AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mercury transit in Gemini: ಜೂನ್ 24ರಿಂದ ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಎಷ್ಟು ಸಮಯ ಎಂಬುದು ನೋಡಿಕೊಳ್ಳಿ

ಇದೇ ಜೂನ್ ತಿಂಗಳ 24ನೇ ತಾರೀಕಿನಿಂದ ಈ ಐದು ರಾಶಿಯವರಿಗೆ ಶುಭ ಫಲಗಳು ದೊರೆಯುವ ಕಾಲ. ಇದನ್ನು ನೀಡುವುದು ಬುಧ ಗ್ರಹ.

Mercury transit in Gemini: ಜೂನ್ 24ರಿಂದ ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಎಷ್ಟು ಸಮಯ ಎಂಬುದು ನೋಡಿಕೊಳ್ಳಿ
ಸಾಂದರ್ಭಿಕ ಚಿತ್ರ (Tv9 kannada)
TV9 Web
| Edited By: |

Updated on:Jun 23, 2023 | 5:00 PM

Share

ಇದೇ ಜೂನ್ ತಿಂಗಳ 24ನೇ ತಾರೀಕಿನಿಂದ ಈ ಐದು ರಾಶಿಯವರಿಗೆ ಶುಭ ಫಲಗಳು ದೊರೆಯುವ ಕಾಲ. ಇದನ್ನು ನೀಡುವುದು ಬುಧ ಗ್ರಹ. ಎಲ್ಲಿಯ ತನಕ ಬುಧ ತನ್ನ ಸ್ವಕ್ಷೇತ್ರವಾದ ಮಿಥುನದಲ್ಲಿ ಇರುತ್ತದೋ ಅಲ್ಲಿಯ ತನಕ ಈ ಶುಭ ಫಲಗಳು ಅನುಭವಕ್ಕೆ ಬರುತ್ತವೆ. ಇನ್ನು ಒಳ್ಳೆಯದು ಅಂದರೆ ಏನಾಗುತ್ತದೆ, ಅದರ ಫಲಾಫಲಗಳೇನು ಅನ್ನೋದನ್ನ ಮುಂದೆ ತಿಳಿದುಕೊಳ್ಳಿ.

ವೃಷಭ

ಸಂಗಾತಿಯ ಮೂಲಕ, ಕುಟುಂಬದಲ್ಲಿನ ಯುವ ಸದಸ್ಯರ ಆದಾಯ ಹೆಚ್ಚಳದೊಂದಿಗೆ ಹಣದ ಹರಿವು ಶುರುವಾಗುತ್ತದೆ. ಮಾತಿನಲ್ಲಿ ಬುದ್ಧಿವಂತಿಕೆ ಎದ್ದು ಕಾಣುತ್ತದೆ. ಕೆಲಸಗಳನ್ನು ಬಹಳ ಸಲೀಸಾಗಿ ಮಾಡಿಕೊಂಡು ಬರುವಂಥ ಚಾಕಚಕ್ಯತೆ ಬರುತ್ತದೆ. ಪ್ರಯಾಣದಲ್ಲಿ ಲಾಭಗಳಾಗಲಿವೆ. ಕುಟುಂಬದ ಬಳಕೆಗಾಗಿ ಹೊಸ ವಾಹನವನ್ನು ಬುಕ್ ಮಾಡುವಂಥ ಯೋಗ ಇದೆ. ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯಲಿದ್ದೀರಿ. ಪಾರ್ಟಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೀರಿ.

ಸಿಂಹ

ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿಸಿ ತರುವ ಯೋಗ ಇದೆ. ಇನ್ನು ವಾಹನ ಬಳಸುವಂಥವರು ಅದರಲ್ಲಿ ಇನ್ಫೋಟೇನ್ ಮೆಂಟ್ ಸಿಸ್ಟಮ್ ಹಾಕಿಸುವುದು, ವಾಹನದೊಳಗೆ ಸೀಟ್​​ಗೆ ಹೊಸ ಮಟೀರಿಯಲ್ ಹಾಕಿಸುವುದು ಇತ್ಯಾದಿ ಮಾಡಿಸುತ್ತೀರಿ. ಸ್ನೇಹಿತರು, ಸಂಬಂಧಿಗಳು ಅಥವಾ ಕುಟುಂಬ ವರ್ಗದ ಜತೆಗೆ ವಿಲಾಸಿ ಹೋಟೆಲ್ ಗಳಿಗೆ, ರೆಸಾರ್ಟ್ ಗಳಿಗೆ ಹೋಗುವಂಥ ಯೋಗ ಇದೆ. ಬೆಳ್ಳಿ ತಟ್ಟೆ, ಲೋಟಗಳು, ತಂಬಿಗೆ ಇಂಥವನ್ನು ಸಹ ಖರೀದಿ ಮಾಡಲಿದ್ದೀರಿ.

