Daily Horoscope 23 July 2024: ಈ ರಾಶಿಯವರು ಸಾಲ ಕೊಡುವ ಮುನ್ನ ಎಚ್ಚರ, ಆಲಸ್ಯ ಮನೋಭಾವ ಕಡಿಮೆ ಮಾಡಿಕೊಳ್ಳಿ

ಜುಲೈ 23,​​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮ ಕೈಯಲ್ಲಿದೆ. ಯಾವುದೇ ಹೊಸ ವಸ್ತುಗಳನ್ನು ಖರೀದಿಸುವುದು ಬೇಡ. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಬೇಡ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು. ಹಾಗಾದರೆ ಜುಲೈ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 23 July 2024: ಈ ರಾಶಿಯವರು ಸಾಲ ಕೊಡುವ ಮುನ್ನ ಎಚ್ಚರ, ಆಲಸ್ಯ ಮನೋಭಾವ ಕಡಿಮೆ ಮಾಡಿಕೊಳ್ಳಿ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2024 | 12:02 AM

ಕೆಲವು ಗ್ರಹಗಳನ್ನು ಶುಭ ಗ್ರಹ ಹಾಗೂ ಅಶುಭ ಗ್ರಹ ಎಂದು ಎರಡು ವಿಭಾಗಗಳಿವೆ. ಶುಭ ಗ್ರಹದಿಂದ ಶುಭ ಫಲ, ಅಶುಭ ಗ್ರಹರಿಂದ ಅಶುಭ ಫಲವೆಂಬುದಾಗಿದೆ. ಪ್ರಸ್ತುತ, ಮಂಗಳನನ್ನು ಅಶುಭ ಗ್ರಹ ಎಂದಿದ್ದಾರೆ. ಈ ಗ್ರಹನು ಕೇವಲ ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೆಯದನ್ನೂ ಮಾಡುತ್ತಾನೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಆಯುಷ್ಮಾನ್, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ ಸಂಜೆ 05:27ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:27ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39ರಿಂದ 02:15ರ ವರೆಗೆ.

ಮೇಷ ರಾಶಿ: ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆಯನ್ನು ಕೊಡಬಹುದು. ಸಣ್ಣ ಮನಸ್ತಾಪಗಳು ನಿಮಗೆ ಬೇಸರ ತರಿಸೀತು. ಬಂಧುಗಳ ಜೊತೆ ಹೆಚ್ಚು ಸಲುಗೆ ಇರಲಿದೆ. ಮಾತಿನ ವೇಗದಲ್ಲಿ ಗೌಪ್ಯತೆಯನ್ನು ಬಿಟ್ಟುಕೊಡುವಿರಿ. ಅನಾಯಾಸವಾಗಿ ದೊರೆತ ವಸ್ತುಗಳ‌ ಮೇಲೆ ಅನಾದರ ಉಂಟಾಗಬಹುದು. ಮಕ್ಕಳ‌ ವಿಚಾರದಲ್ಲಿ ಪಕ್ಷಪಾತ ತೋರಿಸುವಿರಿ. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಇಂದು ಆರಂಭಿಸಿದ ಕಾರ್ಯವನ್ನು ಸಮಯ ಸಾಲದೇ ಅರ್ಧಕ್ಕೇ ನಿಲ್ಲಿಸುವಿರಿ.

ವೃಷಭ ರಾಶಿ: ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ಅಪಮಾನವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ವ್ಯಕ್ತಿಗತವಾದ ದ್ವೇಷವನ್ನು ಸಂಸ್ಥೆಯ ಮೇಲೆ ತೋರಿಸುವಿರಿ. ನಿಮ್ಮ ಎಲ್ಲ ನಿರ್ಧಾರವೂ ಸರಿಯಾಗಿ ಇರುವುದು ಎಂಬ ಭ್ರಮಯಲ್ಲಿ ಇರುವುದು ಬೇಡ. ದುರಭಿಮಾನಕ್ಕೆ ಯಾವುದೇ ಮದ್ದು ಸಿಗದು. ಸಂಗಾತಿಯನ್ನು ನೀವು ಗೌರವಿಸುವಿರಿ. ನಿಮ್ಮ ಬುತ್ತಿಯನ್ನು ನೀವೇ ಉಣಬೇಕಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅಪಜಯವಾಗಬಹುದು. ಕಳ್ಳರ ಭೀತಿಯಿಂದ ಮುಕ್ತರಾಗಿ. ಧೈರ್ಯದ ಅವಶ್ಯಕತೆ ನಿಮಗೆಲಿದೆ. ಅನುಕರಣೆಯಿಂದ ಆಪತ್ತು ಬರಬಹುದು. ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ಗಮನವಿರಿಲಿ. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು.

