AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 27, 2023 | 12:30 AM

Share

ಇಂದಿನ ನಿಮ್ಮ ರಾಶಿ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:50ರ ವರೆಗೆ, ಯಮಘಂಡ ಕಾಲ ಸಂಜೆ 06:16 ರಿಂದ 07:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ ಮಧ್ಯಾಹ್ನ 11:03ರ ವರೆಗೆ.

ಸಿಂಹ: ಉದ್ಯೋಗದ ಸ್ಥಳವು ನಿಮಗೆ ಖುಷಿಯ ಸ್ಥಾನವಾಗಲಿದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಲಿದ್ದೀರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯನ್ನು ನೀವು ಇಷ್ಟಪಡಲಾರಿರಿ. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಸ್ವಲ್ಪಮಟ್ಟಿಗೆ ಖರ್ಚನ್ನು ಮಾಡುವ ಅನಿವಾರ್ಯತೆ ಬರಬಹುದು. ಸಂಗಾತಿಯಿಂದ ಹೊಗಳಿಕೆಯನ್ನು ಪಡೆಯುವಿರಿ. ಹೊರಗಿನ ವಸ್ತುವನ್ನು ಹೆಚ್ಚು ಸೇವಿಸುವಿರಿ. ನಿಮ್ಮ ಪ್ರಯತ್ನವು ಸಫಲತೆಯನ್ನು ಕಾಣುವುದು. ಗುರಿಯನ್ನು ಸೇರುವ ಮಾರ್ಗದ ಬಗ್ಗೆ ಸ್ಪಷ್ಟತೆ ಇರಲಿ. ಉತ್ತಮ ದಿನಗಳ ನಿರೀಕ್ಷೆಯಲ್ಲಿ ನೀವು ಇರುವಿರಿ.

ಕನ್ಯಾ: ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಆತಂಕ ಇರಲಿದೆ. ಪರೀಕ್ಷೆಯ ಭಯವು ನಿಮ್ಮ ಅಧ್ಯಯನ ದಿಕ್ಕನ್ನೇ ತಪ್ಪಿಸಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟ, ಮಾತು ಕತೆಗಳಲ್ಲಿಯೇ ಮುಕ್ತಾಯವಾಗಲಿದೆ. ಮಾತನಾಡವೇಕಾದ ಸಂಧರ್ಭದಲ್ಲಿ ಮೌನ ವಹಿಸುವಿರಿ. ಕಾಲ್ಪನಿಕ ಜಗತ್ತಿನಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕಬೇಕಾದುದು ಮಾತ್ರ ಸಿಗಲಿದೆ. ದಕ್ಕುವುದು ಮಾತ್ರ ಸಿಕ್ಕುತ್ತದೆ. ನಿರುಪಯುಕ್ತ ವಸ್ತುಗಳನ್ನು ಮಾತ್ರ ನೀವು ದಾನ ಮಾಡುವಿರಿ. ಅಶುಭ ಸೂಚನೆ ಬಂದರೆ ಇಂದಿನ ಪ್ರಯಾಣವನ್ನು ಮುಂದೆ ಹಾಕಿ.

ತುಲಾ: ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದವರಿಗೆ ಸಂಕಷ್ಟ ಬರಬಹುದು. ಉದ್ಯೋಗದಲ್ಲಿ ಇರಬೇಕಾದ ಚಾಣಾಕ್ಷತನ ಹಾಗೂ ಮೂಲಭೂತವಾದ ದಾಖಲೆಗಳನ್ನು ಸರಿಯಾಗಿ ಇರಿಕೊಳ್ಳುವುದು ಒಳ್ಳೆಯದು. ಸಮಯವನ್ನು ಹಾಳುಮಾಡದೇ ಕೆಲಸದ ಕಡೆ ಗಮನ ಹೆಚ್ಚಿರಲಿದೆ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ಹಿರಿಯರಿಂದ ಬೈಗುಳವನ್ನು ತಿನ್ನುವಿರಿ.‌ ತಪ್ಪನ್ನು ತಿದ್ದಿಕೊಂಡು ಮುಂದೆ ಸರಿಯಾಗಲು ಬಯಸುವಿರಿ. ನೆಮ್ಮದಿಯನ್ನು ಬಹಳ ಶ್ರಮದಿಂದ‌ ಪಡೆಯಬೇಕಾಗುವುದು. ವಾಹನದಲ್ಲಿ ಓಡಾಟವನ್ನು ಕಡಿಮೆಗೊಳಿಸಿ.

ವೃಶ್ಚಿಕ: ಸ್ವಂತ ಆರೋಗ್ಯದ ಸುಧಾರಣೆಗೆ ಖರ್ಚು ಮಾಡುವಿರಿ. ಅಸಭ್ಯ ಮಾತುಗಳು ನಿಮಗೆ ಶೋಭೆಯನ್ನು ತರದು. ಎಲ್ಲರ ಜೊತೆ ಬೆರೆತು ಮಾತನಾಡುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ಕೊಡುವಿರಿ. ಹಳೆಯ ಪ್ರೇಮಪ್ರಕರಣವು ಬೆಳಕಿಗೆ ಬರಬಹುದು. ನೂತನ ಗೃಹವನ್ನು ಖರೀದಿಸಲಿದ್ದೀರಿ. ನಿಮಗೆ ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವ ಆಲೋಚನೆ ಒಳ್ಳೆಯದಲ್ಲ. ಮಾನಸಿಕ ಒತ್ತಡದಿಂದ ಇಂದಿನ ಕೆಲಸವು ಬೇಗನೆ ಸಾಕೆನಿಸಬಹುದು. ಎಲ್ಲದರಲ್ಲಿಯೂ ಪ್ರತ್ಯೇಕತೆಯನ್ನು ಬಯಸುವಿರಿ.