ಜ್ಯೋತಿಷ್ಯವು (Horoscope) ವ್ಯಕ್ತಿಯ ಹುಟ್ಟಿನ ಸಮಯ, ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆಯಾಗಿದೆ. ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ಅಥವಾ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ನಿತ್ಯ ಭವಿಷ್ಯವನ್ನು ಓದುತ್ತಾರೆ. ಹಾಗಾದ್ರೆ ಜುಲೈ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:51ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:03ರಿಂದ ಮಧ್ಯಾಹ್ನ 12:39ರ ವರೆಗೆ.
ಮೇಷ ರಾಶಿ: ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಹಿತಶತ್ರಗಳು ಸೋಲನ್ನು ಒಪ್ಪಿದರೂ ಇನ್ನೊಂದು ರೀತಿಯಲ್ಲಿ ಗೆಲ್ಲುವ ಯೋಜನೆ ಮಾಡುವರು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಸ್ವಲ್ಪಮಟ್ಟಿನ ಗಾಂಭೀರ್ಯತೆ ಬರಬಹುದು. ಇಂದು ನಿಮಗೆ ಸೌಂದರ್ಯಪ್ರಜ್ಞೆಯ ಬಗ್ಗೆ ಆಸಕ್ತಿ ಇರವುದು. ಅನನುಕೂಲತೆಯನ್ನು ಸವಾಲಾಗಿ ಸ್ವೀಕರಿಸುವಿರಿ. ದುರಭ್ಯಾಸವನ್ನು ಗೊತ್ತಿಲ್ಲದೇ ಬೆಳೆಸಿಕೊಳ್ಳುವಿರಿ. ಅತಿಯಾದ ಬಾಯಾರಿಕೆಯಾಗಲಿದೆ. ನಿಮ್ಮ ತಾಳ್ಮೆಯು ದುರ್ಬಲವಾಗಬಾರದು. ಇಂದು ಭಾಗವಿಸಿದ ಸ್ಪರ್ಧೆಯಲ್ಲಿ ಸೋಲಾಗಬಹುದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಾಗುವುದು.
ವೃಷಭ ರಾಶಿ: ಸಂಸಾರದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇಂದು ನೀವು ಅಧಿಕ ಶ್ರಮವನ್ನು ಹಾಕಲು ಪ್ರಯೋಜನವನ್ನು ನೋಡಬಹುದು. ದೈವದ ಬಗ್ಗೆ ಆಸಕ್ತಿ ಕಡಿಮೆ ಆಗಬಹುದು. ಸಂತಾನದ ಶುಭ ಸಮಾಚಾರವು ನಿಮಗೆ ಖುಷಿ ಕೊಡುವುದು. ಅಜ್ಞಾತ ಸ್ಥಳದಲ್ಲಿ ನಿಮ್ಮ ವಾಸವಿರುವುದು. ಬೇರೆಯರಿಂದ ಅವಮಾನಿತರಾಗಬಹು. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ನಿಮ್ಮ ನಿರಂತರವಾದ ಕೆಲಸವು ಇಂದು ಫಲವನ್ನು ಕೊಡಬಹುದು. ಮಾತಿನಲ್ಲಿ ಸಿಕ್ಕಿಕೊಳ್ಳಬಹುದು. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.
ಮಿಥುನ ರಾಶಿ: ಇಂದು ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ಆರ್ಥಿಕವಾಗಿ ಅನೇಕ ಲಾಭಗಳು ಆಗಲಿವೆ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ವೇಗದ ಅಚ್ಚುಕಟ್ಟಾದ ಕೆಲಸಕ್ಕೆ ಪ್ರಶಂಸೆ ಸಿಗಬಹುದು. ವೇತನವು ಆಧಿಕವಾಗಲಿದೆ. ಮುಖ್ಯವಾದ ನಿರ್ಧಾರಗಳನ್ನು ಬಹಳ ವಿಳಂಬವಾಗಿ ತೆಗೆದುಕೊಳ್ಳುವಿರಿ. ಶ್ರೀಮಂತಕೆಯು ನಿಮಗೆ ಆದರ್ಶವಾಗಬಹುದು. ಹಣದ ಹಿಂದೆ ಬೀಳುವ ಸಾಧ್ಯತೆ ಇದೆ. ವ್ಯಾವಹಾರಿಕ ಅಶಿಸ್ತು ನಿಮಗೆ ಕಪ್ಪು ಚುಕ್ಕಿಯಾಗಬಹುದು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಬೇಡ. ಕಳೆದುದರ ಬಗ್ಗೆ ನಿಮಗೆ ಬೇಸರವಿರದು. ಉತ್ಸಾಹವು ನಿಮ್ಮನ್ನು ಸದಾ ಆವರಿಸಿರುವುದು. ಮಾನಸಿಕ ಅಸಮತೋಲನವು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡೀತು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು.
ಕಟಕ ರಾಶಿ: ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಯಾವುದೇ ಮಾತಿಗೆ ನೀವು ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೆಯದು. ಧಾರ್ಮಿಕ ಆಚಣೆಯಲ್ಲಿ ಆಸಕ್ತಿ ಹೆಚ್ಚಿರುವ ಸಾಧ್ಯತೆ ಇದೆ. ನೀವು ಬಂಗಾರವನ್ನು ಖರೀದಿಸುವಿರಿ. ದೂರದ ಪ್ರಯಾಣವು ನಿಮಗೆ ಸುಖವನ್ನು ಕೊಟ್ಟೀತು. ನಿಮಗೆ ಪ್ರೀತಿಯ ಜೀವನವು ಸಾಕೆನಿಸಬಹುದು. ಎಲ್ಲವನ್ನೂ ಮರೆಯಲು ಎಲ್ಲಿಗಾದರೂ ದೂರ ಹೋಗಬಹುದು. ಇತಿಹಾಸದ ಬಗ್ಗೆ ನಿಮಗೆ ಆಸಕ್ತಿ ಉಂಟಾಗಬಹುದು. ಸ್ತ್ರೀಯರು ನಿಮ್ಮನ್ನು ಅಪಮಾನ ಮಾಡಿಯಾರು. ಬೇರೆಯವರಿಂದ ಹೇಳಿಸಿಕೊಳ್ಳಬೇಕಾಗುವುದು. ಇದು ನಿಮಗೆ ಅತ್ಯಂತ ಕೆಟ್ಟ ಕ್ಷಣ ಎನ್ನಿಸಬಹುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯವು ಹದ ತಪ್ಪುವುದು. ಬಹಳ ದಿನಗಳ ಅನಂತರ ತಪ್ಪಿನ ಅರಿವಾಗಬಹುದು.
ಸಿಂಹ ರಾಶಿ: ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತಿಗೆ ಎದುರು ಮಾತು ಬರಬಹುದು. ಇದು ಕಲಹವಾಗಿಯೂ ಪರಿವರ್ತಿತವಾದದೀತು. ಸ್ಪರ್ಧಾತ್ಮಕವಾಗಿ ನಿಮಗೆ ಮೋಸವಾಗಿದೆ ಎಂದು ಕಾಣಬಹುದು. ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆ ಇರುವುದು. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಕಾಣುವಿರಿ. ವಿದ್ಯಾರ್ಥಿಗಳು ಮನಸ್ಸಿಟ್ಟು ಓದಬೇಕು. ಇಲ್ಲಿಯವರೆಗಿನ ಓದು ಕೇವಲ ಕಾಟಾಚೆರದ ಓದೇ ಆಗಿತ್ತು. ತೇರ್ಗಡೆಯಾಗುವ ಮನಸ್ಸಿನಿಂದ ಅಭ್ಯಾಸ ಮಾಡಿ. ಅನಾರೋಗ್ಯದಿಂದ ನಿಮ್ಮ ಪ್ರಯಾಣವನ್ನು ಮುಂದೂಡುವಿರಿ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು.
ಕನ್ಯಾ ರಾಶಿ: ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು. ಕುಟುಂಬದಲ್ಲಿ ಆಗುವ ಕಲಹವನ್ನು ನೀವು ನಿಭಾಯಿಸಬೇಕಾದೀತು. ಆಪ್ತರನ್ನು ಕಳೆದುಕೊಳ್ಳುವ ಭೀತಿಯೂ ಬರಬಹುದು. ದೃಶ್ಯಮಾಧ್ಯಮದವರು ಹೆಚ್ಚಿನ ಆದಾಯ ಬರುವಲ್ಲಿಗೆ ಹೋಗುವ ಯೋಚನೆ ಮಾಡುವರು. ಮಕ್ಕಳು ನಿಮ್ಮ ಮಾತಿಗೆ ಅನಾದರ ತೋರಿಸಬಹುದು. ಬಹಳ ಕೋಪ ಬರಬಹುದು, ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವಿರಿ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ.
ತುಲಾ ರಾಶಿ: ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ನಿಮ್ಮ ಭೂಮಿಯನ್ನು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುವಿರಿ. ನಂಬಿಕೆ ದ್ರೋಹಕ್ಕೆ ನೀವು ಬಹಳ ದುಃಖಪಡುವಿರಿ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟು ಸಣ್ಣವರಾಗುವಿರಿ. ಏನೂ ಗೊತ್ತಿಲ್ಲದೇ ಮನಸ್ಸಿಗೆ ಬಂದಂತೆ ಮಾತನಾಡುವುದು ಬೇಡ. ನಿಮ್ಮ ಹೆಸರಿಗೆ ಕಳಂಕ ಬಳಿಯುವ ಕೆಲಸವಾಗಬಹುದು. ಎಲ್ಲ ಕಡೆಗೂ ಕಿಯಿಡುವುದು ಅವಶ್ಯ ಇದೆ. ತಪ್ಪಿಗೆ ಕಾರಣಗಳನ್ನು ಹುಡುಕುತ್ತ ಇರುವುದರಿಂದ ಪ್ರಯೋಜನವಾಗದು. ಮುಂದೆ ನಡೆಯುವುದು ಉತ್ತಮ. ಅವ್ಯಕ್ತವಾದ ನೆಮ್ಮದಿಯಿಂದ ಬೀಗಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು.
ವೃಶ್ಚಿಕ ರಾಶಿ: ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ನಿರಾಳವಾದ ಮನಸ್ಸು ಇರುವುದು. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಸ್ನೇಹಿತರಿಂದ ಸಾಲವನ್ನು ಕೇಳುವ ಮನಸ್ಸಿದ್ದರೂ ಹೆದರಿಕೆ ಅಂಜಬಹುದು. ನಿಮ್ಮ ಕೆಲಸವೇ ನಿಮಗೆ ತಪ್ಪಿನಂತೆ ಕಾಣಬಹುದು. ಏನು ಮಾಡಬೇಕೆಂದು ತೋಚದೇ ಇರುವುದು. ಸಂಗಾತಿಯ ಮಾತನ್ನು ಧಿಕ್ಕರಿಸಿದ್ದಕ್ಕೆ ಕೋಪಗೊಳ್ಳುವ ಸಾಧ್ಯತೆ ಇದೆ. ಸಂಕಷ್ಟವನ್ನು ಯಾರ ಬಳಿಯೂ ಹೇಳದೇ ನೀವೇ ನುಂಗಿಕೊಳ್ಳುವಿರಿ. ದೇವರ ವಿಚಾರದಲ್ಲಿ ಆಸಕ್ತಿಯು ಹೆಚ್ಚುವುದು. ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಬಿರುಸು ನುಡಿಯಿಂದ ನಿಮಗೆ ಆಗಬೇಕಾದ ಕಾರ್ಯವು ಆಗದು. ಮಾತಿನಿಂದ ಕೆಲವನ್ನು ಕಳೆದುಕೊಳ್ಳುವಿರಿ.
ಧನು ರಾಶಿ: ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು ಮಾಡಲಿದೆ. ಇಂದು ನೀವು ನಿಮಗೆ ಆಗುವಷ್ಟು ಕೆಲಸವನ್ನು ಮಾತ್ರ ಮಾಡಿ. ಅತಿಯಾದ ಆಯಾಸವನ್ನೂ ಒತ್ತಡವನ್ನೂ ಮಾಡಿಕೊಳ್ಳುವುದು ಬೇಡ. ಹದಗೆಟ್ಟ ಆರೋಗ್ಯವು ಮತ್ತಷ್ಟು ಹದಗೆಡಬಹುದು. ಹಿರಿಯರ ಮನಸ್ಸನ್ನು ನೋಯಿಸುವಿರಿ. ಮಾನಸಿಕ ಕಿರಿಕಿರಿಯು ಕಡಿಮೆ ಆದರೂ ನೆಮ್ಮದಿ ಬರಲು ಸ್ವಲ್ಪ ಸಮಯವು ಬೇಕಾದೀತು. ಆಗಾಗ ಬರುವ ತಲೆಯ ನೋವನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ನೀವು ಸಹಿಸಲಾರಿರಿ. ವ್ಯಾಪಾರದಲ್ಲಿ ನೀವು ಹಿಂದುಳಿಯುವಿರಿ.
