AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

July 2026 Monthly Horoscope: ದಶಮ ಸ್ಥಾನದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಜನೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಯಶಸ್ಸು ಸಿಗಲಿದೆ. ಬುಧ ನಿಮ್ಮ ರಾಶಿಯಲ್ಲೇ ಸ್ವಗೃಹದಲ್ಲಿದ್ದಾನೆ. ಬುದ್ಧಿಮತ್ತೆ ಮತ್ತು ಕಾರ್ಯದಕ್ಷತೆ ಹೆಚ್ಚಲಿದೆ. ಸೂರ್ಯ ಮತ್ತು ಗುರು ದ್ವಿತೀಯ ಸ್ಥಾನದಲ್ಲಿರುವುದರಿಂದ ಆರ್ಥಿಕವಾಗಿ ಲಾಭದಾಯಕ ಸಮಯ

ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ
July Monthly Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jun 29, 2026 | 4:09 PM

Share

ಜುಲೈ 2026 ರಲ್ಲಿ ಗ್ರಹಗಳ ಪರಿವರ್ತನೆಯಿಂದ ಪರಿವರ್ತನಾ ಯೋಗವೂ ಆಗಲಿದೆ. ಗುರುವು ಉಚ್ಚಸ್ಥಾನದಲ್ಲಿಯೂ ಬುಧನು ಸ್ವ ಸ್ಥಾನದಲ್ಲಿಯೂ ಇದ್ದಾನೆ. ಸೂರ್ಯನು ಚಂದ್ರನ ರಾಶಿಯಲ್ಲಿ ಇದ್ದು ಪತ್ನಿಯ ಸ್ಥಾನಕ್ಕೆ ಗ್ರಹನಾಯಕನು ವರ್ಷಕ್ಕೊಮ್ಮೆ ಬರುವ ಸಂದರ್ಭ. ಸೂರ್ಯನು ಉಚ್ಚಗಾಮಿಯಾಗಿ ಸಾಗುವ ಕಾರಣ ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವವರಿಗೆ ಶುಭವೂ ಆಗಲಿದೆ.

ಮೇಷ ರಾಶಿ : ​ನಿಮ್ಮ ರಾಶ್ಯಾಧಿಪತಿ ಮಂಗಳ ದ್ವಿತೀಯದಲ್ಲಿದ್ದು, ಸೂರ್ಯ, ಗುರು ಚತುರ್ಥದಲ್ಲಿದ್ದಾರೆ. ಧನ ಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಆದರೆ ಶನಿ ೧೨ನೇ ಮನೆಯಲ್ಲಿ ವಕ್ರನಾಗಿರುವುದರಿಂದ ಅನಗತ್ಯ ಖರ್ಚು ಹಾಗೂ ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಬಹುದು. ​

ವೃಷಭ ರಾಶಿ : ​ಮಂಗಳ ನಿಮ್ಮದೇ ರಾಶಿಯಲ್ಲಿದ್ದು, ಬುಧ ದ್ವಿತೀಯದಲ್ಲಿ ಹಾಗೂ ಶನಿ ಲಾಭ ಸ್ಥಾನದಲ್ಲಿದ್ದಾನೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಲಿದ್ದು, ಹಳೆಯ ಬಾಕಿ ವಸೂಲಾಗಲಿದೆ. ಉದ್ಯೋಗ ಬದಲಾವಣೆಗೆ ಇದು ಸಕಾಲ. ಆದರೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳಿತು. ​

ಮಿಥುನ ರಾಶಿ : ​ಬುಧ ನಿಮ್ಮ ರಾಶಿಯಲ್ಲೇ ಸ್ವಗೃಹದಲ್ಲಿದ್ದಾನೆ. ಬುದ್ಧಿಮತ್ತೆ ಮತ್ತು ಕಾರ್ಯದಕ್ಷತೆ ಹೆಚ್ಚಲಿದೆ. ಸೂರ್ಯ ಮತ್ತು ಗುರು ದ್ವಿತೀಯ ಸ್ಥಾನದಲ್ಲಿರುವುದರಿಂದ ಆರ್ಥಿಕವಾಗಿ ಲಾಭದಾಯಕ ಸಮಯ. ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಹೊಸ ಹೂಡಿಕೆಗಳಿಗೆ ಈ ತಿಂಗಳು ಅತ್ಯಂತ ಅನುಕೂಲಕರವಾಗಿದೆ.

