ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 27ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ದಿನ ನಿಮಗೆ ಕೈ ನೋವು ಕಾಡಲಿದೆ. ಭಾರವಾದ ವಸ್ತುಗಳನ್ನು ಎತ್ತಬೇಕಾಗುತ್ತದೆ ಎಂದಾದಲ್ಲಿ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಕಡಿಮೆ ಬಡ್ಡಿಗೆ ಸಾಲ ದೊರೆಯಲಿದೆ ಅಥವಾ ಝೀರೋ ಕಾಸ್ಟ್ ಇಎಂಐ ದೊರೆಯಲಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿಸಬೇಡಿ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಹಾಕಬೇಕು ಎಂದಿರುವವರಿಗೆ ನಾನಾ ಬಗೆಯಲ್ಲಿ ಸಮಸ್ಯೆಗಳು ಎದುರಾಗಬಹುದು ಅಥವಾ ಕೈಯಿಂದ ಹೆಚ್ಚಿನ ಹಣ ಖರ್ಚಾಗಲಿದೆ.
ಈ ದಿನ ಡಿಪ್ಲೊಮಾಟಿಕ್ ಆಗಿ ನೀವಾಡುವ ಮಾತುಗಳಿಂದ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಯಶಸ್ವಿ ಆಗುತ್ತೀರಿ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನ ಇದಾಗಿರುತ್ತದೆ. ಭವಿಷ್ಯದಲ್ಲಿ ನಿಮಗೆ ದೊರೆಯಬಹುದಾದ ಮಹತ್ತರ ಜವಾಬ್ದಾರಿ ಬಗ್ಗೆ ಸುಳಿವು ದೊರೆಯಲಿದೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರಿ ಅವರು ನಿಮ್ಮ ಕೆಲಸ ಪೂರ್ಣ ಮಾಡುವುದಕ್ಕೆ ನೆರವು ನೀಡಲಿದ್ದಾರೆ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವಂಥವರಿಗೆ ಕೆಲಸ ಸಲೀಸಾಗಿ ಆಗಲಿದೆ.
ಮನೆ ಅಥವಾ ಸೈಟಿನ ವಿಚಾರಕ್ಕೆ ಸಂಗಾತಿ ಜತೆಗೆ ಅಭಿಪ್ರಾಯ ಭೇದ ಎದುರಾಗಬಹುದು. ಆದಾಯ- ವೆಚ್ಚದ ವಿಚಾರದಲ್ಲಿ ಲೆಕ್ಕಾಚಾರ ಸರಿಯಾಗಿರುವಂತೆ ನೋಡಿಕೊಳ್ಳಿ. ಮನೆಯ ದುರಸ್ತಿ ಮಾಡಬೇಕು ಎಂದಿರುವವರು ಈ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಹಳೇ ಸ್ನೇಹಿತರ ಜತೆಗೆ ಭೇಟಿ ಆಗುವ ಸಾಧ್ಯತೆ ಇದೆ. ಹಾಗೂ ಇದೇ ವೇಳೆ ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸಂತೋಷದ ದಿನ ಇದಾಗಿರುತ್ತದೆ.
ಬ್ಯಾಂಗಲ್ ಸ್ಟೋರ್ಸ್, ಬ್ಯೂಟಿ ಪಾರ್ಲರ್ ಅಥವಾ ಹಣ್ಣಿನ ರಸಗಳನ್ನು ಮಾರಾಟ ಮಾಡುವಂಥ ವ್ಯವಹಾರ ನಡೆಸುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಿಗೆ ಮಾಡಿಕೊಳ್ಳುವಂಥ ಅವಕಾಶಗಳು ಹೆಚ್ಚಾಗಲಿವೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುವುದಕ್ಕೆ ಅಥವಾ ಫ್ರಾಂಚೈಸಿ ತೆಗೆದುಕೊಳ್ಳುವುದಕ್ಕೆ ನಿಮ್ಮ ಬಳಿ ಪ್ರಸ್ತಾವ ಇಡುವಂಥ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಮಾತು ನೀಡುವ ಮುನ್ನ ಸಾಧ್ಯಾಸಾಧ್ಯತೆಗಳ ಬಗ್ಗೆ ಸರಿಯಾಗಿ ಆಲೋಚಿಸಿ, ನಿರ್ಧಾರ ಮಾಡಿ.
