AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಆಸ್ತಿಯನ್ನು ಪಡೆಯುವ ಸಂದರ್ಭ ಬರಲಿದೆ…

Horoscope Today July 01: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಬುಧವಾರದಂದು ಆಕಸ್ಮಿಕವಾಗಿ ಗಣ್ಯರ ಒಡನಾಟ, ಆದಾಯದಲ್ಲಿ ಅತಿಯಾಸೆ, ಮರೆವಿಗೆ ಮದ್ದು, ಪಕ್ಷಪಾತದಿಂದ ಬೇಸರ, ನಿತ್ಯದ ಕಾರ್ಯ ಉದ್ಯೋಗವಾಗಿ ಬದಲಾವಣೆ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಆಸ್ತಿಯನ್ನು ಪಡೆಯುವ ಸಂದರ್ಭ ಬರಲಿದೆ...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 01, 2026 | 12:49 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ಐಂದ್ರ, ಕರಣ : ಕೌಲವ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:24 – 13:59, ಯಮಗಂಡ ಕಾಲ 07:35 – 09:11, ಗುಳಿಕ ಕಾಲ 10:47 – 12:24

ಮೇಷ ರಾಶಿ :

ಮಂಗಲಕರವಾದ ಕಾರ್ಯಗಳನ್ನು ಮಾಡಲಿದ್ದೀರಿ. ಮನೆಯಲ್ಲಿಯೇ ಇರುವ ನಿಮಗೆ ಮನೆಯವರ ಮಾತುಗಳು ಕಿರಿಕಿರಿ‌ ಎನಿಸಬಹುದು. ನಿಮ್ಮ ಮಾತು ಜೊತೆಗಾರರಿಗೆ ಮನ ನೋಯುವಂತೆ ಇರಲಿದೆ. ನೀವು ಇಂದು ನಡೆದಾಡಲೂ ಇಷ್ಟಪಡುವುದಿಲ್ಲ. ಕಂಕಣಬಲ ಕೂಡಿ ಬರಲು ಯಾತ್ರೆ ಮಾಡುವಿರಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ‌ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಅಂತಃಕರಣದ ಒಪ್ಪಿಗೆಯಿಂದ ಕಾರ್ಯವನ್ನು ಮಾಡುವಿರಿ.

ವೃಷಭ ರಾಶಿ :

ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ದಾಂಪತ್ಯವು ಸುಖವಾಗಿರಲು ಇಬ್ಬರೂ ಪ್ರಯತ್ನಿಸಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸಬಹುದು. ನಿಮ್ಮ ನಡೆಯು ಸುಲಭಕ್ಕೆ ತಿಳಿಯದು. ಐಷಾರಾಮಿಯಾಗಿ ಇರಲು ಈ ದಿನವನ್ನು ಇಷ್ಟಪಡುವಿರಿ. ನಿಮ್ಮ ಬಳಿ ಯಾರೂ ವಾದ‌ಮಾಡಬಾರದು ಎನ್ನವ ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.

ಮಿಥುನ ರಾಶಿ :

ಬಂಧುಗಳ ಮಾತು ಕಹಿ ಎನಿಸಬಹುದು. ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಸಂಗಾತಿಯ ಅಸಂಬದ್ಧ ಮಾತುಗಳನ್ನು ಕೇಳಿ ನಿಮಗೆ ಬೇಸರವಾದೀತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸುವಿರಿ. ದುಷ್ಟ ಶಕ್ತಿಯಿಂದ ತೊಂದರೆಯಾಗುವ ಅನುಮಾನ ಕಾಡವುದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕರ್ಕಾಟಕ ರಾಶಿ :

ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಹಳೆಯ ವಾಹನವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಎಲ್ಲವೂ ಗೊತ್ತಿದೆ ಎಂಬ ಅಹಂಕಾರವನ್ನು ತೋರಿಸುವಿರಿ. ಉದ್ಯೋಗದ ನಿಮಿತ್ತ ನೀವು ಹೊರದೇಶಕ್ಕೆ ಹೋಗಬಹುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಕಾನೂನಾತ್ಮಕ ವಿಚಾರವು ನಿಮಗೆ ಅರ್ಥವಾಗದಿರಬಹುದು.

