ದಿನ ಭವಿಷ್ಯ: ಇಂದು ಈ ರಾಶಿಯವರು ಪರರನ್ನು ವಂಚಿಸಲು ವಿಫಲರಾಗುವರು…
Horoscope Today July 02: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಗುರುವಾರದಂದು ಹಣಕಾಸಿನ ರಿಸ್ಕ್, ವಿಳಂಬ ಕಾರ್ಯ, ಮುಂಗಡ ಹಣ, ವಿಶ್ವಾಸ ಸಾಧನೆ, ಸತ್ಯದಿಂದ ತೊಂದರೆ ಇವೆಲ್ಲ ಈ ದಿನ ಭವಿಷ್ಯ.

ಮೇಷ ರಾಶಿ:
ಮಾನಸಿಕ ದ್ವಂದ್ವಗಳು ನಿಮ್ಮನ್ನು ಕಟ್ಟಿಹಾಕಬಹುದು. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಹಳೆಯ ಪ್ರೇಯಸಿಯಿಂದ ಆಹ್ವಾನ ಬರಬಹುದು. ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಶತ್ರುವನ್ನು ಮಿತ್ರನನ್ನು ಮಾಡಿಕೊಳ್ಳುವ ತಂತ್ರವನ್ನು ಹೂಡುವಿರಿ. ಕೆಲವು ಅಭ್ಯಾಸವು ಚಟವಾಗಿ ಪರಿವರ್ತನೆ ಆಗಬಹುದು. ಬಿಡಸಲಾಗದ ಸಮಸ್ಯೆಗಳು ನಿಮ್ಮನ್ನು ಇಬ್ಬಂದಿ ಮಾಡಬಹುದು. ಆಪ್ತರ ಸಲಹೆಯನ್ನು ಪಡೆಯಿರಿ.
ವೃಷಭ ರಾಶಿ:
ನಿಮ್ಮ ಶ್ರಮಕ್ಕೆ ದೈವವು ಅನುಕೂಲವೂ ಲಭ್ಯವಾಗುವುದು. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳುಗೆಡವುವುವು. ಹೂಡಿಕೆಯಲ್ಲಿ ಲಾಭವು ಕಾಣಿಸುವುದು. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.
ಮಿಥುನ ರಾಶಿ:
ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಕಲಹ. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಸದ್ದಿಲ್ಲದೆ ಮಾಡಿದ ಕೆಲಸದಿಂದ ಎಲ್ಲರೂ ಅಚ್ಚರಿಪಡುವರು. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿದೆ ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನ ಗೌರವದಿಂದ ಕೇಳಬೇಕಾಗಬಹುದು. ಹಳೆಯ ಖಾಯಿಲೆಯು ಮತ್ತೆ ಬರಬಹುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ನಿರ್ಮಾಣ ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ:
ಮಕ್ಕಳಿಂದ ಸಂತೋಷಕರವಾದ ವಾರ್ತೆಯು ಇರುತ್ತದೆ. ಸ್ನೇಹಿತರಿಗೋಸ್ಕರ ಸಮಯವನ್ನು ಕೊಡಬೇಕಾಗಿಬರಬಹುದು. ಅನ್ಯರ ಪ್ರಭಾವಕ್ಕೆ ಒಳಗಾಗಿ ನಿಮ್ಮನ್ನು ಪರಿವರ್ತಿಸಿಕೊಳ್ಳುವಿರಿ. ಅಪೂರ್ಣಗೊಂಡ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ಚಿಂತಿಸುವಿರಿ. ಮಕ್ಕಳಿಗೆ ನಿಮ್ಮಿಂದ ಪ್ರೊತ್ಸಾಹ ಬೇಕು. ಶಿಕ್ಷಿತರಾದಕಾರಣ ಇದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕಾಗುವುದು. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ.
ಸಿಂಹ ರಾಶಿ:
ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ನಿಮಗೆ ದೈರ್ಯವನ್ನು ತುಂಬುವವರೂ ಇಲ್ಲವಾಗಬಹುದು. ಪ್ರೇಮಸಂಬಂಧದಲ್ಲಿ ಹುರುಳಿಲ್ಲ ಎನಿಸುವುದು. ಹೂಡಿಕೆಯಲ್ಲಿ ನೀವು ಬದಲಾವಣೆಯನ್ನು ಬಯಸುವಿರಿ. ಅಕಾರಣವಾಗಿ ದುಃಖದ ಸನ್ನಿವೇಷಗಳು ಬರಬಹುದು. ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂಬ ಖುಷಿ.
ಕನ್ಯಾ ರಾಶಿ:
ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ಆದರೆ ನೀವು ನಿರೀಕ್ಷಿಸಿದಷ್ಟು ಲಾಭವನ್ನು ಪಡೆಯುವುದು ಕಷ್ಟವಾಗಬಹುದು. ನಿಮ್ಮ ಮಾತಿನಲ್ಲಿ ತಪ್ಪು ಹುಡುಕುವವರಿಗೆ ಭಯಪಡುವಿರಿ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದು.
