Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 23ರ ದಿನಭವಿಷ್ಯ

| Updated By: Ganapathi Sharma

Updated on: Jun 23, 2023 | 11:08 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 23ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 23ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us on
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 23ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಬಗ್ಗೆ ನೀವೇ ಹೇಳಿಕೊಂಡು ಒಳ್ಳೆ ಕೆಲಸಗಾರ ಎಂದೆನಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಈ ದಿನ ವಾದ- ವಿವಾದಗಳಿಗೆ ಅವಕಾಶ ಮಾಡಿಕೊಡದಂತೆ ಹಾಗೂ ಯಾವುದೇ ಪ್ರಶ್ನೋತ್ತರಗಳು ದೀರ್ಘವಾಗಿ ಎಳೆಯದಂತೆ ಎಚ್ಚರಿಕೆಯನ್ನು ವಹಿಸಿ. ನಿಮಗೆ ಗೊತ್ತಿರುವ ಸಂಗತಿಗಳು, ವ್ಯಕ್ತಿಗಳೇ ನಿಮ್ಮ ಪರವಾಗಿ ಇರುವುದಿಲ್ಲ. ಆದ್ದರಿಂದ ಎಚ್ಚರಿಕೆ ಬಹಳ ಮುಖ್ಯವಾಗುತ್ತದೆ. ಹೊಸ ಕೆಲಸದ ಅವಕಾಶಗಳು ಅಂತ ಬಂದರೂ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಒಪ್ಪಿಗೆ ನೀಡಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸಂಗಾತಿ ಜತೆಗೆ ಆಪ್ತವಾಗಿ ಸಮಯ ಕಳೆಯುವುದಕ್ಕೆ ಅವಕಾಶ ದೊರೆಯಲಿದೆ. ಮನೆ ನಿರ್ಮಾಣ, ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದು ಹಾಗೂ ಮನೆಯೊಳಗಿನ ಕೆಲ ವ್ಯವಸ್ಥೆಗಳಲ್ಲಿ ಮಾರ್ಪಾಟು ಮಾಡುವುದು ಇಂಥದ್ದರ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಈಗಾಗಲೇ ಸಂಬಂಧಿಗಳು, ಸ್ನೇಹಿತರಿಂದ ಸಾಲ ಪಡೆದುಕೊಂಡಿದ್ದೀರಿ ಎಂದಾದಲ್ಲಿ ಅವರು ಅದನ್ನು ಕೇಳಬಹುದು, ಒಂದಿಷ್ಟು ಗಟ್ಟಿಯಾಗಿ ಬೇಕೇಬೇಕು ಎಂದು ಕೇಳಬಹುದು. ಇದಕ್ಕೆ ತಯಾರಾಗಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ರಾಜಕಾರಣಿಗಳ ಜತೆಗೆ ಸಖ್ಯ ಇರುವಂತಹ ವ್ಯಕ್ತಿಗಳಿಗೆ ಒಂದಿಷ್ಟು ಪ್ರಾಜೆಕ್ಟ್ ಗಳು ದೊರೆಯುವಂಥ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಪ್ರಮುಖ ಸಂಘ- ಸಂಸ್ಥೆಗಳು, ನಿಗಮ- ಮಂಡಳಿಗಳಿಗೆ ನಿಮ್ಮನ್ನು ನೇಮಿಸುವುದಾಗಿ ಭರವಸೆ ಅಥವಾ ಮಾತು ನೀಡಬಹುದು. ಈ ಹಿಂದೆ ನೀವು ಯಾರಿಗೆಲ್ಲ ಮಾತು ನೀಡಿದ್ದಿರಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಒಂದು ಪ್ರಯತ್ನ ಇರಲಿ, ಕೆಲಸ ಆದರೆ ಆಗಲಿ- ಆಗದಿದ್ದರೆ ಬೇಡ ಎಂದುಕೊಂಡಿದ್ದ ಕೆಲಸಗಳು ಆಗಿಬಿಡುವಂಥ ಯೋಗಗಳಿವೆ. ವೃತ್ತಿನಿರತರು ಇದ್ದಲ್ಲಿ ಹಲವು ರೀತಿಯಲ್ಲಿ ಅಚ್ಚರಿಯ ಬೆಳವಣಿಗೆಗಳು ಆಗಲಿವೆ. ತೀರಾ ಆಪ್ತರ ಜತೆಗೆ ಕೆಲವು ಟೆಂಡರ್ ಗಳ ವಿಚಾರಕ್ಕೆ ತುರುಸಿನ ಸ್ಪರ್ಧೆ ಏರ್ಪಡಬಹುದು. ಬ್ಯಾಂಕ್ ವ್ಯವಹಾರಗಳನ್ನು ನಿಯಮಿತವಾಗಿ ಮಾಡುವವರು ಕೆಲವು ಗೊಂದಲಗಳನ್ನು ಎದುರಿಸುವಂತಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇಲ್ಲ ಎನ್ನಬೇಕಾದ ಹಲವು ಕಡೆಗೆ ಹೌದು ಎಂದು