Daily Devotional: ತುಳಸಿ ಕುಂಡದಲ್ಲಿರೋ ಮಣ್ಣಿನಿಂದ ಏನೆಲ್ಲಾ ಪ್ರಯೋಜನಗಳು ಗೊತ್ತಾ?

Updated on: Nov 12, 2025 | 7:09 AM

ತುಳಸಿ ಗಿಡದ ಮಣ್ಣು, ಅಂದರೆ ಮೃತ್ತಿಕೆಯು ಅದೆಷ್ಟೋ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳನ್ನು ಹೊಂದಿದೆ. ಆರ್ಥಿಕ ಲಾಭ, ಸಾಲಬಾಧೆ ನಿವಾರಣೆ, ವಾಸ್ತು ದೋಷ ಪರಿಹಾರ, ಕುಟುಂಬ ಕಲಹಗಳ ಇಳಿಕೆ, ಮತ್ತು ಆರೋಗ್ಯ ಸುಧಾರಣೆಗೆ ಈ ಪವಿತ್ರ ಮಣ್ಣು ಸಹಕಾರಿ. ಕೆಲವು ನಿರ್ದಿಷ್ಟ ದಿನಗಳಲ್ಲಿ, ಸಂಧ್ಯಾಕಾಲದಲ್ಲಿ ಇದನ್ನು ಬಳಸುವ ವಿಧಾನದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಬೆಂಗಳೂರು, ನವೆಂಬರ್ 12: “ಮೃತ್ತಿಕೆ” ಎಂದರೆ ಪವಿತ್ರವಾದ ಮಣ್ಣು. ಬಿಲ್ವ, ತುಳಸಿ ಗಿಡಗಳು, ಹುಟ್ಟು ಮತ್ತು ನಾಗಬನಗಳಂತಹ ಸ್ಥಳಗಳಲ್ಲಿನ ಮೃತ್ತಿಕೆಯನ್ನು ಪರಮ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ, ವಿಷ್ಣುವಿಗೆ ಅತ್ಯಂತ ಪ್ರಿಯವಾದ ತುಳಸಿ ಗಿಡದ ಮಣ್ಣು, ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ದೇವತೆಗಳ ಆವಾಸ ಸ್ಥಾನ ಎಂದು ನಂಬಲಾಗಿದೆ.

ತುಳಸಿ ಮೃತ್ತಿಕೆಯ ಪ್ರಭಾವದಿಂದ ಮನೆಯಲ್ಲಿ ಆರ್ಥಿಕ ಲಾಭವಾಗುತ್ತದೆ, ಕುಟುಂಬ ಕಲಹಗಳು ಕಡಿಮೆಯಾಗುತ್ತವೆ ಮತ್ತು ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಉಸಿರಾಟದ ಪ್ರಕ್ರಿಯೆ ಮತ್ತು ಆಲೋಚನೆಗಳು ಸುಧಾರಿಸುತ್ತವೆ. ಮಾಟ, ಮಂತ್ರಗಳಿಂದ ಮನೆಯನ್ನು ರಕ್ಷಿಸುವ ಶಕ್ತಿ ಈ ಮಣ್ಣಿಗಿದೆ. ವಾಸ್ತು ದೋಷಗಳ ನಿವಾರಣೆಗೂ ಇದು ಸಹಕಾರಿ. ಕಾರ್ತಿಕ ಮಾಸದಲ್ಲಿ ಸಂಧ್ಯಾಕಾಲದಲ್ಲಿ ತುಳಸಿ ಗಿಡದ ಬಳಿ ದೀಪ ಬೆಳಗುವುದರಿಂದ ಸಾಲಬಾಧೆಯಿಂದ ಮುಕ್ತಿ ದೊರೆಯುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.