ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಪ್ರೀತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:55 ರ ವರೆಗೆ, ಗುಳಿಕ ಕಾಲ 09:28 ರಿಂದ ಬೆಳಿಗ್ಗೆ 11:01ರ ವರೆಗೆ.
ಮೇಷ ರಾಶಿ : ಇಂದು ನಿಮಗೆ ನಿಮ್ಮದೇ ಆದ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ನಿಮಗೆ ಅನ್ನಿಸದೇಹೋಗಬಹುದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ದುಡುಕಿ ಏನನ್ನಾದರೂ ಮಾಡಿಕೊಳ್ಳುವಿರಿ. ಪತ್ನಿಯ ಜೊತೆ ಸುಖದಿಂದ ಕಾಲವನ್ನು ಕಳೆಯುವಿರಿ. ಸಂಬಂಧಿಕರ ಆಗಮನವಾಗಲಿದೆ. ಕೃಷಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಸಮಾರಂಭಗಳಿಗೆ ಹೋಗಿ ಒಂದಿಷ್ಟು ಹರಟೆ ಹೊಡೆದು ಬರುವ ಎಂಬ ಮನಸ್ಸಿರುತ್ತದೆ. ಉದಾಸೀನತೆಯು ನಿಮ್ಮನ್ನು ಮುತ್ತಲಿದೆ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಬೆಂಕಿಯ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಉದ್ಯಮದಲ್ಲಿ ಏನಾದರೂ ಏರಿಳಿತಗಳು ಆಗಬಹುದು.
ವೃಷಭ ರಾಶಿ : ಇಂದು ವ್ಯಾವಹಾರಿಕವಾಗಿ ಮನಶ್ಚಾಂಚಲ್ಯ ನಿಮ್ಮನ್ನು ಅನೇಕ ವಿಧವಾಗಿ ಕಾಡಬಹುದು. ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಇರಬೇಕಾಗಿಬರಬಹುದು. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವಿರಿ. ಇಂದು ನಿಮಗೆ ಪುಣ್ಯಸ್ಥಳಕ್ಕೆ ಹೋಗುವ ಆಸೆ ಇದ್ದರೂ ಅದನ್ನು ಪೂರೈಸಿಕೊಳ್ಳಲಾಗದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಂಡು ನೋವಾಗುವುದು.
ಮಿಥುನ ರಾಶಿ : ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಮನಸ್ಸಾಗುವುದು. ಮನೆಯಿಂದ ದೂರ ಹೋಗುವಾಗ, ಕಛೇರಿಗೆ ಹೋಗುವಾಗ ದೇವರಿಗೆ ನಮಸ್ಕರಿಸಿ ಮುನ್ನಡೆಯಿರಿ. ಹಿರಿಯರಿಗೆ ನಿಮ್ಮ ಕೈಲಾದ ಮತ್ತು ಅವರಿಗೆ ಅವಶ್ಯಕವಾದ ಕಾರ್ಯಗಳನ್ನು ಮಾಡಿಕೊಡಿ. ಸಂಗಾತಿಯೊಂದಿಗೆ ಸುತ್ತಾಟ ನಡೆಸುವಿರಿ. ಸಹೋದರನ ಕಾರಣದಿಂದ ಹಣವು ಖರ್ಚಾಗಬಹುದು. ಸಿಟ್ಟಾಗುವ ಅವಶ್ಯಕತೆಯಿಲ್ಲ. ಪ್ರೀತಿಯಿಂದ ಹೇಳಿದರೂ ನಿಮ್ಮ ಕಾರ್ಯವು ಸಫಲವಾಗುವುದು. ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು.
ಕಟಕ ರಾಶಿ : ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ದೈವಾನುಗ್ರಹವಿಲ್ಲವೆಂದು ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವುದು ಬೇಡ. ಇಂದಿನ ಸತ್ಕಾರ್ಯವೆಡ ನಿಮಗೆ ಉತ್ತಮವಾದ ಫಲವನ್ನು ಕೊಡುವುದು. ನಿರಾಶರಾಗದೇ ಒಳ್ಳೆಯ ಮನಸ್ಸಿನಿಂದ ಮುನ್ನಡೆಯಿರಿ. ನಿಮ್ಮ ವಿವಾಹದ ವಿಚಾರದಲ್ಲಿ ಯಾರಾದರೂ ಅಪಸ್ವರ ತರಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು.
ಸಿಂಹ ರಾಶಿ : ನೀವು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಪ್ರತಿಭೆಯ ಅನಾವರಣಕ್ಕೆ ಸುಕಾಲ. ಸಂಪತ್ತು ಉಳಿಸಿಕೊಳ್ಳಲು ಯತ್ನಿಸಿದಷ್ಟೂ ಅಪ್ರಯಾಸವಾಗಿ ಖರ್ಚಾಗುವುದು. ಇಂದು ಮನೋರಂಜನೆಗಾಗಿಯೇ ಸಮಯವನ್ನು ಮೀಸಲಿಟ್ಟರೂ ಅದನ್ನು ಯಾರಾದರೂ ಹಾಳುಮಾಡಿಯಾರು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷಿಸಿ ಬೇರೆ ಏನನ್ನಾದರೂ ತಂದುಕೊಳ್ಳುವಿರಿ. ಯಾರನ್ನೋ ಮೀರಿಸುವ ಧೈರ್ಯ ಮಾಡಲಾರಿರಿ. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು.
ಕನ್ಯಾ ರಾಶಿ : ಇಂದು ನಿಮ್ಮ ಕಳೆದು ಹೋದ ಕಾರ್ಯಗಳನ್ನೇ ನೆನಪಿಸಿ ನಿಮ್ಮನ್ನು ಹತಾಶಗೊಳಿಸಬಹುದು. ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು. ಆಪ್ತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಇಷ್ಟವಾಗುವ ಸ್ಥಳಗಳಿಗೆ ಇಷ್ಟವಾದವರನ್ನು ಕರೆದುಕೊಂಡು ಹೋಗಿ. ಕೆಲಸದ ಸ್ಥಳದಲ್ಲಿ ಒತ್ತಡದ ವಾತಾವರಣವಿರಬಹುದು. ವಿದ್ಯಾರ್ಥಿಗಳು ಶ್ರಮವಹಿಸಿ ಮುಂಬರುವ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದು. ಇಂದು ಬಿಟ್ಟು ಹೋದ ಆಪ್ತರ ಬಗ್ಗೆ ಹೆಚ್ಚು ಆಲೋಚನೆ ಬರಬಹುದು. ಬರುವ ಒತ್ತಡವನ್ನು ನೀವು ಯಾವುದಾದರೂ ವಿಧಾನದ ಮೂಲಕ ಸರಿ ಮಾಡಿಕೊಳ್ಳುವಿರಿ. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಯಾರಾದರೂ ಬದಲಿಸಬಹುದು.
ತುಲಾ ರಾಶಿ : ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಎತ್ತರದ ಪ್ರದೇಶಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ. ಧರ್ಮದ ಕಾರ್ಯಗಳ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ಯಾವುದಾದರೂ ರೀತಿಯಲ್ಲಿ ನೋವನ್ನು ಪಡೆಯಬೇಕಾದೀತು. ಕುಟುಂಬಕ್ಕೋಸ್ಕರ ಧನವನ್ನು ತ್ಯಾಗಮಾಡಬೇಕಾಗಿಬರಬಹುದು. ಇಂದು ನೀವು ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ಅವರ ಜೊತೆ ಜಗಳವಾಡುವಿರಿ. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ಹಿರಿಯರ ಪ್ರೀತಿಯು ನಿಮಗೆ ಖುಷಿಕೊಡುವುದು. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯಾಗಬಹುದು.
ವೃಶ್ಚಿಕ ರಾಶಿ : ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ಭೂವ್ಯವಹಾರದಲ್ಲಿ ಲಾಭವನ್ನು ಪಡೆಯಲು ಅನ್ಯ ಮಾರ್ಗವನ್ನು ಆಶ್ರಯಿಸುವಿರಿ. ಹಳೆಯ ರೋಗಗಳು ಮತ್ತೆ ಬಂದರೂ ಬರಬಹುದು. ಉದ್ಯಮದ ಕಾರ್ಯಕ್ಕೆ ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ. ಮಕ್ಕಳಿಂದ ನಿಮಗೆ ಸಂತೋಷವು ಸಿಗಲಿದೆ. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ನೂತನ ವಸ್ತುಗಳನ್ನು ಖರೀದಿಸಲಿದ್ಸೀರಿ. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ. ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ.
