Daily Devotional: ಈ ತಿಂಗಳು 3 ರಾಶಿಯವರಿಗೆ ಆದಿತ್ಯ ರಾಜಯೋಗ

Updated on: Dec 09, 2025 | 7:18 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು ಗ್ರಹಗಳ ಸಂಚಾರವು ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಈ ಡಿಸೆಂಬರ್ ತಿಂಗಳು ಮೂರು ರಾಶಿಗಳಿಗೆ ಬಹಳ ವಿಶೇಷವಾಗಿ ಆದಿತ್ಯ ರಾಜಯೋಗದ ಫಲವನ್ನು ತರುತ್ತಿದೆ. ರವಿ ಗ್ರಹ ಮತ್ತು ಮಂಗಳ ಗ್ರಹಗಳ ಬಲಿಷ್ಠ ಸಂಚಾರದಿಂದ ಈ ಆದಿತ್ಯ ರಾಜಯೋಗ ನಿರ್ಮಾಣವಾಗಿದೆ.

ಬೆಂಗಳೂರು, ಡಿಸೆಂಬರ್ 09: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು ಗ್ರಹಗಳ ಸಂಚಾರವು ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಈ ಡಿಸೆಂಬರ್ ತಿಂಗಳು ಮೂರು ರಾಶಿಗಳಿಗೆ ಬಹಳ ವಿಶೇಷವಾಗಿ ಆದಿತ್ಯ ರಾಜಯೋಗದ ಫಲವನ್ನು ತರುತ್ತಿದೆ. ರವಿ ಗ್ರಹ ಮತ್ತು ಮಂಗಳ ಗ್ರಹಗಳ ಬಲಿಷ್ಠ ಸಂಚಾರದಿಂದ ಈ ಆದಿತ್ಯ ರಾಜಯೋಗ ನಿರ್ಮಾಣವಾಗಿದೆ.

ಮಂಗಳ ಗ್ರಹವು ಡಿಸೆಂಬರ್ 7ರಂದು ವೃಶ್ಚಿಕ ರಾಶಿಯಿಂದ ಧನುಸ್ಸು ರಾಶಿಗೆ ಪ್ರವೇಶಿಸಿ ಜನವರಿ 16ರವರೆಗೆ ಅಲ್ಲಿಯೇ ಇರುತ್ತದೆ. ರಾಜ ಗ್ರಹವಾದ ರವಿಯು ಡಿಸೆಂಬರ್ 16ರಂದು ಧನುಸ್ಸು ರಾಶಿಗೆ ಬಂದು ಜನವರಿ 14ರವರೆಗೆ ಮಂಗಳನೊಂದಿಗೆ ಸಂಯೋಗದಲ್ಲಿರುತ್ತದೆ. ಈ ಸಂಯೋಗವು ತುಲಾ, ಧನುಸ್ಸು ಮತ್ತು ಮೀನ ರಾಶಿಗಳಿಗೆ ಅತ್ಯಂತ ಶುಭಕರವಾಗಿದೆ. ತುಲಾ ರಾಶಿಯವರಿಗೆ ಆರ್ಥಿಕ ಲಾಭ, ಕಾನೂನು ವಿಷಯಗಳಲ್ಲಿ ಯಶಸ್ಸು, ಮತ್ತು ಭೂಮಿ ಯೋಗಗಳು ಪ್ರಾಪ್ತಿಯಾಗುತ್ತವೆ. ಧನುಸ್ಸು ರಾಶಿಯವರಿಗೆ ಗೌರವ, ರಾಜಕೀಯ ಪ್ರಗತಿ, ಸ್ಥಾನಮಾನ ಮತ್ತು ಅಧಿಕಾರ ಪ್ರಾಪ್ತಿಯಾಗುತ್ತದೆ. ಮೀನ ರಾಶಿಯವರಿಗೆ ಜೀವನದಲ್ಲಿ ಅನಿರೀಕ್ಷಿತ, ಪವಾಡ ಸದೃಶ ಧನಾತ್ಮಕ ಬದಲಾವಣೆಗಳು, ಆರ್ಥಿಕ ವೃದ್ಧಿ, ಹೊಸ ಅವಕಾಶಗಳು ಮತ್ತು ವಿದೇಶ ಯೋಗ ಒದಗಿಬರಲಿವೆ. ಉಳಿದ ರಾಶಿಗಳವರು ಆದಿತ್ಯ ಹೃದಯ ಪಠಣ ಮತ್ತು ಸುಬ್ರಹ್ಮಣ್ಯ ಆರಾಧನೆಯಿಂದ ಶುಭ ಫಲಗಳನ್ನು ಪಡೆಯಬಹುದು ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

Published on: Dec 09, 2025 07:18 AM