Rashi Bhavishya: ನಿಮ್ಮ ಗಂಭೀರವಾದ ವರ್ತನೆ ನಿಮ್ಮವರಲ್ಲಿ ಆತಂಕ ಮೂಡಿಸಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 7) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ನಿಮ್ಮ ಗಂಭೀರವಾದ ವರ್ತನೆ ನಿಮ್ಮವರಲ್ಲಿ ಆತಂಕ ಮೂಡಿಸಬಹುದು
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 07, 2023 | 6:15 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ: ಅನುರಾಧಾ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 05:14 ರಿಂದ 06:49ರ ವರೆಗೆ, ಯಮಘಂಡ ಕಾಲ 12:29 ರಿಂದ 02:04ರ ವರೆಗೆ, ಗುಳಿಕ ಕಾಲ 03:39 ರಿಂದ 05:14ರವರೆಗೆ.

ಧನು: ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತರಾಗಿದ್ದರೆ ಅದನ್ನು ತಪ್ಪಿಸುವ ಕೆಲಸ ಮಾಡಬೇಡಿ. ನಿಮ್ಮ ಸ್ಥಿತಿಯಂತೆ ಎಲ್ಲರ ಸ್ಥಿತಿಯೂ ಆಗಿದೆ ಎಂದುಕೊಳ್ಳಬೇಡಿ. ಅವರವರ ಜೀವನವು ಅವರದ್ದಾಗಿರುತ್ತದೆ. ನಿಮಗೆ ಗೌರವ ಸಿಗದೆ ಕಡೆ ಸುಮ್ಮನೇ ಹೋಗಬೇಡಿ. ದಾಂಪತ್ಯದಲ್ಲಿ ಹೆಚ್ಚಿನ ಸುಖವನ್ನು ನೀವು ಪಡೆಯಬಹುದಾಗಿದೆ. ಆಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಿರಲಿದ್ದು ಅದನ್ನು ಕುಳಿತು ಮಾತನಾಡುವುದಕ್ಕಿಂತ ಸರಿಯಾದ ಲೆಕ್ಕಾಚಾರ ಮಾಡಿಕೊಳ್ಳುವುದು ಉತ್ತಮ. ನಿಮ್ಮನ್ನು ಕೆರಳಿಸುವ ಮಾತುಗಳು ಕೇಳಿಬರಬಹುದು. ತಾಳ್ಮೆಯಿಂದ ಇರುವುದು ಉತ್ತಮ.

ಮಕರ: ಅತಿಯಾದ ಅಸತ್ಮವಿಶ್ವಾಸವೂ ಅಹಂಕಾರದಂತೆ ತೋರಬಹುದು. ಗೆಳೆತನದಲ್ಲಿ ಬಹಳ ಚುರುಕಿದ್ದರೂ ಕೆಲವು ಸಂದರ್ಭಗಳಿಗೆ ಬಳಕೆಗೆ ಬಾರದು. ಅಲ್ಪ ಕಾಲದ ಆನಂದಕ್ಕೆ ಹೆಚ್ಚು ಮೊತ್ತವನ್ನು ಕೊಡಬೇಕಾದೀತು. ಇಂದು ಮುಕ್ತಾಯವಾಗದಷ್ಟು ಕೆಲಸ, ಕಾರ್ಯಗಳು ಇಂದು ಇರಲಿವೆ. ದೂರ ಪ್ರಯಾಣವನ್ನು ಕೈ ಬಿಡುವುದು ಉತ್ತಮ. ಕೆಲಸದಲ್ಲಿ ತನ್ಮಯತೆಯ ಕೊರತೆ ಇರಲಿದೆ. ಬಹಳ ಪ್ರಯತ್ನದ ಫಲವಾಗಿ ಸಂಪಾದಿಸಬೇಕಿದೆ. ದೈವಾನುಕೂಲವು ಅಷ್ಟಾಗಿ ಇಲ್ಲದ ಕಾರಣ ಕೆಲಸವನ್ನು ನಿಮ್ಮದೇ ಜಾಗರೂಕತೆಯಿಂದ ಮಾಡುವುದು ಉತ್ತಮ.

ಕುಂಭ: ನೀವು ಇಂದು ನಿಶ್ಚಿಂತೆಯಿಂದ ಇರಬೇಕು ಎಂದು ಅನ್ನಿಸಿದರೂ ಕೆಲಸಗಳು ಒಂದಾದಮೇಲೆ ಒಂದರಂತೆ ಬರಬಹುದು. ವಿದ್ಯಾರ್ಥಿಗಳು ಆಲಸ್ಯದಿಂದ ಆಟದಲ್ಲಿ ಮಗ್ನರಾಗುವರು. ವ್ಯಾಪಾರದ ನಷ್ಟವನ್ನು ತೂಗಲು ಹೊಸ ತಂತ್ರವನ್ನು ರೂಪಿಸಬಹುದು. ಗಂಭೀರವಾದ ನಿಮ್ಮ ವರ್ತನೆಯು ನಿಮ್ಮವರಲ್ಲಿ ಆತಂಕವನ್ನು ತರಿಸಬಹುದು. ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಲು ನೀವು ಸಮರ್ಥರಿದ್ದೀರಿ. ಬಂಧುಗಳ ಮನೆಯಲ್ಲಿ ನೀವು ವಾಸಮಾಡಬಹುದು. ನಕರಾತ್ಮಕ ಅಂಶಗಳನ್ನು ಗುರುತಿಸುವ ದೃಷ್ಟಿಯು ಕಡಿಮೆಯಾಗಬಹುದು. ನಿಮ್ಮ ಕಲ್ಪನೆಗಳು ಅರ್ಧ ಸರಿಯಾಗಬಹುದು.

ಮೀನ: ಇಂದು ನಿಮ್ಮದೇ ಆದ ಕಾರ್ಯಗಳು ಇರಲಿವೆ. ಬೇರೆಯವರಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ಮನೆಯಲ್ಲಿ ಎಲ್ಲರ ಜೊತೆ ಸಂತೋಷದಿಂದ ಇರುವಿರಿ. ಯಾರನ್ನೂ ಅವಲಂಬಿಸಬಾರದು ಎಂಬ ಸತ್ಯವು ನಿಮಗೆ ತಿಖಿಯಬಹುದು. ದೇವರ ಮೇಲೆ ಶ್ರದ್ಧೆ, ಭಕ್ತಿಗಳು ಕಡಿಮೆಯಾದೀತು. ಹೆಚ್ಚಿನ ಸಮಯವನ್ನು ವಿಶ್ರಾಂತಿಗೆ ಇಡುವಿರಿ. ಅಂದುಕೊಂಡ ಕೆಲಸಗಳು ಅಪೂರ್ಣವಾದಾವು. ನಿಮ್ಮ ಆಯ್ಕೆ ಸರಿಯಿದೆ ಎಂದು ಕಾಲಾನಂತರದಲ್ಲಿ ನಿಮ್ಮ ಅನುಭವಕ್ಕೆ ಬರಬಹುದು. ದುಃಸ್ವಪ್ನಗಳು ಬೀಳಬಹುದು. ಸ್ವಲ್ಪ ಭಯಗೊಳ್ಳುವಿರಿ.

ಲೋಹಿತಶರ್ಮಾ 8762924271 (what’s app only)

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