AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಧ, ರವಿಯಿಂದ ಸೃಷ್ಟಿಯಾಗುವ ಬಲಿಷ್ಠ ರಾಜಯೋಗ ನಿಮ್ಮ ಜಾತಕದಲ್ಲೂ ಇದೆಯಾ? ಇಂದೇ ಪರಿಶೀಲಿಸಿ

ಈ ದಿನದ ಲೇಖನದಲ್ಲಿ ಬಲಿಷ್ಠ ರಾಜಯೋಗ ಎಂದರೇನು? ಬಲಿಷ್ಠ ರಾಜಯೋಗದ ಸೃಷ್ಠಿ ಹೇಗೆ? ಮತ್ತು ರಾಜಯೋಗದ ಬಗೆಗಿನ ಮಾಹಿತಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ.

ಬುಧ, ರವಿಯಿಂದ ಸೃಷ್ಟಿಯಾಗುವ ಬಲಿಷ್ಠ ರಾಜಯೋಗ ನಿಮ್ಮ ಜಾತಕದಲ್ಲೂ ಇದೆಯಾ? ಇಂದೇ ಪರಿಶೀಲಿಸಿ
ಸಾಂದರ್ಭಿಕ ಚಿತ್ರ
ಸ್ವಾತಿ ಎನ್​ಕೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 08, 2023 | 12:26 PM

Share

ಬಲಿಷ್ಠ ರಾಜಯೋಗ ಎಂದರೇನು? ಬಲಿಷ್ಠ ರಾಜಯೋಗದ ಸೃಷ್ಠಿ ಹೇಗೆ ಎಂಬುದನ್ನು ಉದಾಹರಣೆ ಸಹಿತವಾಗಿ ವಿವರಿಸಲಾಗುತ್ತಿದೆ. ಅದು ಯಾವುದು ಅಂದರೆ, ಯಾವ ಜಾತಕರಿಗೆ ಲಗ್ನಾಧಿಪತಿಯು ಬುಧ ಗ್ರಹವಾಗಿದ್ದು, ಆ ಗ್ರಹವು ಲಾಭ ಸ್ಥಾನದಲ್ಲಿ, ಅಂದರೆ ಹನ್ನೊಂದನೇ ಮನೆಯಲ್ಲಿ ಅದೇ ಗ್ರಹ ಇದ್ದಾಗ ಮಾತ್ರ ಬಲಿಷ್ಠ ರಾಜ ಯೋಗ ಸೃಷ್ಟಿ ಆಗುತ್ತದೆ. ಅದರ ಪರಿಣಾಮವನ್ನು ಇನ್ನೂ ಹೆಚ್ಚಿನದಾಗಿ ನೋಡಬೇಕು ಎಂದಾದರೆ, ಲಾಭಾದಿಪತಿ (ಅಂದರೆ, ಲಗ್ನದಿಂದ ಲೆಕ್ಕ ಹಾಕಿದಾಗ ಹನ್ನೊಂದನೇ ಮನೆಯ ಅಧಿಪತಿಯಾಗಿ) ಬುಧ ಇದ್ದು, ಜತೆಗೆ ರವಿ ಗ್ರಹವೂ ಅಲ್ಲೇ ಇದ್ದಲ್ಲಿ ರಾಜಯೋಗವನ್ನು ಕಾಣುತ್ತಾರೆ.

ಲಗ್ನಾಧಿಪತಿ ಬುಧನಾಗಿದ್ದು ಅಂದರೆ, ಇದು ಮಿಥುನ ಹಾಗೂ ಕನ್ಯಾ ಲಗ್ನಗಳಿಗೆ ಅನ್ವಯಿಸುತ್ತದೆ. ಜನ್ಮ ಜಾತಕದಲ್ಲಿ ಮಿಥುನ ಲಗ್ನವಾಗಿದ್ದು, ಬುಧನು ಮೇಷ ರಾಶಿಯಲ್ಲಿ ಇದ್ದರೆ ಅದು ರಾಜಯೋಗ. ಅದೇ ರೀತಿ ಕನ್ಯಾ ಲಗ್ನವಾಗಿದ್ದು, ಕರ್ಕಾಟಕದಲ್ಲಿ ಬುಧನಿದ್ದಾಗ ಆಗಲೂ ರಾಜಯೋಗ. ಇನ್ನು ಎರಡನೇ ಉದಾಹರಣೆಯಾಗಿ, ಲಾಭಾಧಿಪತಿ ಬುಧನಾಗಿದ್ದು, ಅಲ್ಲಿ ರವಿಯ ಜತೆಗೆ ಬುಧನಿದ್ದಾಗ ಆಗಲೂ ರಾಜಯೋಗ ಆಗುತ್ತದೆ.

