Daily Devotional: ಮನೆಯಲ್ಲಿ ಬಾತ್ರೂಮ್ ವಾಸ್ತು ಸಹ ಮುಖ್ಯ ಯಾಕೆ ಗೊತ್ತಾ?

Updated on: Nov 14, 2025 | 6:52 AM

ಮನೆಯಲ್ಲಿ ಬಾತ್ರೂಮ್ ವಾಸ್ತು ಕೂಡ ಅಷ್ಟೇ ಮುಖ್ಯ. ಮುರಿದ ಬಕೆಟ್, ಮಗ್, ಹಳೆಯ ಸ್ಕ್ರಾಪ್, ಒದ್ದೆ ಬಟ್ಟೆಗಳು, ಸೋರುವ ಟ್ಯಾಪ್‌ಗಳನ್ನು ಬಾತ್ರೂಮ್‌ನಲ್ಲಿ ಇಡಬೇಡಿ. ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ನೀರು ಇಡಿ. ಸ್ವಚ್ಛತೆ ಮತ್ತು ಗಾಳಿ ಆಡುವ ವಾತಾವರಣ ನಿರ್ವಹಿಸಿ. ಇದು ಮನೆಯಲ್ಲಿ ಆರ್ಥಿಕ ಲಾಭ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ಈ ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.

ಬೆಂಗಳೂರು, ನವೆಂಬರ್ 14:ವಾಸ್ತು ಶಾಸ್ತ್ರವು ಮನೆಯ ಪ್ರತಿಯೊಂದು ಭಾಗಕ್ಕೂ ಮಹತ್ವ ನೀಡುತ್ತದೆ. ಅದರಲ್ಲೂ ಸ್ನಾನದ ಮನೆ ಅಥವಾ ಬಾತ್ರೂಮ್‌ಗೆ ಸಂಬಂಧಿಸಿದ ವಾಸ್ತು ನಿಯಮಗಳು ಕುಟುಂಬದ ಯೋಗಕ್ಷೇಮಕ್ಕೆ ಬಹಳ ಮುಖ್ಯ. ಬಾತ್ರೂಮ್ ಅನ್ನು ನಿರ್ಲಕ್ಷಿಸಿದರೆ ಅಥವಾ ವಾಸ್ತು ನಿಯಮಗಳನ್ನು ಉಲ್ಲಂಘಿಸಿದರೆ ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಮತ್ತು ಮಾನಸಿಕ ಸಂಕಟಗಳು ಉಂಟಾಗಬಹುದು.

ಬಾತ್ರೂಮ್‌ನಲ್ಲಿ ಬಳಸುವ ಬಕೆಟ್, ಮಗ್‌ಗಳು ಮುರಿದಿರಬಾರದು. ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ನೀರು ಇಡುವುದು ಶುಭಕರ. ಒಡೆದ ಗಾಜಿನ ವಸ್ತುಗಳು, ಹಳೆಯ ಸೋಪ್ ಬಾಕ್ಸ್, ಶಾಂಪೂ ಬಾಟಲಿಗಳು ಅಥವಾ ಯಾವುದೇ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಾತ್ರೂಮ್‌ನಲ್ಲಿ ಸಂಗ್ರಹಿಸಬಾರದು. ಉಪಯೋಗಿಸಿದ ಒದ್ದೆ ಬಟ್ಟೆಗಳನ್ನು ಹೆಚ್ಚು ಸಮಯ ಸ್ನಾನದ ಮನೆಯಲ್ಲಿ ಇಡದೆ, ಒಗೆಯಲು ಸೂಕ್ತ ಸ್ಥಳಕ್ಕೆ ಸಾಗಿಸಬೇಕು. ಸೋರುವ ಟ್ಯಾಪ್‌ಗಳನ್ನು ಕೂಡಲೇ ಸರಿಪಡಿಸಬೇಕು. ಕಿಲುಬಿನ ಅಥವಾ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳನ್ನು ಇಡಬಾರದು. ಬಾತ್ರೂಮ್ ಅನ್ನು ಯಾವಾಗಲೂ ಸ್ವಚ್ಛವಾಗಿ, ಗಾಳಿಯಾಡುವಂತೆ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.