Daily Devotional: ಕ್ಯಾಲೆಂಡರ್ ಯಾವ ದಿನ ತರಬೇಕು ಹಾಗೂ ಯಾವ ದಿಕ್ಕಿಗೆ ಹಾಕಬೇಕು

Updated on: Nov 23, 2025 | 7:10 AM

ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಕ್ಯಾಲೆಂಡರ್ ತರಲು ಮತ್ತು ನೇತುಹಾಕಲು ಶುಭ ದಿನಗಳು ಹಾಗೂ ದಿಕ್ಕುಗಳಿವೆ. ಸೋಮವಾರ, ಬುಧವಾರ, ಗುರುವಾರ ಕ್ಯಾಲೆಂಡರ್ ತರುವುದು ಶುಭ. ಪೂರ್ವ, ಪಶ್ಚಿಮ, ಅಥವಾ ಉತ್ತರ ದಿಕ್ಕಿನ ಗೋಡೆಗೆ ಹಾಕುವುದರಿಂದ ಮಂಗಳಕರ ಫಲಗಳು ದೊರೆಯುತ್ತವೆ. ಇದು ವರ್ಷವಿಡೀ ಅದೃಷ್ಟ ತರುವ ನಂಬಿಕೆಯಾಗಿದೆ.

ಬೆಂಗಳೂರು, ನವೆಂಬರ್ 23: ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಕ್ಯಾಲೆಂಡರ್ ತರುವುದು ಸರ್ವೇಸಾಮಾನ್ಯ. ಆದರೆ ಹಿಂದೂ ಸಂಸ್ಕೃತಿಯಲ್ಲಿ ಇದಕ್ಕೆ ಕೆಲವು ನಿಯಮಗಳಿವೆ. ಕ್ಯಾಲೆಂಡರ್‌ನ್ನು ಸರಸ್ವತಿಯ ಪ್ರತೀಕ ಎಂದು ಭಾವಿಸಲಾಗುತ್ತದೆ. ಏಕೆಂದರೆ ಅದರಲ್ಲಿ ಶುಭ ಕಾರ್ಯಗಳು, ಹಬ್ಬಗಳು, ದಿನಾಂಕಗಳು ಇತ್ಯಾದಿ ವಿವರಗಳು ಮುದ್ರಿತವಾಗಿರುತ್ತವೆ.

ಕ್ಯಾಲೆಂಡರ್ ತರಲು ಸೋಮವಾರ, ಬುಧವಾರ ಮತ್ತು ಗುರುವಾರಗಳು ಶುಭ ದಿನಗಳಾಗಿವೆ. ಸೋಮವಾರ ಚಂದ್ರನ ದಿನವಾಗಿದ್ದು, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ. ಬುಧವಾರ ವಿಷ್ಣು, ಗಣಪತಿ ಮತ್ತು ಕಾಲಭೈರವನಿಗೆ ಸಂಬಂಧಿಸಿದ್ದು, ಸಮೃದ್ಧಿ ತರುತ್ತದೆ. ಗುರುವಾರವು ಗುರು ಗ್ರಹಕ್ಕೆ ಸಮರ್ಪಿತವಾಗಿದ್ದು, ಚಿನ್ನ ಮತ್ತು ಸಮೃದ್ಧಿಯ ಪ್ರತೀಕವಾಗಿದೆ. ಕ್ಯಾಲೆಂಡರ್‌ನ್ನು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನ ಗೋಡೆಗೆ ನೇತುಹಾಕುವುದು ಮಂಗಳಕರ. ದಕ್ಷಿಣ ದಿಕ್ಕಿಗೆ ಹಾಕುವುದರಿಂದ ಶುಭಫಲಗಳು ದೊರೆಯುವುದಿಲ್ಲ ಎಂದು ನಂಬಲಾಗುತ್ತದೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶುಭ ಫಲಗಳು ಹೆಚ್ಚುತ್ತವೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Nov 23, 2025 07:09 AM