ಮಿಥುನ ರಾಶಿ: ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ದೇಹಕ್ಕೆ ವಿರುದ್ಧವಾದ ಆಹಾರವನ್ನು ಸೇವಿಸುವಿರಿ. ನಂಬಿಕೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡಬೇಡಿ. ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ನಿಮಗೆ ಲೆಕ್ಕಾಚಾರ ತಿಳಿದಿರಲಿ. ಗೊತ್ತಾಗದಂತೆ ಒತ್ತಡಕ್ಕೆ ಸಿಲುಕಿಕೊಳ್ಳುವಿರಿ. ಇಂದು ಸಮಯವನ್ನು ಕಳೆಯುವ ಬಗ್ಗೆ ಚಿಂತೆಯಾದೀತು. ಯಾರದೋ ತಪ್ಪು ನಿಮ್ಮ ಮೇಲೆ ಬರಬಹುದು. ನಿಮ್ಮನ್ನು ಸಮಾಧಾನಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಇನ್ನೊಬ್ಬರಿಂದ ಕೊಂಬೆ ನೋವಾಗುವುದು. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಬೇಡ ಆಲೋಚನೆಗಳನ್ನು ತಲೆಯಿಂದ ತೆಗದೆಹಾಕಿ.

ಕಟಕ ರಾಶಿ: ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು.‌ ಕಾರ್ಯಸಾಧನೆಗೆ ಮೊದಲು ವಿಶ್ವಾಸವನ್ನು ಕಳಿಸಿಕೊಳ್ಳುವಿರಿ. ಬಡ್ಡಿ ಇಲ್ಲದೇ ನಿಮಗೆ ಸಾಲ ಸಿಗಲಿದೆ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲಾಗದು. ಸಮಾಧಾನ ಚಿತ್ತದಿಂದ‌ ಕುಳಿತು ಯೋಚಿಸಿ. ಆಪ್ತ ಸ್ನೇಹಿತರು ಪ್ರೀತಿಯ ಹಂಚಿಕೆಯಲ್ಲಿ ಬಹಳ ಉತ್ಸಾಹವನ್ನು ತೋರಿಸಬಹುದು. ಇನ್ನೊಬ್ಬರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವಿರಿ. ಇಂದು ನಿಮಗೆ ಉಚಿತ ಎನಿಸಿದ್ದನ್ನು ಮಾಡಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರ.

ಸಿಂಹ ರಾಶಿ: ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ಪ್ರತ್ಯೇಕವಾಗಿ ಕಂಡಿದ್ದರ ಆಧಾರದ ಮೇಲೆ ಏನನ್ನಾದರೂ ಊಹಿಸಬೇಡಿ. ಎಲ್ಲವೂ ಸತ್ಯವಾಗದು. ಇನ್ನೊಬ್ಬರ ಬಗ್ಗೆ ಮಾತಡುವ ಮೊದಲು ಯೊಚಿಸುವುದು ಒಳ್ಳೆಯದು. ವಂಚನೆಯ ಬಗ್ಗೆ ಹೇಳುತ್ತಲೇ ಮೋಸ ಹೋಗುವ ಸಾಧ್ಯತೆ ಇದೆ. ನೂತನ ವಧೂ, ವರರು ಆನಂದದಿಂದ ಇರುವರು. ನಿಮ್ಮ ಮನಸ್ಸಿನಲ್ಲಿ ಹತ್ತಾರು ಕೆಲಸಗಳ ಬಗ್ಗೆ ಆಲೋಚನ ಬರಲಿದೆ. ಸಿಕ್ಕ ಸಮಯವನ್ನು ಮುಂದಿನ ದಿನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ. ಯಾರನ್ನೂ ನೋಡಿದ ಮಾತ್ರಕ್ಕೆ ತೀರ್ಮಾನಿಸಲಾಗದು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದೌರ್ಬಲ್ಯಗಳು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮ ನೇರವಾದ ಮಾತು ನಿಮಗಷ್ಟೇ ಚೆನ್ನಾಗಿದೆ ಎನ್ನಿಸಬಹುದು.

