AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಎಲ್ಲದನ್ನೂ ಎದುರಿಸುತ್ತೇನೆ ಎಂಬ ಹುಂಬು ಧೈರ್ಯ ಬೇಡ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 7) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಎಲ್ಲದನ್ನೂ ಎದುರಿಸುತ್ತೇನೆ ಎಂಬ ಹುಂಬು ಧೈರ್ಯ ಬೇಡ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 07, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 7 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 05:14 ರಿಂದ 06:49ರ ವರೆಗೆ, ಯಮಘಂಡ ಕಾಲ 12:29 ರಿಂದ 02:04ರ ವರೆಗೆ, ಗುಳಿಕ ಕಾಲ 03:39 ರಿಂದ 05:14ರವರೆಗೆ.

ಸಿಂಹ: ನಿಮ್ಮ ವಸ್ತುಗಳ ಬಗ್ಗೆ ಕಾವಲು ಇರಲಿ. ಕಳೆದುಹೋಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ಹಳೆಯ ಖಾಯಿಲೆಗಳು ಪುನಃ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕಾಂತವನ್ನು ನೀವು ಇಂದು ಬಯಸಬಹುದು. ಬಹಳ ವರ್ಷದ ಸ್ನೇಹಿತರು ದೂರಾಗಬಹುದು. ಎಲ್ಲದನ್ನೂ ಎದುರಿಸುತ್ತೇನೆ ಎಂಬ ಹುಂಬು ಧೈರ್ಯ ಬೇಡ. ನಿಮ್ಮ ಪ್ರಸ್ತುತಿಯ ಬಗ್ಗೆ ಜನರು ಆಡಿಕೊಂಡಾರು. ಕಛೇರಿಯಲ್ಲಿ ನಿಮ್ಮ ಬಗ್ಗೆ ಮಿಶ್ರ ಅಭಿಪ್ರಾಯವು ಬರಬಹುದು. ಕಳೆದ ದಿ‌ಗಳನ್ನು ನೆನೆದುಕೊಂಡು ಖಷಿ ಪಡುವಿರಿ. ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸೀತು.

ಕನ್ಯಾ: ಆಸ್ತಿಯ ಖರೀದಿಯಲ್ಲಿ ಹೆಚ್ಚು ಆಸಕ್ತಿ ಬರಬಹುದು. ಹೊಸ ಯೋಜನೆಯನ್ನು ತಲೆಯಿಂದ ತೆಗದು ಹಾಕಿ. ನಿಮ್ಮ ಬಗ್ಗೆ ಆಡುಕೊಳ್ಳುವವರ ಸಂಖ್ಯೆ ಹೆಚ್ಚಾದೀತು. ಮನಸ್ಸು ಅಸಮತೋಲನದಿಂದ ಇರಬಹುದು. ಭವಿಷ್ಯವನ್ನು ಕಟ್ಟಿಕೊಳ್ಳುವಲ್ಲಿ ನೀವು ಬಹಳ ಶ್ರಮವಹಿಸಬೇಕಾದೀತು. ನಿಮ್ಮ ಉತ್ಸಾಹವನ್ನು ಅನಾರೋಗ್ಯವು ಕುಗ್ಗಿಸಬಹುದು. ಎಲ್ಲರೊಡನೆ ಆತ್ಮೀಯತೆಯನ್ನು ಇಟ್ಟುಕೊಳ್ಳಬಹುದು. ಸಾಕಷ್ಟು ಹಣವು ವ್ಯಯವಾದರೂ ಕಾರ್ಯವು ಮಾತ್ರ ಹಾಗೆಯೇ ಉಳಿದಿರಬಹುದು. ಆರೋಗ್ಯವನ್ನು ಗಮನಸಿಕೊಳ್ಳುವುದು ಉತ್ತಮ.

ತುಲಾ: ಸಮಯವನ್ನು ಸದಪಯೋಗ ಮಾಡಿಕೊಳ್ಳಲು ಬಯಸುವಿರಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ಸಂಗಾತಿಯ ಪ್ರಿಯವಾದ ಉಡುಗೊರೆಯನ್ನು ಕೊಡಬಹುದು. ಉದ್ಯೋಗದ ಸ್ಥಳದಲ್ಲಿ ಪ್ರೇಮವು ಆರಂಭವಾಗಬಹುದು. ಸ್ವಂತ ಕೆಲಸಗಳಿಗೆ ಇನ್ನೊಬ್ಬರನ್ನು ಆಶ್ರಯಿಸಲು ಇಷ್ಟಪಡುವುದಿಲ್ಲ. ಅಕಸ್ಮಾತ್ ತಿರುವುಗಳು ನಿಮಗೆ ಅನುಕೂಲವನ್ನು‌ ಮಾಡಲಿವೆ. ಕುತೂಹಲಕಾರಿ ವಿಷಯವನ್ನು ತಿಳಿಯಲು ಹೆಚ್ಚು ಉತ್ಸುಕರಾಗುವಿರಿ. ನಗರಗಳಲ್ಲಿ ಸಂಚಾರ ಮಾಡಲು ಇಷ್ಟಪಡುವಿರಿ.

ವೃಶ್ಚಿಕ: ನಿಮಗಿಂದು ಉದ್ಯೋಗದಲ್ಲಿ ಸ್ಥಾನದ ಬಗ್ಗೆ ಚಿಂತೆ ಕಾಡಬಹುದು. ಕೆಲಸದಿಂದ ತೆಗೆಯುವ ಆತಂಕವೂ ಇರಲಿದೆ. ಸಾಲದ‌ಚಿಂತೆಯೂ ಇದರಿಂದ ಅಧಿಕವಾದೀತು. ಅನಿರೀಕ್ಷಿತವಾಗಿ ಯಾವುದೂ ನಡೆಯದು. ಎಲ್ಲವೂ ನೀವು ಕಲ್ಪಿಸಿಕೊಂಡಂತೆ ಆಗಬಹುದು. ಸ್ನೇಹಿತರ ಭೇಟಿಯು ನಿಮಗೆ ಸಂತೋಷವನ್ನು ತಂದೀತು. ಸ್ವಂತ ವ್ಯಾಪಾರವು ನಿಮ್ಮ ಶ್ರಮವನ್ನು ಹೆಚ್ಚು ಮಾಡಬಹುದು. ಬೇರೆಯವರ ಬಗ್ಗೆ ಅಸೂಯೆಯು ಬರಬಹುದು. ಅಸ್ಪಷ್ಟವಾದ ನಿಮ್ಮ ಯೋಜನೆಗಳಿಗೆ ಸರಿಯಾದ ರೂಪವನ್ನು ಕೊಡುವಿರಿ. ದಾಂಪತ್ಯದಲ್ಲಿ ಪರಸ್ಪರ ಭಾವ ವಿನಿಮಯದ ಕೊರತೆಯಿಂದ ಬಾಂಧವ್ಯವು ಸೊರಗಬಹುದು.