Daily Horoscope: ನವ ವಿವಾಹಿತ ದಂಪತಿಗಳ ಜೀವನದಲ್ಲಿ ಪ್ರೀತಿ ಹೊಕ್ಕಿ ಹಿರಿಯುವುದು, ಆಪ್ತರ ಜೊತೆ ಬಾಂಧವ್ಯ ಕಾಪಾಡಿಕೊಳ್ಳಿ

ಇಂದಿನ (2023 ಮೇ​ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ನವ ವಿವಾಹಿತ ದಂಪತಿಗಳ ಜೀವನದಲ್ಲಿ ಪ್ರೀತಿ ಹೊಕ್ಕಿ ಹಿರಿಯುವುದು, ಆಪ್ತರ ಜೊತೆ ಬಾಂಧವ್ಯ ಕಾಪಾಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 06, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯತಿಪಾತ್ , ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 09:19 ರಿಂದ 10:54ರ ವರೆಗೆ, ಯಮಘಂಡ ಕಾಲ 02:04 ರಿಂದ 03:39ರ ವರೆಗೆ, ಗುಳಿಕ ಕಾಲ 06:09 ರಿಂದ 07:44ರವರೆಗೆ.

ಮೇಷ: ನಿಮ್ಮ ಪ್ರಣಯ ಜೀವನವು ಬಹಳಷ್ಟು ಸಂತೋಷ ತರಬಹುದು. ನಿಮ್ಮ ಆಪ್ತರ ಜೊತೆ ಬಾಂಧವ್ಯವನ್ನು ರೂಪಿಸುವ ಅವಕಾಶವಿದೆ. ನೂತನವಾಗಿ ವಿವಾಹವಾದ ದಂಪತಿಗಳು ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವರು. ವಿದ್ಯಾರ್ಥಿಗಳ ಒಟ್ಟಾರೆ ಕೆಲಸವು ಗಮನಾರ್ಹವಾಗಿ ವೃದ್ಧಿಯಾಗಬಹದು. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ  ಪಡೆಯುವಿರಿ.

ವೃಷಭ: ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತಗತವೆ. ತಾಯಿಯಿಂದ ಹೆಚ್ಚಿನ ಸಹಕಾರಗಳು ನಿಮಗೆ ದೊರೆತು ಸಂತಸವಾಗುತ್ತದೆ. ಇಂದುಕೆಲವೊಮ್ಮೆ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವು ಬರಬಹುದು. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನೀವು ಹೆಚ್ಚು ವ್ಯಾಯಾಮ ಮಾಡಬೇಕಾಗಬಹುದು. ಮನಸ್ಸುವಿಶ್ರಾಂತಿಯನ್ನು ಪಡೆಯಲು ಹೆಚ್ಚು ಮನಸ್ಸು ಮಾಡುವಿರಿ. ಆರ್ಥಿಕವಾದ ಲಾಭವಾಗಲಿದೆ ಪ್ರಯಾಣವನ್ನು ಊಹಿಸಿಸುವಿರಿ. ಕುಟುಂಬದ ಖರ್ಚು ಇಂದು ಇರಬಹುದು.

ಮಿಥುನ: ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಮಾತಿನಲ್ಲಿ ಹೆಚ್ಚಿನ ಎಚ್ಚರವಿರಲಿ, ಕುಹುಕವಾಡುವುದು ಬೇಡ. ಹಣದ ಹರಿವು‌ಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ನಿಮ್ಮ ಪ್ರೇಮಿಯ ಜೊತೆ ಸಮಯವನ್ನು ಕಳೆಯಲು ಇಚ್ಛಿಸುವಿರಿ. ಉನ್ನತ ಮಟ್ಟಕ್ಕೆ ಏರಲು ಸಂಪೂರ್ಣ ಅವಕಾಶ ಸುಗಲಿದೆ. ಸ್ನೇಹದಿಂದ ಪ್ರಣಯವು ಉಙಟಾಗಲಿದೆ. ಸಂಬಂಧದ ಮಹತ್ವವನ್ನು ತಿಳಿಯುವುದು. ಅತಿಯಾದ ಚಿಂತೆಯು ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಕಟಕ: ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರಲಿದೆ. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು. ಸರ್ಕಾರಿ ಕಛೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಇಂದು ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಲವನ್ನು ಮಾಡಬೇಕಾಗಿಬರಬಹುದು.

ಸಿಂಹ: ನಿಮ್ಮವರೇ ನಿಮ್ಮ‌ಮೇಲೆ ಅಪವಾದವನ್ನು ಹೇರುವ ಪ್ರಯತ್ನವನ್ನು ಮಾಡಬಹುದು.‌ ನಿಃಸ್ವಾರ್ಥವಾಗಿ ಇಷ್ಟಪಡುವವರ ಮೇಲೆ‌ ಅನುಮಾನ ಬೇಡ. ನೀವು ನಡೆಯಬೇಕಾದ ದಾರಿಯು ಸರಿ ಇದ್ದು ಅತ್ತ ಸಾಗುವಿರಿ. ಮನೆಯ ಆಗುಹೋಗುಗಳ ಬಗ್ಗೆ ಹಿರಿಯರೊಡನೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬನ್ನಿ. ನಕಾರಾತ್ಮಕ ಆಲೋಚನೆಗಳು ನಿಮ್ಮ ಗಮನದ ವ್ಯತ್ಯಾಸಕ್ಕೆ ಕಾರಣವಾಗಬಹುದು. ನಿಮ್ಮ ಸುತ್ತಲೂ ಉತ್ಸಾಹದಿಂದ ಇರುವಂತೆ ನೋಡಿಕೊಳ್ಳಿ. ಕೆಲವು ಚಟಗಳು ನಿಮ್ಮ ಓದಿಗೆ ಅಡ್ಡಿಯಾಗಬಹುದು. ಇಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಚೆನ್ನಾಗಿರಬಹುದು. ನಿಮ್ಮ ಅಧ್ಯಯನದಿಂದ ನಿಮ್ಮನ್ನು ವಿಚಲಿತಗೊಳಿಸುವ ಅನಗತ್ಯ ವಾದಗಳನ್ನು ತಪ್ಪಿಸಿ.

ಕನ್ಯಾ: ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಬರಲಿದೆ. ಮನೆಯಲ್ಲಿ ದೇವಕಾರ್ಯಗಳು ನಡೆಯಲಿದೆ. ವ್ಯಕ್ತಿಯು ಅವನ ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಎಲ್ಲ ಬಗೆಯ ಬೆಂಬಲ ಹಾಗೂ ಸಹಕಾರಗಳನ್ನು ಜನರು ಕೊಡಬಹುದು. ಒಂದು ದೊಡ್ಡ ಕೆಲಸವನ್ನು ಇಂದು ಪೂರ್ಣಗೊಳಿಸುವಿರಿ. ನೀವು ಇಂದು ತುಂಬಾ ಸಂತೋಷದಿಂದ ಇರುವಿರಿ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಮಯವು ಇದಾಗಿಲ್ಲ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ.

ತುಲಾ: ಇಂದು ನೀವು ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ತಾಳ್ಮೆಯಿಂದಲೇ ಇರಿ. ಹಣಕಾಸಿನ ಒತ್ತಡದಿಂದ ಮನೆಯಲ್ಲಿ ಅಶಾಂತಿಯು ಉಂಟಾಗಬಹುದು. ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳಿ. ತಂತ್ರಜ್ಞಾನ ಕ್ಷೇತ್ರದಲ್ಲಿ ನೀವು ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುವಿರಿ. ನಿಮ್ಮ ಆರೋಗ್ಯವು ಸುಧಾರಿಸಿಬಹುದು. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಆಹಾರದ ಮೇಲೆ ನಿಗಾ ಇಟ್ಟುಕೊಳ್ಳಿ. ಉಪಯೋಗುವ ಕೆಲಸಕ್ಕೆ ವೆಚ್ಚ ಮಾಡಿ. ಹಣದ ದುಂದುವೆಚ್ಚ ಬೇಡ. ಭೂಮಿಯಿಂದ ಲಾಭವನ್ನು ಗಳಿಸುವಿರಿ. ವ್ಯವಸಾಯಗಾರರಿಗೆ ಧನ ಲಾಭವು ಆಗಬಹುದು.

ವೃಶ್ಚಿಕ: ಇಂದು ಕೆಲಸವನ್ನು ಕಂಡು ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಿಯಾರು. ಪ್ರವಾಸವನ್ನು ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡಲಿದ್ದೀರಿ.‌ ಅಪರಿಚಿತರು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಆರ್ಥಿಕ ಲಾಭವು ನಿಮಗೆ ಗೌರವವನ್ನು ನೀಡಬಹುದು. ವ್ಯಾಪಾರಸ್ಥರು ಆಪ್ತರ ಸಲಹೆಯನ್ನು ಸ್ವೀಕರಿಸಿ. ಇಂದು ನಿಮ್ಮ ಕೆಲಸವು ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ. ಸರ್ಕಾರಿ ನೌಕರರಿಗೂ ಈಗ ಶುಭವಾಗಲಿದೆ. ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಆರೋಗ್ಯ ಉತ್ತಮವಾಗಿರಲಿದೆ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ.

ಧನಸ್ಸು: ಬಹುದಿನದ ಆಸೆಗಳು ಕೈಗೂಡುವ ಹಂತದಲ್ಲಿ ಇದ್ದರೂ ತಪ್ಪಬಹುದು. ‌ಇಂದು ನಿಮ್ಮ ಸಂಬಂಧದಲ್ಲಿ ಅನಗತ್ಯ ಮಾತುಗಳು, ವಿವಾದಗಳು ಉಂಟುಮಾಡಬಹುದು. ಆರೋಗ್ಯವಾಗಿರಲು ಚಿಕಿತ್ಸೆಯನ್ನು ನಿರಂತರ ಮಾಡುವುದು ಅವಶ್ಯಕ. ಸಕಾರಾತ್ಮಕ ಆಲೋಚನೆ ನಿಮ್ಮನ್ನು ಸರಿ ದಾರಿಗೆ ಕೊಂಡೊಯ್ಯಬಹುದು. ಪ್ರೀತಿಪಾತ್ರರ ಜೊತೆ ಹೆಚ್ಚು ಸಲುಗೆಯಿಂದ ಇರುವಿರಿ. ನಿಮ್ಮ ಕಷ್ಟಕ್ಕೆ ಆದವರನ್ನು ಮರೆಯಬೇಡಿ. ಒಬ್ಬರಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಇಂದು ಇರಬಹುದು. ಇಂದು ಒತ್ತಡ ಇರುವುದರಿಂದವಾಲ್ಪ ಭೋಜನವನ್ನು ಮಾಡುವ ಸಂದರ್ಭವೂ ಬರಲಿದೆ.

