AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಖರೀದಿಸಿದ ತಂಡಕ್ಕೆ ತಾನೇ ನಾಯಕನಾದ ಫಾಫ್ ಡು ಪ್ಲೆಸಿಸ್

ETPL Cricket League: ಕ್ರಿಕೆಟ್ ಜಗತ್ತಿಗೆ ಹೊಸ ಯುರೋಪಿಯನ್ T20 ಪ್ರೀಮಿಯರ್ ಲೀಗ್ (ETPL) ಕಾಲಿಟ್ಟಿದೆ. ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಆಯೋಜಿಸುತ್ತಿರುವ ಈ ಲೀಗ್​ನಲ್ಲಿ 6 ತಂಡಗಳು ಸ್ಪರ್ಧಿಸಲಿವೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಒಂದು ತಂಡದ ಸಹ-ಮಾಲೀಕರಾಗಿರುವುದಲ್ಲದೆ, ಆಡಲಿದ್ದಾರೆ. ಆರ್. ಅಶ್ವಿನ್, ಹೆನ್ರಿಕ್ ಕ್ಲಾಸೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್ ಅವರಂತಹ ಸ್ಟಾರ್ ಆಟಗಾರರೂ ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಪೃಥ್ವಿಶಂಕರ
|

Updated on: Jul 01, 2026 | 8:04 PM

Share
ಕ್ರಿಕೆಟ್ ಜಗತ್ತಿಗೆ ಹೊಸ ಟಿ20 ಲೀಗ್ ಪ್ರವೇಶಿಸಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್)ನ ಮೊದಲ ಆವೃತ್ತಿ ಇಷ್ಟರಲ್ಲೇ ಪ್ರಾರಂಭವಾಗಲಿದೆ. ಈ ಲೀಗ್​ನಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದ್ದು, ಈ ತಂಡಗಳಲ್ಲಿ ಒಂದು ತಂಡದ ಸಹ ಮಾಲೀಕತ್ವವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಹೊಂದಿದ್ದಾರೆ (PC-PTI).

1 / 5
ವಾಸ್ತವವಾಗಿ ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಈ ಹೊಸ ಟಿ20 ಲೀಗ್ ಅನ್ನು ಆಯೋಜಿಸುತ್ತಿವೆ. ಈ ಲೀಗ್​ನಲ್ಲಿ ಒಂದು ತಂಡವನ್ನು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡು ಪ್ಲೆಸಿಸ್ ಡಚ್ ಫ್ರಾಂಚೈಸ್ ರೋಟರ್ಡ್ಯಾಮ್ ಡಾಕರ್ಸ್‌ ತಂಡದ ಸಹ-ಮಾಲೀಕರಾಗಿದ್ದಾರೆ (PC-PTI).

2 / 5
ಡು ಪ್ಲೆಸಿಸ್ ಜೊತೆಗೆ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರ ಮತ್ತು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಹೆನ್ರಿಕ್ ಕ್ಲಾಸೆನ್ ಕೂಡ ಈ ಫ್ರಾಂಚೈಸಿಯ ಮಾಲೀಕರಲ್ಲಿ ಒಬ್ಬರು. ಇವರೊಂದಿಗೆ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಮಾಜಿ ಆಟಗಾರ ಜಾಂಟಿ ರೋಡ್ಸ್ ಕೂಡ ಈ ತಂಡದ ಸಹ-ಮಾಲೀಕರಾಗಿದ್ದಾರೆ (PC-PTI).

3 / 5
ಈ ಲೀಗ್​ನ ಡ್ರಾಫ್ಟ್ ಜುಲೈ 2 ರಂದು ನಡೆಯಲಿದ್ದು, ಅದಕ್ಕೂ ಮೊದಲು ಎಲ್ಲಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ನೇರವಾಗಿ ತಂಡಕ್ಕೆ ಸೇರಿಸಿಕೊಂಡಿವೆ. ಅದರಲ್ಲಿ ಡು ಪ್ಲೆಸಿಸ್ ತನ್ನದೇ ಆದ ತಂಡದ ನಾಯಕರಾಗಿರಲಿದ್ದು, ಕ್ಲಾಸೆನ್ ಸಹ ಇದರಲ್ಲಿ ಆಡಲಿದ್ದಾರೆ. ಡೊನೊವನ್ ಫೆರೆರಾ ಮತ್ತು ಅನ್ರಿಚ್ ನೋಕಿಯಾ ಕೂಡ ಈ ತಂಡದಲ್ಲಿ ಇರಲಿದ್ದಾರೆ (PC-PTI).

4 / 5
ಇದಲ್ಲದೆ, ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಲೀಗ್‌ಗೆ ಸೇರಿದ್ದಾರೆ. ಅವರನ್ನು ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ನಾಯಕ ಮತ್ತು ಮಾರ್ಗದರ್ಶಕನಾಗಿ ನೇಮಿಸಲಾಗಿದೆ. ಹಅಗೆಯೇ ನ್ಯೂಜಿಲೆಂಡ್​ನ ಸ್ಟಾರ್ ಆಟಗಾರರಾದ ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್‌ ತಂಡವನ್ನು ಸೇರಿದ್ದಾರೆ (PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ

ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?

ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?

ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ

‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್

ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ

ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ

ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?

ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ

‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?