ಇದನ್ನೂ ಓದಿ:ಬುಧ, ರವಿಯಿಂದ ಸೃಷ್ಟಿಯಾಗುವ ಬಲಿಷ್ಠ ರಾಜಯೋಗ ನಿಮ್ಮ ಜಾತಕದಲ್ಲೂ ಇದೆಯಾ? ಇಂದೇ ಪರಿಶೀಲಿಸಿ

ವೃಶ್ಚಿಕ

ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಈ ಹಿಂದೆ ಯಾರಿಗೋ ಸಾಲ ಕೊಟ್ಟಿದ್ದೆ ಎಷ್ಟು ಸಲ ಕೇಳಿದರೂ ಕೊಡುತ್ತಿಲ್ಲ ಎಂಬ ಸ್ಥಿತಿ ಇದ್ದಲ್ಲಿ ಆ ಹಣ ಬರಬಹುದು. ಇನ್ನು ಅನಾರೋಗ್ಯದ ಕಾರಣಕ್ಕೆ ಇಷ್ಟು ಖರ್ಚು ಆಗಬಹುದು ಎಂದಿದ್ದ ಟ್ರೀಟ್ ಮೆಂಟ್ ಗಳಿಗೆ ಆಗುವಂಥ ವೆಚ್ಚ ಕಡಿಮೆ ಆಗಬಹುದು. ಆರೋಗ್ಯದಲ್ಲಿ ಸುಧಾರಣೆ ನಿರೀಕ್ಷಿಸಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯ ಜಾಸ್ತಿ ಆಗಲಿದೆ.

ಮಕರ

ಒಂದೇ ಕೆಲಸವನ್ನು ಎಷ್ಟು ಸಲ ಮಾಡುತ್ತಾ ಇದ್ದೀನಿ ಒಂದಲ್ಲಾ ಒಂದು ಕಾರಣಕ್ಕೆ ಮುಗಿಯುತ್ತಾ ಇಲ್ಲ ಅನ್ನೋ ಚಿಂತೆಯಲ್ಲಿ ಇದ್ದರೆ ಅದು ಸಲೀಸಾಗಿ ಪೂರ್ತಿ ಆಗುತ್ತೆ. ನಿಮ್ಮ ವಿರುದ್ಧ ಕೆಲಸ ಮಾಡುತ್ತಿರುವವರಿಗೆ ಸಮಸ್ಯೆಗಳಾಗಿ, ಆ ಜಾಗದಿಂದಲೇ ಎತ್ತಂಗಡಿ ಆಗಿಬಿಡಬಹುದು. ಇನ್ನು ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿರುವವರು ಹಾಗೂ ಸ್ವಂತ ವ್ಯವಹಾರ ಮಾಡುತ್ತಿರುವವರು ಹೆಚ್ಚಿನ ಹಣ ನೋಡುವುದಕ್ಕೆ ಸಾಧ್ಯ ಆಗುತ್ತದೆ.

ಮೀನ

ತಾಯಿಯ ಮೂಲಕ ಬರಬೇಕಾದ ಹಣ, ಒಡವೆ, ಆಸ್ತಿ ಇಂಥವು ಬರುವಂಥ ಸಾಧ್ಯತೆ ಇದೆ. ವಾಹನ ಅಥವಾ ಆಸ್ತಿ ಮಾರಾಟಕ್ಕೆ ಇಟ್ಟಿದ್ದರೆ ಅದಕ್ಕೆ ಕೂಡ ಒಳ್ಳೆ ಬೆಲೆ ಬರುವಂಥ ಯೋಗ ಇದೆ. ಕಮಿಷನ್ ಮೂಲಕ ಹೆಚ್ಚಿನ ಹಣ ಬರುವಂಥ ಸಾಧ್ಯತೆ ಇದೆ. ಎಲ್ ಐಸಿ ಏಜೆಂಟ್ ಗಳು, ಕಮಿಷನ್ ಆಧಾರದಲ್ಲಿ ವ್ಯವಹಾರ ಮಾಡುವಂಥವರಿಗೆ ಒಳ್ಳೆ ಮೊತ್ತ ಕೈ ಸೇರುತ್ತದೆ. ಸ್ವಲ್ಪ ಶ್ರಮ ಹಾಕಿದರೂ ದೊಡ್ಡ ಮಟ್ಟದ ರಿಟರ್ನ್ಸ್ ನಿರೀಕ್ಷೆ ಮಾಡಬಹುದು.

ರಾಶಿಭವಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Fri, 23 June 23

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!