ಬಲಿಷ್ಠ ರಾಜಯೋಗ

ಇದು ಯಾವ ಲಗ್ನಕ್ಕೆ ಆಗುವುದಕ್ಕೆ ಸಾಧ್ಯ? ಸಿಂಹ ಲಗ್ನ ಜಾತಕರಿರುವವರಿಗೆ ಲಾಭ ಸ್ಥಾನ ಮಿಥುನ ರಾಶಿ ಆಗಿರುತ್ತದೆ. ಅಲ್ಲಿಗೆ ಲಾಭಾಧಿಪತಿ ಬುಧ ಆಗುತ್ತದೆ. ಜನ್ಮ ಜಾತಕದಲ್ಲಿ ಯಾರದು ಸಿಂಹ ಲಗ್ನವಾಗಿದ್ದು, ಮಿಥುನ ರಾಶಿಯಲ್ಲಿ ರವಿ- ಬುಧ ಗ್ರಹರು ಒಟ್ಟಿಗೆ ಇದ್ದಲ್ಲಿ ಅಂಥವರಿಗೆ ಬಲಿಷ್ಠ ರಾಜ ಯೋಗ ಉಂಟಾಗುತ್ತದೆ.

ಅದೇ ರೀತಿ, ಯಾರದು ವೃಶ್ಚಿಕ ಲಗ್ನ ಆಗಿರುತ್ತದೋ ಅಂಥವರಿಗೆ ಕನ್ಯಾ ರಾಶಿಯು ಲಾಭ ಸ್ಥಾನವಾಗಿರುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ. ಆದ್ದರಿಂದ ಜನ್ಮ ಜಾತಕದಲ್ಲಿ ವೃಶ್ಚಿಕ ಲಗ್ನವಾಗಿ, ಅಲ್ಲಿಗೆ ಹನ್ನೊಂದನೇ ಮನೆಯಲ್ಲಿ ರವಿ- ಬುಧರು ಒಟ್ಟಿಗೆ ಇದ್ದಲ್ಲಿ ಮಹಾನ್ ಯೋಗ ಎನಿಸಿಕೊಳ್ಳುತ್ತದೆ.

ಈಗ ಉದಾಹರಣೆ ವಿಚಾರಕ್ಕೆ ಬರುವುದಾದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರಿಗೂ ಈ ರೀತಿಯ ರಾಜಯೋಗ ಜಾತಕದಲ್ಲಿದೆ. ಇನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಆದ ಯೋಗಿ ಆದಿತ್ಯನಾಥ್ ಜಾತಕದಲ್ಲಿ ಲಾಭಾಧಿಪತಿ, ಅಂದರೆ ಹನ್ನೊಂದನೇ ಮನೆಯ ಅಧಿಪತಿಯಾದ ಬುಧ ಗ್ರಹವು ಕರ್ಮ ಸ್ಥಾನದಲ್ಲಿ, ಅಂದರೆ ಹತ್ತನೇ ಮನೆಯಲ್ಲಿ ಇದದೆ. ಇದು ಕೂಡ ರಾಜಯೋಗವನ್ನೇ ನೀಡುತ್ತದೆ.

ಇದನ್ನೂ ಓದಿ: ಬುಧ- ಶುಕ್ರರ ಅಂತರದಿಂದ ಸೆಪ್ಟೆಂಬರ್ ತನಕ ಮಳೆಗೆ ತತ್ವಾರ; ಇದು ಜ್ಯೋತಿಷ್ಯ ಲೆಕ್ಕಾಚಾರ

ಈ ರಾಜಯೋಗದ ವಿಚಾರದಲ್ಲಿ ಮತ್ತೂ ಒಂದು ಪ್ರಮುಖ ಸಂಗತಿ ಇದೆ. ಈ ರೀತಿಯ ಬುಧನಿಗೆ ತಾನು ಸ್ಥಿತನಿರುವ ರಾಶಿಯ ಅಧಿಪತಿಯು ಇಷ್ಟ ಸ್ಥಾನದಲ್ಲಿಯೋ ಅಥವಾ ಶುಭ ಪರಿವರ್ತನೆಯಲ್ಲಿಯೋ ಇರಬೇಕು.

ಪೂರ್ಣಾವಧಿ ಹಾಗೂ ಪರಮಾಧಿಕಾರ

ಯಾವ ಜಾತಕರಿಗೆ ಈ ರೀತಿ ಯೋಗ ಇರುತ್ತದೋ ಅಂಥವರು ಯಾವುದೇ ಹುದ್ದೆ ಸಿಕ್ಕರೂ ಪೂರ್ಣಾಧಿಕಾರವನ್ನೇ ಅನುಭವಿಸುತ್ತಾರೆ. ಮತ್ತೊಬ್ಬರ ಸಹಾಯ, ಹಂಗು ಇಲ್ಲದಂಥ ಪರಮಾಧಿಕಾರ ಇವರಿಗೆ ದೊರೆಯುತ್ತದೆ. ಹಾಗೆ ನೋಡಿದರೆ, ಕೆಲ ಬಾರಿ ಇಂಥ ರಾಜಯೋಗಗಳಿಗೆ ಭಂಗ ತರುವಂಥ ಯೋಗಗಳು ಎದುರಾಗುವುದು ಉಂಟು. ಆದರೆ ಈ ಮೇಲೆ ನೀಡಿದ ಮೂರೂ ಉದಾಹರಣೆಗಳಲ್ಲಿ ಯೋಗ ಭಂಗವಾಗಿಲ್ಲ.

