AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 26 December: ಈ ರಾಶಿಗೆ ಇಂದು ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಲಿದೆ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ ಶುಕ್ರವಾರ ಧನವ್ಯಯ, ಸೃಜನಾತ್ಮಕತೆ, ಅತಿ ಪ್ರಯಾಣ, ನೆಮ್ಮದಿ, ಮಾತು ಕಡಿಮೆ, ದಾಂಪತ್ಯ ಕಲಹ, ವಿವಾಹಕ್ಕೆ ಒಪ್ಪಿಗೆ, ಶ್ರಮದಿಂದ ಆಯಾಸ ಇವೆಲ್ಲ ಇಂದಿನ ವಿಶೇಷ.

Horoscope Today 26 December: ಈ ರಾಶಿಗೆ ಇಂದು ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 26, 2025 | 12:38 AM

Share

ಮೇಷ ರಾಶಿ:

ಹಣವ್ಯಯವು ದಾನವಾಗಿ ಬದಲಾಗುವುದು. ಸಂಬಂಧಗಳಲ್ಲಿ ಕರುಣೆ ಮತ್ತು ಸಹಾನುಭೂತಿ ಹೆಚ್ಚಾಗುತ್ತದೆ. ಓಡಾಟ ಮನಸ್ಸಿಗೆ ಶಾಂತಿ ನೀಡುತ್ತದೆ. ಉದ್ಯೋಗದಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ಹೇಗೇ ಸಮಜಾಯಿಷಿ ಕೊಟ್ಟರೂ ತಪ್ಪು ನಿಮ್ಮದೇ ಆಗಿರುತ್ತದೆ. ಒಂದಿಲ್ಲೊಂದು ಆಲೋಚನೆಗಳು ಬರುತ್ತಲೇ ಇರುತ್ತವೆ. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಇಂದು ನೀವು ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡರು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಅಧಿಕಾರ ಸಂಬಂಧಿತ ಸಮಸ್ಯೆ ಪರಿಹಾರ. ವಿದೇಶ ಪ್ರಯಾಣ ಸೂಚನೆ. ನಿರುದ್ಯೋಗಿಗಳಿಗೆ ಭರವಸೆ ಸಿಗಲಿದೆ. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಬಹುದು.‌ ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ಮಾಡಲು ಯೋಚಿಸುವಿರಿ. ಬಂಧುಗಳ ಕಡೆಯಿಂದ ವಿವಾಹ ಸಂಬಂಧವು ಬರಬಹುದು.

ವೃಷಭ ರಾಶಿ:

ಉದ್ಯೋಗದಲ್ಲಿ ನವೀನ ಆಲೋಚನೆಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧಗಳಲ್ಲಿ ಸ್ನೇಹಭಾವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ತಂತ್ರಜ್ಞಾನದ ಬಳಕೆಯಾಗಲಿದೆ. ಹಣವ್ಯಯವು ಮಧ್ಯಮದಲ್ಲಿರಲಿದೆ. ಮಕ್ಕಳ ಕಾರಣದಿಂದ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು. ಆತ್ಮಸಾಕ್ಷಿ ಒಪ್ಪಿದರೆ ಮತ್ತೆ ಬೇಸರಿಸಬೇಕಿಲ್ಲ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು, ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಓಡಾಟ ಅನಿವಾರ್ಯವಾಗಿ ಹೆಚ್ಚಾಗುತ್ತದೆ. ವಾಹನ ಬದಲಾವಣೆಗೆ ಯೋಚನೆ. ಅಧಿಕಾರಿಗಳಿಗೆ ಹಲವರ ಬೆಂಬಲ. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಹಣವನ್ನೂ ಕೊಟ್ಟು ವಸ್ತುವನ್ನೂ ಕಳೆದುಕೊಳ್ಳಬೇಕಾಗಬಹುದು ಎಚ್ಚರ. ಕಛೇರಿಗೆ ವಿರಾಮವಿದ್ದರೂ ಅದರ ಕಾರ್ಯವನ್ನೇ ನೀವು ಮಾಡಬೇಕಾಗುವುದು. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ.

ಮಿಥುನ ರಾಶಿ:

ಕುಟುಂಬದ ಹೊಣೆಗಾರಿಕೆ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತದೆ. ಜವಾಬ್ದಾರಿಯಿಂದ ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಸ್ಥಿರತೆ ಮತ್ತು ನಂಬಿಕೆ ತರಿಸಿಕೊಳ್ಳಿ. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಂತೆ ಆಗುವುದು. ಸಾಮಾಜಿಕ ಕಾರ್ಯಗಳತ್ತ ಒಲವು ಮೂಡಬಹುದು. ಯಾವುದಕ್ಕೂ ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ.‌ ಗೊತ್ತಿರುವ ಕೆಲಸವನ್ನಷ್ಟೇ ಮಾಡಿ. ವ್ಯಾಪಾರ ನಿಧಾನವಾಗಿ ಬೆಳೆಯುತ್ತದೆ. ಅಧಿಕಾರಿಗಳಿಂದ ಮೆಚ್ಚುಗೆಗೆ ಗರ್ವ ಬೇಡ. ಸಂಬಂಧಗಳಲ್ಲಿ ಗಂಭೀರತೆ. ವಿದೇಶದ ಹೂಡಿಕೆಗೆ ಮಾರ್ಗದರ್ಶನ ಪಡೆಯುವಿರಿ. ದಾಂಪತ್ಯದಲ್ಲಿ ಮೌನವೇ ಸಂಭಾಷಣೆ ಆಗುವುದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ:

ಉದ್ಯೋಗದಲ್ಲಿ ಹೊಸ ಅವಕಾಶ ಮನಸ್ಸಿಗೆ ಧೈರ್ಯ ನೀಡುತ್ತದೆ. ಸಂಬಂಧಗಳಲ್ಲಿ ಉತ್ಸಾಹ ಸಿಕ್ಕಿದ್ದು ಹಿಂಜರಿತ ಇರದು. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ವ್ಯಾಪಾರ ವಿಸ್ತರಣೆಯನ್ನು ನಾನಾ ಪ್ರಕಾರಗಳಿಂದ ಸಾಧ್ಯವಾಗಿಸುವಿರಿ. ಕುಟುಂಬ ಬೆಂಬಲ ಗಟ್ಟಿಯಾಗುತ್ತದೆ. ಹಣವ್ಯಯ ಜಾಣ್ಮೆ ತೋರಿಸುವಿರಿ. ಅಧಿಕಾರಿಗಳಿಗೆ ತುರ್ತು ಪ್ರಯಾಣದ ಸೂಚನೆ ಬರಲಿದೆ. ಶುಭ ಅವಸರದಲ್ಲಿ ಸದುಪಯೋಗ ಮಾಡಿಕೊಳ್ಳಿ. ಹೆಚ್ವಿನ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ನಿಮ್ಮ ಮಾತುಗಳಿಂದ ನೋವಾಗಲಿದೆ.

ಸಿಂಹ ರಾಶಿ:

ಹಣವ್ಯಯವನ್ನು ತಡೆಹಿಡಿಯುವುದರಿಂದ ಬೇಸರ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ಗುಪ್ತ ವಿಚಾರಗಳು ಚರ್ಚೆಗೆ ಬರುತ್ತವೆ. ವ್ಯಾಪಾರದಲ್ಲಿ ಅಪಾಯದ ನಿರ್ಣಯವನ್ನು ಮಾಡಿಬಿಡುಬಿರಿ. ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗದೇ ಹೋಗಬಹುದು. ಛಲದಿಂದ ಒಂಟಿಯಾಗಿ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕೃಷಿಯಲ್ಲಿ ಕೆಲವು ತೊಂದರೆಯಾಗಬಹುದು. ಅದನ್ನು ಲೆಕ್ಕಿಸದೇ ನಿಮ್ಮ ಪೂರ್ಣ ಶ್ರಮವನ್ನು ಹಾಕುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಇಂದು ಬಂದ ಹಣವು ಸಾಲಕ್ಕೆ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಸಂಬಂಧಗಳು ಆಳ ಇಂದು ಸ್ಪಷ್ಟವಾಗಲಿದೆ. ಅಧಿಕಾರಿಗಳೊಂದಿಗೆ ಎಚ್ಚರದಲ್ಲಿ ವ್ಯವಹಾರವಿರಲಿ. ನಿರುದ್ಯೋಗಿಗಳು ತಾಳ್ಮೆ ಕಳೆದುಕೊಳ್ಳಬಹುದು. ಮನೆಗೆ ಬೇಕಾದ ಬಂಧುಗಳು ಬಾರದೇ ಹೋಗಬಹುದು. ಸಜ್ಜನರನ್ನು ನೀವು ದೂರ ಮಾಡಿಕೊಳ್ಳುವಿರಿ. ಯಾರ ಮೇಲೂ ಪೂರ್ವಾಗ್ರಹ ಬೇಡ.

ಕನ್ಯಾ ರಾಶಿ:

ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ವ್ಯಾಪಾರದಲ್ಲಿ ಪಾಲುದಾರಿಕೆ ಲಾಭ ತರುತ್ತದೆ. ಕುಟುಂಬದಲ್ಲಿ ಒಪ್ಪಂದದ ವಾತಾವರಣವಿರಲಿದೆ. ವಾಹನಕ್ಕೆ ಖರ್ಚು ಅನಿವಾರ್ಯವಾಗಬಹುದು. ಆಸ್ತಿಯ ಮೇಲೆ ಸಾಲವನ್ನು ಪಡೆಯುವ ಸಂದರ್ಭವು ಬರಬಹುದು. ಅನಿವಾರ್ಯವಾದುದನ್ನು ಮಾತ್ರ ಸಾಲ ಮಾಡಿ. ಅತಿಯಾಗಿ ಬೇಡ. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಆಗಬಹುದು. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ವಿದೇಶ ಸಂಪರ್ಕದಿಂದ ಶುಭವಾಗಲಿದೆ. ಉದ್ಯೋಗದಲ್ಲಿ ತಂಡದ ಸಹಕಾರದಿಂದ ಗೆಲವು. ಅಧಿಕಾರದಲ್ಲಿ ಸ್ಪಷ್ಟ ನಿರ್ಣಯ ಅಗತ್ಯ. ನಿರುದ್ಯೋಗಿಗಳಿಗೆ ಕೆಲಸಕ್ಕೆ ಕರೆ. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು.

ತುಲಾ ರಾಶಿ:

ವ್ಯಾಪಾರದಲ್ಲಿ ಲೆಕ್ಕಪತ್ರ ಜಾಗ್ರತೆ ಮುಖ್ಯ. ಸಂಬಂಧಗಳಲ್ಲಿ ಅತಿವಿಮರ್ಶೆ ಬೇಡ. ಸಣ್ಣ ಕಾರ್ಯಕ್ಕಾಗಿ ಅಧಿಕ ಓಡಾಟ. ಅಧಿಕಾರ ಸೂಚನೆಗಳನ್ನು ಕಷ್ಟವಾದರೂ ಪಾಲನೆ‌ಮಾಡಬೇಕು. ನಿರುದ್ಯೋಗಿಗಳಿಗೆ ಅಂತರಂಗ ಸಕಾರಾತ್ಮಕ ಸೂಚ‌ನೆ ಕೊಡಲಿದೆ. ವಿದೇಶ ಗಮನಕ್ಕೆ ಯತ್ನ ನಿಧಾನ. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ‌ ಕೆಲಸದಿಂದ‌‌ ಸಾಧಿಸುವಿರಿ. ವಾಹನ ಸೇವೆ ಅಥವಾ ದುರಸ್ತಿ ಅಗತ್ಯ. ಉದ್ಯೋಗದಲ್ಲಿ ಪರಿಶ್ರಮ ಹೆಚ್ಚಿದರೂ ಫಲ ನಿಧಾನ. ಹಣವ್ಯಯ ಕಟ್ಟುನಿಟ್ಟಾಗಿ ನಿಯಂತ್ರಿಸಿ. ಕುಟುಂಬದ ಆರೋಗ್ಯದ ಕಡೆ ಗಮನ. ಮಕ್ಕಳ‌ ವಿವಾಹ ಚಿಂತೆಯನ್ನು ಬಿಡುವಿರಿ. ಯಾರ ಮಾತನ್ನೋ ಕೇಳಿ ಮಾಡುವ ಕೆಲಸಕ್ಕಿಂತ ನಿಮ್ಮ ಮನಸ್ಸಿಗೆ ಬಂದರೆ ಮಾತ್ರ ಮಾಡಿ.

ವೃಶ್ಚಿಕ ರಾಶಿ:

