ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 15ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಅಲ್ಲಿ ಅನುಸರಿಸುವ ಕೆಲವು ಪದ್ಧತಿಗಳನ್ನು ಬದಲಾವಣೆ ಮಾಡುವುದಕ್ಕೆ ಯೋಜನೆ ರೂಪಿಸುವ ಸಾಧ್ಯತೆ ಇದೆ. ಇತರರ ವೈಯಕ್ತಿಕ ವಿಚಾರದ ಬಗ್ಗೆ ಈ ಹಿಂದೆ ನೀವು ಮಾತನಾಡಿದ್ದು ಈಗ ನಿಮಗೆ ಪಶ್ಚಾತ್ತಾಪ ಮೂಡುವಂತೆ ಮಾಡಬಹುದು. ತಂದೆಯವರು, ತಂದೆ ಸಮಾನರಾದವರ ಆರೋಗ್ಯ ವಿಚಾರ ಚಿಂತೆಗೆ ಗುರಿ ಆಗುವಂತೆ ಮಾಡುತ್ತದೆ. ಹಣಕಾಸಿನ ಅಗತ್ಯ ಹೆಚ್ಚು ಕಂಡುಬರಲಿದೆ.
ಲೆಕ್ಕ, ಸಂಶೋಧನೆ ಅಥವಾ ವಿಶ್ಲೇಷಣೆಯಂಥ ಉದ್ಯೋಗದಲ್ಲಿ ಇರುವವರು ನಿಮಗೆ ವಹಿಸಿದ ಜವಾಬ್ದಾರಿಯನ್ನು ಮುಗಿದಿದೆ ಎಂದು ಹೇಳುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿಕೊಳ್ಳಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ಮತ್ತೊಮ್ಮೆ ಪರಿಶೀಲನೆ ಮಾಡಿಸುವುದು ಉತ್ತಮ ನಿರ್ಧಾರ ಎನಿಸಿಕೊಳ್ಳುತ್ತದೆ. ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಾ ಇದ್ದಲ್ಲಿ ಈ ದಿನ ಅವಕಾಶಗಳ ಬಗ್ಗೆ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕ ಮಾಹಿತಿ ದೊರೆಯುತ್ತದೆ.
ನಿಮ್ಮಲ್ಲಿನ ಸೌಂದರ್ಯ ಪ್ರಜ್ಞೆ ಜಾಸ್ತಿ ಆಗಲಿದೆ. ಬ್ಯೂಟಿಪಾರ್ಲರ್, ಬ್ರ್ಯಾಂಡೆಡ್ ಶರ್ಟ್, ಪ್ಯಾಂಟ್ ಅಥವಾ ಬಟ್ಟೆಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಕೂಡ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಲ್ಲಿ ಎಷ್ಟು ಹಾಗೂ ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ ಎಂಬ ಬಗ್ಗೆ ನಿಗಾ ಇರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಖರ್ಚು ಅಳತೆ ಮೀರಿ ಹೋಗುತ್ತದೆ. ಅನಗತ್ಯ ಸಾಲ, ವೆಚ್ಚಗಳನ್ನು ಮಾಡುವಂತಾಗುತ್ತದೆ.
ಎಲ್ಲರನ್ನೂ ಒಪ್ಪಿಸಿ ಅಥವಾ ಮೆಚ್ಚಿಸಿ ಕೆಲಸ ಮಾಡುವುದು ಅಸಾಧ್ಯದ ಮಾತು. ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಾಗಿ. ದಾಕ್ಷಿಣ್ಯದ ಮಾತಿಗೆ ಸಿಲುಕಿಕೊಂಡು, ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ಈಗಾಗಲೇ ಪ್ರಯತ್ನಿಸುತ್ತಿದ್ದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಸೆಕೆಂಡ್ ಹ್ಯಾಂಡ್ ಸ್ಕೂಟರ್, ಬೈಕ್ ಖರೀದಿ ಮಾಡುವಂತೆ ಸ್ನೇಹಿತರು, ಸಂಬಂಧಿಗಳು ಸಲಹೆ ನೀಡಿದರೆ ಅಥವಾ ನಿಮಗೇ ಆ ಆಲೋಚನೆ ಇದ್ದಲ್ಲಿ ಅದನ್ನು ಮನಸ್ಸಿನಿಂದ ತೆಗೆದುಹಾಕಿ.
ಸಣ್ಣ- ಪುಟ್ಟ ತಮಾಷೆ, ಮನರಂಜನೆ, ಕುಟುಂಬದವರ ಜತೆಗೆ ಕಿರು ಪ್ರವಾಸ ಇವೆಲ್ಲ ಮನಸ್ಸಿಗೆ ಸಂತೋಷ, ನೆಮ್ಮದಿಯನ್ನು ನೀಡುವಂಥದ್ದು. ಮನೆಯಲ್ಲಿ, ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ಗೌರವಾದರಗಳು ಹೆಚ್ಚಾಗಲಿವೆ. ಹೊಸ ಆದಾಯ ಮೂಲಗಳನ್ನು ಹುಡುಕಿಕೊಳ್ಳಲಿದ್ದೀರಿ. ಸಂಗಾತಿಯ ಆರೋಗ್ಯ ಸಮಸ್ಯೆಯು ನಿಮಗೆ ಚಿಂತೆ ತರಲಿದೆ. ಧನ್ವಂತರಿ ನಾರಾಯಣನನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಳ್ಳಿ. ನಿಮ್ಮಿಂದ ಸಾಧ್ಯವಾದಲ್ಲಿ ದೇವರ ಮನೆಯಲ್ಲಿ ಹಾಲು- ಸಕ್ಕರೆಯನ್ನು ಅರ್ಪಣೆ ಮಾಡಿ.
