Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 26ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 26ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 26ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ಹಿಂದೆ ನೀವು ಕೆಲಸ ಮಾಡಿದ್ದ ಸಂಸ್ಥೆಯಿಂದಲೋ ಅಥವಾ ನಿಮಗೆ ಮೇಲಧಿಕಾರಿಯಾಗಿ ಇದ್ದಂಥವರಿಂದಲೋ ಉದ್ಯೋಗ ಅವಕಾಶಗಳ ಬಗ್ಗೆ ಆಹ್ವಾನ ದೊರೆಯುವಂಥ ಸಾಧ್ಯತೆ ಇದೆ. ನಿಮ್ಮ ಫೋನ್ ಅನ್ನು ಸರಿಯಾಗಿ ಇರಿಸಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ. ಇಲ್ಲದಿದ್ದಲ್ಲಿ ಉತ್ತಮವಾದ ಅವಕಾಶವೊಂದು ಕೈ ಜಾರಿ ಹೋಗುವ ಸಾಧ್ಯತೆಗಳಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಪ್ರಾಜೆಕ್ಟ್ ಹುಡುಕಿಕೊಂಡು ಬರುವಂಥ ಯೋಗ ಇದೆ. ಈ ದಿನ ನಿಮ್ಮ ಸೌಂದರ್ಯ ಕಾಳಜಿ ಹೆಚ್ಚಾಗಲಿದ್ದು, ಇದರ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀರಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವಂಥ ದಾರಿಗಳು ಗೋಚರ ಆಗಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಟಿವಿ, ಲ್ಯಾಪ್‌ಟಾಪ್, ಟ್ಯಾಬ್‌ಲೆಟ್, ಮೊಬೈಲ್‌ಫೋನ್ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಸುವುದಕ್ಕೆ ಮಾತುಕತೆ ನಡೆಸಲಿದ್ದೀರಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸ್ನೇಹಿತರು- ಸಂಬಂಧಿಗಳ ಸಹಾಯ ದೊರೆಯಲಿದೆ. ಹೊಸ ಸೈಟು- ಜಮೀನು ಖರೀದಿ ಮಾಡುವುದಕ್ಕೆ ಹುಡುಕಾಟ ನಡೆಸಲಿದ್ದೀರಿ. ಕಮಿಷನ್ ಆಧಾರದಲ್ಲಿ ಸಂಪಾದನೆ ಮಾಡುವವರಿಗೆ ಆದಾಯದ ಹರಿವು ಹೆಚ್ಚಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೀವು ಯಾವ ಕೆಲಸಗಳನ್ನು ಬಹಳ ಸಲೀಸಾಗಿ ಮಾಡಿ ಮುಗಿಸಬಲ್ಲಿರೋ ಅವು ಇತರರಿಗೆ ವಿಪರೀತ ಕಷ್ಟ ಆಗಲಿದೆ. ಮೇಲಧಿಕಾರಿಗಳಿಂದ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳುವಂಥ ಯೋಗ ಇದೆ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಬಹಳ ಹಿಂದೆ ನೀವು ಪ್ರಯತ್ನಿಸಿದ್ದ ಉದ್ಯೋಗವೋ, ಸೈಟೋ ಅಥವಾ ಇಂಥದ್ದು ಯಾವುದಾದರೂ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಡುವ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ನಿಮ್ಮ ವೈಯಕ್ತಿಕ ವಿಚಾರಗಳನ್ನೋ ಅಥವಾ ವ್ಯಾಪಾರ- ವ್ಯವಹಾರದ ರಹಸ್ಯಗಳನ್ನೋ ಹೊಸದಾಗಿ ಪರಿಚಿತರಾದವರ ಜತೆಗೆ ಹಂಚಿಕೊಳ್ಳದಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಏನೂ ಅಂದುಕೊಳ್ಳದೆಯೇ ಕೆಲವು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಈ ದಿನ ಇದೆ. ಈ ನಿರ್ಧಾರದಿಂದ ನಿಮ್ಮ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಕಚೇರಿಯಲ್ಲಿ ಉದ್ಯೋಗ ಮಾಡಬೇಕಾದವರಿಗೆ ವಾತಾವರಣ ಒಂದಿಷ್ಟು ಕಿರಿಕಿರಿ ಉಂಟು ಮಾಡಲಿದೆ. ಸರ್ಕಾರಿ ಟೆಂಡರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವಂಥವರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ಇತರರು ಬಂದು ತಾವಾಗಿಯೇ ಸಲಹೆ ಕೇಳದ ಹೊರತು ನೀವಾಗಿಯೇ ಏನನ್ನೂ ಹೇಳದಿರುವುದು ಉತ್ತಮ. ದೂರ ಪ್ರಯಾಣಕ್ಕೆ ತೆರಳುತ್ತಿದ್ದಲ್ಲಿ ಮುಖ್ಯವಾದ ವಸ್ತುಗಳು ಎಲ್ಲವನ್ನೂ ಇಟ್ಟುಕೊಂಡಿದ್ದೀರಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರೀಕ್ಷಿಸಿಕೊಳ್ಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಕಾನೂನು ವಿಚಾರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಕೆಲವು ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರು, ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ರಂಗಭೂಮಿ, ಸ್ಟ್ಯಾಂಡ್ ಅಪ್ ಕಾಮಿಡಿ, ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯಗಳು ಕಾಡಬಹುದು. ಥೈರಾಯ್ಡ್ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣಗೊಳ್ಳಬಹುದು. ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವ ಕಡೆಗೆ ಲಕ್ಷ್ಯ ನೀಡುವುದು ಮುಖ್ಯವಾಗುತ್ತದೆ. ದೇಹವನ್ನು ತಂಪಾಗಿ ಇರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಾನು ಅನಿಸಿದ್ದನ್ನು ಹೇಳುತ್ತೇನೆ ಎಂದು ಈ ದಿನ ಆಲೋಚಿಸುವುದೇ ತಪ್ಪು. ಆದ್ದರಿಂದ ನೀವು ಹೇಳುವ ವಿಚಾರವನ್ನು ನಯವಾಗಿ ದಾಟಿಸುವುದಕ್ಕೆ ಪ್ರಯತ್ನಿಸಿ. ನಿಮ್ಮ ಧ್ವನಿ ಹಾಗೂ ವಿಚಾರ ಎರಡೂ ಒಂದೇ ರೀತಿಯಲ್ಲಿ ಕೇಳಿಸುವಂತೆ ನೋಡಿಕೊಳ್ಳಿ. ಇಲ್ಲದಿದ್ದಲ್ಲಿ ನಿಮ್ಮನ್ನು ಅಹಂಕಾರಿ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ. ಹೆಣ್ಣುಮಕ್ಕಳು ಚಿನ್ನಾಭರಣ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ನೀವು ಅಂದುಕೊಳ್ಳದ ರೀತಿಯಲ್ಲಿ ಹಣಕಾಸಿನ ಹರಿವು ನಿಮ್ಮ ಪಾಲಿಗೆ ಇರಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮಗೆ ಬೇಕೆಂತಲೇ ಕೆಲವರು ಸಿಟ್ಟು ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದೆನಿಸುತ್ತದೆ. ನಿಮ್ಮ ಸಾಮರ್ಥ್ಯ ಹಾಗೂ ಈ ಹಿಂದೆ ನೀವು ಮಾಡಿದ ಸಾಧನೆ ಏನು ಎಂಬ ಪ್ರಶ್ನೆಗಳನ್ನು ಎದುರಿಸಲಿದ್ದೀರಿ. ಯುವತಿಯರಿಗೆ ಇಷ್ಟವಿಲ್ಲದ ಸಂಬಂಧವೊಂದನ್ನು ಮದುವೆಗೆ ಒಪ್ಪಿಕೊಳ್ಳಬೇಕು ಎಂಬ ಒತ್ತಡ ಸೃಷ್ಟಿ ಆಗಲಿದೆ. ನಿಮ್ಮ ಪರವಾಗಿ ಮಾತನಾಡುವವರು ಯಾರು ಇರದೆ ಒಂದಿಷ್ಟು ಬೇಸರ ಆಗುವಂಥ ಸಾಧ್ಯತೆ ಇದೆ. ಶೈಕ್ಷಣಿಕ ವಿಚಾರದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ನಡೆಯಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇನ್ನೇನು ಎಲ್ಲವೂ ಮುಗಿಯಿತು ಎಂದುಕೊಂಡ ಕೆಲಸ ಇನ್ನೂ ಸ್ವಲ್ಪ ಬಾಕಿ ಉಳಿದು, ಇನ್ನಷ್ಟು ದಿನಗಳಿಗೆ ಎಳೆದುಕೊಂಡು ಹೋಗುವಂಥ ಸೂಚನೆ ನಿಮಗೆ ದೊರೆಯುತ್ತದೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಗುಂಪುಗೂಡಿರುವ ಕಡೆ ಮಾತನಾಡುವುದಕ್ಕೆ ಹೋಗದಿರಿ. ಶಾಲೆ- ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಸಹೋದ್ಯೋಗಿಗಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನನ್ನದೇ ಸರಿ ಎಂದು ವಾದಿಸುತ್ತಾ ಮುಂದುವರಿಸುವುದು ಒಳ್ಳೆಯದಲ್ಲ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಯೋ ಅಥವಾ ವಸ್ತುವೋ ಈ ದಿನ ದೊರೆಯುವಂಥ ಅವಕಾಶಗಳು ಜಾಸ್ತಿ ಇವೆ. ಸಂಯಮ, ತಾಳ್ಮೆಯಿಂದ ಇದ್ದಷ್ಟೂ ಯಶಸ್ಸಿನ ಪ್ರಮಾಣ ಹೆಚ್ಚಾಗಲಿದೆ.