ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ಕೆಲ ಜನರು ನಂಬುತ್ತಾರೆ. ಮತ್ತೆ ಕೆಲ ಜನರು ನಂಬುವುದಿಲ್ಲ. ಆದಾಗ್ಯೂ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ಅಥವಾ ಇಂದು ಅವರ ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ವ್ಯಕ್ತಿಯ ಜನನದ ಸಮಯವನ್ನು ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆ ಇದೆ. ಹಾಗಾದ್ರೆ ಜುಲೈ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಸಿದ್ಧಿ, ಕರಣ:ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:49 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:02 ರಿಂದ 12:39ರ ವರೆಗೆ, ಗುಳಿಕ ಕಾಲ 14:15ರಿಂದ 15:52ರ ವರೆಗೆ.
ಮೇಷ ರಾಶಿ :ಇಂದು ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ವೃದ್ಧಿಯು ಕಾಣಿಸಿ ಸಮಾಧಾನವಾಗುವುದು. ಹಲವು ವರ್ಷಗಳ ಪ್ರೇಮದಲ್ಲಿ ವಿಜಯಿಯಾಗುವಿರಿ. ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಸಾಮಾಜಿಕ ಕೆಲಸವು ನಿಮಗೆ ಬೇಸರ ತರಿಸಬಹುದು. ನೆಮ್ಮದಿಗಾಗಿ ಎಲ್ಲಿಗಾದರೂ ಹೋಗುವ ಮನಸ್ಸು ಮಾಡುವಿರಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಸ್ಥಾನವು ಸಿಗಬಹುದು. ಮಕ್ಕಳ ಮನಸ್ಸು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ಸೋಲುವಿರಿ. ನಿಮ್ಮ ಮೂಗಿನ ನೇರದ ವಿಷಯಕ್ಕೆ ಜನ ಕುಟುಂಬದಲ್ಲಿ ಬೆಂಬಲ ಸಿಗದು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ. ಹತ್ತರ ಜೊತೆ ಹನ್ನೊಂದು ಆಗದಂತೆ ನೀವೇ ನೋಡಿಕೊಳ್ಳಬೇಕು. ಹೆಚ್ಚು ಶ್ರಮ ವಹಿಸಬೇಕಾಗುವುದು. ಪಾಲುದಾರಿಕೆಯು ನಿಮಗೆ ಬಿಸಿ ತುಪ್ಪದಂತೆ ಆಗಬಹುದು.
ವೃಷಭ ರಾಶಿ :ಇಂದು ನಿಮ್ಮ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಇಂದು ನಿಮ್ಮ ಸ್ನೇಹಿತರು ನಿಮಗೆ ಅಗತ್ಯವಾಗಿ ಬೇಕಾದ ಸಹಾಯವನ್ನು ಮಾಡುವರು. ಕೆಲವು ಸವಾಲಿನ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ. ಇದು ಕೆಲಸಕ್ಕೆ ಉತ್ತೇಜನವನ್ನು ಕೊಡುವುದು. ಇಂದು ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸುವಲ್ಲಿ ಸೋಲುವಿರಿ. ಕೆಲ ಕಾಲ ಹೊಸ ಉದ್ಯಮಕ್ಕೆ ಪಾಲುದಾರರಾಗುವುದು ಬೇಡ. ಅನುಭವಸ್ಥರ ಮಾತನ್ನು ಕೇಳುವ ವ್ಯವಧಾನವಿರಲಿ. ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾಗಿ ಇರಬೇಕು ಎಂದು ಅನ್ನಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವಾಗುವುದು.
ಮಿಥುನ ರಾಶಿ :ನೀವು ಆರ್ಥಿಕವಾಗಿ ಸಬಲರಾಗುವತ್ತ ಗಮನವು ಇರುವುದು. ಪ್ರೀತಿಯಲ್ಲಿ ಅಂದುಕೊಂಡಷ್ಟು ಅನುಕೂಲವಾಗದಿದ್ದರೂ ಭರವಸೆ ಇರುವುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ. ಇಂದು ನೀವು ಮನೆಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ಪ್ರಯತ್ನಿಸಬೇಕಾದೀತು. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಆಭಾಸವೆನಿಸುವುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆಗ ನಿರ್ಧಾರಗಳು ಸರಿಯಾಗಿರುತ್ತವೆ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಜೊತೆ ಹಾರ್ದವಾದ ಮಾತುಕತೆಗಳು ನಿಮಗೆ ಖುಷಿ ಕೊಡುವುದು.
ಕಟಕ ರಾಶಿ :ನಿಮ್ಮ ಸಾಮರ್ಥ್ಯದಿಂದ ಶತ್ರುಗಳ ಪೀಡಿಯು ಇಲ್ಲವಾಗುವುದು. ತುರ್ತು ಆಗಬೇಕಾದ ಕೆಲಸವು ಆಗದೇ ಒತ್ತಡದಲ್ಲಿ ಇರುವಿರಿ. ಇಂದು ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳಬಹುದು. ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು. ಸಂಗಾತಿಯ ಬಗ್ಗೆ ಸಂದೇಹವು ಹೆಚ್ಚಿರುವುದು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಯೋಚನೆಗಳು ಇದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದೇ ಇರದಬಹುದು. ಇತರರಲ್ಲಿ ನಿಮ್ಮ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಈಗಲೇ ಬೇಕಾದ ಕ್ರಮವನ್ನು ಕೈಗೊಳ್ಳಿ. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಇತರರ ಬಗ್ಗೆ ದ್ವೇಷಭಾವವು ನಿಮ್ಮಲ್ಲಿ ಮೂಡಬಹುದು.
ಸಿಂಹ ರಾಶಿ :ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಸಾಮಾಜಿಕವಾಗಿ ಬೆಳೆಯುವ ಆಸೆ ಚಿಗುರುವುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯು ಬೇಕೆನಿಸುವುದು. ಇಂದು ನಿಮ್ಮ ಕುಟುಂಬದವರ ಜೊತೆ ಕಲಹವಾಗಬಹುದು. ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಮುಖ್ಯ. ಅಪಾಯದ ಮುನ್ಸೂಚನೆಯನ್ನು ಅರ್ಥಮಾಡಿಕೊಂಡು ಮುನ್ನಡೆಯಿರಿ. ನಿಮ್ಮ ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಬಿಸಿ ತುಪ್ಪದಂತೆ ಆಗಬಹುದು. ನಿಮಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸಿ. ವಿದೇಶಿ ವ್ಯಾಪಾರದಿಂದ ತೊಂದರೆ ಎದುರಾಗಬಹುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಆಹಾರದಿಂದ ತೊಂದರೆಯಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ :ಇಂದು ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ಉದ್ಯೋಗದಲ್ಲಿ ಒತ್ತಡ ನಿವಾರಣೆಯನ್ನು ನೀವೇ ಮಾಡಿಕೊಳ್ಳಬೇಕಾಗುವುದು. ಇಂದು ನಿಮ್ಮ ವಿದ್ಯಾಭ್ಯಾಸಕ್ಕೆ ಒಳ್ಳೆಯ ದಿನ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಫಲಿತಾಂಶವು ಸಿಗಬಹುದು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕಾರ್ಯದ ಒತ್ತಡವಿರಲಿದೆ. ಇಂದು ನಿಮ್ಮ ಕಾರ್ಯವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ಕೆಲಸವು ಮೇಲಧಿಕಾರಿಗಳ ಬೆಂಬಲಕ್ಕೆ ಪೂರಕವಾಗುವುದು. ಅಥವಾ ಅನ್ಯ ಮಾರ್ಗವೆಂದರೆ ಕಂಡುಕೊಳ್ಳಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ಕೆಲಸವನ್ನು ವೇಗದಲ್ಲಿ ಮಾಡುವ ಆತುರವಿರಲಿದೆ.
ತುಲಾ ರಾಶಿ :ಇಂದು ನಿಮ್ಮ ಬೆಳವಣಿಗೆಗೆ ಪೂರಕವಾದ ಸಂದರ್ಭಗಳು ಬಂದರೂ ಅದನ್ನು ನಿರ್ಲಕ್ಷ್ಯ ಮಾಡುವಿರಿ. ಒಮ್ಮೆಲೆ ಬರುವ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಕಷ್ಟವಾಗುವುದು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲೇ ಬೇಕು ಎಂಬ ಮಹದಾಸೆ ನಿಮ್ಮಲ್ಲಿ ಇರಲಿದೆ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು. ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು.
