ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:58 ಗಂಟೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 14:13, ಯಮಘಂಡ ಕಾಲ 07:54 ರಿಂದ 09:28ರ ವರೆಗೆ, ಗುಳಿಕ ಕಾಲ 11:03 ರಿಂದ ಸಂಜೆ 12:38ರ ವರೆಗೆ.
ಮೇಷ ರಾಶಿ : ಸ್ವಾವಲಂಬಿಯಾಗುವ ಬಗ್ಗೆ ಚಿಂತನೆ ನಡೆಸುವಿರಿ. ನೀವು ಈಗಲೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಿಲ್ಲ. ಎಲ್ಲದಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು ನೀವು ವಿಳಂಬ ಆಗಬಹುದು. ಇನ್ನೊಬ್ಬರ ತಪ್ಪನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನೀವು ಇರಲಾರಿರಿ. ನಿಮ್ಮ ವಿವೇಚನಾ ಶಕ್ತಿಯು ಕೆಲಸ ಮಾಡಲಿ. ದಾರಿಯನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಗಳನ್ನು ಎದುರಿಸುವುದು ನಿಮಗೆ ಸಹಜ ಕೆಲಸವಾಗಿದೆ. ಜೀವನ ಪರೀಕ್ಷೆಯನ್ನೂ ಜೀವನಕ್ಕೆ ಬೇಕಾದ ಪರೀಕ್ಷೆಯನ್ನೂ ನೀವು ಎದುರಿಸುವಿರಿ. ನಿಮ್ಮ ಪ್ರೇಮಿಗೆ ಅಚ್ಚರಿಯ ಉಡುಗೊರೆ ನೀಡಲು ಇಂದು ಸೂಕ್ತ ದಿನ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ. ನಿಮ್ಮನ್ನು ನಂಬಿದವರಿಗೆ ಕಿಂಚಿತ್ ಸಹಾಯವನ್ನು ಮಾಡಬೇಕಾಗುವುದು.
ವೃಷಭ ರಾಶಿ : ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಎಲ್ಲ ಶರತ್ತುಗಳಿಗೂ ಸರಿಯಾದ ನಿಬಂಧನೆ ಇರಲಿ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಸಾಹಸ ಮಾಡಲು ಹೋಗುವಾಗ ಎಚ್ಚರವಿರಲಿ. ಮುಖಭಂಗ ಮಾಡಿಕೊಂಡು ಬರಬೇಕಾದೀತು. ಆಪ್ತರಿಂದ ಧನವನ್ನು ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸವನ್ನು ನೀವು ಅನ್ಯರ ಒತ್ತಾಯಕ್ಕೆ ಮಾಡುವಿರಿ. ಗೊತ್ತಿಲ್ಲ ಕೆಲಸವನ್ನು ಕಲಿತು ಸಾಧಿಸಿದ್ದು ನಿಮಗೆ ಹೆಮ್ಮೆಯಾಗಲಿದೆ. ಸ್ವಂತಿಕೆಯ ವಿಚಾರದಲ್ಲಿ ನಿಮಗೆ ಗೊಂದಲವೆನಿಸುವುದು. ಜಾಣ್ಮೆಯಿಂದ ನೀವು ಬೇರೆಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ನಿಮ್ಮ ಕಾರ್ಯಗಳು ಹಿನ್ನೆಲೆಗೆ ಹೋಗುವ ಸಾಧ್ಯತೆ ಇದೆ.
ಮಿಥುನ ರಾಶಿ : ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಧಿಕಾರಿಗಳ ಭೇಟಿಯಿಂದ ಆದಾಯವು ಚಿಂತಿಸಿದ ಮಟ್ಟದಲ್ಲಿದ್ದರೂ ಖರ್ಚು ಅದಕ್ಕಿಂತಲೂ ಹೆಚ್ಚಾಗಲಿದೆ. ನೀವು ಇಂದು ವೃತ್ತಿಯನ್ನು ಆನಂದಿಸುವಿರಿ. ದೇಹದ ಕೆಲವು ಭಾಗಗಳಲ್ಲಿ ತಾತದ ಕಾರಣದಿಂದ ನೋವುಗಳು ಕಾಣಿಸಬಹುದು. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಸೋಲಬಹುದು. ಯಾರೋ ನೀಡಿದ ವಸ್ತುಗಳನ್ನು ಉಪಯೋಗಿಸುವಾಗ ಹಿಂದೇಟು ಹಾಕುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ.
ಕರ್ಕಾಟಕ ರಾಶಿ : ನಿಮಗೆ ಬೇರೆ ಕಡೆಗಳಿಂದ ಬರಬೇಕಾದ ಹಣವು ಆಕಸ್ಮಿಕವಾಗಿ ಬರಲಿದೆ. ನಿಮ್ಮ ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇಂದು ನೀವು ಹೆಚ್ಚು ಶೋಕಿ ಮಾಡಲು ಇಷ್ಡಪಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ಕೊಟ್ಟರೂ ಕೊಡದಿದ್ದರೂ ಮನಸ್ತಾಪ ಏಳಬಹುದು. ಯೋಗ್ಯ ವಿವಾಹಸಂಬಂಧವು ಬರಬಹುದು. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಇಸುವ ನಿರೀಕ್ಷೆಯಿದೆ.
ಸಿಂಹ ರಾಶಿ : ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ. ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಆಸ್ತಿಯ ಮಾರಾಟಕ್ಕೆ ಮಾಡಿದ ಪ್ರಯತ್ನ ಸಫಲವಾಗಲಿದೆ. ದಾಂಪತ್ಯದಲ್ಲಿ ಪ್ರೀತಿ ಬೆಳೆಯಲು ಇಬ್ಬರ ಸಹಕಾರ ಅಗತ್ಯ. ಅದು ವಿಪರೀತ ಪರಿಣಾಮವನ್ನು ಉಂಟುಮಾಡೀತು. ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ನಿಭಾಯಿಸುವಿರಿ. ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರುವುದು ಉಚಿತ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು.
ಕನ್ಯಾ ರಾಶಿ : ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಎಷ್ಟೇ ಎಚ್ಷರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸುವಿರಿ. ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ಹಣವನ್ನು ಸಾಲವಾಗಿ ಪಡೆದು, ಮರಳಿ ಕೊಡಲು ಆಗದೇಹೋಗಬಹುದು. ಪುಣ್ಯ ಕೆಲಸದಲ್ಲಿ ನೀವು ಹೆಚ್ಚು ಭಾಗಿಯಾಗುವಿರಿ. ಖರ್ಚನ್ನು ನೀವು ನಿಯಂತ್ರಣ ಮಾಡುವ ಅವಶ್ಯಕತೆ ಇಂದು ಬರಬಹುದು. ಅನಗತ್ಯ ಖರ್ಚಿನಿಂದ ಮನಸ್ಸು ಸ್ವಲ್ಪ ವಿಚಲಿತವಾಗಬಹುದು. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.
