Daily Horoscope: ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ, ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಬೇಡಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯತಿಪಾತ್ , ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 09:19 ರಿಂದ 10:54ರ ವರೆಗೆ, ಯಮಘಂಡ ಕಾಲ 02:04 ರಿಂದ 03:39ರ ವರೆಗೆ, ಗುಳಿಕ ಕಾಲ 06:09 ರಿಂದ 07:44ರವರೆಗೆ.
ಮೇಷ: ನಿಮ್ಮ ಪ್ರಣಯ ಜೀವನವು ಬಹಳಷ್ಟು ಸಂತೋಷ ತರಬಹುದು. ನಿಮ್ಮ ಆಪ್ತರ ಜೊತೆ ಬಾಂಧವ್ಯವನ್ನು ರೂಪಿಸುವ ಅವಕಾಶವಿದೆ. ನೂತನವಾಗಿ ವಿವಾಹವಾದ ದಂಪತಿಗಳು ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವರು. ವಿದ್ಯಾರ್ಥಿಗಳ ಒಟ್ಟಾರೆ ಕೆಲಸವು ಗಮನಾರ್ಹವಾಗಿ ವೃದ್ಧಿಯಾಗಬಹದು. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ ಪಡೆಯುವಿರಿ.
ವೃಷಭ: ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತಗತವೆ. ತಾಯಿಯಿಂದ ಹೆಚ್ಚಿನ ಸಹಕಾರಗಳು ನಿಮಗೆ ದೊರೆತು ಸಂತಸವಾಗುತ್ತದೆ. ಇಂದುಕೆಲವೊಮ್ಮೆ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವು ಬರಬಹುದು. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನೀವು ಹೆಚ್ಚು ವ್ಯಾಯಾಮ ಮಾಡಬೇಕಾಗಬಹುದು. ಮನಸ್ಸುವಿಶ್ರಾಂತಿಯನ್ನು ಪಡೆಯಲು ಹೆಚ್ಚು ಮನಸ್ಸು ಮಾಡುವಿರಿ. ಆರ್ಥಿಕವಾದ ಲಾಭವಾಗಲಿದೆ ಪ್ರಯಾಣವನ್ನು ಊಹಿಸಿಸುವಿರಿ. ಕುಟುಂಬದ ಖರ್ಚು ಇಂದು ಇರಬಹುದು.
ಮಿಥುನ: ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ಬೇಡ. ಹಣದ ಹರಿವುಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ನಿಮ್ಮ ಪ್ರೇಮಿಯ ಜೊತೆ ಸಮಯವನ್ನು ಕಳೆಯಲು ಇಚ್ಛಿಸುವಿರಿ. ಉನ್ನತ ಮಟ್ಟಕ್ಕೆ ಏರಲು ಸಂಪೂರ್ಣ ಅವಕಾಶ ಸುಗಲಿದೆ. ಸ್ನೇಹದಿಂದ ಪ್ರಣಯವು ಉಙಟಾಗಲಿದೆ. ಸಂಬಂಧದ ಮಹತ್ವವನ್ನು ತಿಳಿಯುವುದು. ಅತಿಯಾದ ಚಿಂತೆಯು ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸಬಹುದು.
ಕಟಕ: ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರಲಿದೆ. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಛೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಇಂದು ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಲವನ್ನು ಮಾಡಬೇಕಾಗಿಬರಬಹುದು.