ಸಿಂಹ ರಾಶಿ :

ಯಾರಾದರೂ ನಿಮ್ಮ ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗದವರಿಗೆ ಕಛೇರಿಯಲ್ಲಿ ಕಿರಿಕಿರಿಯಾಗಬಹುದು. ಕಂಟಕವನ್ನು ಲಘುವಾಗಿ ಕಾಣುವುದು ಬೇಡ. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ.

ಕನ್ಯಾ ರಾಶಿ :

ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯಿಂದ ಅಪಮಾನವೂ ಆಗಬಹುದು. ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಸುಮ್ಮನೇ ಕೈ ಹಾಕಬೇಡಿ. ಅಧಿಕಾರಿಗಳಿಂದ ಏನಾದರೂ ತೊಂದರೆಯಾದೀತು. ಲೆಕ್ಕಪತ್ರವು ಇಂದು ಪರಿಶೀಲನಗೆ ಕೊಡಬೇಕಾಗುವುದು. ಅದೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ಅಧಿಕ ಲಾಭಕ್ಕೆ ಯೋಜನೆಯನ್ನು ರೂಪಿಸುವುದು ಒಳ್ಳೆಯದು.

ತುಲಾ ರಾಶಿ:

ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಸಿಟ್ಟೇ ನಿಮ್ಮ ಶತ್ರುವಾಗಿ ಕಾಡಲಿದ್ದು, ಸಕಲ ಕಾರ್ಯಗಳಿಗೂ ಇದು ವಿಘ್ನವಾಗಲಿದೆ. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟ.

ವೃಶ್ಚಿಕ ರಾಶಿ:

ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ದೀರ್ಘಾವಧಿಯ ಶಿಕ್ಷೆಯಿಂದ ಮುಕ್ತರಾಗಿ ಸ್ವತಂತ್ರತೆಯನ್ನು ಪಡೆಯುವಿರಿ. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ಬಂಧುಗಳ ಮನೆಗೆ ಹೋಗಲಿದ್ದೀರಿ. ಕೆಲವನ್ನು ನೀವು ಬಿಡಲು ಸಾಧ್ಯವಾಗದು. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು.

ಧನು ರಾಶಿ:

ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯವನ್ನು ಪಡೆಯುವಿರಿ. ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಯನ್ನು ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.

ಮಕರ ರಾಶಿ:

ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ ನಿಮಗೆ ಖುಷಿಯಾಗಲಿದೆ. ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ನೆರಹೊರೆಯರ ಭೂಮಿಯ ವಿಚಾರಕ್ಕೆ ಮನಸ್ತಾಪ. ಕೆಲಸಗಳಿಂದ ಒತ್ತಡವು ಅತಿಯಾಗಬಹುದು, ಸಮಾಧಾನಚಿತ್ತದಿಂದ ಸ್ವೀಕರಿಸಿರಿ. ತಪ್ಪುಗಳಿಂದ ಪಶ್ಚಾತ್ತಾಪ ಆಗಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.

ಕುಂಭ ರಾಶಿ:

ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರಬೇಕು. ಆಲಸ್ಯವೂ ಒಮ್ಮೆ ನಿಮ್ಮನ್ನು ರಕ್ಷಿಸುವುದು. ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರಲಿದೆ. ನಿಮ್ಮ ಬಗ್ಗೆ ಋಣಾತ್ಮಕವಾದ ಮಾತುಗಳು ಕೇಳಿ ಬರಬಹುದು. ಅದನ್ನು ಧನಾತ್ಮಕವಾಗಿ ಮಾಡುವ ಛಲವು ನಿಮಗೆ ಇರಬೇಕಿದೆ. ಪರಿಸ್ಥಿತಿಗಳು ನಮ್ಮ‌ಅನುಕೂಲಕ್ಕೆ ತಕ್ಕಂತೆ ಇರದು. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಮನೆಯವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.

ಮೀನ ರಾಶಿ:

ಇರುವುದರಲ್ಲಿ ಖುಷಿಪಡುವುದು ಉತ್ತಮ. ಸಂಗಾತಿಯನ್ನು ಮುಚ್ಚಿಡಲು ಹೋಗಿ ಸೋಲುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಾಗೆ ದಿನವನ್ನು ರೂಪಿಸಿಕೊಳ್ಳಿ. ದುಸ್ಸಾಹಸವು ಒಳ್ಳೆಯದಲ್ಲ. ಅನಾಹುತದ ಭೀತಿ ಕಾಡುವುದು. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟರೂ ತಲೆಯ ಒಳಗೆ ಹೋಗದು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

Follow Us