Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 05:14 ರಿಂದ 06:49ರ ವರೆಗೆ, ಯಮಘಂಡ ಕಾಲ 12:29 ರಿಂದ 02:04ರ ವರೆಗೆ, ಗುಳಿಕ ಕಾಲ 03:39 ರಿಂದ 05:14ರವರೆಗೆ.
ಮೇಷ: ಎಲ್ಲಿಗಾದರೂ ಸ್ವತಂತ್ರವಾಗಿ ಹೋಗಲು ಇಚ್ಛಿಸುವಿರಿ. ಅಧ್ಯಾತ್ಮಿಕ ವಿಚಾರವನ್ನು ನೀವು ಚರ್ಚಿಸುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗುವಿರಿ. ಸ್ನೇಹಿತರ ಸಹವಾಸದಿಂದ ನೀವು ಬದಲಾಗಬಹುದು. ನಿಮ್ಮ ನಡವಳಿಕೆಯಲ್ಲಿ ಬಹಳ ವ್ಯತ್ಯಾಸವನ್ನು ನಿಮ್ಮವರು ಗಮನಿಸುವರು. ಖರೀದಿಸಿದ ವಸ್ತುವು ರಿಪೈರ್ ಗೆ ಬರಬಹುದು. ಹಿರಿಯರಿಗೆ ಗೌರವವನ್ನು ಕೊಡುವಿರಿ. ಅವರ ಆಶೀರ್ವಾದವು ಸಿಗಲಿದೆ. ಗೃಹನಿರ್ಮಾಣವು ಪೂರ್ಣಗೊಳ್ಳಲಿದೆ. ಇಂದಿನ ಕೆಲಸವು ಆಲಸ್ಯದಿಂದ ನಿಧಾನವಾಗಲಿದೆ. ಆದರೂ ಸಮಯವು ವ್ಯರ್ಥವಾಗುತ್ತಿದೆ ಎಂದು ಅನಿಸಬಹುದು.
ವೃಷಭ: ಬಾಂಧವ್ಯವನ್ನು ಉಳಿಸಿಕೊಳ್ಳಲು ನೀವು ಬಹಳ ಪ್ರಯತ್ನವನ್ನು ಮಾಡುವಿರಿ. ಎಲ್ಲರೂ ನಿಮಗೆ ಸಹಕರಿಸುವರು ಎಂಬ ಭ್ರಮೆಯನ್ನು ಬಿಡಿ. ಹೊಸ ಉದ್ಯೋಗದಲ್ಲಿ ನಿಮಗೆ ಉತ್ಸಾಹವು ಅಧಿಕವಾಗಿರಲಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡುವಿರಿ. ಆತ್ಮವಿಶ್ವಾಸದ ಕೊರತೆ ಹೆಚ್ಚು ಕಾಣಬಹುದು. ನಿಮ್ಮನ್ನು ನಂಬಿದವರನ್ನು ನೀವು ಕೈ ಬಿಡಲಾರಿರಿ. ಎಲ್ಲದಕ್ಕೂ ಕಾರಣವನ್ನು ಅನ್ವೇಷಿಸುವಿರಿ. ಪರರ ದುಃಖದಲ್ಲಿ ನೀವು ಭಾಗಿಯಾಗುವಿರಿ. ಕುಟುಂಬದಲ್ಲಿ ನಿಮ್ಮ ಸ್ಥಾನದ ಬಗ್ಗೆ ಗೊತ್ತಾಗುವುದು.
ಮಿಥುನ: ಸಂಗಾತಿಯ ಮೇಲೆ ವಿರಸಭಾವವು ಉಂಟಾಗಬಹುದು. ಸ್ತ್ರೀಯರು ನಿಮಗೆ ಸಹಾಯವನ್ನು ಮಾಡುವರು. ನಿಮ್ಮ ಬಲದ ಬಗ್ಗೆ ಇತರರಿಗೆ ತಿಳಿಯಲಿದೆ. ಅಲಂಕಾರಕ್ಕೆ ಹೆಚ್ಚು ಮಹತ್ತ್ವವನ್ನು ಕೊಡಬಹುದು. ಹಣ ಹೂಡಿಕೆಯನ್ನು ನೀವು ನಿಧಾನವಾಗಿ ಮಾಡುವಿರಿ. ಪ್ರಚಾರವನ್ನು ಇಷ್ಟಪಡುವಿರಿ. ನಿಮ್ಮ ಬಗ್ಗೆ ನೀವೆ ಪ್ರಶಂಸೆ ಮಾಡಿಕೊಳ್ಳುವ ಸ್ಥಿತಿಯನ್ನು ತಂದುಕೊಳ್ಳಬಹುದು. ಕೆಟ್ಟ ಕೆಲಸವನ್ನು ಮಾಡಲು ಹಿಂಜರಿಯುವಿರಿ. ಮಕ್ಕಳ ಜೊತೆ ಸಂತೋಷದಿಂದ ಕಾಲಕಳೆಯುವಿರಿ. ನಿಮ್ಮವರನ್ನು ಕಾಳಜಿ ಮಾಡುವಿರಿ.
ಕಟಕ: ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹಾಗೂ ಕುತೂಹಲವಿರಬಹುದು. ಅನಗತ್ಯ ಖರ್ಚನ್ನು ಕಡಿಮೆ ಮಾಡಿ. ದುಂದುವೆಚ್ಚವು ನಿಮಗೆ ತೊಂದರೆಯಾದೀತು. ವ್ಯಾಪಾರದಲ್ಲಿ ಕೊಡು ಕೊಳ್ಳುವುದು ಸರಿಯಾಗುವಂತೆ ನೋಡಿಕೊಳ್ಳಿ. ಮೋಸವಾಗುವ ಸಾಧ್ಯತೆ ಇದೆ. ಎಲ್ಲವನ್ನೂ ಇನ್ನೊಬ್ಬರ ತಲೆಗೆ ಹೇರಿ ನೀವು ನಿಶ್ಚಿಂತರಾಗುವಿರಿ. ಸಮಾನಶೀಲರನ್ನು ನೀವು ಸ್ನೇಹ ಮಾಡಿಕೊಳ್ಳಲು ಬಯಸುವುದಿಲ್ಲ. ಯಂತ್ರೋಪಕರಣದ ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಬುಹುದು. ಉತ್ತಮ ಭೋಜನವನ್ನು ಸಂಗಾತಿಯ ಜೊತೆ ಮಾಡುವಿರಿ.