Nithya Bhavishya: ಈ ರಾಶಿಯವರಿಗೆ ರಾಜಕೀಯ ಪ್ರವೇಶಕ್ಕೆ ಬೆಂಬಲ ಸಿಗಲಿದೆ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 8) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 8 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ : ಬ್ರಹ್ಮ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ ಮಧ್ಯಾಹ್ನ 10:55ರ ವರೆಗೆ.
ಸಿಂಹ: ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ದಾಖಲೆಗಳ ವಿಚಾರದಲ್ಲಿ ಸರಿಯಾಗಿರಿ. ಕುಟುಂಬದಲ್ಲಿ ನಿಮ್ಮ ಕುರಿತು ಬೇಸರ ಉಂಟಾಗಬಹುದು. ಕಳೆದುಕೊಂಡದ್ದರ ಬಗ್ಗೆ ಪಶ್ಚಾತ್ತಾಪ ಮೂಡಬಹುದು. ಯಾರನ್ನೂ ಅಲ್ಪವೆಂದು ಭಾವಿಸಿ, ಅವರ ಬಗ್ಗೆ ಹಗುರಾಗಿ ಮಾತನಾಡುವುದು ಬೇಡ. ಸುಬ್ರಹ್ಮಣ್ಯನ ಸ್ತುತಿಯನ್ನು ಮಾಡಿ.
ಕನ್ಯಾ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರಕು ಬರುವ ಸಾಧ್ಯತೆ ಇದೆ. ಇದು ಮಕ್ಕಳ ಮೇಲೆ ಬೇರೆ ಪರಿಣಾಮವನ್ನು ಬೀರಬಹುದು. ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ನೀವು ಹಣವನ್ನು ವ್ಯಯಿಸಬೇಕಾಗಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ತೆಗೆದುಕೊಳ್ಳುವಿರಿ. ನಿಮಗೆ ಪಾಪಪ್ರಜ್ಞೆ ಇಂದು ಕಾಡಬಹುದು. ಅದಕ್ಕೋಸ್ಕರ ಪಶ್ಚಾತ್ತಾಪ ಪಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ. ನೆಮ್ಮದಿ ಬೇಕಾದ ಎಲ್ಲ ಸಂಗತಿಗಳು ಇದ್ದರೂ ಚಿಂತೆ ಕಾಡಿಸಬಹುದು. ಸಕಾರಾತ್ಮಕ ಆಲೋಚನೆ ಇರಲಿ. ಗುರುವಿನ ದರ್ಶನ ಮಾಡಿ. ಆಶೀರ್ವಾದ ಪಡೆಯಿರಿ.
ತುಲಾ: ಆರೋಗ್ಯವನ್ನು ಚೆನ್ನಾಗಿಟ್ಡುಕೊಳ್ಳಲು ವ್ಯಾಯಾಮಗಳನ್ನು ಆರಂಭಿಸಬಹುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರವೂ ಮುಖ್ಯ ಎನ್ನುವುದನ್ನು ನೀವು ಮರೆತಿರುವಿರಿ. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಪ್ರಯತ್ನವೂ ಇರಲಿ. ಉದ್ಯೋಗದ ಕಾರಣದಿಂದ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ತುಂಬಾ ದಿನಗಳಿಂದ ನಡೆಯುತ್ತಿರುವ ಕುಟುಂಬದ ಶೀತಲ ಕಲಹವು ನಿಮಗೆ ಬೇಸರ ತರುತ್ತದೆ. ಅದನ್ನು ಮುಗಿಸಲು ನಾನಾ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ.
ವೃಶ್ಚಿಕ: ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ನಿಮ್ಮ ಮೇಲೆ ಸಹೋದ್ಯೋಗಿಗಳು ಸಲ್ಲದ ಅಪವಾದವನ್ನು ಮಾಡಿಯಾರು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ. ವ್ಯಾಪಾರವು ನಿಮಗೆ ಲಾಭಾಂಶವನ್ನು ಕಡಿಮೆ ಮಾಡೀತು. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನು ಮಾಡುವಿರಿ. ನಿಮಗೆ ಕುಟುಂಬದ ಬೆಂಬಲವಿದ್ದು, ಧೈರ್ಯವಾಗಿ ಮುನ್ನಡೆಯುವಿರಿ.