ಮಕರ: ಉತ್ತಮ ಕಾಲವು ಬರಲಿ ಎಂದು ನಿರೀಕ್ಷೆಯಲ್ಲಿ ಇರುವಿರಿ. ಮನೆಯಲ್ಲಿ‌ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ.‌ ಸ್ತ್ರೀಮೂಲದಿಂದ ಧನಸಹಾಯವು ಆಗಬಹುದು.‌ ಕೆಲವು ಕಷ್ಟಕರ ಸಂದರ್ಭಗಳಲ್ಲಿ ನಿಮಗೆ ಕಷ್ಟವಾದಿ. ಪರಿಸ್ಥಿತಿಯು ಋಣಾತ್ಮಕ ಅಂಶಗಳ ಮೇಲೆ ಗಮನಹರಿಸುವಿರಿ. ಸಮಸ್ಯೆಗಳನ್ನು ನಿಭಾಯಿಸಲು ನೀವು ಸೋಲಬಹುದು. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವು ಬೇಗನೆ ಚೇತರಿಸಿಕೊಳ್ಳುವುದು ಉತ್ತಮ. ನಿಮ್ಮ ಕೆಲಸದಲ್ಲಿ ಸಮಯ ಮತ್ತು ಶ್ರಮವನ್ನು ಹಾಕಿದ್ದರೆ ನೀವು ಗುರಿಯನ್ನು ಸಾಧಿಸುವಿರಿ.

ಕುಂಭ: ಕಳೆದುಕೊಂಡದ್ದರ ಬಗ್ಗೆ ಚಿಂತೆ ಬಿಟ್ಟು ಮುಂದೇನು ಆಗಬೇಕು ಎಂಬ ಬಗ್ಗೆ ಆಲೋಚಿಸಿ ಸಂತೋಷವಾಗಿರಬಹುದು. ನಿಮ್ಮ ಸ್ವಭಾವಕ್ಕೆ ಯೋಗ್ಯರಾದವರನ್ನು ಆರಿಸಿಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯ ಕಾರಣದಿಂದ ನಿಮಗೆ ಪ್ರಯಾಣ‌ ಮಾಡಬೇಕಾದ ಸ್ಥಿತಿ ಬರುವ ಸಾಧ್ಯತೆ ಇದೆ. ಆಸಕ್ತಿದಾಯಕವಾದದ್ದನ್ನು ಮಾಡಲು ಅಥವಾ ನಿಮ್ಮ ಸ್ನೇಹಿತರೊಂದಿಗೆ ಮೋಜು ಮಾಡಲು ನೀವು ಸ್ಫೂರ್ತಿ ಪಡೆಯಬಹುದು. ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಆರೋಗ್ಯವು ನಿಮ್ಮ ಕೈಯ್ಯಲಿದೆ. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ.

ಮೀನ: ನಿಮ್ಮ ಅತಿಯಾದ ಲೆಕ್ಕಾಚಾರವು ಬುಡ ಮೇಲಾಗುವ ಸಾಧ್ಯತೆ ಇದೆ. ವಾಹನವನ್ನು ರಿಪೇರಿ ಮಾಡಿಸುವ ಕೆಲಸವೇ ಇಂದು ಹೆಚ್ಚಾದೀತು. ಯಾವ ಕೆಲಸವೂ ಆಗದೇ ಕಿರಿಕಿರಿಯಿಂದ ಸಿಟ್ಟುಗೊಳ್ಳುವಿರಿ. ಕೃಷಿಕರಿಗೆ ಇಂದು ಸ್ವಲ್ಪ ಜಾಡ್ಯವೂ ಇರಬಹುದು. ಆಪ್ತರನ್ನು ಭೇಟಿಯಾಗುವ ಮನಸ್ಸೂ ಇಲ್ಲದೇ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಮಕ್ಕಳ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲು ಕಷ್ಟ ಪಡಬೇಕಾದೀತು. ಯಾವುದನ್ನೂ ಯೋಚಿಸದೇ ಇಂದು ನಿಶ್ಚಿಂತೆಯಿಂದ ಇರಲು ಇಚ್ಛಿಸುವಿರಿ. ತಂದೆಯಿಂದ ಬೈಗುಳಗಳು ಸಿಕ್ಕಿಯಾವು.

ಲೋಹಿತಶರ್ಮಾ 8762924271 (what’s app only)