AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಇಂದು ತಂದೆಯಿಂದ ಬೈಗುಳಗಳು ಸಿಗಬಹುದು.

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 6) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಇಂದು ತಂದೆಯಿಂದ ಬೈಗುಳಗಳು ಸಿಗಬಹುದು.
ಇಂದಿನ ರಾಶಿ ಭವಿಷ್ಯ
Rakesh Nayak Manchi
Rakesh Nayak Manchi|

Updated on: May 06, 2023 | 6:30 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯತಿಪಾತ್, ಕರಣ : ಬಾಲವ, ಸೂರ್ಯೋದಯ ಬೆಳ್ಳಿಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 09:19 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:09 ರಿಂದ 07:44ರ ವರೆಗೆ.

ಧನಸ್ಸು: ಬಹುದಿನದ ಆಸೆಗಳು ಕೈಗೂಡುವ ಹಂತದಲ್ಲಿ ಇದ್ದರೂ ತಪ್ಪಬಹುದು. ‌ಇಂದು ನಿಮ್ಮ ಸಂಬಂಧದಲ್ಲಿ ಅನಗತ್ಯ ಮಾತುಗಳು, ವಿವಾದಗಳು ಉಂಟುಮಾಡಬಹುದು. ಆರೋಗ್ಯವಾಗಿರಲು ಚಿಕಿತ್ಸೆಯನ್ನು ನಿರಂತರ ಮಾಡುವುದು ಅವಶ್ಯಕ. ಸಕಾರಾತ್ಮಕ ಆಲೋಚನೆ ನಿಮ್ಮನ್ನು ಸರಿ ದಾರಿಗೆ ಕೊಂಡೊಯ್ಯಬಹುದು. ಪ್ರೀತಿಪಾತ್ರರ ಜೊತೆ ಹೆಚ್ಚು ಸಲುಗೆಯಿಂದ ಇರುವಿರಿ. ನಿಮ್ಮ ಕಷ್ಟಕ್ಕೆ ಆದವರನ್ನು ಮರೆಯಬೇಡಿ. ಒಬ್ಬರಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಇಂದು ಇರಬಹುದು. ಇಂದು ಒತ್ತಡ ಇರುವುದರಿಂದ ಅಲ್ಪ ಭೋಜನವನ್ನು ಮಾಡುವ ಸಂದರ್ಭವೂ ಬರಲಿದೆ.

ಮಕರ: ಉತ್ತಮ ಕಾಲವು ಬರಲಿ ಎಂದು ನಿರೀಕ್ಷೆಯಲ್ಲಿ ಇರುವಿರಿ. ಮನೆಯಲ್ಲಿ‌ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ.‌ ಸ್ತ್ರೀಮೂಲದಿಂದ ಧನಸಹಾಯವು ಆಗಬಹುದು.‌ ಕೆಲವು ಕಷ್ಟಕರ ಸಂದರ್ಭಗಳಲ್ಲಿ ನಿಮಗೆ ಕಷ್ಟವಾದಿ. ಪರಿಸ್ಥಿತಿಯು ಋಣಾತ್ಮಕ ಅಂಶಗಳ ಮೇಲೆ ಗಮನಹರಿಸುವಿರಿ. ಸಮಸ್ಯೆಗಳನ್ನು ನಿಭಾಯಿಸಲು ನೀವು ಸೋಲಬಹುದು. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವು ಬೇಗನೆ ಚೇತರಿಸಿಕೊಳ್ಳುವುದು ಉತ್ತಮ. ನಿಮ್ಮ ಕೆಲಸದಲ್ಲಿ ಸಮಯ ಮತ್ತು ಶ್ರಮವನ್ನು ಹಾಕಿದ್ದರೆ ನೀವು ಗುರಿಯನ್ನು ಸಾಧಿಸುವಿರಿ.

ಕುಂಭ: ಕಳೆದುಕೊಂಡದ್ದರ ಬಗ್ಗೆ ಚಿಂತೆ ಬಿಟ್ಟು ಮುಂದೇನು ಆಗಬೇಕು ಎಂಬ ಬಗ್ಗೆ ಆಲೋಚಿಸಿ ಸಂತೋಷವಾಗಿರಬಹುದು. ನಿಮ್ಮ ಸ್ವಭಾವಕ್ಕೆ ಯೋಗ್ಯರಾದವರನ್ನು ಆರಿಸಿಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯ ಕಾರಣದಿಂದ ನಿಮಗೆ ಪ್ರಯಾಣ‌ ಮಾಡಬೇಕಾದ ಸ್ಥಿತಿ ಬರುವ ಸಾಧ್ಯತೆ ಇದೆ. ಆಸಕ್ತಿದಾಯಕವಾದದ್ದನ್ನು ಮಾಡಲು ಅಥವಾ ನಿಮ್ಮ ಸ್ನೇಹಿತರೊಂದಿಗೆ ಮೋಜು ಮಾಡಲು ನೀವು ಸ್ಫೂರ್ತಿ ಪಡೆಯಬಹುದು. ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಆರೋಗ್ಯವು ನಿಮ್ಮ ಕೈಯ್ಯಲಿದೆ. ವಾಹನವನ್ನು ಚಲಾಯಿಸುವಾಗ ಬಹಳ ಎಚ್ಚರಿಕೆ ಅಗತ್ಯ.

ಮೀನ: ನಿಮ್ಮ ಅತಿಯಾದ ಲೆಕ್ಕಾಚಾರವು ಬುಡ ಮೇಲಾಗುವ ಸಾಧ್ಯತೆ ಇದೆ. ವಾಹನವನ್ನು ರಿಪೇರಿ ಮಾಡಿಸುವ ಕೆಲಸವೇ ಇಂದು ಹೆಚ್ಚಾದೀತು. ಯಾವ ಕೆಲಸವೂ ಆಗದೇ ಕಿರಿಕಿರಿಯಿಂದ ಸಿಟ್ಟುಗೊಳ್ಳುವಿರಿ. ಕೃಷಿಕರಿಗೆ ಇಂದು ಸ್ವಲ್ಪ ಜಾಡ್ಯವೂ ಇರಬಹುದು. ಆಪ್ತರನ್ನು ಭೇಟಿಯಾಗುವ ಮನಸ್ಸೂ ಇಲ್ಲದೇ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಮಕ್ಕಳ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲು ಕಷ್ಟ ಪಡಬೇಕಾದೀತು. ಯಾವುದನ್ನೂ ಯೋಚಿಸದೇ ಇಂದು ನಿಶ್ಚಿಂತೆಯಿಂದ ಇರಲು ಇಚ್ಛಿಸುವಿರಿ. ತಂದೆಯಿಂದ ಬೈಗುಳಗಳು ಸಿಕ್ಕಿಯಾವು.

-ಲೋಹಿತಶರ್ಮಾ ಇಡುವಾಣಿ

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!