ಧನು ರಾಶಿ : ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಅನಿರೀಕ್ಷಿತ ಎದುರಾದ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಮುಂದಿನ ಕಾರ್ಯದಲ್ಲಿ ಆಗುವ ಖರ್ಚುಗಳ ಬಗ್ಗೆ ತಲೆಕೆಡಿಕೊಳ್ಳಬಹುದು. ಎಲ್ಲರ ಮೇಲೂ ನಂಬಿಕೆ ಇಟ್ಟುಕೊಳ್ಳುವುದು ಸಾಧ್ಯವಾಗದು. ಅದೃಷ್ಟವು ನಿಮ್ಮನ್ನು ಕಾಪಾಡಬಹುದು. ಇಂದು ನಿಮಗೆ ಅನಗತ್ಯ ಎನಿಸದರೂ ಕೆಲವು ಖರ್ಚನ್ನು ನಿಮ್ಮ ಸಂತೋಷ, ಪ್ರತಿಷ್ಠೆಗಾಗಿ ಮಾಡುವಿರಿ. ಇಂದು ಯಾವುದೋ ಆಲೋಚನೆಯಲ್ಲಿ ಮಗ್ನರಾದಂತೆ ತೋರುತ್ತದೆ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ.
ಮಕರ ರಾಶಿ : ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸುವ ಅವಶ್ಯಕತೆ ಇರುವುದು. ಕಾರ್ಯಗಳು ಶೀಘ್ರವಾಗಿ ಫಲಿಸದೇ ಇರುವುದು ನಿಮಗೆ ಬೇಸರ ತಂದೀತು. ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ವ್ಯವಹಾರದಲ್ಲಿ ಎಚ್ಚರವಿರಲಿ. ಒಮ್ಮುಖ ನಿರ್ಧಾರಗಳನ್ನು ಮಾಡುವುದನ್ನು ಬಿಡಿ. ಅನಾಹುತಕ್ಕೆ ಕಾರಣವಾಗಲಿದೆ. ಆರಕ್ಕೇರದ ಮೂರಕ್ಕಿಳಿಯದ ದಿನವಿಂದು ನಿಮಗೆ. ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡವು ಅಧಿಕಾಗಿರುವುದು. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಯಾರದ್ದಾದರೂ ಜೊತೆ ನೀವು ನಿಮ್ಮನ್ನು ಹೋಲಿಸಿಕೊಳ್ಳುವಿರಿ. ಸಮಾಜದಿಂದ ಸಿಗುವ ಗೌರವವು ನಿಮಗೆ ಬಂಧನದಂತೆ ಅನ್ನಿಸಬಹುದು. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು.
ಕುಂಭ ರಾಶಿ : ಇಂದು ನಿಮಗೆ ಅಧಿಕ ಸಂಪತ್ತಿನ ವ್ಯಯವು ಇರಲಿದೆ. ಕಾರ್ಯ ಮಾಡುವ ಧೈರ್ಯವಿದ್ದರೂ ಕಾರ್ಯದಲ್ಲಿ ನಿರಾಸಕ್ತಿಯೂ ಕಾಣಿಸಬಹುದು. ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಆಲಸ್ಯದಿಂದ ಸಿಗುವ ಸಂಪತ್ತು ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಆಗಲಿವೆ. ಮಾತಿನಿಂದ ಹಲವರಿಗೆ ಖುಷಿಯಾಗಲಿದೆ. ಸ್ತ್ರೀಯರಿಗೆ ಹೊಸತನ್ನು ಏನಾದರೂ ಮಾಡುವ ಬಗ್ಗೆ ಆಸಕ್ತಿ ಬರಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು. ಇಂದಿನ ಆದಾಯದಿಂದ ನಿಮ್ಮ ಪಡೆಯಬೇಕಾದುದನ್ನು ಪಡೆಯುವಿರಿ.
ಮೀನ ರಾಶಿ : ಇಂದು ನೀವು ಮನಸ್ಸಿನ ಕಿರಿಕಿರಿಯನ್ನು ಅನುಭವಿದೇ ಅನ್ಯ ಮಾರ್ಗವಿರದು. ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಿಲ್ಲ. ಸಂಗಾತಿಯೊಂದಿಗೆ ಕಲಹವಾಗಲಿದೆ. ಜಾಗರೂಕರಾಗಿ ಕಾಲಿಡಿ. ಕಲಾವಿದರಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು. ನಂಬಿಕೆಯನ್ನು ಕಳೆದುಕೊಳ್ಳಬೇಕಾದ ದಿನವೂ ಇದಾಗಿರುತ್ತದೆ. ದುಡುಕಿ ಯಾವದೋ ಅಪರಿಹಾರ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮದಾದ ಸ್ವತಂತ್ರ ಆದಾಯವನ್ನು ಬೆಳೆಸಿಕೊಳ್ಳುವ ಬಗ್ಗೆ ಸೂಕ್ತ ನಿರ್ಧಾರವನ್ನು ಮಾಡುವಿರಿ. ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು.
-ಲೋಹಿತ ಹೆಬ್ಬಾರ್ – 8762924271 (what’s app only)