ಆಸ್ತಿಯನ್ನೋ ವಾಹನವನ್ನೋ ಅಥವಾ ಮತ್ಯಾವುದಾದರೂ ಮಾರಾಟಕ್ಕೆ ಅಂತ ಇಟ್ಟಿದ್ದಲ್ಲಿ ಸೂಕ್ತ ಖರೀದಿದಾರರು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಸಾಲಗಳು ಇರುವವರು ಅದನ್ನು ತೀರಿಸುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದೀರಿ. ಯಾವುದೇ ಕೆಲಸವನ್ನು ಈ ದಿನ ಧಾವಂತದಿಂದ ಮಾಡಬೇಡಿ. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆಯನ್ನು ಮಾಡಿ. ತಂದೆ- ತಾಯಿಯ ಪ್ರವಾಸಕ್ಕಾಗಿ ಸಿದ್ಧತೆ ಮಾಡಿಕೊಡಲಿದ್ದೀರಿ.
ಈ ದಿನ ನಿಮ್ಮ ತಾಳ್ಮೆ, ಸಂಯಮ, ಆತ್ಮಸ್ಥೈರ್ಯದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಆದರೆ ಇದು ನಿಮಗೆ ನಿಧಾನವಾಗಿ ಅನುಭವಕ್ಕೆ ಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡುತ್ತಿರುವವರಿಗೆ ದೀರ್ಘಾವಧಿಯಲ್ಲಿ ಲಾಭದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಮ್ಯಾನೇಜ್ ಮೆಂಟ್ ಪರವಾದ ಕೆಲಸಗಳನ್ನು ಮಾಡುವಂಥ ಉನ್ನತ ಹುದ್ದೆಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿರಲಿದೆ. ಊಟ- ತಿಂಡಿ ವಿಚಾರದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಅಸಮಾಧಾನ ಕಾಣಿಸಲಿದೆ.
ನಿಮ್ಮ ಸ್ವಭಾವದಲ್ಲಿ ತಪ್ಪುಗಳನ್ನು ಹೇಳುವವರು ಈ ದಿನ ಹೆಚ್ಚಾಗಬಹುದು. ಸಣ್ಣ- ಪುಟ್ಟ ವೈಫಲ್ಯಕ್ಕೂ ನಿಮ್ಮ ನಿರ್ಧಾರ ಹಾಗೂ ಬೇಜವಾಬ್ದಾರಿ ಕಾರಣ ಎಂದು ಕೆಲವರು ದೂರಬಹುದು. ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈ ಹಿಂದೆ ನೀವು ಮಾಡಿದ್ದ ಕೆಲಸ ಹಾಗೂ ತೆಗೆದುಕೊಂಡಿದ್ದ ನಿರ್ಧಾರಗಳು ಮತ್ತು ಪಟ್ಟ ಶ್ರಮದ ಫಲವಾಗಿ ಈ ದಿನ ನಿಮ್ಮ ವರ್ಚಸ್ಸು ಉಳಿಯಲಿದೆ. ಎಲ್ಲಕ್ಕೂ ಪ್ರತಿಕ್ರಿಯೆ ನೀಡಬೇಕು, ಗಟ್ಟಿಯಾದ ಧ್ವನಿಯಲ್ಲಿ ಉತ್ತರ ನೀಡಬೇಕು ಎಂದು ಹೊರಡಬೇಡಿ.
ಈ ದಿನ ದೈಹಿಕ, ಮಾನಸಿಕ ವಿಶ್ರಾಂತಿಯ ಅಗತ್ಯ ಕಂಡುಬರುತ್ತದೆ. ಕುಟುಂಬದವರಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವುದಕ್ಕೆ ಆಲೋಚನೆ ಮಾಡುತ್ತೀರಿ. ಸಂಗಾತಿಯ ಮಾತಿಗೆ ಹಾಗೂ ಸಲಹೆಗೆ ಬೆಲೆ ನೀಡಿ. ಮನೆಗೆ ಅಗತ್ಯ ಇರುವ ಕೆಲವು ವಸ್ತುಗಳನ್ನು ತರುವಂಥ ಯೋಗ ಇದೆ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಕೆಲವು ಮುಖ್ಯ ಮಾಹಿತಿಗಳನ್ನು ಕೇಳುವಂಥ ಸಾಧ್ಯತೆ ಇದೆ ಅಥವಾ ನಿಮ್ಮಿಂದ ಕೆಲವು ವಿಚಾರಗಳನ್ನು ಕೇಳಬಹುದು. ಇದರಿಂದ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.