Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 24ರ ದಿನಭವಿಷ್ಯ 

|

Updated on: Apr 24, 2023 | 5:45 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 24ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 24ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 24ರ ದಿನಭವಿಷ್ಯ 
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 24ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಕೆಲಸ- ಕಾರ್ಯಗಳು ತುಂಬ ಅಚ್ಚುಕಟ್ಟಾಗಿ ಮುಗಿಯಲಿವೆ. ನಿಮ್ಮ ಮಾತಿನ ಮೂಲಕ ಮಾಡುವ ಶಿಫಾರಸುಗಳಿಗೆ ತೂಕ ಸಿಗಲಿದೆ. ರಾಜಕಾರಣವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ಸವಾಲಿನ ದಿನವಾಗಿರುತ್ತದೆ. ನಿಮ್ಮ ಧೈರ್ಯದ ನಿರ್ಧಾರಗಳಿಂದ ನಾಲ್ಕಾರು ಜನರಿಗೆ ಅನುಕೂಲ ಆಗಲಿದೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧದಲ್ಲೇ ವಧು/ವರ ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವಾಗಿಯೇ ಮಾಡಿಕೊಂಡಂಥ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಈ ದಿನ ಹರಸಾಹಸ ಪಡುತ್ತೀರಿ. ಯಾರಿಂದಲೋ ಸಹಾಯ ಕೇಳಿ, ಇಲ್ಲ ಎನಿಸಿಕೊಂಡು ಅವಮಾನಕ್ಕೆ ಗುರಿಯಾದಂತೆ ಎಂದು ನಿಮಗೇ ಎನಿಸುತ್ತದೆ. ಎಲೆಕ್ಟ್ರಿಕಲ್ ಉಪಕರಣಗಳಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಒತ್ತಡದ ಸನ್ನಿವೇಶ ಇರುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕೈಲಿ ಹಣವಿದೆ ಅಂತಾದರೆ ಕೂಡಿಡುವ ಬಗ್ಗೆ, ಅಂದರೆ ಸೇವಿಂಗ್ಸ್ ಬಗ್ಗೆ ಮಾತ್ರ ಆಲೋಚನೆಯನ್ನು ಮಾಡಿ. ಯಾವುದೇ ಕಾರಣಕ್ಕೂ ಹೂಡಿಕೆ ಮಾಡುವ ಕುರಿತು ಮನಸ್ಸು ಹರಿಸಬೇಡಿ. ಮೊದಲ ಬಾರಿಗೆ ಪರಿಚಯವಾದವರು, ಆಕರ್ಷಕವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಅವರಿಗೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹೇಳದಿರಿ. ಎಲ್ಲರೂ ಅನುಸರಿಸುವ ದಾರಿ ಸರಿಯಾಗಿಯೇ ಇರಬೇಕು ಎಂಬ ನಂಬಿಕೆ ಈ ದಿನ ಬೇಡ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹೂವು- ಹಣ್ಣು, ತರಕಾರಿ, ಎಳನೀರು, ಕಬ್ಬಿನ ಹಾಲು ಇಂಥವುಗಳ ವ್ಯಾಪಾರ ಮಾಡುವವರಿಗೆ ಇತರ ವ್ಯವಹಾರಗಳನ್ನು ಕೂಡ ಆರಂಭ ಮಾಡುವ ಕುರಿತು ಆಲೋಚನೆ ಮೂಡುತ್ತದೆ. ಇದಕ್ಕಾಗಿ ಸ್ವಲ್ಪ ಮಟ್ಟಿಗೆ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಕೂಡ ಯೋಚನೆ ಮಾಡಲಿದ್ದೀರಿ. ಈ ದಿನ ನೀರಿನಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅಪಾಯದ ಸಾಧ್ಯತೆಯ ಸೂಚನೆಯಂತೆ ಕಾಣುವ ನೀರಿನ ಸಂಗ್ರಹದಿಂದ ಅಥವಾ ಅಂಥ ಕೆಲಸದಿಂದ ದೂರವಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ಪ್ರಕೃತಿ ಮಧ್ಯೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಹಾಗಂತ ಕಾಡು, ಬೆಟ್ಟ- ಗುಡ್ಡ, ನದಿ ಇಂಥದ್ದರ ಬಗ್ಗೆಯೇ ಆಲೋಚಿಸಬೇಡಿ. ನಿಮ್ಮದೇ ಪರಿಸರದ ಸಮೀಪ ಇರುವಂಥ ಸ್ಥಳಗಳು ಸಹ ಮನಸ್ಸಿಗೆ ಮುದ ನೀಡುತ್ತದೆ. ಹೊಸದಾದ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಕು ಎಂದಿರುವವರಿಗೆ ಇದರಿಂದ ಹೊಸ ಉತ್ಸಾಹ, ಚೈತನ್ಯ ಹಾಗೂ ಆಲೋಚನೆಗಳು ಮೂಡಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಇತರರು ನೆರವಾಗುತ್ತೀನಿ ಎಂದಿದ್ದಾರೆ ಎಂಬ ಮಾತನ್ನೇ ನಂಬಿಕೊಂಡು, ಯಾವುದೇ ಕೆಲಸಕ್ಕೆ ಇಳಿಯದಿರಿ. ನಿಮ್ಮ ಸಾಮರ್ಥ್ಯ, ನಿಮ್ಮ ಬಳಿ ಇರುವ ಸಂಪನ್ಮೂಲ ಲಭ್ಯತೆ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ಮುಂದುವರಿಯಿರಿ. ಯಾರಾದರೂ ನಿಮ್ಮ ವಿರುದ್ಧ ಹಳೇ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂಬ ಗುಮಾನಿ ಬಂದಲ್ಲಿ ಈ ದಿನ ಕೂಡಲೇ ಎಚ್ಚೆತ್ತುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಪ್ರಮುಖವಾದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸಗಳು ಬರಲಿವೆ. ಆದ್ದರಿಂದ ಯಾವುದು ಮೊದಲು ಹಾಗೂ ಯಾವುದು ನಂತರ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಕೆಲವು ಸಂಗತಿಗಳನ್ನು ನೀವೂ ಒಪ್ಪಲೇಬೇಕು ಎಂಬ ಒತ್ತಡ ಬರಬಹುದು. ನಿಧಾನವಾಗಿ ಆಲೋಚನೆ ಮಾಡಿ, ಆ ನಂತರ ತೀರ್ಮಾನವನ್ನು ಕೈಗೊಳ್ಳಿ. ದೂರ ಪ್ರಯಾಣದ ವಿಚಾರದಲ್ಲಿ ತತ್ ಕ್ಷಣದ ನಿರ್ಧಾರ ಒಳ್ಳೆಯದಲ್ಲ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಕೆಲವು ಗುಂಪುಗಳು ಕೆಲಸ ಮಾಡುತ್ತಿವೆ ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಶುರು ಆಗುತ್ತದೆ. ನಿಮ್ಮ ಪಾಲಿಗೆ ಬಂದಂಥ ಜವಾಬ್ದಾರಿಗಳನ್ನು ಮಾಮೂಲಿಗಿಂತ ಹೆಚ್ಚಿನ ಶ್ರದ್ಧೆ- ಆಸಕ್ತಿಯಿಂದ ಮಾಡಿದರೆ ಉತ್ತಮ. ಸೈಟು- ಮನೆ ಖರೀದಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆ ಮಾಡುವುದು ಮುಖ್ಯ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ದೂರದ ಊರುಗಳಲ್ಲಿ ಇರುವ ಬಂಧುಗಳು ಕೆಲವು ಸಹಾಯವನ್ನು ಮಾಡುವಂತೆ ಕೇಳಿಕೊಳ್ಳಬಹುದು. ನಿಮ್ಮಿಂದ ಸಾಧ್ಯವೇ ಎಂಬುದನ್ನು ಸರಿಯಾಗಿ ಅಳೆದು- ತೂಗಿ ಆ ನಂತರವಷ್ಟೇ ನಿಮ್ಮ ತೀರ್ಮಾನವನ್ನು ಹೇಳುವುದು ಉತ್ತಮ. ಇನ್ನು ನಿಮಗೆ ಹಳೆ ಕಾಯಿಲೆ- ನೋವುಗಳು ಕಾಡುತ್ತಿದ್ದಲ್ಲಿ ಅದು ಉಲ್ಬಣ ಆಗುವಂಥ ಸಾಧ್ಯತೆ ಇದೆ. ವೈದ್ಯರನ್ನು ಭೇಟಿ ಆಗುವುದು ಕಡ್ಡಾಯ ಎಂದಾದಲ್ಲಿ ಸೂಕ್ತ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