AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರಿಗಳ ವಿರೋಧದ ನಡುವೆಯೂ  ಫುಟ್​​ಪಾತ್ ಮಾಡುತ್ತಿರುವುದರ ಬಗ್ಗೆ ಕೃಷ್ಣಭೈರೇಗೌಡ ಖಡಕ್ ಮಾತು

ವ್ಯಾಪಾರಿಗಳ ವಿರೋಧದ ನಡುವೆಯೂ ಫುಟ್​​ಪಾತ್ ಮಾಡುತ್ತಿರುವುದರ ಬಗ್ಗೆ ಕೃಷ್ಣಭೈರೇಗೌಡ ಖಡಕ್ ಮಾತು

ರಮೇಶ್ ಬಿ. ಜವಳಗೇರಾ
|

Updated on:Jul 01, 2026 | 3:07 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಫುಟ್​ಪಾತ್​ ಒತ್ತುವರಿ ತೆರವು ಕಾರ್ಯಚರಣೆ
  • ಬೆಂಗಳೂರಿನ ನಾಗರಿಕರಿಗೆ ಇದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್​ಪಾತ್ ತೆರವು ಮಾಡ್ತಿದ್ದೇವೆ
  • ‘ಸುಪ್ರೀಂ’ ಆದೇಶದ ಮೇರೆಗೆ ತೆರವು ಕಾರ್ಯ ಮಾಡ್ತಿದ್ದೇವೆ ಎಂದ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದಾರೆ. ರಾಜಧಾನಿಯಲ್ಲಿ ಇಂದಿನಿಂದ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಿದೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೀತಿದೆ. ಫುಟ್​ಪಾತ್​ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳಿಗೆ ಅಧಿಕಾರಿಗಳು ಚುರುಕು ಮುಟ್ಟಿಸಿದ್ದಾರೆ. ಇನ್ನು ಕೆಲವವೆಡೆ ಹೈಡ್ರಾಮಾಗಳೇ ನಡೆದಿವೆ. ಫುಟ್​​ಪಾತ್ ತೆರವು ಮಾಡಲ್ಲ.ನೀವು ತೆಗೆದರೆ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಜಾಗ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಹಠಕ್ಕೆ ಬಿದ್ದಿದ್ದಾರೆ.

ಬೆಂಗಳೂರು, (ಜುಲೈ 01): ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು, ರಾಜಧಾನಿಯಲ್ಲಿ ಇಂದಿನಿಂದ ಫುಟ್​​​​ಪಾತ್ (footpath)​​​​ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೀತಿದೆ. ಫುಟ್​ಪಾತ್​ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳಿಗೆ ಅಧಿಕಾರಿಗಳು ಚುರುಕು ಮುಟ್ಟಿಸಿದ್ದಾರೆ. ಇನ್ನು ಕೆಲವವೆಡೆ ಹೈಡ್ರಾಮಾಗಳೇ ನಡೆದಿವೆ. ಫುಟ್​​ಪಾತ್ ತೆರವು ಮಾಡಲ್ಲ.ನೀವು ತೆಗೆದರೆ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಸ್ಥಳ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಹಠಕ್ಕೆ ಬಿದ್ದಿದ್ದಾರೆ.

ಇನ್ನು ಈ ಫುಟ್​​​ಪಾತ್ ಒತ್ತುವರಿ ತೆರವು ಬಗ್ಗೆ ವಿಕಾಸಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಕೃ್ಣಭೈರೇಗೌಡ, ‘ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ತೆರವು ಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್​ಪಾತ್ ತೆರವು ಮಾಡ್ತಿದ್ದೇವೆ. ಕೇವಲ ಶೇ.15ರಷ್ಟು ಫುಟ್​ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 15 ಸಾವಿರ ಕಿ.ಮೀ. ಫುಟ್​ಪಾತ್ ಇದೆ. ಆದ್ರೆ, ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಅಂತಾ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ. ಫುಟ್​ಪಾತ್ ಒತ್ತುವರಿಯಿಂದಾಗಿ ಅಪಘಾತ ಸಂಭವಿಸುತ್ತಿದ್ದು, ಫುಟ್​ಪಾತ್ ತೆರವುಗೊಳಿಸುವಂತೆ ಜನರು ಕೇಳುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 01, 2026 03:04 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More