ಈ ದಿನ ಏಕಾಂಗಿಯಾಗಿ ಇರುವ ಬಗ್ಗೆ ಆಲೋಚನೆ ಮೂಡಲಿದೆ. ಈ ಹಿಂದಿನ ಘಟನಾವಳಿಗಳು ನಿಮ್ಮನ್ನು ಕಾಡಲಿವೆ. ತೆಗೆದುಕೊಂಡ ನಿರ್ಧಾರಗಳಲ್ಲಿ ಎಲ್ಲಿ ತಪ್ಪಾಯಿತೋ ಎಂದು ವಿಮರ್ಶೆ ಮಾಡಲಿದ್ದೀರಿ. ಊಟ- ತಿಂಡಿ ವಿಚಾರದಲ್ಲಿ ಪಥ್ಯವನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇತರ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಅಭಿಪ್ರಾಯ ಹೇಳುವುದೋ ಅಥವಾ ಇನ್ಯಾರದೋ ಜತೆಯಲ್ಲಿ ಮಾತನಾಡುವುದೋ ಮಾಡಬೇಡಿ.
ಬಹಳ ದಿನಗಳು ಅಥವಾ ತಿಂಗಳಿಂದ ಬಾಕಿ ಉಳಿದ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ವ್ಯಾಜ್ಯಗಳು ಇದ್ದಲ್ಲಿ ಅದು ಮುಗಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ದೀರ್ಘಾವಧಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಇತರರ ಸಹಾಯವನ್ನು ಪಡೆದುಕೊಳ್ಳಲಿದ್ದೀರಿ. ಸಹೋದರ- ಸಹೋದರಿಯರ ಜತೆಗೆ ಮಾತುಕತೆ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ನೀವು ಬಹಳ ಸಲೀಸಾಗಿ ಬಗೆಹರಿಯಬಹುದು ಎಂದು ಅಂದಾಜಿಸಿದ್ದ ಕೆಲಸಗಳು, ಯೋಜನೆಗಳು ಗೋಜಲು ಗೋಜಲಾಗಿ ಆತಂಕಕ್ಕೆ ಕಾರಣ ಆಗುವಂಥ ಸಾಧ್ಯತೆ ಇದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ವಿಪರೀತ ನಿರೀಕ್ಷೆ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಮನೆ ದೇವರ ಸ್ಮರಣೆ, ಆರಾಧನೆಯಿಂದ ಕೆಲವು ಸಮಸ್ಯೆಗಳನ್ನು ಎದುರಿಸುವುದಕ್ಕೆ ಬಲ ದೊರೆಯುತ್ತದೆ. ಹಣಕಾಸನ್ನು ಹೊಂದಿಕೆ ಮಾಡುವುದಕ್ಕೆ ಸಮಯ ಮೀಸಲಿಡಬೇಕಾಗುತ್ತದೆ.
ಷೇರು- ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬೇಕು ಎಂದಿರುವವರಿಗೆ ಅನುಭವಿಗಳ ಮಾರ್ಗದರ್ಶನ ದೊರೆಯಲಿದೆ. ನಿಮ್ಮ ಉಳಿತಾಯದ ದೊಡ್ಡ ಭಾಗವನ್ನು ಹೂಡಿಕೆ ಮಾಡುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ತಲೆದೋರಬಹುದು. ತವರು ಮನೆಯಿಂದ ಆಸ್ತಿ, ಹಣಕಾಸು ವಿಚಾರವಾಗಿ ಚರ್ಚೆ ಮಾಡುವ ಬಗ್ಗೆ ಹೆಣ್ಣುಮಕ್ಕಳಿಗೆ ಆಹ್ವಾನ ಬರಬಹುದು. ಮುಕ್ತವಾದ ಆಲೋಚನೆಯನ್ನು ಇರಿಸಿಕೊಳ್ಳುವುದು ಮುಖ್ಯ.
ಆಕರ್ಷಕವಾದ ಲಾಭ ದೊರೆಯುತ್ತದೆ ಎಂದು ಕಾಗದದ ಮೇಲೂ ಲೆಕ್ಕಾಚಾರ ತೋರಿಸಿದರು ಎಂಬ ಕಾರಣಕ್ಕೆ ಬಂಡವಾಳ ಹಾಕುವುದಕ್ಕೆ ಮುಂದಾಗಬೇಡಿ. ಈ ದಿನ ನಿಮ್ಮ ಮನೆಯ ಹತ್ತಿರ ಇರುವ ನರಸಿಂಹ ದೇವರ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದೂರಪ್ರಯಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ.