Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 23ರ ದಿನಭವಿಷ್ಯ

ಮನುಷ್ಯನ ಭವಿಷ್ಯವನ್ನು ತಿಳಿಸುವ ಮೂರು ಶಾಸ್ತ್ರಗಳೆಂದರೆ ಜ್ಯೋತಿಷ್ಯ, ಹಸ್ತರೇಖೆ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರವೇ ತಿಳಿಸುತ್ತವೆ. ಆದರೆ ಸಂಖ್ಯಾಶಾಸ್ತ್ರವು ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪಮಟ್ಟಿಗೆ ಹೆಚ್ಚುಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಯನ್ನೂ ಕೊಡುತ್ತದೆ. ಇಲ್ಲಿ ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 23 ನಿಮಗೆ ಹೇಗಿರಲಿದೆ ಎಂದು ಹೇಳಲಾಗಿದೆ. ನೀವು ಯಾವ ದಿನಾಂಕದಂದು ಜನಿಸಿದ್ದೀರಿ ಎಂಬುವುದರ ಮೇಲೆ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 23ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Jul 23, 2024 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 23ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರು ನಿಮ್ಮ ಬಗ್ಗೆ ಏನು ಹೇಳಿದರು ಎಂಬ ವಿಚಾರ ಬಹಳ ಚಿಂತೆಯ ವಿಷಯ ಆಗಲಿದೆ. ಈ ಹಿಂದೆ ಯಾರಿಗೆ ನೀವು ಸಹಾಯ ಮಾಡಿದ್ದಿರೋ ಅವರೇ ಕೆಲವು ಆಕ್ಷೇಪ, ಅಸಮಾಧಾನವನ್ನು ಹೊರ ಹಾಕಲಿದ್ದಾರೆ. ಸಿನಿಮಾರಂಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಈಗ ಕೆಲಸ ಮಾಡುತ್ತಿರುವ ಸ್ಥಳದಿಂದ ಬಹಳ ದೂರದಲ್ಲಿ ಹೋಗಬೇಕಾಗುತ್ತದೆ. ಇದು ನಿಮಗೆ ದೊಡ್ಡ ಬೆಳವಣಿಗೆಗೆ ಅವಕಾಶ ಮಾಡಿಕೊಡಲಿದೆ. ನಿಮ್ಮ ಕೈಯಲ್ಲಿ ಇರುವಂಥ ಹಣಕ್ಕೆ ಸೀಮಿತವಾದಂತೆ ಬಜೆಟ್ ಹಾಕಿಕೊಳ್ಳುವುದು ಉತ್ತಮ. ಇನ್ನು ಯಾರು ನಲವತ್ತು ವರ್ಷ ಮೇಲ್ಪಟ್ಟವರು ಇದ್ದೀರಿ, ಅಂಥವರು ಹಣಕಾಸಿನ ವಿಚಾರದಲ್ಲಿ ರಿಟೈರ್ ಮೆಂಟ್ ಯೋಜನೆಯನ್ನು ಮಾಡಲಿದ್ದೀರಿ. ಆಸ್ತಿ ಮಾರಾಟಕ್ಕೆ ಅಂತ ಇಟ್ಟಿರುವವರಿಗೆ ನಿರೀಕ್ಷೆಗಿಂತ ಹೆಚ್ಚಿನ ಮೊತ್ತ ದೊರೆಯುವ ಯೋಗ ಇದೆ. ಸೋದರ ಸಂಬಂಧಿಗಳಿಗಾಗಿ ಹೆಲ್ತ್ ಇನ್ಷೂರೆನ್ಸ್ ಮಾಡಿಸಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಬರಬೇಕಾದ ಹಣ, ಅವಕಾಶಕ್ಕೆ ಹಾಕಿದ ಪ್ರಯತ್ನವು ಫಲ ನೀಡಲಿದೆ. ಈ ಹಿಂದೆ ಭಾಗವಹಿಸಿದ್ದ ಇಂಟರ್ ವ್ಯೂದಲ್ಲಿ ಯಶಸ್ಸು ದೊರೆಯಲಿದೆ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರು ಅಥವಾ ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಲ್ಲಿ ಅದರ ಬಗ್ಗೆ ಅಪ್ ಡೇಟ್ ನಿಮಗೆ ದೊರೆಯಲಿದೆ. ಬ್ರ್ಯಾಂಡೆಡ್ ಶೂ, ಪರ್ಫ್ಯೂಮ್ ಅಥವಾ ಸನ್ ಗ್ಲಾಸ್ ಇಂಥದ್ದನ್ನು ಖರೀದಿ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಕಾರು ಅಥವಾ ದ್ವಿಚಕ್ರ ವಾಹನ ಖರೀದಿಗಾಗಿ ಹಣ ಹೊಂದಿಸುತ್ತಿದ್ದೀರಿ, ಅಂಥವರಿಗೆ ಸಾಲ ದೊರೆಯಬಹುದು ಅಥವಾ ಸ್ನೇಹಿತರು- ಸಂಬಂಧಿಕರೇ ಹಣ ನೀಡಬಹುದು. ಒಟ್ಟಿನಲ್ಲಿ ನೀವು ವಾಹನ ಖರೀದಿ ಮಾಡುವುದಕ್ಕೆ ಬೇಕಾದಂಥ ಹಣ ಹೊಂದಾಣಿಕೆ ಆಗುತ್ತದೆ. ಹೂವು- ಹಣ್ಣಿನ ವ್ಯಾಪಾರ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಹೊಸ ಜಾಗದಲ್ಲಿ ಮಳಿಗೆಯನ್ನು ತೆಗೆಯುವಂಥ ಯೋಗ ಸಹ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೋಲ್ ಸೇಲ್ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚುವರಿಯಾಗಿ ಕೆಲಸಗಾರರನ್ನು ನೇಮಕ ಸಹ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಳೇ ವಸ್ತುಗಳನ್ನು ಅಥವಾ ಸಲಕರಣೆಗಳನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದಲ್ಲಿ ಅದಕ್ಕೆ ಉತ್ತಮವಾದ ಮೌಲ್ಯ ದೊರೆಯಲಿದೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ತಮ್ಮ ಪರವಾಗಿ ಬಂದು ರಾಜೀ- ಪಂಚಾಯಿತಿ ಮಾಡಿಸಿಕೊಡಬೇಕು ಎಂದು ಇತರರ ಕರೆದರೂ ಅಂಥದ್ದಕ್ಕೆ ಹೋಗದಿರುವುದು ಕ್ಷೇಮ. ಆಸ್ತಮಾ- ಕಫ- ತೀವ್ರತರದ ಕೆಮ್ಮಿನ ಸಮಸ್ಯೆ ಎದುರಾಗಬಹುದು. ಇದಕ್ಕೆ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಿಮಗೆ ಬೇಕು ಎಂದುಕೊಂಡು ಖರೀದಿ ಮಾಡಿದ್ದ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು ಇತರರಿಗೆ ಮಾರುವಂಥ ಯೋಗ ಇದೆ. ನಿಮಗೆ ಏನು ಬೇಕು ಅಥವಾ ಬೇಡ ಎಂಬ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ನಿರ್ಧಾರವನ್ನು ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಭೂಮಿ ಅಥವಾ ಮನೆಗೆ ಸಂಬಂಧಿಸಿದ ದಾಖಲೆ- ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಹಿನ್ನಡೆ ಅಥವಾ ವಿಳಂಬ ಗತಿ ಇದ್ದಲ್ಲಿ ಅದು ನಿವಾರಣೆ ಆಗುವಂಥ ಯೋಗ ಇದೆ. ಅಯ್ಯೋ, ಬೇರೆಯವರಿಂದ ಸಹಾಯ ಕೇಳಬೇಕಾದ ಸನ್ನಿವೇಶ ಬರುತ್ತದೆಯೇ ಎಂದು ಆತಂಕಗೊಂಡಿದ್ದಲ್ಲಿ ಇತರರ ಸಹಾಯ ಇಲ್ಲದೆ ಕೆಲಸ- ಕಾರ್ಯಗಳು ಆಗುವುದಕ್ಕೆ ಬೇಕಾದದ್ದು ದೊರೆಯುವ ಅವಕಾಶ ಇದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ದೊರೆಯಲಿದೆ. ಮನೆಯಿಂದ ದೂರದಲ್ಲಿ ನಿಮ್ಮ ಹಿರಿಯರು ಇದ್ದಲ್ಲಿ ಅಥವಾ ವೃದ್ಧಾಶ್ರಮ ಅಥವಾ ಇನ್ಯಾವುದಾದರೂ ಕಡೆ ಮನೆಯ ಹಿರಿಯರನ್ನು ಬಿಟ್ಟಿದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಲಿದೆ. ಇದೇ ಕಾರಣಕ್ಕೆ ತುರ್ತಾಗಿ ಹಣದ ಅಗತ್ಯ ಕಂಡುಬರಲಿದೆ. ನಿಮ್ಮದು ಬೇಜವಾಬ್ದಾರಿ ಎಂಬ ಆಕ್ಷೇಪಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ಸಾಧ್ಯವಾದಷ್ಟೂ ಬೇಕರಿ ಪದಾರ್ಥಗಳಿಂದ ದೂರ ಇದ್ದುಬಿಡಿ. ಮೈದಾ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವನೆ ಮಾಡಿದರೂ ಅದರಿಂದಲೂ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮಲ್ಲಿ ಯಾರಿಗೆ ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅಂಥವರಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಇತರರ ಹಣದ ನಿಗಾ ಮಾಡುವ ಅಥವಾ ಆ ಹಣದ ಲೆಕ್ಕಾಚಾರದ ವ್ಯವಹಾರವನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತಾದಲ್ಲಿ ಇತರ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮದುವೆ ನಿಶ್ಚಯ ಆಗಿರುವಂಥವರಿಗೆ ಅಂದುಕೊಂಡಿದ್ದಕ್ಕಿಂತ ಖರ್ಚು ಹೆಚ್ಚಾಗುವ ಸುಳಿವು ದೊರೆಯಲಿದೆ. ಈಗಾಗಲೇ ಇದಕ್ಕಾಗಿ ಹಣ ಹೊಂದಿಸಿಕೊಂಡಿದ್ದವರಿದ್ದರೆ ಇದೀಗ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳ ವರ್ತನೆಯಿಂದ ಅವಮಾನಕ್ಕೆ ಗುರಿ ಆಗಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹಪ್ಪಳ, ಸಂಡಿಗೆ, ಚಟ್ನಿಪುಡಿ, ಹುಳಿಪುಡಿ- ಸಾರಿನಪುಡಿ ಇಂಥದ್ದನ್ನು ಮಾರಾಟ ಮಾಡುವಂಥವರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ದೊಡ್ಡ ಏರಿಕೆ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಪದೋನ್ನತಿ ದೊರೆಯಲಿದೆ. ಅದರ ಬಗ್ಗೆ ಸುಳಿವು ಸಿಗಬಹುದು. ಮನೆಯ ನವೀಕರಣಕ್ಕೆ, ಹೊಸದಾಗಿ ಕೋಣೆ ನಿರ್ಮಾಣಕ್ಕೆ, ವಾರ್ಡ್ ರೋಬ್ ಇಂಥದ್ದನ್ನು ಮಾಡಿಸುವುದಕ್ಕೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಅದಕ್ಕೆ ಮಾರ್ಗದರ್ಶನ ನೀಡಬಲ್ಲಂಥ ವ್ಯಕ್ತಿಗಳ ಪರಿಚಯ ಆಗಲಿದೆ. ಅಥವಾ ನೀವಾಗಿಯೇ ಹುಡುಕುತ್ತಿರುವಂಥ ಸಹಾಯದ ಮೂಲ ಇದಾಗಿರಲಿದೆ. ಕೃಷಿ ಜಮೀನಿನಲ್ಲಿ ಅಭಿವೃದ್ಧಿ ಕೆಲಸ ಮಾಡಿಸಬೇಕು ಅಂದುಕೊಳ್ಳುತ್ತಿರುವವರಿಗೆ ಇಷ್ಟು ಸಮಯದಲ್ಲಿ ಎದುರಾಗಿದ್ದಂಥ ಸವಾಲುಗಳಿಗೆ ಪರಿಹಾರ ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆರೋಗ್ಯ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಈ ದಿನ ನೀಡಲಿದ್ದೀರಿ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬಹುದು. ನಿಮ್ಮ ಜತೆಗೆ ಬಹಳ ಸ್ನೇಹದಿಂದ ಹಾಗೂ ಆತ್ಮೀಯತೆಯಿಂದ ಇರುವ ವ್ಯಕ್ತಿಗಳು ತಾತ್ಕಾಲಿಕವಾಗಿಯಾದರೂ ದೂರ ಹೋಗಬಹುದು. ಮನಸ್ತಾಪದ ಕಾರಣಕ್ಕಾದರೂ ಹೀಗಾಗಬಹುದು ಅಥವಾ ಔದ್ಯೋಗಿಕ ಅಥವಾ ವೈಯಕ್ತಿಕ ಕಾರಣಗಳಿಂದ ಇಬ್ಬರ ಮಧ್ಯೆ ಅಂತರ ಸೃಷ್ಟಿ ಆಗುವಂಥ ಸನ್ನಿವೇಶ ಎದುರಾಗಲಿದೆ. ಪೊಲೀಸ್, ಸಿಐಡಿ, ಸಿಬಿಐ, ಗುಪ್ತಚರ ಸಂಸ್ಥೆ ಇಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮೇಲೆ ಕೆಲವು ಆರೋಪಗಳು ಬರಬಹುದು. ಅದರಲ್ಲೂ ಮುಖ್ಯವಾಗಿ ನಿಮ್ಮ ನಿರ್ಧಾರ- ತೀರ್ಮಾನಗಳು ಅಲಕ್ಷ್ಯದಿಂದ ಬಂದಿರುವಂಥವು ಎಂಬ ಆರೋಪ ಬರಬಹುದು. ಸಾಧ್ಯವಾದಷ್ಟೂ ನಿಮ್ಮ ಜವಾಬ್ದಾರಿಯನ್ನು ಇತರರ ಮೇಲೆ ವರ್ಗಾಯಿಸುವುದಕ್ಕೆ ಹೋಗಬೇಡಿ. ನಾನು ಮಾಡಿರುವುದೆಲ್ಲವೂ ಸರಿ ಎಂಬ ವಾದ ಸಹ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8

ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಮನೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಬೇಕು ಎಂದುಕೊಂಡಿರುವವರಿಗೆ ಅದಕ್ಕೆ ಪೂರಕವಾದ ವಾತಾವರಣ ದೊರೆಯಬಹುದು. ವಸ್ತ್ರಾಭರಣಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಆಂಟಿಕ್ ಆಭರಣಗಳನ್ನು ಖರೀದಿಸುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸುವಂಥ ಸಾಧ್ಯತೆಗಳಿವೆ. ಇತರರು ತಮ್ಮಿಂದ ಆದ ತಪ್ಪನ್ನು ಹೇಳಿಕೊಂಡು, ಅದರಿಂದ ಆಗಬಹುದಾದ ಸಮಸ್ಯೆಗಳಿಂದ ಕಾಪಾಡುವಂತೆ ನಿಮ್ಮನ್ನು ಕೇಳಿಕೊಂಡು ಬರಬಹುದು. ತಾಯಿಯ ಕಡೆ ಸಂಬಂಧಿಕರು ಹಣಕಾಸಿನ ನೆರವನ್ನು ಕೇಳಿಕೊಂಡು ಬರಬಹುದು. ಒಟ್ಟಿನಲ್ಲಿ ನಿಮ್ಮ ಕೈ ಅಳತೆಯ ವ್ಯಾಪ್ತಿಯಲ್ಲಿ ಇತರರಿಗೆ ಸಹಾಯ ಮಾಡಲೇಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ನಿಮ್ಮ ಪದ ಬಳಕೆಯಿಂದ ಎದುರಿಗೆ ಇರುವಂಥ ವ್ಯಕ್ತಿಯ ಮನಸ್ಸಿನಲ್ಲಿ ಉದ್ಭವಿಸಬಹುದಾದ ಭಾವನೆ ಏನು ಎಂಬುದರ ಅಂದಾಜು ಇರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಪಾದದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಮಧುಮೇಹದಂಥ ಸಮಸ್ಯೆಯಿಂದ ಬಳಲುತ್ತಿರುವವರು ಸರಿಯಾದ ಔಷಧೋಪಚಾರ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇತರರ ಕಣ್ಣಲ್ಲಿ ಬಹಳ ಸಭ್ಯ ಎಂಬ ರೀತಿಯಲ್ಲಿ ವರ್ತಿಸುವಂಥ ವ್ಯಕ್ತಿಯೊಬ್ಬರು ನಿಮ್ಮ ಜತೆಗೆ, ಅದರಲ್ಲೂ ಹೆಣ್ಣುಮಕ್ಕಳಾಗಿದ್ದಲ್ಲಿ ನಿಮ್ಮ ಜತೆಗೆ ಅನುಚಿತವಾಗಿ ವರ್ತಿಸುವ, ಮಾತನಾಡುವ ಸಾಧ್ಯತೆ ಇದೆ. ಇದನ್ನು ನೀವು ಹೇಳಿದರೂ ಇತರರು ಅದನ್ನು ಒಪ್ಪುವ ಸ್ಥಿತಿಯಲ್ಲಿ ಇರುವುದಿಲ್ಲ. ಆದ್ದರಿಂದ ಇಂಥ ಸನ್ನಿವೇಶ ಎದುರಾದಲ್ಲಿ ಹೇಗೆ ಎದುರಿಸಬೇಕು ಹಾಗೂ ಅಂಥವರನ್ನು ಬಣ್ಣವನ್ನು ಹೇಗೆ ಬಯಲು ಮಾಡಬೇಕು ಎಂಬ ಬಗ್ಗೆ ಸರಿಯಾದ ಯೋಚನೆಯನ್ನು ಇಟ್ಟುಕೊಳ್ಳಿ. ವಿದೇಶಗಳಲ್ಲಿ ಉದ್ಯೋಗ ಅಥವಾ ವ್ಯಾಸಂಗಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಅದರಲ್ಲಿ ಯಶಸ್ಸು ಕಾಣಬಹುದು. ಇನ್ನು ಇದೇ ಉದ್ದೇಶಕ್ಕೆ ಹಣಕಾಸು ಹೊಂದಿಸುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!