ಇನ್ನು ದಶಾ-ಭುಕ್ತಿಗಳಲ್ಲಿ ಏನಾದರೂ ಕಂಟಕ ಎದುರಾದಲ್ಲಿ ಆಗ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಜಾತಕ ವಿಮರ್ಶೆಯನ್ನು ಕೂಲಂಕಷವಾಗಿ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಆಗಲಿ, ನರೇಂದ್ರ ಮೋದಿ ಆಗಲಿ ಅಥವಾ ಯೋಗಿ ಆದಿತ್ಯನಾಥ್ ಆಗಲಿ ಪರಮಾಧಿಕಾರವನ್ನೇ ಚಲಾಯಿಸುವ ಯೋಗ ಪಡೆದವರು. ಪೂರ್ಣಾವಧಿ ಅಧಿಕಾರವನ್ನು ಅನುಭವಿಸುವಂಥವರು. ಇವರಾಗಿಯೇ ಕೊಟ್ಟರೆ ಮತ್ತೊಬ್ಬರಿಗೆ ದಕ್ಕೀತು ವಿನಾ ಕಸಿಯುವುದಕ್ಕೆ ಕಷ್ಟ. ದಶಾ- ಭುಕ್ತಿಯಲ್ಲಿನ ಕಂಟಕಗಳು ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಬೇಕಾದ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ದುರಿತ ಸ್ಥಾನದಲ್ಲಿನ ಗುರು

ಈ ರಾಜಯೋಗದ ಜತೆಗೆ ಲಗ್ನಕ್ಕೋ ಚಂದ್ರನಿಗೋ ಅಥವಾ ಚಂದ್ರ ಸ್ಥಿತನಾಗಿರುವಂಥ ರಾಶಿಯ ಅಧಿಪತಿಗೋ ಲಗ್ನಾಧಿಪತಿಗೋ ಗುರು ದುರಿತ ಸ್ಥಾನದಲ್ಲಿ ಇದ್ದರೆ ಆ ಮನುಷ್ಯನಿಗೆ ಉದ್ವೇಗ, ತಾಳ್ಮೆ ಇಲ್ಲದಿರುವಿಕೆ ಇಂಥದ್ದು ಆಗುತ್ತದೆ. ಅಂಥ ಉದಾಹರಣೆಯನ್ನು ಸಿದ್ಧರಾಮಯ್ಯ ಅವರ ಜನ್ಮ ಜಾತಕದಲ್ಲಿ ನೋಡಬಹುದು. ಅವರ ಜನ್ಮ ಲಗ್ನಕ್ಕೆ ದುರಿತ ಸ್ಥಾನದಲ್ಲಿ ಗುರು ಇರುವುದರಿಂದ ಯಾವುದೇ ಕೆಲಸ ಬಾಕಿ ಇಡುವ ಕ್ರಮ ಇರುವುದಿಲ್ಲ. ಇದರಿಂದ ಇನ್ನೊಂದು ಹಾನಿಯೂ ಇದೆ.

ಇದು ದೈಹಿಕವಾದದ್ದು. ರಕ್ತದ ಒತ್ತಡ ಹೆಚ್ಚಾಗುತ್ತದೆ. ಸಿದ್ದರಾಮಯ್ಯ ಅವರಿಗೆ ರವಿಯು ವ್ಯಯಾಧಿಪತಿಯಾಗಿ (ಲಗ್ನಕ್ಕೆ ಹನ್ನೆರಡನೇ ಮನೆ) ನಿಪುಣ ಯೋಗ ನೀಡುವವನು. ದೇಹದಲ್ಲಿ ಕ್ಯಾಲ್ಷಿಯಂ , ಬಿ- ವಿಟಮಿನ್ ಕೊರತೆ ಉಂಟಾದೀತು.ಇದಕ್ಕೆ ಔಷಧಿ, ಪೂಜೆ ಪುರಸ್ಸರಗಳಿಗಿಂತಲೂ ಮುಖ್ಯವಾಗಿ ಗಡಿಬಿಡಿ ಉದ್ವೇಗ ಮಾಡದೆ ಸಂಯಮ- ತಾಳ್ಮೆಯಿಂದ ಇರಬೇಕಾಗುತ್ತದೆ. ಅಂದರೆ ಒತ್ತಡದ ಸನ್ನಿವೇಶಗಳಲ್ಲಿ ಅರ್ಧ ಗಂಟೆ ಏಕಾಂತದಲ್ಲಿ ಮೌನ ವಹಿಸಿದರೆ ಉತ್ತಮ.

ಲೇಖಕರು- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು