Daily Horoscope 6 August 2024: ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಸಾಧ್ಯವಾಗದು, ವ್ಯವವಹರಿಸುವಾಗ ಎಚ್ಚರವಾಗಿರಿ

ಆಗಸ್ಟ್​ 6,​​ 2024ರ​​ ನಿಮ್ಮ ರಾಶಿಭವಿಷ್ಯ:ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಹಾಯವನ್ನು ಯಾರಾದರೂ ಕೇಳಿಬರಬಹುದು. ಒಂಟಿಯಾಗಿ ಇರಲು ನೀವಿಂದು ಇಷ್ಟಪಡಬಹುದು. ಭೂಮಿಯ ಕಲಹವು ತಾತ್ಕಾಲಿಕವಾಗಿ ನಿಲ್ಲಬಹುದು. ನಿರೀಕ್ಷಿತ ಕಾರ್ಯದಲ್ಲಿ ವಿಘ್ನವು ಉಂಟಾಗಲಿದೆ. ಹಾಗಾದರೆ ಆಗಸ್ಟ್​ 6ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 6 August 2024: ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಸಾಧ್ಯವಾಗದು, ವ್ಯವವಹರಿಸುವಾಗ ಎಚ್ಚರವಾಗಿರಿ
ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಸಾಧ್ಯವಾಗದು, ವ್ಯವವಹರಿಸುವಾಗ ಎಚ್ಚರವಾಗಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2024 | 12:02 AM

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯ, ನಿತ್ಯನಕ್ಷತ್ರ: ಮೆಘಾ, ಯೋಗ: ವರಿಯಾನ್​, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:58 ಗಂಟೆ, ರಾಹು ಕಾಲ ಮಧ್ಯಾಹ್ನ 03:49 ರಿಂದ 05:24, ಯಮಘಂಡ ಕಾಲ 09:28 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಹ್ನ 12:38 ರಿಂದ ಸಂಜೆ 04:13ರ ವರೆಗೆ.

ಮೇಷ ರಾಶಿ: ಆಸ್ತಿಯ ಬಗ್ಗೆ ಕಾನೂನಾತ್ಮಕವಾಗಿ ಇರಬೇಕಾಗುವುದು. ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ.‌ ಸಮೂಹದಲ್ಲಿ ಇರುವಾಗ ಎಲ್ಲರ ಮಾತಿಗೂ ಬೆಲೆ ಕೊಡಬೇಕಾಗುವುದು. ಒಂದು ಉದ್ಯೋಗದಲ್ಲಿ ಮನವು ಸ್ಥಿರವಾಗಿರಲಿ. ಅವಮಾನವಂತೆ ಕಂಡರೆ ಅಲ್ಲಿಂದ ದೂರನಡೆಯಿರಿ.‌ ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಬಹುದು. ಸ್ನೇಹಕ್ಕೆ ಅನುಗುಣವಾಗಿ ನಿಮ್ಮ ಪ್ರತ್ಯುಪಕಾರವಿರಲಿದೆ. ಅಪರಿಚಿತರನ್ನು ಮಾತಿನಿಂದ ಹತ್ತಿರ ಮಾಡಿಕೊಳ್ಳುವಿರಿ. ಧನಾಗಮನದ ನಿರೀಕ್ಷೆಯಲ್ಲಿ ನೀವಿರುವಿರಿ. ಸತ್ಯಾಸತ್ಯತೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗದೇ ಇದ್ದೀತು. ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಇನ್ಮೊಬ್ಬರ ಗೆಲುವಿಗೂ ಸಂತೋಷಪಡುವುದು ಮುಖ್ಯವಾಗಿರಲಿ.

ವೃಷಭ ರಾಶಿ: ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಆರೋಪದ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗದುಕೊಳ್ಳಲಾರಿರಿ. ಆಕಸ್ಮಿಕ ಧನದಿಂದ ಸಂತೋಷವಾಗಲಿದೆ. ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಅಸಾಧ್ಯ. ಅಂತಸ್ಸತ್ತ್ವವನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಸಂಗಾತಿಯ ಮಾತನ್ನು ನೀವು ನಿರಾಕರಿಸಿದ ಕಾರಣ ಸಿಟ್ಟಾಗುವ ಸಾಧ್ಯತೆ ಇದೆ. ನೀವು ಇಂದು ಮಿತ ಬಳಕೆಯನ್ನು ಇಷ್ಟೊಡವಹುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ. ಬೇಕಾದಾಗ ಬಳಸಿಕೊಳ್ಳುವ ಪ್ರವೃತ್ತಿಯನ್ನು ಬಿಡುವುದು ಉತ್ತಮ. ಧಾರ್ಮಿಕ ವಿಚಾರದಲ್ಲಿ ನಂಬಿಕೆ ಅಧಿಕವಾಗುವುದು.

ಮಿಥುನ ರಾಶಿ: ಅಧಿಕಾರವನ್ನು ನಡೆಸಲು ಕೇವಲ ಬುದ್ಧಿ ಜ್ಞಾನ ಸಾಲದು. ಎದೆಗಾರಿಕೆ ಹಾಗೂ ತಂತ್ರವೂ ಬೇಕು. ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು.‌ ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು. ನಿಮ್ಮ ಮಾತನ್ನು ಯಾರೂ ಕೇಳದೇಹೋಗಬಹುದು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಅವರಿಗೆ ಬೇಕಾದುದನ್ನು ಕೊಡುವಿರಿ. ದೂರಪ್ರಯಾಣವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ವ್ಯವಹಾರವನ್ನು ಮಾಡುವಾಗ ಜಾಗರೂಕತೆ ಇರಲಿ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು. ಯಾರು ಏನೇ ಮಾಡಿದರೂ ನಿಮ್ಮ ನಿರ್ಧಾರ ಬದಲಾಗದು. ನಿಮ್ಮ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ.

ಕರ್ಕಾಟಕ ರಾಶಿ: ಮೇಲಧಿಕಾರಿಗಳಿಂದ ನಿಮಗೆ ಒತ್ತಡ ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯವನ್ನೂ ಗಮನಿಸುವರು. ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು.‌ ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ. ಅತಿಯಾದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ಆಹಾರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭವಿದೆ. ವಿವಾಹವು ನಿಮಗೆ ವಿಳಂಬ ಎಂದು ಕೇಳುವುದು ಬೇಸರ ತರಿಸಬಹುದು. ಶತ್ರುಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳುವುದು ಸರಿಯಲ್ಲ. ಈ ದಿನ ಬೇಸರ ಎನಿಸಿದರೆ ಹೊರಗೆ ಒಂಟಿಯಾಗಿ ಸುತ್ತಾಡಿ ಬನ್ನಿ.‌ ಅಪರಿಚಿತರ ನಂಬಿ ವ್ಯವಹಾರವನ್ನು ಮಾಡಲು ಯೋಜಿಸುವುದು ಬೇಡ. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು.

ಸಿಂಹ ರಾಶಿ: ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಹೊಸ ಉದ್ಯಮಕ್ಕೆ ಬಂಡವಾಳ ಹಾಕುವುದು ಸದ್ಯ ಮುಂದುವರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ‌ ಪ್ರಿಯವಾದ ಸಂಗತಿಯಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯ ಕೊರತೆ ಹೆಚ್ಚು ಕಾಣುವುದು. ಇನ್ನೊಬ್ಬರ ಸಹಾಯವನ್ನೇ ಎಲ್ಲದಕ್ಕೂ ನಿರೀಕ್ಷಿಸುವಿರಿ. ಇನ್ನೊಬ್ಬರ ಮೇಲೆ‌ ನಿಮಗೆ ಬಹಳ‌ ಅಕ್ಕರೆ‌ ಉಂಟಾಗಬಹುದು. ಸಹೋದರಿಯ ಆನಾರೋಗ್ಯದಲ್ಲಿ ನೀವು ಬಹಳ ಶ್ರಮವಿಸುವಿರಿ. ಪ್ರೇಮದಲ್ಲಿ ಸಭ್ಯತೆ ಇರಲಿ. ಒತ್ತಡಗಳಿಗೆ ಸಿಲುಕಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವರು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು.

