ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 7ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸಂಗಾತಿ ಜತೆಗೆ ಸಂತೋಷವಾಗಿ ದಿನ ಕಳೆಯಲಿದ್ದೀರಿ. ಪ್ರೇಮಿಗಳು ದೂರದ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ಭಾರೀ ಒತ್ತಡದ ಜೀವನ ಇರುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರು, ಶಾಲೆಗಳನ್ನು ನಡೆಸುತ್ತಿರುವವರಿಗೆ ಆದಾಯ ಉತ್ತಮವಾಗುತ್ತದೆ.
ನಿಮಗೆ ಗೊತ್ತಿರುವುದೇನು, ಗೊತ್ತಿಲ್ಲದ್ದೇನು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ.
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವವರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಇತರ ವಸ್ತುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವುದೇ ಮುಖ್ಯ ಕೆಲಸ ಇದ್ದರೂ ಸಾಧ್ಯವಾದಲ್ಲಿ ಈ ದಿನ ಅದನ್ನು ಮುಂದಕ್ಕೆ ಹಾಕಿ.
ಸೋಷಿಯಲ್ ಮೀಡಿಯಾ ಹೆಚ್ಚಿಗೆ ಬಳಸುವವರಾಗಿದ್ದಲ್ಲಿ ಈ ದಿನ ಪೋಸ್ಟ್, ಕಾಮೆಂಟ್‌ಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಏಕಕಾಲಕ್ಕೆ ನಿಮ್ಮ ವಿರುದ್ಧ ಹಲವರು ವೈಯಕ್ತಿಕ ದಾಳಿಗೆ ಇಳಿಯಬಹುದು. ಎಲೆಕ್ಟ್ರಿಕಲ್ ಸ್ಕೂಟರ್, ಕಾರು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡುತ್ತೀರಿ.
ಇದರಲ್ಲಿ ಮುಂದುವರಿಯಲಾ ಅಥವಾ ಬೇರೆ ಕ್ಷೇತ್ರವನ್ನು ಆರಿಸಿಕೊಳ್ಳಲಾ ಅಥವಾ ತಾತ್ಕಾಲಿಕವಾದ ಬಿಡುವು ತೆಗೆದುಕೊಳ್ಳಲಾ ಹೀಗೆ ಯೋಚನೆಗಳು ನಿಮ್ಮನ್ನು ಮುತ್ತಿಕೊಳ್ಳುತ್ತವೆ. ಕೊನೆಗೂ ಇದನ್ನು ಆಖೈರು ಎಂದು ನಿರ್ಧಾರ ಮಾಡಲಿಕ್ಕೆ ಆಗುವುದಿಲ್ಲ. ಆದ್ದರಿಂದ ದ್ವಂದ್ವದಲ್ಲಿ ಇರುವ ವಿಚಾರದ ಬಗ್ಗೆ ಈ ದಿನ ತೀರ್ಮಾನ ಮಾಡಬೇಡಿ.
ಯಾರದೋ ತಪ್ಪಿಗೆ ನೀವು ಪರಿತಪಿಸುವಂತೆ ಆಗುತ್ತದೆ. ಆದ್ದರಿಂದ ವಿಪರೀತ ಚಿಂತೆ ಮಾಡುವ ಅಗತ್ಯ ಇಲ್ಲ. ದಿನದ ಕೊನೆಯ ಹೊತ್ತಿಗೆ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ನಿಮಗೆ ದೊರೆಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಪರೀತ ಖರ್ಚಿದೆ. ಇನ್ನು ಮಕ್ಕಳ ಚಲನವಲನದ ಮೇಲೆ ಕಣ್ಣಿಟ್ಟಿರಿ.
ಕಟ್ಟಡ ನಿರ್ಮಾಣ, ಮನೆ ಖರೀದಿ, ಸೈಟು ಖರೀದಿ, ಹೂಡಿಕೆ ಇಂಥ ಸಂಗತಿಗಳ ಸುತ್ತಲೂ ಈ ದಿನ ನಿಮ್ಮ ಗಮನ ಹರಿದಾಡುತ್ತದೆ. ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡುವುದಕ್ಕೆ ಸ್ನೇಹಿತರು- ಹಿತೈಷಿಗಳು ಸಿಗುತ್ತಾರೆ. ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಡಿ. ಮನೆಯಿಂದ ಹೊರಡುವ ಮೊದಲು ಸ್ವಲ್ಪ ಅವಲಕ್ಕಿ ಮೊಸರು ತಿನ್ನಿ.
ಬೆಳವಣಿಗೆಗಳು ನಿಧಾನ ಆಗಲಿವೆ. ಕೆಲವು ಕೆಲಸಗಳು ಈಗಾಗಲೇ ಅರ್ಧ ಮುಗಿದಾಗಿದ್ದರೂ ಮೊದಲಿಂದ ಆರಂಭಿಸಬೇಕಾಗಬಹುದು. ಆದರೆ ಬೇಸರ ಆಗಬೇಡಿ, ನಿಮ್ಮ ಕೆಲಸದಲ್ಲಿ ಯಶಸ್ಸು, ಕೀರ್ತಿ ಹಾಗೂ ಲಾಭ ಮೂರು ಸಿಗುವ ಸಾಧ್ಯತೆ ಇದೆ. ಕಮಿಷನ್ ಆಧಾರದ ವೃತ್ತಿಯಲ್ಲಿ ಇರುವವರಿಗೆ ಸವಾಲಿನ ದಿನವಾಗಿರುತ್ತದೆ.
ನಿಮ್ಮ ಪ್ರಾಜೆಕ್ಟ್, ಕೆಲಸಗಳಿಗೆ ಇತರರಿಂದ ಉತ್ತೇಜನ ದೊರೆಯುತ್ತದೆ. ಆದರೆ ಈ ದಿನ ಹಲ್ಲು, ಕೂದಲು, ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಒಂದು ವೇಳೆ ಈಗಾಗಲೇ ಆ ಸಮಸ್ಯೆಯಿಂದ ಬಳಲುತ್ತಾ ಇದ್ದಲ್ಲಿ ಅದು ಉಲ್ಬಣಿಸುವ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