ವೃಶ್ಚಿಕ ರಾಶಿ :ಇಂದು ನಿಮಗೆ ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಉದ್ಯೋಗದಲ್ಲಿ ನೀವು ಬಹಳ ಪ್ರಾಮಾಣಿಕವಾಗಿ ಇರುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ಬೆಳವಣಿಯಾಗುವುದು ಖುಷಿ ಕೊಡುವುದು. ನೀವು ಸ್ವಲ್ಪ ಸಮಯದಲ್ಲಿ ಭೂ ವ್ಯವಹಾರವನ್ನು ಮಾಡಲು ಉತ್ತಮ ಗ್ರಾಹಕರು ಸಿಗಲಿದ್ದಾರೆ. ಬೇಡದ ಸಂಗತಿಗಳನ್ನು ಹೊರಗೆ ಕಳುಹಿಸಿ. ನೆಮ್ಮದಿ ಅನ್ನಿಸೀತು. ಇಂದು ನಿಮಗೆ ಸಾಕಷ್ಟು ಸಮಯವಿರುವಂತೆ ಭಾಸವಾದೀತು. ನಿಮ್ಮ ಮಾತುಗಳೇ ದ್ವೇಷಕ್ಕೆ ಕಾರಣವಾಗುವುದು. ಅದಕ್ಕೆ ಘಾಸಿಯಾಗಂತೆ ನೋಡಿಕೊಳ್ಳುತ್ತೀರಿ ಕೂಡ. ಈ ದಿನ ತಪ್ಪುಯಿಂದ ಹೊರಬರುವಿರಿ. ವಾಸ್ತವದಲ್ಲಿ ಇರುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾಗಳನ್ನು ನೀವು ತಪ್ಪಾಗಿ ತೆಗೆದುಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವನ್ನು ನಿರೀಕ್ಷಿಸದಿದ್ದರೂ ಅದು ಸಿಗಲಿದೆ.
ಧನು ರಾಶಿ :ನಿಮ್ಮ ಇಂದಿನ ಎಲ್ಲ ಕಾರ್ಯಗಳಿಗೂ ಟೀಕೆಗಳು ಇರಲಿದ್ದು, ಅದನ್ನು ಮನಸ್ಸಿಗೆ ತಂದುಕೊಳ್ಳುವಿರಿ. ಇದು ನಿಮ್ಮ ಹಿಂಜರಿಕೆಗೆ ಕಾರಣವಾಗಲಿದೆ. ಈ ದಿನ ನಿಮಗೆ ಅತ್ಯಂತ ಸುಂದರವಾಗಿ ಇರಲಿದೆ. ನೀವು ಧನಾತ್ಮಕ ಹಾದಿಯಲ್ಲಿ ಸಾಗುತ್ತಿರುವಂತೆ ತೋರಿಸುತ್ತದೆ. ನೀವು ಅನುಭವಿಸುತ್ತಿರುವ ಧನಾತ್ಮಕ ಶಕ್ತಿಯನ್ನು ಆನಂದಿಸಿ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಇದೀಗ ಸೂಕ್ತ ಸಮಯ. ಉದ್ಯಮಿಗಳ ಒಡನಾಟವು ನಿಮ್ಮ ಉದ್ಯಮಕ್ಕೆ ಪೂರಕ. ನಿಮ್ಮ ಸಂಬಂಧವನ್ನು ಒಂದು ಹಂತ ಮೇಲಕ್ಕೆ ಇಡಲು ಯೋಚಿಸುತ್ತೀರಿ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಗುರಿಯನ್ನು ತಲುಪಬಹುದು. ದೂರದೃಷ್ಟಿಯಿಂದ ಕೆಲಸವನ್ನು ಮಾಡಿ. ಹಳೆಯ ವಸ್ತುಗಳನ್ನು ಕೊಟ್ಟು ಹೊಸತನ್ನು ಪಡೆಯುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಕೆಲವರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು.
ಮಕರ ರಾಶಿ :ನಿಮಗೆ ಇಂದು ದಾನ ಕೊಡಬೇಕೆಂಬ ಮನಸ್ಸು ಬರುವುದು. ಉತ್ತಮವಾದ ವಸ್ತುವನ್ನು ಉತ್ತಮರಿಗೇ ಕೊಡಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮಗೆ ಅನಾನುಕೂಲ ಉಂಟಾಗುವುದು. ನಿಮ್ಮ ಸಂಗಾತಿಯಿಂದ ನಿಮಗೆ ಸಿಗುತ್ತಿರುವ ಬೆಂಬಲದ ಕೊರತೆಯಿಂದ ನೀವು ಸಿಟ್ಟಾಗುವಿರಿ. ಈ ದಿನದ ಆರಂಭದಲ್ಲಿ ನಿಮ್ಮ ಪ್ರೀತಿಯ ಜೀವನವು ತುಂಬಾ ಅಸಮಾಧಾನವನ್ನು ಅನುಭವಿಸುತ್ತದೆ. ನಿಮ್ಮ ಯೋಜನೆಯನ್ನು ಅನ್ಯರು ಬದಲಿಸಬಹುದು. ಕೆಲಸದ ವಿಷಯಕ್ಕೆ ಬಂದಾಗ ನೀವು ಬಹಳ ಕಠೋರರಾಗುವಿರಿ. ನಿಮ್ಮ ನಾಯಕತ್ವದ ಕೌಶಲ್ಯಗಳು ಯಾವುದೇ ತೊಂದರೆಗಳನ್ನು ಅನಾಯಾಸವಾಗಿ ದಾಟಲು ಸಹಾಯ ಮಾಡುತ್ತದೆ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಬಂಧುಗಳಿಂದ ಸಹಕಾರದ ಅಗತ್ಯವಿರುವುದು.
ಕುಂಭ ರಾಶಿ :ಇಂದು ನೀವು ವಹಿಸಿಕೊಟ್ಟ ಕಾರ್ಯವನ್ನು ಮಾಡಿದ್ದು ನಿಮಗೆ ಸಂತೋಷವಾಗಲಿದೆ. ನೆರೆ ಹೊರೆಯವರು ನಿಮಗೆ ಸಹಕಾರ ನೀಡದೇ ಕಷ್ಟವಾಗುವುದು. ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಯೋಗ, ಕ್ಷೇಮವು ಚೆನ್ನಾಗಿರಲಿದೆ. ಈ ದಿನ ನೀವು ಹೆಚ್ಚಿನ ಪ್ರೀತಿಯನ್ನು ಅನುಭವಿಸುವಿರಿ. ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ಅದೇ ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಕೆಲವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ತುಂಬಾ ಸಂತೋಷವನ್ನು ಅನುಭವಿಸುವಿರಿ. ನೀವು ಬಯಸಿದ್ದನ್ನು ಸಂಗಾತಿಯು ಸಾಧಿಸುತ್ತಾರೆ. ನಿಮ್ಮ ಪ್ರಗತಿಯ ಬಗ್ಗೆ ಸಿಂಹಾವಲೋಕನ ಮಾಡುವ ಅವಶ್ಯಕತೆ ಇದೆ. ಪ್ರಮುಖ ತೀರ್ಮಾನವನ್ನು ಒಬ್ಬರೇ ಮಾಡುವುದು ಬೇಡ. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ.
ಮೀನ ರಾಶಿ :ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ಅನಧಿಕೃತ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ಹಸ್ತಾಂತರಿಸುವಿರಿ. ಅವರು ನಿಮಗೆ ನೋಡಿಕೊಳ್ಳುತ್ತಾರೆ. ಈ ಸಂಬಂಧದ ಜೊತೆ ಮುಂದುವರಿಯುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಆಲೋಚನೆಗಳನ್ನು ಸುಗಮಗೊಳಿಸುತ್ತದೆ. ವೇಗವಾಗಿ ಕಾರ್ಯವನ್ನು ಮಾಡುವ ಭರದಲ್ಲಿ ತಪ್ಪು ಮಾಡಿಕೊಂಡು, ಕಷ್ಟದಲ್ಲಿ ಸಿಕ್ಕಿಬೀಳುವಿರಿ. ನೀವು ಇನ್ನೊಬ್ಬರ ಮಾತನ್ನು ಧನಾತ್ಮಕವಾಗಿ ತೆಗೆದುಕೊಳ್ಳಬಹುದು. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಅದು ಆಗುವುದಿಲ್ಲ. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಅನುಪಮ ಜ್ಞಾನವು ಸದುಪಯೋಗ ಆಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)