ಕನ್ಯಾ ರಾಶಿ: ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ದುರಭ್ಯಾಸವನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ವಿಶ್ವಾಸಘಾತಕರು ನಿಮ್ಮ ಬಳಿ ಸಾಲವನ್ನು ಕೇಳಲು ಬರಬಹುದು. ಕೊಡುವುದಕ್ಕೆ ಹೋಗಬೇಡಿ. ಮನೆಯಲ್ಲಿ ನಿಮ್ಮಿಂದ‌ ಹಣವನ್ನು ಕೇಳಬಹುದು. ಸಂಗಾತಿಯ ಮಾತುಗಳು ನಿಮ್ಮ ಪ್ರೀತಿಯನ್ನು ಹೆಚ್ಚಿಸೀತು. ಹಳೆಯ ಗೆಳತಿಯ ಭೇಟಿಯಾದೀತು. ನಿಮ್ಮದಲ್ಲದ ವಸ್ತುವನ್ನು ಜೋಪಾನವಾಗಿ‌ ಇಡಲು ಕೊಡಬಹುದು. ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮ್ಮ ಅಸಮಾಧಾನವನ್ನು ಹೊರಹಾಕುವಾಗ ಯೋಚಿಸಿ. ಚೂರಾದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ.

ತುಲಾ ರಾಶಿ: ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ನಿಮಗೆ ಆಕರ್ಷಿತರಾಗಿ ನಿಮ್ಮ ಮಿತ್ರತ್ವವನ್ನು ಬಯಸಬಹುದು. ಹಣವನ್ನು ಅತಿಮುಖ್ಯವಾದ ಸಾಧನ ಎನ್ನಿಸದೇ ಇರಬಹುದು. ಮಾತಿನಿಂದ ನೀವು ಸಂಪತ್ತನ್ನು ಗಳಿಸುವಿರಿ. ಸಮಸ್ಯೆಗಳು ಬರುವಂತಹ ಮಾತುಗಳನ್ನು ಆಡಬೇಡಿ. ಆಧುನಿಕ ಪ್ರಪಂಚದ ವಿಚಾರದಲ್ಲಿ ನಿಮಗೆ ತಿಳಿವಳಿಕೆ ಕಡಿಮೆ‌ ಇರುವುದು ಮಕ್ಕಳಿಗೆ ಗೊತ್ತಾದೀತು. ದ್ರೋಹವನ್ನು ಯಾರಿಂದಲೂ ಆಗಲು ಬಿಡುವುದಿಲ್ಲ. ಆರಂಭದಲ್ಲಿ ನಿಮಗೆ ವೃತ್ತಿಯ ಬಗ್ಗೆ ತಿಳಿವಳಿಕೆ ಇಲ್ಲದೇ ಒದ್ದಾಡುವಿರಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಸಿಟ್ಟಿನಿಂದಲೇ ಇಡೀ ದಿನವನ್ನು ಕಳೆಯಬೇಕಾಗಬಹುದು. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು.