ಹೇಳಿ, ಆ ನಂತರ ಆಲೋಚಿಸುವಂತಾಗುತ್ತದೆ. ಆದ್ದರಿಂದ ಸಂಕೋಚಕ್ಕೆ ಸಿಲುಕದಂತೆ ನೋಡಿಕೊಳ್ಳಿ. ಹೆಣ್ಣುಮಕ್ಕಳು ವಸ್ತ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಮುಖ್ಯವಾಗಿ ಫ್ಯಾಷನ್ ದಿರಿಸುಗಳಿಗಾಗಿ ಖರ್ಚಾಗಲಿದೆ. ವಿದೇಶಗಳಲ್ಲಿ ವ್ಯಾಸಂಗಕ್ಕೆ ತೆರಳುವುದಕ್ಕೆ ಹಣಕಾಸಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅನುಕೂಲ ಒದಗಿ ಬರಲಿದೆ. ಆಹಾರ ಪಥ್ಯದ ವಿಚಾರದಲ್ಲಿ ಕಟ್ಟುನಿಟ್ಟಾಗಿರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮಲ್ಲಿ ಕೆಲವರಿಗೆ ಗುಪ್ತಾಂಗ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ವಚ್ಛತೆಯ ಕಡೆಗೆ ನಿಗಾ ಮಾಡಿ. ಸ್ವಂತ ಉದ್ಯಮ, ವ್ಯವಹಾರ ಮಾಡುವಂಥವರಿಗೆ ಕೆಲಸದಲ್ಲಿ ಆಸಕ್ತಿ, ಉತ್ಸಾಹ ಕಡಿಮೆ ಆಗಬಹುದು. ವನ್ಯಪ್ರಾಣಿಗಳ ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿರುವವರಿಗೆ ವರ್ಗಾವಣೆ ಅಥವಾ ಪದೋನ್ನತಿ ಆಗಬಹುದು ಅಥವಾ ಸಿಗುವ ಸುಳಿವು ದೊರೆಯಬಹುದು. ದುಡ್ಡು ಖರ್ಚಿನ ವಿಚಾರದಲ್ಲಿ ಚಂಚಲತೆ ಮಾಡಿಕೊಳ್ಳದಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲವು ಘಟನೆಗಳು ನಡೆಯಲಿವೆ. ಸ್ವ ಉದ್ಯೋಗಿಗಳಾಗಿದ್ದಲ್ಲಿ ಆದಾಯ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಆಗಲಿಕ್ಕಿಲ್ಲ ಎಂದು ಆಸೆಯನ್ನೇ ಬಿಟ್ಟಂಥ ಕೆಲಸಗಳು ದಿಢೀರ್ ಆಗಿಬಿಡಲಿವೆ. ಹೊಸ ಪಾದರಕ್ಷೆ, ಮಕ್ಕಳಿಗಾಗಿ ಬಟ್ಟೆ, ತಿಂಡಿ- ತಿನಿಸುಗಳು ಇಂಥವಕ್ಕೆ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚುಗಳು ಆಗಲಿವೆ. ಆದರೆ ಇದರಿಂದ ನಿಮ್ಮ ಮನಸಿಗೆ ಸಮಾಧಾನ, ಸಂತೋಷ ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೋಲು ಕೊಟ್ಟು ಹೊಡೆಸಿಕೊಂಡರು ಎಂಬಂಥ ಸ್ಥಿತಿ ಈ ದಿನ ನಿಮ್ಮದಾಗಿರುತ್ತದೆ. ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ನಿಮ್ಮನ್ನೇ ಪ್ರಶ್ನೆ ಕೇಳಿದಲ್ಲಿ ಟು ದಿ ಪಾಯಿಂಟ್ ಎಂಬಂತೆ ಉತ್ತರಿಸಿ. ಒಂದು ವೇಳೆ ಬುದ್ಧಿವಂತಿಕೆ ಪ್ರದರ್ಶನಕ್ಕೆ ಇಳಿದಿರೋ ಅದರಿಂದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ಹೊಸದಾಗಿ ಮದುವೆ ಆದವರು ಹಳೇ ವಿಚಾರಗಳನ್ನು ಈಗ ಪ್ರಸ್ತಾವ ಮಾಡಿ, ಮನಸ್ಸನ್ನು ಕಹಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮಾತು ವಿಪರೀತಕ್ಕೆ ಹೋಗದಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಖರ್ಚಿನ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಆಗಲಿದೆ. ಅಂದುಕೊಂಡಿದ್ದ ಬಜೆಟ್ ಅಳತೆ ಮೀರಿ ಹೋಗಲಿದೆ. ಇತರರು ಛೇಡಿಸಿದರು ಅಥವಾ ಮೂದಲಿಸಿದರು ಎಂಬ ಕಾರಣಕ್ಕೆ ಕೈ ಮೀರಿ ಖರ್ಚು ಮಾಡುವುದಕ್ಕೆ ಹೋಗದಿರಿ. ಆಪ್ತ ಸ್ನೇಹಿತರೊಬ್ಬರು ನಿಮ್ಮಿಂದ ಬಹಳ ದೊಡ್ಡ ಮಟ್ಟದ ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಲಿದ್ದೀರಿ.

Published On - 1:00 am, Fri, 23 June 23