ಕರ್ಕಾಟಕ ರಾಶಿ : ​ನಿಮ್ಮ ರಾಶಿಯಲ್ಲಿ ಸೂರ್ಯ ಮತ್ತು ಗುರು ಜೊತೆಯಾಗಿದ್ದಾರೆ. ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡಿ, ವಿಶೇಷವಾಗಿ ಉಷ್ಣ ಸಂಬಂಧಿ ತೊಂದರೆಗಳು ಕಾಡಬಹುದು. ​

ಸಿಂಹ ರಾಶಿ : ​ಶುಕ್ರ ಮತ್ತು ಕೇತು ನಿಮ್ಮ ರಾಶಿಯಲ್ಲಿದ್ದಾರೆ. ಸೂರ್ಯ, ಗುರು ೧೨ನೇ ಮನೆಯಲ್ಲಿದ್ದಾರೆ. ವೆಚ್ಚಗಳು ಅಧಿಕವಾಗಲಿವೆ. ಅಷ್ಟಮ ಶನಿಯ ಪ್ರಭಾವವಿರುವುದರಿಂದ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ವೃತ್ತಿ ಕ್ಷೇತ್ರದಲ್ಲಿ ಶತ್ರುಗಳ ಕಾಟವಿರಬಹುದು, ಆದರೆ ಶುಕ್ರನ ಪ್ರಭಾವದಿಂದ ಕಲಾತ್ಮಕ ಕ್ಷೇತ್ರಗಳ ಜನರಿಗೆ ಅನುಕೂಲವಾಗಲಿದೆ. ​

ಕನ್ಯಾ ರಾಶಿ : ​ಲಾಭ ಸ್ಥಾನದಲ್ಲಿ ಸೂರ್ಯ ಮತ್ತು ಗುರುವಿನ ಬಲವಿರುವುದರಿಂದ ಈ ತಿಂಗಳು ನಿಮಗೆ ಅತ್ಯಂತ ಯಶಸ್ವಿಯಾಗಲಿದೆ. ವ್ಯಾಪಾರದಲ್ಲಿ ಲಾಭ ದುಪ್ಪಟ್ಟಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಲಭಿಸಲಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರಾಗಲಿವೆ. ​

ತುಲಾ ರಾಶಿ : ​ದಶಮ ಸ್ಥಾನದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಜನೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಶುಭ ವಾರ್ತೆ ಸಿಗಲಿದೆ. ಸಮಾಜದಲ್ಲಿ ಗೌರವ ಸಿಗಲಿದೆ. ತಂದೆಯವರ ಆರೋಗ್ಯದ ಕಡೆಗೆ ಗಮನ ಹರಿಸಿ. ​

ವೃಶ್ಚಿಕ ರಾಶಿ : ​ಭಾಗ್ಯ ಸ್ಥಾನದಲ್ಲಿ ಸೂರ್ಯ, ಗುರು ಇದ್ದಾರೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ದೀರ್ಘಕಾಲದ ಧಾರ್ಮಿಕ ಪ್ರವಾಸಗಳು ಕೈಗೂಡಲಿವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಸ್ಥಿರಾಸ್ತಿ ಖರೀದಿಸುವ ಯೋಗವಿದೆ.

ಇದನ್ನೂ ಓದಿ: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಧನು ರಾಶಿ : ​ಸೂರ್ಯ ಮತ್ತು ಗುರು ಅಷ್ಟಮ ಸ್ಥಾನದಲ್ಲಿರುವುದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಶನಿ ಚತುರ್ಥದಲ್ಲಿ ವಕ್ರನಾಗಿರುವುದರಿಂದ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಮೂಡದಂತೆ ಶಾಂತವಾಗಿರಿ. ​

ಮಕರ ರಾಶಿ : ​ಸಪ್ತಮದಲ್ಲಿ ಸೂರ್ಯ ಮತ್ತು ಗುರು ಇರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲಿತಾಂಶವಿರಲಿದೆ. ಜಂಟಿ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ತೃತೀಯದಲ್ಲಿ ಶನಿಯ ಬಲವಿರುವುದರಿಂದ ಧೈರ್ಯದಿಂದ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ​

ಕುಂಭ ರಾಶಿ : ​ನಿಮ್ಮ ರಾಶಿಯಲ್ಲಿ ರಾಹು ಮತ್ತು ಚಂದ್ರರಿದ್ದಾರೆ. ಶನಿ ದ್ವಿತೀಯದಲ್ಲಿದ್ದಾನೆ, ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ಆದರೆ ಸೂರ್ಯ, ಗುರು ಆರನೇ ಮನೆಯಲ್ಲಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ. ​

ಮೀನ ರಾಶಿ : ​ನಿಮ್ಮದೇ ರಾಶಿಯಲ್ಲಿ ಶನಿ ವಕ್ರನಾಗಿದ್ದಾನೆ. ಪಂಚಮದಲ್ಲಿ ಸೂರ್ಯ ಮತ್ತು ಗುರು ಇದ್ದಾರೆ. ಬುದ್ಧಿ ಚುರುಕಾಗಲಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಆದಾಗ್ಯೂ, ಜನ್ಮ ಶನಿಯ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಮತ್ತು ದೈಹಿಕ ಆಯಾಸ ಉಂಟಾಗಬಹುದು.

– ಲೋಹಿತ್ ಹೆಬ್ಬಾರ್

Published On - 4:08 pm, Mon, 29 June 26

Follow Us