ವೃಶ್ಚಿಕ ರಾಶಿ: ನೀವು ನಿಮ್ಮ ಮಕ್ಕಳ ಬಗ್ಗೂ ಇತರರ ಬಗ್ಗೆಯೂ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವಿರಿ. ದೇಹಕ್ಕೆ ಸಂಬಂಧಪಟ್ಟಂತೆ ಅದರ ಆರೈಕೆಯನ್ನು ಹೆಚ್ಚು ಮಾಡುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುವುದು. ಅಧಿಕ‌ ಹಣವನ್ನು ಸಂಪಾದಿಸಲು ನೀವು ಹೊಸ ಯೋಚನೆಯನ್ನು ಮಾಡುವಿರಿ. ನಾಚಿಕೆಯ ಸ್ವಭಾವವು ಪಡೆದುಕೊಳ್ಳುವ ವಿಚಾರದಲ್ಲಿ ಹಿಂದೆ ಇರುವಂತೆ ಮಾಡೀತು. ನಿಮ್ಮ ಸಂಗಾತಿಯು ನಿಮ್ಮ‌ ಸ್ಫೂರ್ತಿಯೂ ಅಗುವವರಿದ್ದಾರೆ. ಬೇರೆಯವರಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸುವುದು ಬೇಡ. ಎಲ್ಲವೂ ನಿಮ್ಮದೇ ತಪ್ಪು ಎನ್ನುವಂತೆ ಆಗುವುದು. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ಚಿಕ್ಕ ಕೆಲಸವಾದರೂ ಬಹಳ ಅಚ್ಚುಕಟ್ಟಿನಿಂದ ಮಾಡುವಿರಿ. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವುದು ಅನಿವಾರ್ಯ.

ಧನು ರಾಶಿ: ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ಇನ್ನೊಬ್ಬರ ವಿಚಾರದಲ್ಲಿ ಮಧ್ಯಪ್ರವೇಶ ಬೇಡ. ಬೇಕಾದರೆ ಅವರೇ ಕರೆಯುತ್ತಾರೆ. ಯಾರನ್ನೋ ಮೆಚ್ವಿಸಲು ಹೋಗಿ ಸಮಯವನ್ನು ಶ್ರಮವನ್ನೂ ವ್ಯಯಮಾಡಿಕೊಳ್ಳಬಹುದು. ಸತ್ಯವನ್ನು ಗುಟ್ಟು ಮಾಡಲು ಹೋಗಿ ಅದನ್ನೇ ಹೇಳಬೇಕಾದೀತು. ನಿಮ್ಮವರ‌ ಮಾತು ಕೇವಲ ಭರವಸೆಯಾಗಿ ಇರುವುದೆಂದು ಅನ್ನಿಸಬಹುದು. ಆಸ್ತಿಯ ವಿಚಾರವನ್ನು ತಂದೆಯ ಎದುರು ಮಾತನಾಡಿಕೊಳ್ಳುವುದು ಬೇಡ. ಅವರು ಸಿಟ್ಟುಗೊಳ್ಳುವ ಸಾಧ್ಯತೆ ಇದೆ‌. ಯಾರನ್ನೂ ಹೀಗೇ ಎಂದು ಅಳೆಯಲು ಸಾಧ್ಯವಾಗದು. ಅವಕಾಶಗಳನ್ನು ಬಿಟ್ಟುಕೊಡುವ ಮನಸ್ಸು ಮಾಡುವಿರಿ. ನಿಮಗೆ ಸಿಗಬೇಕಾದುದು ಸಿಕ್ಕಿಯೇ ಸಿಗುತ್ತದೆ. ಅದನ್ನು ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು.

ಮಕರ ರಾಶಿ: ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ನಿಮ್ಮ ಮಕ್ಕಳು ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ಕಾನೂನಿಗೆ ಸಮ್ಮತವಾಗಿರುವ ದಾಖಲೆಗಳು ಇರುವಾಗ ಭಯಪಡಬೇಕಾದ ಅವಶ್ಯಕತೆ ಇಲ್ಲ. ನಿಮಗಿಂದು ವಿಶ್ರಾಂತಿ ಬೇಕೆನಿಸಬಹುದು. ಒಮ್ಮೆಲೆ ಎಲ್ಲ ಕೆಲಸವನ್ನು ನಿಭಾಯಿಸುವುದು ಕಷ್ಟದ ಕೆಲಸ. ಅಕಾಲದಲ್ಲಿ ಆಗುವ ಮಳೆಯಿಂದ ನಿಮಗೆ ಕಷ್ಟವೆನಿಸೀತು. ಕೃಷಿಕರು ಅಲ್ಪ ಲಾಭವನ್ನು ಪಡೆಯುವರು. ಹಿರಿಯರನ್ನು ನೀವು ಆಡಿಕೊಳ್ಳುವಿರಿ. ಒಳ್ಳೆಯ ಹಾದಿ ಅದಲ್ಲ. ಕೊಡುಕೊಳ್ಳುವ ವ್ಯವಹಾರವು ಪ್ರಮಾಣಿಕವಾಗಿ ಇರಲಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಅಕಾಲದಲ್ಲಿ ನಿಮ್ಮ ಪ್ರತಿಷ್ಠೆಯನ್ನು ತೋರಿಸುವುದು ಬೇಡ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆಯುವರು.‌ ಸಂಗಾತಿಯ ಅಸಹಜ ಮಾತುಗಳಿಗೆ ಮೌನವಾಗುವಿರಿ.