ತುಲಾ ರಾಶಿ:
ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ಸ್ನೇಹವು ಬಲಗೊಳ್ಳಬಹುದು. ಕಛೇರಿಯಲ್ಲಿ ಇಂದು ಅಸಮಾಧನಕಾರ ವಾತಾವರಣ ಇರಲಿದೆ. ಕಛೇರಿಯ ಆರಂಭದಲ್ಲಿ ಮೇಲಧಿಕಾರಿಗಳಿಂದ ಬೈಗುಳ ಕೇಳಿಬರುವುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ.
ವೃಶ್ಚಿಕ ರಾಶಿ:
ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ಕಾಲು ನೋವಿನಿಂದ ನರಕದ ಅನುಭವವಾಗಬಹುದು. ನಿಮ್ಮ ನಾಯಕತ್ವವು ಎಲ್ಲರಿಗೂ ಅರಿವಿಗೆ ಬರುವುದು. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ನೈತಿಕವಾಗಿ ಮಾತು ಇರಲಿ. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳನ್ನು ಪ್ರ ಭಾವಿಸುವುದು.
ಧನು ರಾಶಿ:
ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ವಾಹನ ರಿಪೇರಿಯಿಂದ ಖರ್ಚಾಗಲಿದೆ. ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಭಾವ ಬೇಡ. ಸ್ಥಳ ಖರೀದಿಗೆ ಕೂಡಿಟ್ಟ ಹಣವು ಮತ್ತೆಲ್ಲಿಗೋ ವಿಯೋಗವಾಗುವುದು. ಸಮಯವು ಒಂದೇ ರೀತಿಯಲ್ಲಿ ಇರದು. ಅಕಸ್ಮಾತ್ ಆಗಿ ಸಿಕ್ಕ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.
ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ
ಮಕರ ರಾಶಿ:
ಸರಿಯಾದ ಬದಲಾವಣೆಯನ್ನು ಹೊಂದಿರಿ. ಯಾರನ್ನೂ ಸಾಧರಣ ಮನುಷ್ಯ ತಿಳಿದುಕೊಳ್ಳಬೇಡಿ. ಅವರ ಯೋಗ್ಯತೆಯನ್ನು ಅವರ ಬಟ್ಟೆಯಿಂದ, ಮಾತಿನಿಂದ ಅಳೆಯಲು ನೀವಿಂದು ಅಶಕ್ಯರು. ಒತ್ತಡಗಳು ನಿಮ್ಮ ಆರೋಗ್ಯವನ್ನು ಇನ್ನೂ ದುರ್ಬಲ ಸ್ಥಿತಿಗೆ ಒಯ್ಯುವುದು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ಸಂಕಷ್ಟ ಬಂದಾದ ಎಲ್ಲದಕ್ಕೂ ಏನೋ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ.
ಕುಂಭ ರಾಶಿ:
ಹತ್ತಿರದ ಊರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಹಳೆಯ ವಿಚಾರಗಳನ್ನು ಪತಿಯಿಂದ ಕೇಳುವ ಸಂದರ್ಭ ಬರಬಹುದು. ಸಾಮಾಜಿಕವಾದ ಕೆಲಸವನ್ನು ಮಾಡುವವರಿಗೆ ತಾಳ್ಮೆ ಮುಖ್ಯವಾಗಿ ಬೇಕಾಗಿದೆ. ಆರ್ಥಿಕ ವಿಚಾರದಲ್ಲಿ ಹೊಂದಾಣಿಕೆ ಇದ್ದರೆ ಅದು ಕೆಲವು ಕಾಲದ ವರೆಗೆ ಮಾತ್ರ. ಸ್ವಭಾವವನ್ನು ತಿದ್ದಿಕೊಳ್ಳಲು ಇಷ್ಟಪಟ್ಟರೂ ನಿಮ್ಮ ಜೊತೆಗಿರುವವರು ಅದನ್ನು ಬಿಡಲಾರರು. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು.
ಮೀನ ರಾಶಿ:
ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ನನಸು ಮಾಡಿಕೊಳ್ಳುವಿರಿ. ಬಂಧುಗಳ ವಿಯೋಗವಾರ್ತೆಯು ಬರಬಹುದು. ನೀವಂದು ಅಶಕ್ತರಿಗೆ ಸಹಾಯ ಮಾಡುವಿರಿ. ಅತಿಯಾದ ಹಠಮಾರಿತನವನ್ನು ಉಳಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಒಲಿಸಿಕೊಳ್ಳಲು ಸ್ತ್ರೀಯರು ನಿಮ್ಮನ್ನು ಪ್ರಶಂಸಿಸಿಯಾರು. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ವೈಧೃತಿ, ಕರಣ : ಗರಜ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:59 – 15:36, ಯಮಗಂಡ ಕಾಲ 05:59 – 06:35, ಗುಳಿಕ ಕಾಲ 09:11 – 10:47
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




