ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: SIT ತನಿಖೆ ವೇಳೆ ಅನಧಿಕೃತ ಕಾಣಿಕೆ ಹುಂಡಿಗಳು, QR ಕೋಡ್ ಪತ್ತೆ
ಮುಖ್ಯಾಂಶಗಳು
- ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ
- ಎಸ್ಐಟಿ ತನಿಖೆ ವೇಳೆ ಮಹತ್ವದ ಮಾಹಿತಿ ಬಹಿರಂಗ
- ಅನಧಿಕೃತ ಕಾಣಿಕೆ ಹುಂಡಿಗಳು, QR ಕೋಡ್ ಪತ್ತೆ
Ayodhya Ram Mandir Donation Scam: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಎಸ್ಐಟಿ ತನಿಖೆ ಪ್ರಮುಖ ತಿರುವು ಪಡೆದಿದೆ. ಯೋಗ ಕೇಂದ್ರಗಳಲ್ಲಿ ಪ್ರತ್ಯೇಕ ಕಾಣಿಕೆ ಡಬ್ಬಿ ಇಟ್ಟು ಕೃತ್ಯ ನಡೆಸಲಾಗಿದ್ದು, ಆರೋಪಿ ಅವಿನಾಶ್ ಶುಕ್ಲ ಹಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ದೇಣಿಗೆ ಹಣವನ್ನು ಶೌಚಾಲಯದಲ್ಲಿ ಬಚ್ಚಿಡುವ ತಂತ್ರ ಬಳಸಲಾಗಿದೆ. ಎಸ್‌ಪಿ ಮುಖಂಡ ರಾಮ್ ಗೋಪಾಲ್ ಯಾದವ್ 20,000 ಕೋಟಿ ಹಗರಣದ ಆರೋಪ ಮಾಡಿದ್ದಾರೆ. ತನಿಖಾ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ.
ಲಖನೌ, ಜುಲೈ 01: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ದಳದ (ಎಸ್ಐಟಿ) ತನಿಖೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಅನಧಿಕೃತ ಕಾಣಿಕೆ ಹುಂಡಿಗಳು, ಬ್ಯಾಗ್, QR ಕೋಡ್‌ಗಳು ಮಂದಿರದ ಯೋಗ ಕೇಂದ್ರದಲ್ಲಿ ಪತ್ತೆಯಾಗಿದ್ದು, ದೇಣಿಗೆ ಪೆಟ್ಟಿಗೆಗಳ ಮೇಲೆ ವಂಚಕರು QR ಕೋಡ್ ಅಂಟಿಸಿದ್ದರು. ಇದೇ QR ಕೋಡ್ ಸ್ಕ್ಯಾನ್ ಮಾಡಿ ಭಕ್ತರು ಹಣವನ್ನು ಪಾವತಿಸುತ್ತಿದ್ದರು. ಈ ಹಣ ರಾಮರಾಜ್ಯ ಕೋಶ್ ಹೆಸರಿನ ಖಾತೆಗೆ ಹೋಗುತ್ತಿತ್ತು ಎಂಬ ಮಹತ್ವದ ವಿಚಾರವನ್ನೂ ತನಿಖೆ ವೇಳೆ ಎಸ್ಐಟಿ ಪತ್ತೆ ಮಾಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 01, 2026 02:54 PM
Follow Us