ಕುಂಭ ರಾಶಿ: ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಹಳೆಯ ಖಾಯಿಲೆಗಳು ಪುನಃ ಬಂದೀತು.‌ ವೈದ್ಯರ ಚಿಕಿತ್ಸೆಯನ್ನು ಒಡೆಯಿರಿ.‌ ಅನಿರೀಕ್ಷಿತ ಹಣ ಬಂದರೂ ಕೂಡಲೇ ಖರ್ಚಾಗುವುದು. ಚೂರಾದ ಕನ್ನಡಿಯಲ್ಲಿ ಜೋಡಿಸಲಾಗದು. ಜೋಡಿಸದರೂ ಮೊದಲಿನಂತೆ ಸುಂದರವಾಗಿ‌ ಕಾಣಿಸದು. ಆಪತ್ತಿಗಾಗಿ ನೀವು ಹಣವನ್ನು ಸಂಗ್ರಹಿಸುವಿರಿ. ದಾಂಪತ್ಯದಲ್ಲಿ ಅನಿರೀಕ್ಷಿತವಾಗಿ ಬರುವ ಸುಖ, ದುಃಖಗಳಿಗೆ ಸ್ಪಂದಿಸಲು ಕಷ್ಟವಾದೀತು. ಮಕ್ಕಳನ್ನು ಖುಷಿಯಾಗಿ ಇಡುವಿರಿ. ಹೊಸ ವಾಹನದ ಖರೀದಿ‌ಯನ್ನು ಮಾಡುವಿರಿ‌. ಸಿಗಬೇಕಾದ ವಸ್ತುವು ಸಿಗದೇ ಹುಡುಕುವಿರಿ. ಹಸಿವೆ ಹೆಚ್ಚಾಗುವುದು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ಯಾರದ್ದಾರೂ ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಬದಲಿಸಿ.

ಮೀನ ರಾಶಿ: ಇಂದು ಅನಾರೋಗ್ಯದಿಂದಲೇ ಹೆಚ್ಚು ಭಾಗವನ್ನು ಕಳೆಯಬೇಕಾಗಬಹುದು. ತಾಯಿಯ ಪ್ರೀತಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ಮನಸ್ಸು ನಕಾರಾತ್ಮಕ ಚಿಂತನೆಯನ್ನು ಬಿಡದು. ನಿಮ್ಮವರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ಅಂತರಂಗದಲ್ಲಿ ಬೇರೆಯದನ್ನೇ ಆಲೋಚಿಸುವರು. ನಿಮ್ಮ ನುಡಿಗಳು ಸಂಗಾತಿಗೆ ಹಿತವೆನಿಸಬಹುದು. ಮಾನಸಿಕವಾದ ನೆಮ್ಮದಿ ಇದ್ದರೂ ಭಂಗವಾಗುವ ಘಟನೆಗಳು ನಡೆಯಬಹುದು. ಯಾರ ಪ್ರೀತಿಯನ್ನಾದರೂ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಯಾವುದೇ ಹೊಸ ವಸ್ತುಗಳನ್ನು ಖರೀದಿಸುವುದು ಬೇಡ. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಬೇಡ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಯಾರನ್ನೂ ನೀವು ತಪ್ಪಾಗಿ ಗ್ರಹಿಸುವುದು ಬೇಡ. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು.

ಲೋಹಿತ ಹೆಬ್ಬಾರ್-8762924271 (what’s app only)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