Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 11ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 11ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 11ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಆಲೋಚನಾ ವಿಧಾನದಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಳ್ಳಲಿದೆ. ಸಾಂಪ್ರದಾಯಿಕ ಚಿಂತನೆಗಳನ್ನು ಬಿಟ್ಟು, ನಿರ್ದಿಷ್ಟ ಕೆಲಸಕ್ಕೆ ಅಗತ್ಯವಾದ ರೀತಿಯಲ್ಲಿ ಆಲೋಚಿಸುವ, ಕೆಲಸ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳಲಿದ್ದೀರಿ. ಕಾಂಡಿಮೆಂಟ್ಸ್ ನಡೆಸುತ್ತಿರುವವರು, ಕ್ಯಾಟರಿಂಗ್ ಮಾಡುತ್ತಿರುವವರು ಲಾಭದ ಪ್ರಮಾಣ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡಬೇಕು ಎಂದಿದ್ದಲ್ಲಿ ಈ ದಿನ ಆ ಬಗ್ಗೆ ಸೂಕ್ತವಾದ ಯೋಜನೆಯನ್ನು ರೂಪಿಸಿಕೊಳ್ಳಿ. ಮಗನ ಅಥವಾ ಮಗಳ ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಮನಸ್ಸಿಗೆ ಸಮಾಧಾನ ತರುವಂತಹ ಬೆಳವಣಿಗೆಗಳು ಆಗಲಿವೆ. ಮನೆದೇವರ ಆರಾಧನೆಯಿಂದ ಮತ್ತಷ್ಟು ಶುಭ ಫಲಗಳು ದೊರೆಯಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮಲ್ಲಿ ಕೆಲವರಿಗೆ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಆಸ್ತಮಾದಿಂದ ಬಳಲುತ್ತಿದ್ದೀರಿ ಅಂತಾದಲ್ಲಿ ಅದು ಉಲ್ಬಣಿಸಬಹುದು. ಆದ್ದರಿಂದ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ನಿಮ್ಮ ಸಂಬಂಧಿಕರೋ ಅಥವಾ ಸ್ನೇಹಿತರೋ ಅಥವಾ ಇತ್ತೀಚೆಗಷ್ಟೇ ಪರಿಚಿತರಾದವರಿಂದ ಆಕರ್ಷಕವೆನಿಸುವಂಥ ಹೂಡಿಕೆ ಆಯ್ಕೆಗಳ ಬಗ್ಗೆ ಪ್ರಸ್ತಾವ ಏನಾದರೂ ಬಂದಲ್ಲಿ ಅದಕ್ಕೆ ಹೆಚ್ಚಿನ ಲಕ್ಷ್ಯ ನೀಡದಿರಿ. ಏಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ನಿಂದನೆಯನ್ನು ಕೇಳಬೇಕಾದ ಸನ್ನಿವೇಶ ಎದುರಾಗಲಿದೆ. ಇತರರು ಹಣ ನೀಡುತ್ತಾರೆ ಎಂದು ನೆಚ್ಚಿಕೊಂಡು ಯಾರಿಗೂ ಮಾತು ನೀಡಬೇಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹಣದ ಹರಿವು ಸರಾಗವಾಗಿ ಆಗಲಿದೆ. ಈಗಾಗಲೇ ಕೆಲಸ ಮಾಡಿಯಾಗಿದೆ, ಅದರ ಹಣ ಅರ್ಧ ಮಾತ್ರ ಬಂದಿದೆ, ಬಾಕಿ ಮೊತ್ತ ಬರಬೇಕು ಎಂದು ಕಾಯುತ್ತಿರುವಂಥವರಿಗೆ ಆ ಹಣವು ಕೈ ಸೇರುವಂಥ ಸಾಧ್ಯತೆ ಇದೆ. ಆದರೆ ಅದಕ್ಕಾಗಿ ಒಂದಿಷ್ಟು ಬಲವಾದ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಯಾರು ನಿಮ್ಮ ಕೆಲಸದ ವೈಖರಿ, ಕೆಲಸ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ ಇತ್ಯಾದಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುತ್ತಾರೋ ಅಂಥವರಿಗೆ ನಿಮ್ಮ ಸಾಮರ್ಥ್ಯದ ಪರಿಚಯ ಆಗಲಿದೆ. ಎಲೆಕ್ಟ್ರಿಕ್ ವಸ್ತುಗಳನ್ನು ಮನೆಗೆ ಖರೀದಿ ಮಾಡಿಕೊಂಡು ತರುವಂಥ ಯೋಗ ಇದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಅದೆಷ್ಟೇ ಸಣ್ಣ ಕೆಲಸ ಅಂತಾದರೂ ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ಖರ್ಚು ಆಗಲಿದೆ. ಮನೆಯ ದುರಸ್ತಿ, ಕಚೇರಿ ನವೀಕರಣ, ವಾಹನಗಳನ್ನು ಸರ್ವೀಸ್ ಗೆ ಬಿಡುವುದು ಇಂಥ ಯಾವುದೇ ಕೆಲಸ ಆದರೂ ಎಷ್ಟು ಖರ್ಚು ಬರಬಹುದು ಎಂಬುದನ್ನು ಮೊದಲಿಗೇ ಲೆಕ್ಕ ಹಾಕಿಟ್ಟುಕೊಳ್ಳುವುದು ಮುಖ್ಯ. ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದ ಕಾರ್ಯಕ್ರಮವೊಂದನ್ನು ಸರಳವಾಗಿ ಮಾಡುವ ಬಗ್ಗೆ ಅಥವಾ ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಪರಿಸರ ಪ್ರೇಮಿಗಳಿಗೆ, ಎನ್ ಜಿಒಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ತಾವು ಮಾಡಿದ ಕೆಲಸದಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂಬಂಧಗಳು, ಕುಟುಂಬ ವಿಚಾರಗಳು, ಭವಿಷ್ಯ ಏನಾಗಬಹುದು ಎಂಬ ಚಿಂತೆ ಹೀಗೆ ನಾನಾ ಸಂಗತಿಗಳು ಸೇರಿಕೊಂಡು ಕಲಸುಮೇಲೋಗರ ಆಗಲಿದೆ. ಈಗಾಗಲೇ ಆಹಾರ ಪಥ್ಯದಲ್ಲಿ ಇರುವಂಥವರಿಗೆ ಈ ದಿನ ಅದನ್ನು ಪಾಲಿಸಲು ಸಾಧ್ಯವಾಗದಿರಬಹುದು. ಮನೆಯಿಂದ ಹೊರಗೆ ಊಟ- ತಿಂಡಿ ಮಾಡುವಂಥವರಿದ್ದಲ್ಲಿ ನಿಮ್ಮಿಂದ ಸಾಧ್ಯವಾದಷ್ಟೂ ಶುಚಿತ್ವದ ಕಡೆಗೆ ಹಾಗೂ ಗುಣಮಟ್ಟದ ಬಗ್ಗೆ ಲಕ್ಷ್ಯ ನೀಡಿ. ಯಾವುದೋ ಮೈ ಮರೆವಿನಲ್ಲಿ ಆಡಿದ್ದ ಮಾತುಗಳಿಂದ ಈ ದಿನ ಪಶ್ಚಾತ್ತಾಪ ಪಡುವಂತೆ ಆಗಬಹುದು. ದೂರ ಪ್ರಯಾಣ ಮಾಡಬೇಕಿದೆ ಎಂದಾದಲ್ಲಿ ಕತ್ತಲೆ ಆದ ನಂತರ ಸ್ವಂತ ವಾಹನಗಳಲ್ಲಿ ಚಾಲನೆ ಮಾಡದಿರುವುದು ಕ್ಷೇಮ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕಟ್ಟಡ ನಿರ್ಮಾಣ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ದೊಡ್ಡ ಮೊತ್ತದ, ದೊಡ್ಡ ಮಟ್ಟದ ಕಾಂಟ್ರಾಕ್ಟ್ ದೊರೆಯುವಂಥ ಸಾಧ್ಯತೆಗಳು ಗೋಚರಿಸಲಿವೆ. ನಿಮಗೆ ಇದಕ್ಕಾಗಿ ಇತರರ ಸಹಾಯ, ಮಾರ್ಗದರ್ಶನ ಬೇಕು ಎಂದೆನಿಸಬಹುದು. ಅಗತ್ಯವಾಗಿ ಪಡೆದುಕೊಳ್ಳಿ. ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆ ಹೆಚ್ಚಾಗಬೇಕಿದೆ ಹಾಗೂ ಅದಕ್ಕೆ ತಕ್ಕಂತೆ ಸಿದ್ಧತೆಗಳು ಮತ್ತು ನಿಮ್ಮ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವ ಅಗತ್ಯ ಕಂಡುಬರಲಿದೆ. ಸಂಗಾತಿ ಏನಾದರೂ ಸಲಹೆ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ. ಆಯುರ್ವೇದ ವೈದ್ಯರಿಗೆ ಸನ್ಮಾನಗಳು- ಪ್ರಶಂಸೆಗಳು ದೊರೆಯುವಂಥ ಯೋಗ ಇದೆ. ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಕುಡಿಯುವ ನೀರಿನ ಸ್ವಚ್ಛತೆಯ ಕಡೆಗೆ ಗಮನ ನೀಡುವುದು ಮುಖ್ಯ. ನಿಮ್ಮಲ್ಲಿ ಕೆಲವರಿಗೆ ಕಣ್ಣಿಗೆ ಸಂಬಂಧಿಸಿದ ಸೋಂಕು ತಗುಲುವಂಥ ಸಾಧ್ಯತೆಗಳಿವೆ. ಇತರರ ವಸ್ತುಗಳನ್ನು ಬಳಸುವಾಗ ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇರಬೇಕು. ಸ್ವಿಮ್ಮಿಂಗ್ ಪೂಲ್ ಗೆ ತೆರಳಬೇಕು ಎಂದಿರುವವರು ಈ ದಿನದ ಮಟ್ಟಿಗೆ ಹೋಗದಿರುವುದು ಕ್ಷೇಮ. ಸೋದರ ಸಂಬಂಧಿಗಳು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗಲಿದೆ. ನೆರೆಹೊರೆಯವರ ಜತೆಗೆ ಸಣ್ಣ- ಪುಟ್ಟ ವಿಚಾರಕ್ಕಾದರೂ ಜಗಳ, ಮನಸ್ತಾಪಗಳು ಆಗಬಹುದು. ಆದ್ದರಿಂದ ಯಾವುದೇ ವಿಚಾರವನ್ನು ಹಿಗ್ಗಿಸುತ್ತಾ ಹೋಗದೆ ಅಲ್ಲಿಂದ ಅಲ್ಲಿಗೆ ಎಂಬಂತೆ ಬಿಟ್ಟು ಬಿಡುವುದು ಉತ್ತಮ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮನೆ ಅಥವಾ ಸೈಟು ಅಥವಾ ಅಪಾರ್ಟ್ ಮೆಂಟ್ ಮಾರಾಟಕ್ಕೆ ಅಂತ ಇಟ್ಟಿದ್ದಲ್ಲಿ ಸೂಕ್ತ ಗ್ರಾಹಕರು ಹುಡುಕಿಕೊಂಡು ಬರುವಂಥ ಯೋಗ ಇದೆ. ಹೊಸದಾಗಿ ಹೂಡಿಕೆ ಮಾಡಬೇಕು ಎಂದು ಹಣಕಾಸು ಹರಿವಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ವ್ಯಕ್ತಿ ಅಥವಾ ಸಂಸ್ಥೆಯ ಸಹಾಯದಿಂದ ಆತ್ಮವಿಶ್ವಾಸವು ಮೂಡಲಿದೆ. ವಿದೇಶಕ್ಕೆ ಪ್ರವಾಸ ತೆರಳಬೇಕು ಎಂದಿರುವವರು ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಇತರರು ತಮ್ಮಿಂದ ಆಗುವುದಿಲ್ಲ ಎಂದು ಕೈ ಬಿಟ್ಟಂಥ ಕೆಲಸವು ನಿಮ್ಮ ಹೆಗಲಿಗೇರಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸದ್ಯಕ್ಕೆ ಬೇಡ ಎಂದು ಅಂದುಕೊಂಡು ಸುಮ್ಮನಿದ್ದ ಹಲವು ಕೆಲಸಗಳು ಒಂದೊಂದಾಗಿ ಮುಗಿಸುವುದಕ್ಕೆ ಮಾರ್ಗ ಗೋಚರ ಆಗಲಿದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ನಿರೀಕ್ಷೆ ಜಾಸ್ತಿ ಆಗಲಿದೆ. ಈ ಹಿಂದೆ ನೀವು ನೀಡಿದ್ದ ಮಾತಿನಂತೆ ನಡೆದುಕೊಳ್ಳುವುದಕ್ಕೆ ಸಾಧ‌್ಯವಾಗದಿರಬಹುದು. ಕರಿದ ಅಥವಾ ಮಸಾಲೆಯುಕ್ತ ಪದಾರ್ಥಗಳ ಸೇವನೆಯಿಂದ ದೂರ ಇದ್ದರೆ ಒಳ್ಳೆಯದು. ಬಾಯಿ ಚಪಲಕ್ಕೆ ಬಿದ್ದರೆ ಅನಾರೋಗ್ಯ ಸಮಸ್ಯೆಗಳು ಎದುರಾಗಲಿದೆ. ಮುಖ್ಯವಾಗಿ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮೊದಲಿಗೆ ಮನಸ್ಸಿನಲ್ಲಿ ಸೂರ್ಯನಾರಾಯಣನನ್ನು ಸ್ಮರಣೆಯನ್ನು ಮಾಡಿ.