ಅಧಿಕಾರದಿಂದ ಗೌರವ ಹಾಗೂ ಗುರುತಿಸಿಕೊಳ್ಳುವಿಕೆಯಾಗಲಿದೆ. ವ್ಯಾಪಾರದಲ್ಲಿ ಧೈರ್ಯದ ನಿರ್ಣಯ ಲಾಭ ತರುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮೌಲ್ಯ. ಉದ್ಯೋಗದಲ್ಲಿ ಪದೋನ್ನತಿ ಚರ್ಚೆ. ಕೃಷಿಯಲ್ಲಿ ನೀವು ಬಹಳ‌ ಆಯ್ಕೆ ಸ್ವಭಾವವುಳ್ಳವರು. ಬಂಧುಗಳ‌ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಸಂಬಂಧಗಳು ಅನ್ಯರ ಕಾರಣದಿಂದ ಗಟ್ಟಿಯಾಗುತ್ತವೆ. ವಿದೇಶ ಸಂಪರ್ಕ ಹೆಚ್ಚಾಗುತ್ತಿದ್ದು ಹೋಗುವ ಮಾರ್ಗದ ಪರೀಕ್ಷೆ ಮಾಡಿಕೊಳ್ಳಿ. ನಿರುದ್ಯೋಗಿಗಳಿಗೆ ಅವಕಾಶ ಸಿಕ್ಕೂ ನಿರಾಶೆಯಾಗಲಿದೆ. ಹಣವ್ಯಯ ಸಂತೋಷಕ್ಕಾಗಿ ಮಾಡುವಿರಿ. ಆರೋಗ್ಯವು ಸುಧಾರಿಸುತ್ತ ಬರಲಿದೆ. ನೀವು ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.

ಧನು ರಾಶಿ:

ಅಧಿಕಾರದಿಂದ ಅನೇಕ ಉಪಯೋಗಗಳು ನಿಮಗಾಗಲಿದೆ. ವ್ಯಾಪಾರದಲ್ಲಿ ಹಳೆಯ ಸಂಪರ್ಕ ಲಾಭ. ಓಡಾಟ ಅಗತ್ಯವೂ ಬರಲಿದೆ. ನಿರುದ್ಯೋಗಿಗಳಿಗೆ ಮಾರ್ಗದರ್ಶನ. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಕಲಾವಿದರು ಗೌರವವನ್ನೂ ಯಶಸ್ಸನ್ನೂ ಗಳಿಸುವರು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಾಗುತ್ತದೆ. ವಿದೇಶ ಪ್ರಯಾಣ ಅಥವಾ ಅಲ್ಲಿಂದ ಕರೆ ಸಾಧ್ಯ ಇದೆ. ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣವ್ಯಯವು ಸಂಗಾತಿಯ ನಿಯಂತ್ರಣದಲ್ಲಿ ಇರುತ್ತದೆ. ಶತ್ರುಗಳ ವ್ಯವಹಾರವನ್ನು ಇನ್ನೊಬ್ಬರ ಮೂಲಕ ತಿಳಿದುಕೊಳ್ಳುವಿರಿ. ನಿಮ್ಮ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಬಹುದು. ದೃಷ್ಟಿಯನ್ನು ತೆಗೆದುಕೊಳ್ಳಿ. ಯಾರ ಬೆಂಬಲವನ್ನೂ ಅಪೇಕ್ಷಿಸದೇ ಕೆಲಸವನ್ನು ಮಾಡುವಿರಿ.

ಮಕರ ರಾಶಿ:

ವ್ಯಾಪಾರದಲ್ಲಿ ಜಾಹೀರಾತು ಮತ್ತು ಸಂಪರ್ಕಗಳಿಂದ ಲಾಭ ಸಿಗುತ್ತದೆ. ಸಂಬಂಧಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಗೊಂದಲ. ಅಧಿಕಾರಿಗಳ ಮಾತು ಜಾಗ್ರತೆಯಿಂದ ಕೇಳಿ. ಓಡಾಟ ಹೆಚ್ಚಾಗಿ ಮನಸ್ಸು ಅಶಾಂತವಾಗಲಿದೆ. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ತಂದೆಯ ಆರೋಗ್ಯದ ಬಗ್ಗೆ ಗಮನ ಅಧಿಕವಾಗಿರಲಿ. ವಿದ್ಯಾಭ್ಯಾಸದ ಹಿನ್ನಡೆಗೆ ಕಾರಣವನ್ನು ಕಂಡುಕೊಳ್ಳುವಿರಿ. ಆಭರಣಪ್ರಿಯರಿಗೆ ಖರೀದಿಯ ಉತ್ಸಾಹ ಬರುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ‌ ನಡೆಸುವ ಸಂದರ್ಭವು ಬರಬಹುದು.‌ ವಾಹನ ಸಂಬಂಧಿತ ಖರ್ಚಿನಿಂದ ಆತಂಕ. ಉದ್ಯೋಗ ಬದಲಾವಣೆ ಜೊತೆಗಾರರಿಂದ ಒತ್ತಡ. ಕುಟುಂಬ ಸಲಹೆ ಉಪಯುಕ್ತ. ವಿದೇಶ ಸಂಪರ್ಕ ಬೆಳೆಯುತ್ತದೆ. ನಿರುದ್ಯೋಗಿಗಳಿಗೆ ತರಬೇತಿಯಿಂದ ಆತ್ಮವಿಶ್ವಾಸ ಹೆಚ್ಚುವುದು. ಆರ್ಥಿಕಸ್ಥಿತಿಯು ಯಥಾಸ್ಥಿತಿಯಲ್ಲಿ ಇರಲಿದೆ‌. ಪ್ರಾಮಾಣಿಕ ಪ್ರಯತ್ನವು ನಿಮ್ಮ ಸಾಧನೆಯ ಗುಟ್ಟು.

ಕುಂಭ ರಾಶಿ:

ಇಂದು ವಿದೇಶ ಪ್ರಯತ್ನ ಫಲ ಕೊಡುತ್ತದೆ. ಹಣವ್ಯಯ ಯೋಜನೆಯಿಂದ ಲಾಭ. ಅಧಿಕಾರ ವಿಳಂಬ ಉಂಟುಮಾಡಬಹುದು. ವ್ಯಾಪಾರ ಒಪ್ಪಂದ ಸಾಧ್ಯ. ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಆಸ್ತಿ ಹಂಚಿಕೆ ವಿಚಾರಕ್ಕೆ ಸೊಪ್ಪು ಹಾಕದೇ ಇದ್ದರೆ ಅದು ಅಲ್ಲಿಯೇ ಶಾಂತವಾಗುವುದು. ರಾಜಕಾರಣವು ಬೇಸರ ತರಿಸಿ, ನಿಮಗೆ ಇಷ್ಟವಾಗದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ಕುಟುಂಬದ ಹೊಣೆಗಾರಿಕೆ ನಿಮ್ಮ ಮೇಲೆ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ನಂಬಿಕೆ ಗಟ್ಟಿಯಾಗುತ್ತದೆ. ಓಡಾಟ ದೈಹಿಕ ಆಯಾಸ ತರಬಹುದು. ಉದ್ಯೋಗದಲ್ಲಿ ಸ್ಥಿರತೆ ಇದ್ದರೂ ಪ್ರಗತಿ ನಿಧಾನ. ನಿರುದ್ಯೋಗಿಗಳಿಗೆ ಶುಭಸುದ್ದಿ. ವಾಹನ ದುರಸ್ತಿ ಅಗತ್ಯ. ನಿಮ್ಮದಲ್ಲದ ವಸ್ತುಗಳನ್ನು ಇತರರಿಗೆ ಕೊಟ್ಟುಬಿಡುವಿರಿ.

ಮೀನ ರಾಶಿ:

ಇಂದು ಹಣವ್ಯಯ ಅನಿವಾರ್ಯವಾದರೂ ಉಪಯುಕ್ತವಾಗಿರುತ್ತದೆ. ಸಂಬಂಧಗಳಲ್ಲಿ ನೇರ ಮಾತು ಅಗತ್ಯ. ವಾಹನ ಚಾಲನೆಯಲ್ಲಿ ಅಲಕ್ಷ್ಯ ಬೇಡ. ಕುಟುಂಬ ಬೆಂಬಲ ಶಕ್ತಿ ನೀಡುತ್ತದೆ. ವ್ಯಾಪಾರ ನಿಧಾನವಾಗಿ ಲಾಭ ತರುತ್ತದೆ. ಸಂಗಾತಿಯ ಮೇಲಿನ‌ ಪ್ರೀತಿ ಕಡಿಮೆ ಆಗಬಹುದು. ನಿಮಗೆ ಒತ್ತಡವು ಅಧಿಕವಾಗಿ ಇರಲಿದ್ದು, ಯಾವುದೋ ಭಯವು ಕಾಡಬಹುದು. ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ನಿಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸುತ್ತದೆ. ಅಧಿಕಾರಿಗಳ ಗಮನ ಬೀಳುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನ. ವಿದೇಶ ಸಂಪರ್ಕ ವಿಸ್ತಾರ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಕಾಡುವುದು. ಕಳೆದ ಸುಖದ ಕಾಲವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಷಯಕ್ಕೆ ಸಹೋದರರ ನಡುವೆ ಮಾತು ಬರಬಹುದು. ಮೋಸಗೊಳಿಸಲು ಹೋಗಿ ನಗೆಗೀಡಾಗುವಿರಿ.

25 ಡಿಸೆಂಬರ್​​ 2025ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:01 – 12:25, ಯಮಗಂಡ ಕಾಲ 15:14 – 16:38, ಗುಳಿಕ ಕಾಲ 08:12 – 09:36

-ಲೋಹಿತ ಹೆಬ್ಬಾರ್ – 8762924271 (what’s app only)

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