Daily Horoscope 18 July 2024: ಮೇಷರಾಶಿಗೆ ಹಣದ ಹರಿವು; ಮಿಥುನದವರಿಗೆ ಮಕ್ಕಳಿಂದ ಸಂತೋಷ; ನಿತ್ಯ ಭವಿಷ್ಯ ಇಲ್ಲಿದೆ

18 ಜುಲೈ​​ 2024ರ​​ ನಿಮ್ಮ ರಾಶಿಭವಿಷ್ಯ: ಅನೇಕ ಜನರು ಮನರಂಜನೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಘಟಿಸುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಹಾಗಾದರೆ ಜುಲೈ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 18 July 2024: ಮೇಷರಾಶಿಗೆ ಹಣದ ಹರಿವು; ಮಿಥುನದವರಿಗೆ ಮಕ್ಕಳಿಂದ ಸಂತೋಷ; ನಿತ್ಯ ಭವಿಷ್ಯ ಇಲ್ಲಿದೆ
ಮೇಷರಾಶಿಗೆ ಹಣದ ಹರಿವು; ಮಿಥುನದವರಿಗೆ ಮಕ್ಕಳಿಂದ ಸಂತೋಷ; ನಿತ್ಯ ಭವಿಷ್ಯ ಇಲ್ಲಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2024 | 12:10 AM

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಬ್ರಹ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:52ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:14 ರಿಂದ 07:50ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:26ರಿಂದ 11:03ರ ವರೆಗೆ.

ಮೇಷ ರಾಶಿ: ಇಂದು ಬೋಧಕವರ್ಗದವರಲ್ಲಿ ಹೆಚ್ಚು ಒತ್ತಡ ಕಾಣಿಸುವುದು. ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರವಾಗಿ ಇರಲಿದೆ. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು. ನಿಮ್ಮ ಬಗ್ಗೆ ಯಾರೋ ಹೇಳುವ ಬದಲು, ನೀವೇ ನೋಡಿಕೊಳ್ಳುವುದು ಸೂಕ್ತ. ಸಾಮರ್ಥ್ಯವನ್ನು ಸದ್ವಿನಿಯೋಗ ಮಾಡಿರಿ. ಟೀಕೆಗಳಿಗೆ ಕಿವಿಗಿಲೊಡದೇ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ. ಯಾರ ಅಗಲಿಕೆಯನ್ನೂ ನೀವು ಗಂಭೀರವಾಗಿ ಪರಿಗಣಿಸಲಾರಿರಿ. ಕಛೇರಿಯ ಕೆಲಸಗಳು ಸಲೀಸಾಗಿ ಆಗುವುದು. ಯಾರದೋ ಮಾತಿಗೆ ಕುಣಿಯುವುದು ಬೇಡ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ವ್ಯವಹಾರದ ವಿಚಾರದಲ್ಲಿ ನಿಮಗೆ ಅಳುಕು ಕಾಣಿಸುವುದು. ನಿರ್ದಯೆಯಿಂದ ವ್ಯವಹರಿಸುವುದು ಬೇಡ.

ವೃಷಭ ರಾಶಿ: ಇಂದು ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಣ್ಣ ಪುಟ್ಟ ನೋವುಗಳೂ ನಗುವಿನ ಜೊತೆ ಕರಗಲಿ. ಸ್ನೇತರ ಜೊತೆ ಸುತ್ತಡಿ ಹಣವನ್ನು ಖರ್ಚು ಮಾಡುವಿರಿ. ಇದು ಸಂತೋಷದಿಂದ ಮಾಡಿದ್ದಾಗಿರುತ್ತದೆ. ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ಆಹಾರದಲ್ಲಿ ಮಿತಿ ಇರಲಿ. ದಾಂಪತ್ಯದಲ್ಲಿ ಕಲಹವು ಸಹಜವೆನ್ನುವಷ್ಟು ಆಗಿದೆ. ಸಮಾಧಾನವೂ ಹಾಗೇ ಆಗಲಿ. ಹಿರಿಯರ ಮಾತಿಗೆ ಟೀಕೆ, ವ್ಯಾಖ್ಯಾನಗಳು ಬೇಡ. ಅವರ ಮಾತನ್ನು ಅನುಸರಿಸಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಂಟಿಯಾಗಿ ಕೆಲಸವನ್ನು ಮಾಡದೇ ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಬಿಟ್ಟುಕೊಡಲಾರಿರಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: ಇಂದು ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಇಂದಿನ ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು. ಒಂದೇ ಆದಾಯವನ್ನು ನಂಬಿದವರಿಗೆ ಕಷ್ಟವಾದೀತು. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ತೊಂದರೆಗೆ ಸಿಕ್ಕಿಕೊಳ್ಳಬೇಡಿ. ಆಕರ್ಷಕ ವಸ್ತುಗಳಿಗೆ ಮನಸೋಲಬಹುದು. ಆಪ್ತರ ಜೊತೆ ಮಾತನಾಡಿ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಉದ್ಯಮದಲ್ಲಿ ಪ್ರಗತಿ ಇರಲಿದೆ. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.‌ ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಿ.

ಕಟಕ ರಾಶಿ: ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಯಾದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಮಾಡಿಕೊಳ್ಳಿ. ಇಲ್ಲವಾದರೆ ಅವಮಾನವಾದೀತು. ನಿಮ್ಮ ಜೀವನದ ಬಗೆಗೆ ಬಹಿರಂಗ ಹೇಳಿಕೆಗಳು ನಗೆಯನ್ನು ಉಂಟುಮಾಡುವುದು. ದೂರದ ಪ್ರಯಾಣವನ್ನು ಮಾಡಲೇಬೇಕಾದ ಸ್ಥಿತಿ ಬರಬಹುದು. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಉತ್ಸಾಹಕ್ಕೆ ಭಂಗ ಬರುವ ಮಾತುಗಳನ್ನು ಕೇಳಬೇಕಾದೀತು. ಅದನ್ನು ಅಲ್ಲಿಯೇ ಬಿಟ್ಟು ಮುನ್ನಡೆಯಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ವೃತ್ತಿಯ ಬಗ್ಗೆ ನಿಮ್ಮಲ್ಲಿ ಹಲವು ಗೊಂದಲಗಳು ಕಾಣಿಸುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು ಅಥವಾ ವಾಹನದ ದುರಸ್ತಿ ಕಾರ್ಯವನ್ನು ಮಾಡಬೇಕಾಗಬಹುದು. ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ. ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ. ಪೂರ್ಣವಿಶ್ವಾಸದಿಂದ ಆರಂಭಿಸಿದ ಕಾರ್ಯವು ಅಪೂರ್ಣವಾಗದು ಎಂಬ ಆತ್ಮಬಲವಿರುವುದು. ನಿಮ್ಮನ್ನು ಎದುರೇ ಯಾರಾದರೂ ನಿಂದಿಸಬಹುದು. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿಂದವ ಜನರು ಬರುವರು.

ಕನ್ಯಾ ರಾಶಿ: ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು. ವಿವಾಹಕ್ಕೆ ಕಾಣದವರಿಂದ ಅಡತಡೆ ಬರುವುದು. ನಿಮ್ಮವರ ಬಗ್ಗೆ ದೂರು ಕೊಡಬಹುದು ನಿಮ್ಮ ಬಳಿ.‌ ಅದನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿ. ಪಾಲುದಾರಿಕೆಯಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಆಲೋಚಿಸುವಿರಿ‌. ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ. ಮಾಡಬೇಕಾದ ಕಾರ್ಯವನ್ನು ಆರಂಭಿಸಿ. ಸಮಯವು ನಿಮಗಾಗಿ ಕಾಯುವುದಿಲ್ಲ. ಮನೆಯಲ್ಲಿ ನೋವಿನ ಮಾತನ್ನು ಆಡಬೇಡಿ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಸಿಟ್ಟು ಮಾಡಿಕೊಂಡು ಒಂಟಿಯಾಗಿ ಇರುವಿರಿ.

ತುಲಾ ರಾಶಿ: ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು.‌ ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಹಳೆಯ ಸ್ನೇಹಿತರು ನಿಮ್ಮನ್ನು ಅಕಸ್ಮಾತ್ ಭೇಟಿಯಾಗಬಹುದು. ಸಂಗಾತಿಯು ನಿಮ್ಮ ಪೂರ್ವವೃತ್ತಾಂತವನ್ನು ಕೇಳಿ ನಾಚಿಕೆಯಾಗಬಹುದು‌. ಕೆಲಸವನ್ನು ಬದಲಿಸುವ ಯೋಚನೆ ಇರಲಿದೆ. ಹೊಸ ಸಂಗತಿಗಳನ್ನು ಕಲಿಯುವಿರಿ. ದಾಂಪತ್ಯದಲ್ಲಿ ಮನಸ್ಸು ಬಂದರೂ ಅದನ್ನು ಸರಿ ಮಾಡಿಕೊಂಡು ಮುಂದುವರಿಯುವಿರಿ. ಬರಬೇಕಾದ ಹಣದಲ್ಲಿ ಸಂಶಯ ಕಾಡಬಹುದು. ಹೊಸ ವಿಷಯವನ್ನು ಕಲಿಯಲು ಆಲೋಚಿಸುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಗಾಂಭೀರ್ಯವಿರಲಿದೆ. ಸರಿಯಾದ ವಿವೇಚನೆಯಿಂದ ಕಾರ್ಯವನ್ನು ನಿರ್ವಹಿಸುವಿರಿ.

ವೃಶ್ಚಿಕ ರಾಶಿ: ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು. ಕೃಷಿಯ ಬಗ್ಗೆ ಆಸಕ್ತಿ ಇರುವುದು. ಸಂಗಾತಿಯನ್ನು ಮಾತಿನಿಂದ ನೋಯಿಸುವಿರಿ. ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು. ಕಛೇರಿಯಲ್ಲಿ ರಜ ಹಾಕಲು ಸುಳ್ಳು ನೆಪವನ್ನು ತೋರುವಿರಿ. ನಿಮ್ಮ ನಿಜರೂಪವನ್ನು ಆತ್ಮೀಯರು ಅರಿಯಬಹುದು. ಖರೀದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವಿರಿ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಇನ್ನೊಬ್ಬರ ಅವಲಂಬನೆಯಿಂದ ನಿಮಗೆ ಮುಜುಗರವಾಗುವುದು.

ಧನು ರಾಶಿ: ಇಂದು ನಿಮಗೆ ಸಾಲ ಕೊಡಲಿಕ್ಕಾಗಿ ಒಂದರಮೇಲೆ‌ ಒಂದರಂತೆ ಕರೆಗಳು ಬರಬಹುದು. ಸಂತೋಷವಾಗಿರಲು ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದರೂ ಅದು ವ್ಯತ್ಯಾಸ ಆಗಬಹುದು. ಅಥವಾ ಇನ್ನೇನೋ ಆಗಬಹುದು. ಇಂದಿನ ಸಿಟ್ಟು ನಿಮ್ಮ ಜೀವನಕ್ಕೆ ಬೇಡವಾಗಿರುವುದು. ಅದು ಬೇರೆ ರೂಪವನ್ನು ಪಡೆಯಬಹುದು. ಕಿರಿಯರ ಭಾವನೆ ಸ್ಪಂದಿಸುವಿರಿ. ನಿರಂತರ ಶ್ರಮದಿಂದ ಆಯಾಸವಾದ ನಿಮಗೆ ಇಂದು ಸ್ವಲ್ಪ ಬಿಡುಗಡೆಯಂತೆ ತೋರುವುದು‌. ದೇವರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮವರನ್ನು ಕಳೆದುಕೊಳ್ಳುವ ಭೀತಿ ಇರುವುದು. ಭೂಮಿಯ ವ್ಯವಹಾರದಲ್ಲಿ ಅಜಾಗರೂಕತೆಯಿಂದ ನಷ್ಟ ಮಾಡಿಕೊಳ್ಳುವಿರಿ. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ನಿಮ್ಮ ಕ್ರಮವನ್ನು ನೀವು ಮಾಡಿ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ.

ಮಕರ ರಾಶಿ: ಕಿಂಚಿತ್ತಾದರೂ ನಿಮ್ಮಿಂದ ಸಹಕರಾವಾದರೆ ನಿಮಗೆ ಸಮಾಧಾನ ಸಿಗಲಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಸಾಮಾಜಿಕ ಕಾರ್ಯಕ್ಕೆ ಹಲವರಿಂದ ಒತ್ತಡ ಸಿಗಬಹುದು. ಹಣವು ವ್ಯಯವಾಗುವ ಸಾಧ್ಯತೆ ಇದೆ‌. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ. ನಿಮ್ಮ ಆಲೋಚನೆಗಳು ಇಷ್ಟವಾದೀತು. ಅನಿರೀಕ್ಷಿತ ಖರ್ಚುಗಳನ್ನು ನೀವು ಮಾಡಬೇಕಾಗುವುದು. ಮಾರಾಟಗಾರರು ಹೆಚ್ಚು ಆದಾಯ ಪಡೆಯುವರು. ಮಕ್ಕಳು ನಿಮ್ಮನ್ನು ಇಷ್ಟಪಡುವರು. ಸಾಹಸಕ್ಕೆ ಆದಷ್ಟು ಕೈ ಹಾಕುವುದು ಬೇಡ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ.

ಕುಂಭ ರಾಶಿ: ನಿಮ್ಮ ಇಂದಿನ‌ ಯೋಜನೆಗಳು ತಲೆಕೆಳಗಾಗುವುದು. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು. ಎಲ್ಲರ ಮಾತುಗಳು ನಿಮಗೆ ಕರ್ಣಕಠೋರವಾದೀತು. ಎಲ್ಲವೂ ಘಟಿಸಿ ಮೇಲೆ ಪಶ್ಚಾತ್ತಾಪ ಪಡುವುದರಿಂದ ಫಲ ಸಿಗದು. ಅನಗತ್ಯವಾಗಿ ಖರ್ಚನ್ನು ಮಾಡಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಬಯಸುವವರು. ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಮನೆಗೆಲಸವೇ ನಿಮಗೆ ಆಯಾಸ ತರಿಸೀತು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ನಿಮ್ಮನ್ನು ನಂಬಿದವರಿಗೆ ಏನಾದರೂ ಒಂದು ದಾರಿ ಮಾಡಿಕೊಡಬೇಕಾಗುವುದು. ತಂತ್ರಜ್ಞರು ವಹಿಸಿಕೊಂಡ ಕಾರ್ಯದ ಗಡುವುದು ಸಮೀಪಿಸಿದ್ದು, ತುರ್ತು ಕಾರ್ಯವನ್ನು ಮಾಡಬೇಕಿದೆ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಹಣವು ಬರುವ ನಿರೀಕ್ಷೆಯಲ್ಲಿ ಎಲ್ಲವನ್ನೂ ಮಾಡುವಿರಿ. ಉದ್ಯೋಗವನ್ನು ಬದಲಿಸುವುದು ಅನಿವಾರ್ಯವಾಗಿ ಬರಬಹುದು.

ಮೀನ ರಾಶಿ: ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ಇತರರ ಸಲಹೆಗಳನ್ನು ಕೇಳಿ, ನಿಮಗೆ ಸರಿಯಾದೃ ಮಾತ್ರ ಮುಂದುವರಿಯಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆಪ್ತರ ಜೊತೆ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವಿರಿ. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು. ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ‌ ಇರಲಿದೆ. ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ. ಕಲಾವಿದರು ಹೆಚ್ಚಿನ ಕೀರ್ತಿಯನ್ನು ಪಡೆಯುವರು. ಎಲ್ಲರೂ ಸ್ವಾರ್ಥಿಗಳಂತೆ ಕಂಡಾರು. ಕೆಲವು ಸಂದರ್ಭಗಳಲ್ಲಿ ನೀವು ಧೈರ್ಯದಿಂದ ಇರಬೇಕಾಗುವುದು.‌ ಇಲ್ಲದಿದ್ದರೆ ನಿಮ್ಮ ಪಾಲಿಗೇ ಸಂಕಷ್ಟ ಬರುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು.

ಲೋಹಿತ ಹೆಬ್ಬಾರ್-8762924271 (what’s app only)

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್