ತುಲಾ ರಾಶಿ : ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಹೆಚ್ಚುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುವುದು. ದೀರ್ಘಕಾಲದ ನೋವನ್ನು ಕಡಿಮೆ ಮಾಡಿಕೊಳ್ಳಲು ಇಂದು ಪ್ರಯತ್ನಿಸುವಿರಿ. ವೈದ್ಯವೃತ್ತಿಯಲ್ಲಿ ತೊಡಗಿದ್ದರೆ ನಿಮಗೆ ಕೆಟ್ಟ ವಾರ್ತೆಯು ಬರಬಹುದು. ನೌಕರರ ನೋವನ್ನೂ ಕೇಳಬೇಕಾಗಬಹುದು. ಉದ್ಯಮದಲ್ಲಿ ಹೊಸ ರೀತಿಯ ಲಾಭಾವನ್ನು ಪಡೆಯಲು ಆಲೋಚಿಸುವಿರಿ. ಮಾನಸಿಕ ಒತ್ತಡವು ನಿಮ್ಮ ಕೆಲಸಗಳನ್ನು ಹಾಳು ಮಾಡೀತು. ದಾಂಪತ್ಯದಲ್ಲಿ ಸಣ್ಣ ವಿರಸವು ಉಂಟಾಗಬಹುದು. ತಾಳ್ಮೆ ತಪ್ಪಿ ಆಡಿದ ಮಾತಿಗೆ ಪಶ್ಚಾತ್ತಾಪ ಪಡಬೇಕಾದೀತು. ಉತ್ತಮಭೋಜನವು ನಿಮಗೆ ಇಂದು ಸಿಗಲಿದೆ. ಭೋಗವಸ್ತುಗಳನ್ನು ಖರೀದಿಸಿ ಹಣವನ್ನು ವ್ಯರ್ಥಮಾಡುವಿರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು.
ವೃಶ್ಚಿಕ ರಾಶಿ : ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಇನ್ನೊಬ್ಬರನ್ನು ಸೋಲಿಸುವ ಯೋಚನೆಯಲ್ಲಿ ನೀವು ಇರುವಿರಿ. ನೀವು ಇಂದು ಅಪ್ರಯೋಜಕ ವಿಷಯಗಳ ಕುರಿತು ಹೆಚ್ಚು ಚರ್ಚೆ ಮಾಡುವಿರಿ. ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ನಿಮ್ಮ ಗುರಿಗಳು ಬದಲಾದಷ್ಟೂ ನಿಮ್ಮ ಶ್ರಮವೂ ವ್ಯರ್ಥವಾಗಬಹುದು. ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವ ಮನಸ್ಸಿದ್ದರೂ ಆತ್ಮೀಯತೆಯು ನಿಮ್ಮ ನಿಲುವನ್ನು ಬದಲಿಸಬಹುದು. ನಿಮ್ಮನ್ನು ನಿಮ್ಮವರಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಬರಬಹುದು. ಹಳೆಯ ಸ್ನೇಹಿತೆಯ ಭೇಟಿಯಾಗಿ ಮಾತುಕತೆ ನಡೆಸುವಿರಿ. ನಂಬಿಕೆಯನ್ನು ಮೋಸವಾಗಬಹುದು. ಅನಾರೋಗ್ಯದಿಂದ ನಿಮ್ಮ ಯೋಜಿತ ಕಾರ್ಯಗಳು ವ್ಯತ್ಯಾಸವಾಗಬಹುದು. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಕಳೆದುದರ ಬಗ್ಗೆ ಮಾತನಾಡುವುದು ಇಷ್ಟವಾಗದು.
ಧನು ರಾಶಿ : ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮಷ್ಟಕ್ಕೆ ನೀವು ಇರಿ. ಇಂದು ನಿಮ್ಮ ಸುತ್ತಲು ವಿರೋಧಿಗಳು ಹೊಂಚು ಹಾಕಿ ನಿಮ್ಮ ಅವನತಿಯನ್ನುವ ಕಾಯುತ್ತಿರಬಹುದು. ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ಮಕ್ಕಳ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ಭೂಸ್ವಾದೀನ ಮಾಡಿಕೊಳ್ಳುವಲ್ಲಿ ಎಡವಬಹುದು. ಸುಳ್ಳಿನಿಂದ ಇಂದು ನಿಮ್ಮ ವ್ಯಕ್ತಿತ್ವಕ್ಕೆ ತೊಂದರೆ ಆದೀತು. ವಿಶೇಷವಾದ ವಸ್ತುವನ್ನು ಕೊಳ್ಳುವ ವಿಚಾರದಲ್ಲಿ ಮೋಸ ಹೋಗುವಿರಿ. ದೇವರಲ್ಲಿ ಶುದ್ಧ ಮನಸ್ಸಿಂದ ಜಪಮಾಡಿ. ವಾಹನದಿಂದ ಲಾಭವನ್ನು ಪಡತುವಿರಿ. ಅತಿಯಾದ ವೇಗ ಬೇಡ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು.
