Daily Devotional: ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಶಾಸ್ತ್ರಗಳ ಪ್ರಕಾರ, ಮಾನವ ದೇಹದ ಅಂಗಾಂಗಗಳು, ಅದರಲ್ಲೂ ವಿಶೇಷವಾಗಿ ತೋರು ಬೆರಳಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಹೋಲಿಸಲಾಗುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 26: ಶಾಸ್ತ್ರಗಳ ಪ್ರಕಾರ, ಮಾನವ ದೇಹದ ಅಂಗಾಂಗಗಳು, ಅದರಲ್ಲೂ ವಿಶೇಷವಾಗಿ ತೋರು ಬೆರಳಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಹೋಲಿಸಲಾಗುತ್ತದೆ.
ತೋರು ಬೆರಳಿನ ಆಕಾರದಿಂದ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯಲು ಸಾಧ್ಯವಿದೆ. ಉದಾಹರಣೆಗೆ, ಉದ್ದವಾದ ತೋರು ಬೆರಳು ನಾಯಕತ್ವದ ಗುಣಗಳನ್ನು ಸೂಚಿಸುತ್ತದೆ. ಚಪ್ಪಟೆಯಾದ ಮತ್ತು ಅಗಲವಾದ ಉಗುರಿನ ಭಾಗವಿರುವ ತೋರು ಬೆರಳು ಆತ್ಮವಿಶ್ವಾಸ, ತೀಕ್ಷ್ಣ ಬುದ್ಧಿ ಮತ್ತು ಕೆಲಸದಲ್ಲಿ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ದಪ್ಪನಾದ ತೋರು ಬೆರಳಿನ ತುದಿಯು ವಿಶಾಲ ಹೃದಯ ಮತ್ತು ದಾನ ಗುಣವನ್ನು ತೋರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