ಕನ್ಯಾ ರಾಶಿ: ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ.‌ ನೀವಿಂದು ಖರ್ಚಿನ ವಿಚಾರಕ್ಕೆ ಯಾವ ಹಿಂಜರಿಕೆಯನ್ನೂ ಇಟ್ಟಕೊಂಡಿರುವುದಿಲ್ಲ.‌ ಆಗಬೇಕಾದ ಕಾರ್ಯಗಳು ಹಲವಿದ್ದರೂ ನಿಮಗೆ ಅದರ ಲಕ್ಷ್ಯವಿರದು. ಮಕ್ಕಳ‌ ಜೊತೆ ಹರಟೆ ಹೊಡೆಯುತ್ತ ನಿಮ್ಮ‌ ಕಾಲವನ್ನು ಸಂತೋಷದಿಂದ‌‌ ಕಳೆಯುವಿರಿ. ನಿಮ್ಮಲ್ಲಿ‌ ಒಂದು ರೀತಿ ನೆಮ್ಮದಿಯು ಸಹಜವಾಗಿ ಉತ್ಪತ್ತಿಯಾಗಲಿದೆ. ನಿಮ್ಮ ವರ್ತನೆಯನ್ನು ಗಮನಿಸುತ್ತಿರಬಹುದು. ವೈದ್ಯವೃತ್ತಿಯನ್ನು ಬಹಳ ನಾಜೂಕಾಗಿ ಮಾಡಬೇಕಾಗುವುದು. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು.

ತುಲಾ ರಾಶಿ: ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ನಿಮ್ಮ‌ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು‌. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ ಕಾಣಿಸುವುದು. ನೀವು ನಡೆಸುವ ಉದ್ಯಮವೂ ಸದ್ಯ ವೇಗವನ್ನು ಕಳೆದುಕೊಳ್ಳಬಹುದು. ನೀವು ಮನೆಯಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಯಾರದೋ ಅನುಕಂಪವನ್ನು ಪಡೆಯಲು ನೀವು ಪ್ರಯತ್ನಿಸುವಿರಿ. ನಿಮ್ಮದಾದ ಕೆಲವು ಆಚರಣೆಗಳನ್ನು ನೀವು ಬಿಡದೇ ಮಾಡುವಿರಿ. ಪಕ್ಷಪಾತ ಧೋರಣೆಯನ್ನು ನೀವು ಬಿಟ್ಟರೆ ಮಾತ್ರ ಒಳ್ಳೆಯದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ. ಯಾರದೋ ಒತ್ತಡದಿಂದ ಮನಸ್ಸು ವಿಚಲಿತವಾಗಬಹುದು.

ವೃಶ್ಚಿಕ ರಾಶಿ: ಉದ್ಯೋಗದಿಂದ ಹೊರಬಂದು ಮನೆಯ ಬಗ್ಗೆ ಗಮನ ಹೆಚ್ಚಾಗುವುದು. ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ನೀವು ಇಂದು ಕುಟುಂಬದ ವೃತ್ತಿಯಲ್ಲಿ ಮುಂದುವರಿಯುವ ಆಸೆ ಬರುವುದು. ಅಧಿಕ ಖರ್ಚು ನಿಮ್ಮನ್ನು ಚಿಂತೆಗೆ ತಳ್ಳಬಹುದು. ಇಂದು ನೀವು ದೂರ ಪ್ರಯಾಣವನ್ನು ಇಷ್ಟಪಡುವಿರಿ. ದೈವದ ಸ್ಮರಣೆಯನ್ನು ಮಾಡಿ‌ ನೀವು ಮುಂದುವರಿಯುವುದು ಒಳ್ಳೆಯದು. ಮೇಲಧಿಕಾರಳಿಂದ‌ ಉದ್ಯೋಗದ ವರದಿ ನೀಡಲು ಆದೇಶ ಬರಬಹುದು.‌ ಉತ್ತಮ ಹವ್ಯಾಸದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ.

ಧನು ರಾಶಿ: ಆದಾಯದಲ್ಲಿ ಹಿನ್ನಡೆ ಆಗುವುದು. ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಇಂದಿನ ಕೆಲವು ಅಂಶಗಳು ನಿಮಗೆ ಪಾಠವಾಗಲಿವೆ. ನೀವು ಇಂದು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರುವಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯ.‌ ಪ್ರೀತಿಯಿಂದ ಅವರ ಜೊತೆ ಬರೆಯಿರಿ. ನಿಮ್ಮ ಮನಸ್ಸೂ ಹಗುರಾದೀತು. ವಿದ್ಯಾರ್ಥಿಗಳಿಗೆ ಓದಿನ ಆಸಕ್ತಿಯನ್ನು ತೋರಿಸಲು ಪೋಷಕರು ಶ್ರಮಿಸುವರು. ಅನಿರೀಕ್ಷಿತ ವಾಹನ ದುರಸ್ತಿಯಿಂದ ಧನನಷ್ಟವಾಗಲಿದೆ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿಯದು.

ಮಕರ ರಾಶಿ: ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸರ್ಕಾರಿ ದಾಖಲೆಗಳನ್ನು ನೀವು ಜೋಪಾನ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು. ನಿಮಗೆ ಹೇಳಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡುವಿರಿ. ಬಂಧುಗಳನ್ನು ನೀವು ಭೇಟಿ ಮಾಡುವ ಸಂದರ್ಭವು ಬರಬಹುದು. ನಿಮ್ಮ‌ ನಿಯಮ ಪಾಲನೆ ನಿಮಗೆ ಖುಷಿ ಕೊಟ್ಟೀತು. ನಿಮ್ಮ ಕಾರ್ಯಗಳಿಗೆ ಬಂಧುಗಳ ಸಹಕಾರ ಸಿಗಲಿದೆ.‌ ಕಾನೂನಿನ ವ್ಯವಹಾರವು ನಿಮಗೆ ಬೇಸರ ತರಿಸಬಹುದು. ಸಂಗಾತಿಯನ್ನು ನೀವು ಖುಷಿ‌ಪಡಿಸಲು ಪ್ರಯತ್ನಿಸುವಿರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಸಂಗಾತಿಯನ್ನು ಮನವೊಲಿಸುವುದು ನಿಮಗೆ ಕಷ್ಟವಾಗಿ, ಸಿಟ್ಟುಗೊಳ್ಳಬೇಕಾಗುವುದು.

ಕುಂಭ ರಾಶಿ: ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಅಗ್ನಿ, ವಿದ್ಯುತ್ ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಹೊಸಬರನ್ನು ನೀವು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಒತ್ತಡದ ವಾತಾವರಣವನ್ನು ನೀವು ನಿಭಾಯಿಸಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವ ಸಾಧ್ಯತೆ ಇದೆ. ಸಾಮಾಜಿಕ ರಂಗದಲ್ಲಿ ನೀವು ಕಲಿಯುವ ಪಾಠವು ಇರಲಿದೆ. ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ನೀವು ಹೇಳಿದ್ದನ್ನು ಬಂಧುಗಳು ಮಾಡಿಕೊಡುವರು.

ಮೀನ ರಾಶಿ: ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ಧಾರ್ಮಿಕ ಕಾರ್ಯಗಳಿಂದ ಉತ್ತಮ‌ ಯಶಸ್ಸು ಪ್ರಾಪ್ತಿಯಾಗುವುದು. ನಿಮಗೆ ತೋರಿದ ಪ್ರೀತಿಯನ್ನು ಉಳಿಸಿಕೊಳ್ಳಬೇಕಾಗುವುದು. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ. ಆರೋಗ್ಯವು ಹದವು ತಪ್ಪಬಹುದು. ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಹಾಯವನ್ನು ಯಾರಾದರೂ ಕೇಳಿಬರಬಹುದು. ಒಂಟಿಯಾಗಿ ಇರಲು ನೀವಿಂದು ಇಷ್ಟಪಡಬಹುದು. ಭೂಮಿಯ ಕಲಹವು ತಾತ್ಕಾಲಿಕವಾಗಿ ನಿಲ್ಲಬಹುದು. ನಿರೀಕ್ಷಿತ ಕಾರ್ಯದಲ್ಲಿ ವಿಘ್ನವು ಉಂಟಾಗಲಿದೆ. ಮೊಂಡು ಧೈರ್ಯವನ್ನು ಮಾಡುವುದು ಬೇಡ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಾಟದಿಂದ ನೀವು ಸಿಟ್ಟಾಗುವಿರಿ. ಯಂತ್ರೋಪಕರಣಗಳ ಮಾರಾಟಗಾರರಿಗೆ ಉತ್ತಮ‌ ಲಾಭ.

ಲೋಹಿತ ಹೆಬ್ಬಾರ್-8762924271 (what’s app only)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