ಮಕರ ರಾಶಿ: ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಬೇಡದ ವಿಷಯಕ್ಕೆ ಚಿಂತೆ ಹೆಚ್ಚಾಗುವುದು. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ದಾಂಪತ್ಯದಲ್ಲಿ ಸುಖವಿರಬಹುದು. ಎಷ್ಟೋ ದಿನಗಳ ಅನಂತರ ಪರಸ್ಪರ ಮಾತುಗಳು ಖುಷಿ ಕೊಡುವುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವು ಆಗಬಹುದು. ಕುಟುಂಬದ ವಿಚಾರದಲ್ಲಿ ಖುಷಿಯಿದ್ದರೂ ಸಮಾಧಾನದ ಕೊರತೆ ಹೆಚ್ಚು ಕಾಣುವುದು. ಯಾರ ಮಾತನ್ನೂ ಕೇಳುವ ಸಾವಧಾನತೆ ಇರೆದು. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಬಂಧುಗಳ ಭೇಟಿಯನ್ನು ಮಾಡಲಾಗದು.
ಕುಂಭ ರಾಶಿ: ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ಉದ್ಯಮದಲ್ಲಿ ಹೊಸ ಸಾಧ್ಯತೆಗಳು ಸೃಷ್ಟಿಯಾಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ನೂತನ ವಾಹನದಲ್ಲಿ ದೂರ ಪ್ರಯಾಣ ಮಾಡುವಿರಿ. ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿ. ಅದನ್ನು ಯಾರ ಮೇಲೂ ಹೇರುವುದು ಬೇಡ. ನಂಬಿಕೆ ಉಳಿಸಿಕೊಳ್ಳಲು ಸುಳ್ಳು ಹೇಳುವ ಅವಶ್ಯಕತೆ ಬರಬಹುದು. ಪ್ರಸಿದ್ದ ವ್ಯಕ್ತಿಗಳ ಜೊತೆ ಹತ್ತಿರದಿಂದ ಮಾತನಾಡುವಿರಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಮನಸ್ತಾಪಗಳು ಬರಬಹುದು. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಸ್ನೇಹಿತರಿಗೆ ನೀವು ಸಮಯವನ್ನು ಕೊಡಬೇಕಾಗಬಹುದು.
ಮೀನ ರಾಶಿ: ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಅದೇ ನಿಮ್ಮ ಸಂಪತ್ತಿನ ಮೂಲವಾಗುತ್ತದೆ. ಸೃಜನಶೀಲತಯಿಂದ ನಿಮ್ಮ ಮನಸ್ಸು ಅರಳುವುದು. ನೀವು ಇಷ್ಟು ದಿನ ನಂಬಿಕೆ ಇಟ್ಟವರು ನಿಮ್ಮನ್ನು ವಂಚಿಸಬಹುದು. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು. ತಲೆಯಲ್ಲಿ ಕೊರೆಯುವ ವಿಚಾರವನ್ನು ಆಪ್ತರಲ್ಲಿ ಹೇಳಿಕೊಂಡು ಹಗುರಾಗಿ. ಮಕ್ಕಳ ಮೇಲೆ ಸಿಟ್ಟಿಗೊಳ್ಳಬೇಕಾದ ಸ್ಥಿತಿಯೂ ಬರಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಶ್ರಮವಹಿಸಬೇಕಾಗಬಹುದು. ಹಣದ ವಿಚಾರದಲ್ಲಿ ನಿಮ್ಮ ಸಂಕಷ್ಟಕ್ಕೆ ಅಧಿಕಾರಿಗಳು ಸಹಾಯ ಮಾಡಬಹುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು.
ಲೋಹಿತ ಹೆಬ್ಬಾರ್-8762924271 (what’s app only)
Published On - 12:02 am, Wed, 24 July 24