Weekly Horoscope: ವಾರ ಭವಿಷ್ಯ, ಮೇ 7ರಿಂದ ಮೇ 13ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

2023ರ ಮೇ 7ರಿಂದ ಮೇ 13ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ, ಮೇ 7ರಿಂದ ಮೇ 13ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ಮೇ 7ರಿಂದ ಮೇ 13ರ ವರೆಗಿನ ವಾರ ಭವಿಷ್ಯImage Credit source: stock.adobe
Follow us
Rakesh Nayak Manchi
|

Updated on: May 07, 2023 | 6:25 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಮೇ 7ರಿಂದ 13ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಮೇಷ: ನಿಮಗೆ ಈ ವಾರ ಮಂಗಳನಿಂದ ಶಕ್ತಿಯು ಹೆಚ್ಚಾಗುವುದು. ವೃತ್ತಿಜೀವನದಲ್ಲಿ ನಾನಾ ಪ್ರಯೋಜನಗಳು ಇರಲಿವೆ. ನಿಮ್ಮ ವ್ಯವಹಾರದ ವಿಸ್ತರಣೆಯ ಸಾಧ್ಯತೆ ಇದೆ. ವೃತ್ತಿಕ್ಷೇತ್ರದಲ್ಲಿ ಸ್ಥಾನಮಾನಗಲಕು, ಸ್ವಪ್ರತಿಷ್ಠೆಗಳು ಹೆಚ್ಚಾಗಬಹುದು. ಅಧಿಕಾರದಲ್ಲಿರುವವರಿಗೆ ಪ್ರಶಂಸೆ ಮತ್ತು ಗೌರವಗಳು ಸಿಗುವ ಸಾಧ್ಯತೆ ಇದೆ. ಹತ್ತಿರದವರ ಜೊತೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮಾನಸಿಕ ನೆಮ್ಮದಿಯು ಅಲ್ಪವಾಗಿ ಇರಬಹುದು. ಜೀವನ ಸಂಗಾತಿಯ ಬೆಂಬಲವು ಹೆಚ್ಚು ಸಿಗುತ್ತದೆ. ಸಹೋದರನ ಸ್ವಭಾವದಲ್ಲಿ ಕಿರಿಕಿರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮ್ಮ ಸಂಬಳವು ಸ್ವಲ್ಪ ವಿಳಂಬವಾಗಬಹುದು. ಇದು ನೆಮ್ಮದಿಯನ್ನು ಕದಲೀತು.

ವೃಷಭ: ಈ ವಾರವು ನಿಮ್ಮ ಮಹತ್ತರವಾದ ಯೋಜನೆಗಳು ವಿಸ್ತರಿಸಬಹುದು. ನಿಮ್ಮ ಪರಿಚಿತರಿಂದ ವೃತ್ತಿಗೆ ಸಂಬಂಧಿಸಿದ ಪ್ರಯೋಜನವು ಆಗಬಹುದು. ನಿಮ್ಮ ಶತ್ರುಗಳು ಈ ವಾರದಲದಲಿ ಪರೋಕ್ಷವಾಗಿ ನಿಮ್ಮಿಂದ ಪ್ರಯೋಜನವನ್ನು ಪಡೆದುಕೊಂಡಾರು. ಈ ವಾರದಲ್ಲಿ ಯಾರಿಗೂ ಅಗೌರವ ತೋರಬೇಡಿ. ಪ್ರೀತಿ, ವಿಶ್ವಾಸದಿಂದ ವ್ಯವಹರಿಸಿ. ಸಹೋದ್ಯೋಗಿಗಳ ಸ್ವಭಾವವು ನಿಮ್ಮ ಕೆಲಸವನ್ನು ಹೆಚ್ಚಿಸುವುದು ಮತ್ತು ಒತ್ತಡವನ್ನೂ ಉಂಟುಮಾಡಬಹುದು. ಇದರಿಂದ ನಿಮಗೆ ಸಿಟ್ಟು ಬಂದೀತು. ನಿಮ್ಮ ತಪ್ಪು ನಿರ್ಧಾರಗಳಿಂದ ಕಛೇರಿಯಲ್ಲಿ ಬೈಗುಳಗಳು ಬಂದಾವು. ಅನುಸರಿಸಬೇಕಾದ ನಿಯಮವನ್ನು ಪಾಲಿಸಿ.

ಮಿಥುನ: ಈ ವಾರ ಕುಟುಂಬದಲ್ಲಿ ನೆಮ್ಮದಿ, ಸಂತೋಷಗಳು ಇರಲಿವೆ. ನಿದ್ರೆಯಲ್ಲಿ ಕನಸುಗಳು ಹೆಚ್ಚಾದಾವು. ವೆಚ್ಚವನ್ನು ನಿಯಂತ್ರಿಸಿ ಆರ್ಥಿಕಲಾಭವನ್ನು ಪಡೆಯುವಿರಿ. ಈ ವಾರ ವ್ಯಾಪಾರ ವಹಿವಾಟುಗಳು ಲಾಭವನ್ನು ಕೊಡಲಿದೆ. ಆರೋಗ್ಯದಲ್ಲಿ ಅಸ್ವಾಸ್ಥ್ಯವು ಕಾಣಬಹುದು. ದೇಹಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳು ಹೆಚ್ಚಾಗಬಹುದು. ಧೈರ್ಯವನ್ನು ಇಟ್ಟುಕೊಂಡರೆ ಅನೇಕ ಲಾಭವನ್ನು ಗಳಿಸಬಹುದು. ಕೋಮಲ ಸ್ವಭಾವದಿಂದ ನಿಮಗೆ ಗೌರವ, ಪ್ರೀತಿ, ಸಹಾಯ ಎಲ್ಲವೂ ದೊರೆಯುವುದು. ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳಬಹುದು. ರಾಜಕೀಯ ವ್ಯಕ್ತಿಗಳು ಸ್ಪರ್ಧೆಯಲ್ಲಿ ಗಳಿಸುವರು.

ಕರ್ಕಾಟಕ: ನಿಮಗೆ ಈ ವಾರ ಸಂತೋಷವಿರಲಿದೆ. ವ್ಯಾಪಾರದಲ್ಲಿ ನೀವಿದ್ದರೆ ಗ್ರಾಹಕರು ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಸಹಾಯಕರ ಸಹಾಯದಿಂದ ಹೆಚ್ಚು ಕೆಲಸವನ್ನು ಮಾಡುವಿರಿ. ಸಮಾಜದಲ್ಲಿ ಗೌರವವು ಕಡಿಮೆಯಾಗಲಿದೆ. ವಿದೇಶದ ಸಂಪರ್ಕಗಳು ಸಿಕ್ಕಿ ಉದ್ಯಮಕ್ಕೆ ಬಲಬರುವ ಸಾಧ್ಯತೆ ಇದೆ. ಪ್ರಮುಖ ನಿರ್ಧಾರಗಳನ್ನು ತೆಗೆದಕೊಳ್ಳಲು ಅನುಭವಿಗಳ ಸಹಾಯವನ್ನು ಪಡೆಯಿರಿ. ಬುದ್ಧಿಯ ಆಧಾರದ ಮೇಲೆ ಅನೇಕ ವಿಚಾರವನ್ನು ಊಹಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ನಿಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸುವಿರಿ. ಅಲ್ಪಾವಧಿಯ ಹೂಡಿಕೆಯಿಂದ ಲಾಭವನ್ನು ಗಳಿಸುವಿರಿ. ವಿರುದ್ಧ ಲಿಂಗದಿಂದ ನಿಮಗೆ ಸಂತೋಷವಾಗಲಿದೆ.

ಸಿಂಹ: ಮೇ ತಿಂಗಳ ಎರಡನೇ ವಾರದ ಆರಂಭದಲ್ಲಿ ಸಂತಸವು ಹೆಚ್ಚಿರಬಹುದು. ನಿಮ್ಮ ಆರೋಗ್ಯ ಬಗ್ಗೆ ಅಧಿಕ ಕಾಳಜಿ ಅವಶ್ಯಕ. ಅನಗತ್ಯ ಟೀಕೆಗಳು ಕೇಳಿ ಬಂದರೆ ಅದನ್ನು ಕೂಡಲೆ ಸರಿ ಮಾಡಿಕೊಳ್ಳಿ. ಆದಾಯವು ಸಾಮಾನ್ಯವಾಗಿ ಇದ್ದರೂ ಇನ್ನಷ್ಟು ಬೇಕು ಎಂಬ ಆಸೆ ಅತಿಯಾಗಿ ಇರಲಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಲವು ಅವಕಾಶಗಳು ತೆರೆದುಕೊಳ್ಳಬಹುದು. ಸಹೋದ್ಯೋಗಿಯ ಸಲಹೆಯಿಂದ ವ್ಯತಿರಿಕ್ತ ಫಲವು ಇರಲಿದೆ. ಅನಗತ್ಯ ಕೆಲಸಕ್ಕೆ ಉತ್ಸಾಹ ಬೇಡ. ವೃತ್ತಿಜೀವನದಲ್ಲಿ ಬರುವ ಸವಾಲುಗಳಿಗೆ ನೀವು ಸರಿಯಾದ ಉತ್ತರ ನೀಡಬಹುದು. ತಾಯಿಯ ಸಂಬಂಧಿಕರಿಂದ ಹಣಕಾಸಿನ ವಿಚಾರಕ್ಕೆ ಒತ್ತಡವಿರಬಹುದು.

ಕನ್ಯಾ: ಈ ತಿಂಗಳ ಎರಡನೇ ವಾರ ಉತ್ತಮ ಅವಕಾಶದ ದುರುಪಯೋಗವಾಗಬಹುದು. ಸಹೋದ್ಯೋಗಿಗಳ ನಡತೆಯಿಂದ ನಿಮಗೆ ಉತ್ಸಾಹಭಂಗವಾಗಬಹುದು. ಸದ್ಯ ಹೊಸ ಕೆಲಸವನ್ನು ಪ್ರಾರಂಭಿಸಲು ಹೋಗಬೇಡಿ. ಪ್ರೇಮದಲ್ಲಿ ಗೊಂದಲವು ಉಂಟಾಗಬಹುದು. ನಿಮ್ಮ ಸಹೋದರನ ಏಳ್ಗೆಯು ನಿಮಗೆ ಖುಷೊಕೊಟ್ಟೀತು. ವೃತ್ತಿಯಲ್ಲಿ ನಾಯಕನ ಬೆಂಬಲವು ಸಿಗಲಿದೆ. ವ್ಯವಹಾರದಲ್ಲಿ ಅಧಿಕ ಲಾಭವನ್ನು ಗಳಿಸುವಿರಿ. ಸಂಗಾತಿಯ ವಿಚಾರದಲ್ಲಿ ನೀವು ಸಿಟ್ಟುಗೊಳ್ಳಬೇಕಾಗಬಹುದು. ಕೃಷಿಯಲ್ಲಿ ಈ ವಾರ ಹೆಚ್ಚು ತೊಡಗಿಕೊಳ್ಳಬಹುದು. ಪುಣ್ಯಕ್ಷೇತ್ರದ ದರ್ಶನವು ನಿಮಗೆ ಆಗಲಿದೆ. ಸಂತಾನದಿಂದ ಸಂತೋಷವು ಸಿಗಬಹುದು.

ತುಲಾ: ನಿಮ್ಮ ಸಂಪೂರ್ಣ ಪರಿಶ್ರಮವು ವ್ಯರ್ಥವಾಗಬಹುದು. ನವ ಉದ್ಯಮಗಳು ಅಭಿವೃದ್ಧಿಯಾಗಬಹುದು. ಶ್ರೇಷ್ಠ ಜನರ ಜೊತೆ ಬಂಧವನ್ನು ಬೆಳೆಸಿಕೊಳ್ಳುವಿರಿ. ಸಮೀಪದ ವ್ಯಕ್ತಿಗಳ ವರ್ತನೆಯಿಂದ ಅನುಮಾನ ಬರಬಹುದು. ನೀವು ಭೌತಿಕ ವಸ್ತುಗಳಿಂದ ಹೆಚ್ಚು ಸಂತೋಷವನ್ನು ಈ ವಾರ ಪಡೆಯುವಿರಿ. ಅಲ್ಪ ಪ್ರಯತ್ನವು ನಿಮಗೆ ದೊಡ್ಡ ಲಾಭವನ್ನು ತಂದುಕೊಡುವುದು. ನಿದ್ರಾಹೀನತೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೆಚ್ಚು ಸಮಾರಂಭಗಳಿಗೆ ಹೋಗಲಿದ್ದೀರಿ. ವಾಹನದಲ್ಲಿ ಓಡಾಟ ಮಾಡಿ ಆಯಾಸಗೊಳ್ಳುವಿರಿ. ಮಕ್ಕಳ‌ ಮೇಲೆ ಸಾಕಷ್ಟು ಪ್ರೀತಿ ಬರಲಿದೆ.

ವೃಶ್ಚಿಕ: ಈ ವಾರದ ಹೆಚ್ಚು ಸಮಯವು ಉತ್ಸಾಹ ಹಾಗೂ ನೆಮ್ಮದಿಯಿಂದ ಕಳೆಯುವಿರಿ. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಸಹೋದರ ಸಮಸ್ಯೆ ಈ ವಾರ ಬಯಲಿಗೆ ಬರಬಹುದು. ತಂದೆಯ ಒರಟು ಸ್ವಭಾವವು ನಿಮಗೆ ಕಿರಿಕಿರಿ ತಂದೀತು. ಹೊಸ ಆದಾಯದ ಮೂಲಗಳನ್ನು ಅನ್ವೇಷಿಸುವಿರಿ. ರಾಜಕಾರಣಿಗಳಿಗೆ ಅತ್ಯುತ್ತಮ ಸಮಯವು ಈ ವಾರದಲ್ಲಿ ಇರದು. ವಂಚನೆಯಿಂದ ಹಣವನ್ನು ನಷ್ಟಮಾಡಿಕೊಳ್ಳಬಹುದು. ದುರಾಸೆಯಿಂದ ಅಪಮಾನವಾದೀತು. ಅತಿಯಾದ ಸಲುಗೆಯಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ಎಲ್ಲೋ ಇದ್ದ ಅಪರಿಚಿತರು ಈ ವಾರ ಆಪ್ತರಾಗುವಿರಿ.

ಧನು: ಈ ವಾರ ನೀವು ನಿಮ್ಮ ಬಗ್ಗೆ ಗಮನ ಕೊಡಬೇಕಾದೀತು. ಆಲಸ್ಯದಿಂದ ನೀವು ಉತ್ತಮ ಅವಕಾಶಗಳು ಕಳೆದುಕೊಳ್ಳಬಹುದು. ಸಹೋದ್ಯೋಗಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳಿ ಮತ್ತು ಅವರೊಂದಿಗೆ ನಿಮ್ಮ ವ್ಯವಹಾರದಲ್ಲಿ ರೂಪಿಸಿಕೊಳ್ಳಿ. ಪೋಷಕರ ಆರೋಗ್ಯದಲ್ಲಿ ಹದ ತಪ್ಪಬಹುದು. ಕೆಲಸದ ಹೊರೆಯಿಂದ ಒತ್ತಡವು ಹೆಚ್ಚಾಗಬಹುದು. ನಿಮಗೆ ಸಿಕ್ಕ ಯಶಸ್ಸಿನಿಂದ ಅಹಂಕಾರ ಬರಬಹುದು. ಮಾತುಗಾರರಾಗಿದ್ದರೆ ನಿಮಗೆ ಅನೇಕ ಅವಕಾಶಗಳು ಸಿಗಲಿವೆ. ಖಷಿಯಿಂದ ಈ ವಾರವನ್ನು ಕಳೆಯುವಿರಿ.

ಮಕರ: ಬರಬೇಕಾದ ಹಣವನ್ನು ಸಿಗದೇ ತೊಂದರೆ ಅನುಭವಿಸುವಿರಿ. ಕೆಲಸ ನಡುವೆ ಹೆಚ್ಚು ವಿಶ್ರಾಂತಿಯನ್ನು ಪಡೆಯುವವರಿದ್ದೀರಿ. ಶತ್ರುಗಳ ಕಾಟವು ಹೆಚ್ಚಾದೀತು. ಹೊಸ ವಸ್ತುವನ್ನು ಖರೀದಿಸಿ ನಷ್ಟವನ್ನು ಅನುಭವಿಸುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗಿ ನಿಮಗೆ ಸ್ಥಾನಮಾನ ಪ್ರಾಪ್ತವಾಗಬಹುದು. ಆಪ್ತರನ್ನು ನೀವು ಭೇಟಿಯಾಗಿ ನಿಮ್ಮ ಮುಂದಿನ ಯೋಚನೆಯನ್ನು ಹೇಳಿಕೊಳ್ಳುವಿರಿ. ಸಾಹಸ ಪ್ರವೃತ್ತಿಯು ನಿಮಗೆ ಯಶಸ್ಸು ತಂದುಕೊಡಬಹುದು. ಗೆಲವು ಸಣ್ಣ ಅಂತರದಲ್ಲಿ ತಪ್ಪಬಹುದು. ಷೇರು ಮಾರುಕಟ್ಟೆಯಲ್ಲಿ ಲಾಭವಾಗಬಹುದು.

ಕುಂಭ: ಈ ವಾರ ಬಹಳ ಆರಾಮವಾಗಿ ಕಳೆಯುವುದು ಕಷ್ಟವಾದೀತು. ವೃತ್ತಿಜೀವನದಲ್ಲಿ ನೀವು ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿದೆ. ಕೆಲಸ ಮಾಡುವ ವಿಧಾನದಲ್ಲಿ ಸಮಸ್ಯೆಯು‌ ಕಾಣಬಹುದು. ಗಳಿಕೆಯು ಹೆಚ್ಚಾಗಿ ಕುಟುಂಬಜೀವನವು ಸಂತೋಷದಿಂದ ಇರಲಿದೆ. ನೀವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ದೊಡ್ಡ ಸಮಸ್ಯೆಯು ಬಂದು ಸಿಕ್ಕಿಕೊಳ್ಳುವಿರಿ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲವನ್ನು ನೀಡುವುದು. ಸ್ಪರ್ಧೆಯಿಂದ ನಿಮಗೆ ಲಾಭವಾಗಬಹುದು. ಹೆಚ್ಚು ಖರೀದಿಯನ್ನು ಈ ವಾರ ಮಾಡಲಿದ್ದೀರಿ. ಕುಟುಂಬದಲ್ಲಿನ ಕಿರಿಕಿರಿ ಮಾನಸಿಕ ತೊಂದರೆಗೆ ಕಾರಣವಾಗಬಹುದು.

ಮೀನ: ಈ ವಾರವು ಅನುಭವದ ಜನರಿಂದ ಬೆಂಬಲವನ್ನು ಪಡೆಯುವಿರಿ. ವೃತ್ತಿಜೀವನದಲ್ಲಿ ಪರಿಣಾಮ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿ ಇರಲಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಇದಡ. ವೃತ್ತಿಕ್ಷೇತ್ರದಲ್ಲಿ ಅತಿಯಾದ ಉತ್ಸಾಹ ಬೇಡ. ನೀವೇ ಎಲ್ಲ ಕೆಲಸವನ್ನು ಮಾಡಬೇಕಾದೀತು. ಅನೇಕ ಸಂದರ್ಭಗಳಲ್ಲಿ, ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಲಿದೆ. ಪ್ರಯಾಣದಲ್ಲಿ ಜಾಗರೂಕರಾಗಿರಿ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ವಾರ ಯಾವುದೇ ರೀತಿಯ ಆರ್ಥಿಕವಾದ ತೊಂದರೆಯನ್ನು ತಂದುಕೊಳ್ಳಬೇಕಾದೀತು. ವಿನಾಕಾರಣ ಹಣದ ಖರ್ಚು ಕಂಡು ಬೇಸರವಾಗಬಹುದು. ಆರೋಗ್ಯವು ಹದ ತಪ್ಪಬಹುದು.

-ಲೋಹಿತಶರ್ಮಾ ಇಡುವಾಣಿ

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು