಾಲವು ಬೇಕಾಗುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.
ಸಿಂಹ ರಾಶಿ :ಇಂದು ಜಗಲಕವಾಡಿಯಾದರೂ ಪಡೆಯುವಿರಿ. ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣವಿಂದು ಹಲವು ವರ್ಷಗಳಿಂದ ನಡೆಯುತ್ತಿದ್ದು, ಇಂದು ಅದರ ಫಲವು ಗೊತ್ತಾಗಲಿದೆ. ಭವಿಷ್ಯದ ಕುರಿತು ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳುವಿರಿ. ಸಾಲದಿಂದ ಬೆಂದ ನಿಮಗೆ ಇಂದು ಅದು ಮುಕ್ತಾಯಗೊಳ್ಳಲಿದೆ. ಸಂತೃಪ್ತಿಯಿಂದ ಇರಲಿದ್ದೀರಿ. ಬೇಕಾದವರ ಸಂಪರನಮ್ಮ ಇಷ್ಟದ ಕೆಲಸದತ್ತ ಹೆಚ್ಚು ಗಮನ ಹರಿಸುವಿರಿ. ದಾಖಲೆಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಇಂದು ನಿಮ್ಮ ಬಳಿ ಸಾಮಾಜಿಕ ಕಳಕಳಿಯಿಂದವ ಜನರು ಬರುವರು.
ಕನ್ಯಾ ರಾಶಿ :ನೀವು ಇಂದು ಆಪ್ತರಿಂದ ಹಲವು ದಿನಗಳ ಅನಂತರ ಹಣವನ್ನು ಪಡೆಯುವಿರಿ. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಕೆಲಸದಲ್ಲಿ ಭಾಗಿಯಾಗುವಿರಿ. ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಯಾರೊಂದಿಗಾದರೂ ವಿವಾದವನ್ನು ಮಾಡುವ ಪರಿಸ್ಥಿತಿ ಇರಬಹುದು, ಗಮನವಿರಲಿ. ಯಶಸ್ಸು ತಾನಾಗಿಯೇ ಬರಲಿದೆ. ವ್ಯವಹಾರದಲ್ಲಿ ಬಂಧುಗಳನ್ನು ಇಟ್ಟುಕೊಳ್ಳುವ ಮನಸ್ಸು ಬೇಡ. ಕರಕುಶಲತೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು.
ತುಲಾ ರಾಶಿ :ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಶ್ರದ್ದೆ ವಹಿಸುವಿರಿ. ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ನಿಮ್ಮ ಜೀವನಕ್ಕೆ ದಿಕ್ಕು ಸಿಗುವ ಸಾಧ್ಯತೆ ಇದೆ. ದಿನವನ್ನು ಸರಿಯಾಗಿ ಬಳಸುವ ಕುರಿತು ಸಮಯವನ್ನು ಹಾಕಿಕೊಳ್ಳಿ. ಕಟ್ಟಿಕೊಟ್ಟ ಬುತ್ತಿ ಎಲ್ಲಿಯವರೆಗೆ ಬಂದೀತು? ವ್ಯರ್ಥವಾಗುವ ಸಮಯದಲ್ಲಿ ಸದುಪಯೋಗವನ್ನು ಮಾಡಿಕೊಳ್ಳಿ. ಪರಿಚಿತರು ಆಪ್ತರಾಗಬಹುದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಇನ್ನೊಬ್ಬರ ಬಗ್ಗೆ ಪ್ರೀತಿ ಇರಲಿ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರಿ. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು.
ವೃಶ್ಚಿಕ ರಾಶಿ :ನೀವು ಇಂದು ಅನೇಕ ದಿನಗಳಿಂದ ಬಾಕಿ ಇದ್ದ ಕೆಲಸಗಳನ್ನು ಪೂರ್ಣಗೊಳ್ಳುವುದು ಸೂಕ್ತ. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ಒಂದು ಪ್ರಮುಖ ವಿಚಾರವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ತಪ್ಪಾಗುವ ಚಟುವಟಿಕೆಗಳಿಗೆ ಬಗ್ಗೆ ಗಮನ ಕೊಡಬೇಡಿ. ರಾಜಕೀಯವಾಗಿ ತೊಡಗಿಕೊಳ್ಳುವ ಇಚ್ಛೆ ಇರುವುದು. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಇಂದಿನ ಸೋಲಿನಿಂದ ಪಾಠ ಕಲಿಯಬೇಕಾದೀತು. ಸಂಪತ್ತೇ ನಿಮಗೆ ಹೊರೆಯಾಗಬಹುದು. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಸಿಟ್ಟನ್ನು ತಾಳ್ಮೆಯ ಅಸ್ತ್ರದಿಂದ ಎದುರಿಸಿ, ಕಾರ್ಯವನ್ನು ಸಫಲಗೊಳಿಸಿಕೊಳ್ಳಿ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ.
ಧನು ರಾಶಿ :ಇಂದು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ಆಸಕ್ತಿ ಇರುವುದು. ಸಾಲ ಕೊಡಲಿಕ್ಕಾಗಿ ಬರುವ ದೂರವಾಣಿ ಕರೆಗಳನ್ನು ನಿರ್ಲಕ್ಷಿಸಲಿದ್ದೀರಿ. ಇಂದು ನೀವು ಪ್ರಮುಖ ನಿರ್ಧಾರಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ಭವಿಷ್ಯದ ನಿರ್ಧಾರಗಳನ್ನು ಬದಲಿಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಇರುವವರ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ಪೂರ್ವ ನಿಶ್ಚಿತ ಕಾರ್ಯವನ್ನು ನೀವು ಬದಲಿಸುವಿರಿ. ನಿಮ್ಮ ಸಂಗಾತಿಯು ನಿಮ್ಮ ಕೆಲಸಗಳಿಗೆ ಸಲಹೆಯನ್ನು ನೀಡಲಿದ್ದಾರೆ. ಇದರಿಂದ ನಿಮಗೆ ಪ್ರಯೋಜನವಾಗಲಿದೆ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ ಮನಸ್ಸಿನಿಂದ ಮಾತನಾಡಿ.
ಮಕರ ರಾಶಿ :ನೀವು ಸಂಪತ್ತನ್ನು ದಾನ ಮಾಡಲಿದ್ದೀರಿ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಅಪರಿಚಿತರು ಭೇಟಿಯಾಗಿ ನಿಮ್ಮ ಕಿವಿ ಚುಚ್ಚಲಿದ್ದಾರೆ. ನೀವು ಮಾಡಲಿರುವ ಕೆಲಸದ ಮೇಲೆ ನಿಮ್ಮ ಗಮನವಿರಲಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಯೋಜನೆ ಜಾರಿಗೊಳಿಸುವ ಅನಿವಾರ್ಯತೆ ಬರಲಿದೆ. ಅನಗತ್ಯ ಖರ್ಚುಗಳನ್ನು ಮಾಡಬೇಕಾಗಿಬರಬಹುದು. ವ್ಯಾಪಾರ ಇಂದು ನಿಧಾನಗತಿಯಲ್ಲಿ ಸಾಗಲಿದೆ. ಯಾರದೋ ಕಾರಣಕ್ಕೆ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ.
ಕುಂಭ ರಾಶಿ :ಇಂದು ಕಾರ್ಯವನ್ನು ಆರಂಭಿಸುವ ಮೊದಲು ಸಂಪೂರ್ಣ ಯೋಜನೆ ಸಿದ್ಧವಿರಲಿ. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು. ಇಂದು ಹೊರಾಂಗಣ ಚಟುವಟಿಕೆಗಳಲ್ಲಿ ಸಮಯ ವ್ಯರ್ಥವಾಗಲಿದೆ. ಓಡಾಟದಿಂದ ಸರಿಯಾದ ಫಲಿತಾಂಶವು ಸಿಗದು. ಮನಸ್ಸು ಉದ್ವೇಗಕ್ಕೆ ಒಳಗಾದೀತು. ಅಹಂಕಾರವು ನಿಮಗೆ ಶೋಭೆ ತರದು. ಇಂದು ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ತಂತ್ರಜ್ಞರು ವಹಿಸಿಕೊಂಡ ಕಾರ್ಯದ ಗಡುವುದು ಸಮೀಪಿಸಿದ್ದು, ತುರ್ತು ಕಾರ್ಯವನ್ನು ಮಾಡಬೇಕಿದೆ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು.
ಮೀನ ರಾಶಿ :ಇಂದು ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ಎದುರು ನೋಡುತ್ತಿರುವಿರಿ. ಇತರರ ಸಲಹೆಗಳನ್ನು ಕೇಳಿ, ನಿಮಗೆ ಸರಿ ಅನಿಸಿದಂತೆ ಮಾಡುವಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರದಲ್ಲಿ ಹೊರಗಿನವರು ಬಾರದಂತೆ ನೋಡಿಕೊಳ್ಳಿ. ಉದ್ಯೋಗಿಗಳ ಜೊತೆ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದ ಕಾರಣ ಬೇಸರವುಂಟಾಗಬಹುದು. ಪ್ರೇಮ ವ್ಯವಹಾರದಿಂದ ದೂರವಿರುವುದು ಉತ್ತಮ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ.
-ಲೋಹಿತ ಹೆಬ್ಬಾರ್-8762924271 (what’s app only)