ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 10ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾವುದು ಸುಳ್ಳು ಹಾಗೂ ಯಾವುದರಲ್ಲಿ- ಯಾರಲ್ಲಿ ಎಷ್ಟಿದೆ ಸತ್ಯ ಎಂಬುದು ಈ ದಿನ ತುಂಬ ಸ್ಪಷ್ಟವಾಗಿ ನಿಮಗೆ ಗೊತ್ತಾಗುತ್ತದೆ. ಇನ್ನೊಬ್ಬರು ನಿಮ್ಮ ಎಲ್ಲ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟಾಗಲಿದ್ದೀರಿ. ಮೇಲ್ನೋಟಕ್ಕೆ ಕಂಡಿದ್ದನ್ನು ಸತ್ಯ ಎಂದು ನಂಬಬಾರದು ಎಂದು ಅನುಭವಕ್ಕೆ ಬರುತ್ತದೆ. ಮನೆಗೆ ಗೃಹೋಪಯೋಗಿ ವಸ್ತುಗಳೋ ಅಥವಾ ಪೀಠೋಪಕರಣಗಳನ್ನು ತರುವುದಕ್ಕೆ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಾಗ ವೆಚ್ಚದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.
ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಇತ್ಯಾದಿ ವೃತ್ತಿಯಲ್ಲಿ ಇರುವವರಿಗೆ ಬಹಳ ಗೊಂದಲ ಏರ್ಪಡಲಿದೆ. ಭವಿಷ್ಯದ ಯೋಜನೆಗಳ ಅನುಷ್ಠಾನವನ್ನು ಕೆಲ ಸಮಯ ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಬಂಧುಗಳು, ಸ್ನೇಹಿತರ ಮನೆಗೆ ದೇವತಾರಾಧನೆಗೆ ಆಹ್ವಾನ ಬರಲಿದೆ. ಇನ್ನು ಈ ದಿನ ಬಹಳ ಸಮಯದಿಂದ ಭೇಟಿಯಾಗದೇ ಇದ್ದ ಬಂಧು- ಮಿತ್ರರನ್ನು ಭೇಟಿಯಾಗಿ, ತೀರ್ಥಕ್ಷೇತ್ರ ದರ್ಶನ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಇತರರು ಮೆಚ್ಚುವಂತೆ ಕೆಲವು ಕೆಲಸಗಳನ್ನು ಮಾಡಲಿದ್ದೀರಿ.
ಈ ದಿನ ಎಲ್ಲರ ಮೇಲೂ ನಂಬಿಕೆ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗುತ್ತದೆ. ಏಕಾಂಗಿ ಆಗಿಬಿಟ್ಟಿರೇನೋ ಎಂದು ಬಲವಾಗಿ ಅನಿಸಿಕೆ ಮೂಡುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿಯ ಸೂಚನೆ ದೊರೆಯಲಿದೆ. ಹೊಸದಾಗಿ ಕೆಲಸಗಳನ್ನು ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟನ್ನು ಮಾಡಿಕೊಳ್ಳದಿರಿ, ಏಕೆಂದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲ ಇದೆ.
ನಿಮಗೆ ಈ ದಿನ ಸಾಮರ್ಥ್ಯವನ್ನು ಸಾಬೀತು ಮಾಡುವ ಅವಕಾಶ ದೊರೆಯಲಿದೆ. ನಿಮಗೆ ಈಗಿರುವ ಜವಾಬ್ದಾರಿ, ಹುದ್ದೆಯು ಹೆಚ್ಚಾಗುವ ಸೂಚನೆ ದೊರೆಯಲಿದೆ. ಮನೆ ಅಥವಾ ಸೈಟು ಖರೀದಿಗೆ ಬ್ಯಾಂಕ್ ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳಿವೆ. ಹಳೆಯ ವಸ್ತುಗಳು ಮಾರಾಟ ಮಾಡುವವರಿಗೆ ಸಂಪರ್ಕಗಳು ವಿಸ್ತರಣೆ ಆಗಲಿವೆ. ಬರಬೇಕಾದ ಆದಾಯ ಕೈ ಸೇರಬೇಕಾದಲ್ಲಿ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ.
ಈ ದಿನ ನಿಮ್ಮ ಆತ್ಮಗೌರವ, ಪ್ರತಿಷ್ಠೆಗೆ ಪೆಟ್ಟು ನೀಡುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಕುಟುಂಬದ ಬಗ್ಗೆ ನಿಮ್ಮ ಯೋಚನೆ ಜಾಸ್ತಿ ಆಗುತ್ತದೆ. ಇನ್ನು ಮನೆ ಕಟ್ಟುತ್ತಿರುವವರು, ಸೈಟು ಖರೀದಿಸಬೇಕು ಎಂದಿರುವವರಿಗೆ ಈ ದಿನ ಮಹತ್ವದ್ದಾಗಿರುತ್ತದೆ. ಷೇರು – ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಅಂತರಂಗದ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ನಿಮ್ಮ ಬಗ್ಗೆ ಇತರರಿಗೆ ನಿರೀಕ್ಷೆಗಳು ಜಾಸ್ತಿ ಆಗುತ್ತವೆ. ಇನ್ನೂ ಮುಂದೆಲ್ಲೋ ಡೆಡ್ ಲೈನ್ ಇದೆ ಎಂದುಕೊಂಡು ಆರಾಮವಾಗಿ ಮಾಡುತ್ತಿದ್ದ ಕೆಲಸವೊಂದನ್ನು ಈ ಕೂಡಲೇ ಈ ದಿನವೇ ಅಥವಾ ಆದಷ್ಟು ಬೇಗ ಮುಗಿಸಿಕೊಡುವಂತೆ ದುಂಬಾಲು ಬೀಳಲಿದ್ದಾರೆ. ಯಾವತ್ತೋ ನಿಮಗೆ ಕಂಡಿದ್ದ ವ್ಯಕ್ತಿ ದಿಢೀರ್ ಎಂದು ಹಣಕಾಸು ಸಾಲವನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಸೋದರಮಾವನ ಜತೆಗೆ ಮಾತನಾಡುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಿ. ನಿಮಗೆ ಗೊತ್ತಿಲ್ಲದ ವಿಚಾರ ಆಗಿದ್ದಲ್ಲಿ ಮೌನವೇ ಒಳ್ಳೆಯದು.
ಒಂದು ಸಲ ತೆಗೆದುಕೊಂಡ ನಿರ್ಧಾರವನ್ನು ಬದಲಿಸಿಕೊಳ್ಳಲಿಕ್ಕೆ ಹೋಗಬೇಡಿ. ಹಾಗೊಂದು ವೇಳೆ ಅನಿವಾರ್ಯ ಅಂತಾದಲ್ಲಿ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಕ್ಷಣವೇ ತನ್ನಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಹೊಸದಾಗಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದಾದರೆ ಅದರ ಅಗತ್ಯ ಎಷ್ಟಿದೆ ಎಂಬ ಬಗ್ಗೆ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ನಿರ್ಧಾರವನ್ನು ಕೈಗೊಳ್ಳುವುದು ಉತ್ತಮ.
ಇತರರು ಒಪ್ಪಿಕೊಂಡರು ಅನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ಸಂಗತಿಗಳನ್ನು ನೀವೂ ಒಪ್ಪಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವವರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಇತರ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ನಿಮ್ಮ ವಿರುದ್ಧ ದೂರು ದಾಖಲಾಗಬಹುದು ಅಥವಾ ಮೇಲಧಿಕಾರಿಗಳಿಗೆ ಆಕ್ಷೇಪ ಸಲ್ಲಿಸಬಹುದು.
ನೀವು ಯಾರನ್ನೋ ಸ್ಪರ್ಧಿ ಅಂತ ಅಂದುಕೊಂಡು ಬಿಟ್ಟಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕಾದ ದಿನ ಇದು. ಏಕೆಂದರೆ, ದೊಡ್ಡ ಅವಕಾಶ ನಿಮ್ಮೆದುರು ಕಾಯುತ್ತಾ ಇದೆ. ಆ ಕಡೆಗೆ ಲಕ್ಷ್ಯ ನೀಡಬೇಕು. ಸಣ್ಣ- ಪುಟ್ಟ ವಿಚಾರಗಳು, ಅನುಮಾನಗಳು, ಕೀಳರಿಮೆ ನಿಮ್ಮ ಅವಕಾಶದಿಂದ ದೂರಕ್ಕೆ ತಳ್ಳಬಾರದು. ಈ ದಿನ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