ಮಕರ ರಾಶಿ : ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಈ ದಿನವನ್ನು ಕಳೆಯಲು ನಿಮಗೆ ಕಷ್ಟವಾಗುವುದು. ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ಸ್ವಂತ ಉದ್ಯೋಗವಿದ್ದರೆ ಜನರು ವಂಚಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಾರದು. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳವರೆಗೆ ಮನೆಯಿಂದ ದೂರವಿರಬೇಕಾಗುವುದು. ಅಧಿಕ ಶ್ರಮದಿಂದ ದೈಹಿಕ ಮಾನಸಿಕ ಆಘಾತವಾಗಲಿದೆ. ಇದೇ ನಿಮಗೆ ಇಷ್ಟದ ವಿಚಾರವಾಗಿದೆ. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು. ನೀವು ಎಲ್ಲರ ಜೊತೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಡವಾಗಬಹುದು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. ನಿಮ್ಮ ನೀವು ಪೂರ್ಣವಾಗಿ ನಂಬಲಾರಿರಿ.
ಕುಂಭ ರಾಶಿ : ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ನೀವು ಉತ್ತಮ ಸ್ನೇಹಿತರ ಬಳಗವನ್ನು ಹೊಂದಿರುವಿರಿ. ವೃತ್ತಿ ಜೀವನದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಬಹಳ ದಿನಗಳಿಂದ ನಿಂತ ಕಾರ್ಯಕ್ಕೆ ಚಾಲನೆ ಸಿಗಲಿದೆ. ವಿವಾಹದ ಮಾತುಕತೆ ವಿಳಂಬವಾಗಿ ನಿಮಗೆ ಬೇಸರ ತರಿಸಬಹುದು. ಲೆಕ್ಕಪತ್ರ ವಿಷಯದಲ್ಲಿ ನೀವು ಹಿಂದುಳಿಯುವಿರಿ. ಸಭೆಯಲ್ಲಿ ನಿಮ್ಮನ್ನು ಗೌರವಿಸಬಹುದು. ವಾಹನದಲ್ಲಿ ನೀವು ಪ್ರಯಾಣ ಮಾಡಲು ನಿಮಗೆ ಕಷ್ಟವಾದೀತು. ಸಿಗದುದರ ಬಗ್ಗೆ ಬಹಳ ಆಲೋಚನೆ ಬೇಡ. ನಿಮ್ಮ ಇಷ್ಟದವರ ಭೇಟಿಯಾಗಲಿದೆ. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ವೃದ್ಧಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
ಮೀನ ರಾಶಿ : ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಸಹೋದರರ ನಡುವೆ ಮನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು. ನೀವು ಇಂದು ಸಂಪನ್ಮೂಲ ವ್ಯಕ್ತಿಳಾಗಿ ನೀವು ಇರುವಿರಿ. ಇಷ್ಟವಾದ ವಸ್ತುಗಳ ಖರೀದಿಯಲ್ಲಿ ಅಶಕ್ತಿ ಅಧಿಕವಾಗುವುದು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನೀವೇ ನಿರ್ಮಿಸುವಿರಿ. ಸರ್ಕಾರದ ಕೆಲಸದಲ್ಲಿ ಇರುವವರಿಗೆ ತೊಂದರೆ. ಅತಿಯಾದ ಕೋಪವು ಕಡಿಮೆಯಾದರೂ ನಷ್ಟವಾಗಬಹುದು. ಸಂಬಂಧವಿಲ್ಲದ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಇರುವುದು. ಹೆಚ್ಚು ಶ್ರವಹಿಸಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸುತ್ತದೆ.
-ಲೋಹಿತ ಹೆಬ್ಬಾರ್-8762924271 (what’s app only)