Horoscope: ನಿತ್ಯ ಭವಿಷ್ಯ; ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 11 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು
ರಾಶಿಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 11, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಪ್ರೀತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:55 ರ ವರೆಗೆ, ಗುಳಿಕ ಕಾಲ 09:28 ರಿಂದ ಬೆಳಿಗ್ಗೆ 11:01ರ ವರೆಗೆ.

ಮೇಷ ರಾಶಿ : ಇಂದು ನಿಮಗೆ ನಿಮ್ಮದೇ ಆದ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ನಿಮಗೆ ಅನ್ನಿಸದೇಹೋಗಬಹುದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ದುಡುಕಿ ಏನನ್ನಾದರೂ ಮಾಡಿಕೊಳ್ಳುವಿರಿ. ಪತ್ನಿಯ ಜೊತೆ ಸುಖದಿಂದ ಕಾಲವನ್ನು ಕಳೆಯುವಿರಿ. ಸಂಬಂಧಿಕರ ಆಗಮನವಾಗಲಿದೆ. ಕೃಷಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಸಮಾರಂಭಗಳಿಗೆ ಹೋಗಿ ಒಂದಿಷ್ಟು ಹರಟೆ ಹೊಡೆದು ಬರುವ ಎಂಬ ಮನಸ್ಸಿರುತ್ತದೆ. ಉದಾಸೀನತೆಯು ನಿಮ್ಮನ್ನು ಮುತ್ತಲಿದೆ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಬೆಂಕಿಯ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಉದ್ಯಮದಲ್ಲಿ ಏನಾದರೂ ಏರಿಳಿತಗಳು ಆಗಬಹುದು.

ವೃಷಭ ರಾಶಿ : ಇಂದು ವ್ಯಾವಹಾರಿಕವಾಗಿ ಮನಶ್ಚಾಂಚಲ್ಯ ನಿಮ್ಮನ್ನು ಅನೇಕ ವಿಧವಾಗಿ ಕಾಡಬಹುದು.‌ ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಇರಬೇಕಾಗಿಬರಬಹುದು. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವಿರಿ. ಇಂದು ನಿಮಗೆ ಪುಣ್ಯಸ್ಥಳಕ್ಕೆ ಹೋಗುವ ಆಸೆ ಇದ್ದರೂ ಅದನ್ನು ಪೂರೈಸಿಕೊಳ್ಳಲಾಗದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಂಡು ನೋವಾಗುವುದು.

ಮಿಥುನ ರಾಶಿ : ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಮನಸ್ಸಾಗುವುದು. ಮನೆಯಿಂದ‌ ದೂರ ಹೋಗುವಾಗ, ಕಛೇರಿಗೆ ಹೋಗುವಾಗ ದೇವರಿಗೆ ನಮಸ್ಕರಿಸಿ ಮುನ್ನಡೆಯಿರಿ. ಹಿರಿಯರಿಗೆ ನಿಮ್ಮ ಕೈಲಾದ ಮತ್ತು ಅವರಿಗೆ ಅವಶ್ಯಕವಾದ ಕಾರ್ಯಗಳನ್ನು ಮಾಡಿಕೊಡಿ. ಸಂಗಾತಿಯೊಂದಿಗೆ ಸುತ್ತಾಟ ನಡೆಸುವಿರಿ. ಸಹೋದರನ ಕಾರಣದಿಂದ ಹಣವು ಖರ್ಚಾಗಬಹುದು. ಸಿಟ್ಟಾಗುವ ಅವಶ್ಯಕತೆಯಿಲ್ಲ. ಪ್ರೀತಿಯಿಂದ ಹೇಳಿದರೂ ನಿಮ್ಮ ಕಾರ್ಯವು ಸಫಲವಾಗುವುದು. ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು.

ಕಟಕ ರಾಶಿ : ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ದೈವಾನುಗ್ರಹವಿಲ್ಲವೆಂದು ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವುದು ಬೇಡ. ಇಂದಿನ ಸತ್ಕಾರ್ಯವೆಡ ನಿಮಗೆ ಉತ್ತಮವಾದ ಫಲವನ್ನು ಕೊಡುವುದು. ನಿರಾಶರಾಗದೇ ಒಳ್ಳೆಯ ಮನಸ್ಸಿನಿಂದ ಮುನ್ನಡೆಯಿರಿ. ನಿಮ್ಮ ವಿವಾಹದ ವಿಚಾರದಲ್ಲಿ ಯಾರಾದರೂ ಅಪಸ್ವರ ತರಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!